ವ್ಯಾಟ್ಸ್ಆ್ಯಪ್ ಮೇಸೇಂಜಿಂಗ್ ಆ್ಯಪ್‌ ತೀವ್ರ ಪೈಪೋಟಿ ಎದುರಿಸುತ್ತಿದೆ. ಇದರ ಬೆನ್ನಲ್ಲೇ ವ್ಯಾಟ್ಸ್ಆ್ಯಪ್ ಹತ್ತು ಹಲವು ಹೊಸ ಫೀಚರ್ಸ್ ಪರಿಚಯಿಸುತ್ತಿದೆ. ಇದೀಗ ವ್ಯಾಟ್ಸ್ಆ್ಯಪ್ ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ ಪರಿಚಯಿಸಿದೆ. ಇಮೇಜ್‌ನಲ್ಲಿರುವ ಟೆಕ್ಸ್ಟ್ ತೆಗೆಯುವ ಹೊಸ ಫೀಚರ್ ಕುರಿತ ಮಾಹಿತಿ ಇಲ್ಲಿದೆ. 

ನವದೆಹಲಿ(ಮಾ.23): ಮೆಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್ ಹೊಸ ಹೊಸ ಫೀಚರ್ಸ್ ಪರಿಚಯಿಸಿದೆ. ಇದೀಗ ವ್ಯಾಟ್ಸ್ಆ್ಯಪ್ ಇಮೇಜ್‌ನಲ್ಲಿರುವ ಟೆಕ್ಸ್ಟ್‌ಗಳನ್ನು ತೆಗೆಯುವ ಅಥವಾ ಕಾಪಿ ಮಾಡುವ ಅವಕಾಶವನ್ನು ಬಳಕೆದಾರರಿಗೆ ನೀಡಿದೆ. ವ್ಯಾಟ್ಸ್ಆ್ಯಪ್ IOS 23.5.77 ಅಪ್‌ಡೇಟ್ ಮೂಲಕ ಹೊಸ ಫೀಚರ್ಸ್ ಪರಚಯಿಸಿದೆ. WABetaInfo ದಲ್ಲಿ ಈಗಾಗಲೇ ಈ ಫೀಚರ್ಸ್ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಲಭ್ಯವಿದೆ. ಎಲ್ಲಾ ಬಳಕೆದಾರರು ಹೊಸ ಫೀಚರ್ಸ್ ಪಡೆಯಲು ತಮ್ಮ ವ್ಯಾಟ್ಸ್ಆ್ಯಪ್ ಅಪ್‌ಡೇಟ್ ಮಾಡಲು ಸೂಚಿಸಿದೆ.

ಬಳಕೆದಾರರಿಗೆ ಹೊಸ ಬಟನ್ ನೀಡಲಾಗುತ್ತಿದೆ. ಈ ಬಟನ್ ಕ್ಲಿಕ್ ಮಾಡಿ, ಇಮೇಜ್‌ನಲ್ಲಿರುವ ಟೆಕ್ಸ್ಟ್‌ಗಳನ್ನು ಕಾಪಿ ಮಾಡಲು ಸಾಧ್ಯವಿದೆ. ಇಮೇಜ್‌ನಲ್ಲಿರುವ ಸಂಪೂರ್ಣ ಬರಹವನ್ನು ಕಾಪಿ ಮಾಡಲು ಸಾಧ್ಯವಿದೆ. ಇದರಿಂದ ಬಳಕೆದಾರರು ಇಮೇಜ್‌ನಲ್ಲಿರುವ ಬರಹಗಳನ್ನು ಮತ್ತೆ ಟೈಪ್ ಮಾಡುವ ಕಿರಿಕಿರಿ ತಪ್ಪಲಿದೆ. ವಿಶೇಷ ಅಂದರೆ ಇಮೇಜ್ ರೂಪದಲ್ಲಿದ್ದ ಬರಹಗಳನ್ನು ಸುಲಭವಾಗಿ ವ್ಯಾಟ್ಸ್ಆ್ಯಪ್ ಮುಖಾಂತರ ಕಾಪಿ ಮಾಡಿಕೊಳ್ಳಬಹುಗುದು.

Whatsapp ಬಳಕೆದಾರರಿಗೆ ಮತ್ತೊಂದು ಬಂಪರ್ ಫೀಚರ್, ಕಾಲ್ ಶೆಡ್ಯೂಲ್ ಆಯ್ಕೆ ಲಭ್ಯ!

ಗೂಗಲ್ ಲೆನ್ಸ್ ಮಾಡುತ್ತಿದ್ದ ಕಾಪಿ ಟೆಕ್ಸ್ಟ್ ಫೀಚರ್ಸ್ ಇದೀಗ ವ್ಯಾಟ್ಸ್ಆಪ್ ಮಾಡುತ್ತಿದೆ. ಈ ಮೂಲಕ ವ್ಯಾಟ್ಸ್ಆ್ಯಪ್ ತನ್ನ ಬಳಕೆದಾರರು ಯಾವುದೇ ಫೀಚರ್ಸ್‌ಗಾಗಿ ಅಥವಾ ಅವಶ್ಯಕತೆಗಾಗಿ ಇತರ ಆ್ಯಪ್ ಅಥವಾ ಗೂಗಲ್ ಬಳಕೆಯನ್ನು ಕಡಿಮೆ ಮಾಡುತ್ತಿದೆ. 

ವ್ಯಾಟ್ಸ್ಆ್ಯಪ್ ಇತ್ತೀಚೆಗೆ ಹತ್ತು ಹಲವು ಫೀಚರ್ಸ್ ಪರಿಚಯಿಸಿದೆ. 21 ಹೊಸ ಇಮೋಜಿಗಳನ್ನು ವ್ಯಾಟ್ಸ್ಆ್ಯಪ್ ಸೇರ್ಪಡೆ ಮಾಡಿತ್ತು. ಇದರ ಬೆನ್ನಲ್ಲೇ ಗ್ರೂಪ್ ಅಡ್ಮಿನ್‌ಗೆ ಮತ್ತೊಂದು ಅಧಿಕಾರಿವನ್ನು ನೀಡಲಾಗಿತ್ತು. ಗ್ರೂಪ್ ಸದಸ್ಯರ ಸಂಖ್ಯೆ ಎಷ್ಟಿರಬೇಕು ಅನ್ನೋದು ನಿಯಂತ್ರಿಸುವ ಅಧಿಕಾರ ನೀಡಲಾಗಿತ್ತು. ಗ್ರೂಪ್ ಲಿಂಕ್ ಇನ್ವೈಟ್ ಯಾರು ಹಂಚಿಕೊಳ್ಳಬೇಕು. ಇನ್ವೈಟ್ ಮೂಲಕ ಎಷ್ಟು ಜನ ಗ್ರೂಪ್ ಸೇರಿಕೊಳ್ಳಬಹುದು ಅನ್ನೋದು ನಿಯಂತ್ರಿಸುವ ಫೀಚರ್ಸ್ ವ್ಯಾಟ್ಸ್ಆಪ್ ನೀಡಿತ್ತು.

ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್; 21 ಹೊಸ ಇಮೋಜಿ ಸೇರ್ಪಡೆ, ಗ್ರೂಪ್ ಆಡ್ಮಿನ್ ಮತ್ತೊಂದು ಅಧಿಕಾರ!

ವ್ಯಾಟ್ಸ್ಆಪ್ ಈಗಾಗಲೇ ಕಾಲ್ ಶೆಡ್ಯೂಲ್ ಮಾಡುವ ಅವಕಾಶ ನೀಡಿದೆ. ಮೀಟಿಂಗ್ ಮಾಡಲು ವಿಡಿಯೋ ಕಾಲ್‌ಗಳನ್ನು ಶೆಡ್ಯೂಲ್ ಮಾಡಬಹುದುು. ಎಷ್ಟು ಗಂಟೆಗೆ ವಿಡಿಯೋ ಕಾಲ್ ಮಾಡಬೇಕು? ಅನ್ನೋದು ದಾಖಲಿಸಬೇಕು. ಈ ವೇಳೆ ಯಾವ ಕಾರಣಕ್ಕಾಗಿ ಕರೆ ಮಾಡಲಾಗುತ್ತದೆ ಅನ್ನೋ ಕಾರಣವನ್ನೂ ನಮೂದಿಸಲು ಅವಕಾಶವಿದೆ. ಇದರಿಂದ ಕರೆ ಸ್ವೀಕರಿಸುವ ವ್ಯಕ್ತಿಗೆ ಈ ಕರೆಯ ಉದ್ದೇಶ ಸ್ಪಷ್ಟವಾಗಲಿದೆ. ಶೆಡ್ಯೂಲ್ ಆಯ್ಕೆ ಕ್ಲಿಕ್ ಮಾಡಿದರೆ, ಕರೆ ನಿಗದಿತ ಸಮಯಕ್ಕೂ ಮುನ್ನ ಇಬ್ಬರಿಗೂ ನೋಟಿಫಿಕೇಶನ್ ನೀಡಲಿದೆ.

ವಾಟ್ಸಾಪ್‌ ಮೂಲ ಹಾಗೂ ಹೈ ಕ್ವಾಲಿ​ಟಿ​ಯಲ್ಲಿ ಫೋಟೋ​ಗಳನ್ನು ಕಳು​ಹಿ​ಸುವ ವೈಶಿ​ಷ್ಟ್ಯ​ವನ್ನು ಬಿಡು​ಗಡೆ ಮಾಡಲು ನಿರ್ಧ​ರಿ​ಸಿದೆ.ವಾಟ್ಸಾ​ಪ್‌​ನಲ್ಲಿ ಕಳು​ಹಿ​ಸ​ಲಾ​ಗುವ ಫೋಟೋ​ಗ​ಳ ಗುಣ​ಮ​ಟ್ಟ​ವನ್ನು ಕಡಿ​ಮೆ ಮಾಡ​ಲಾ​ಗು​ತ್ತದೆ ಎಂಬ ದೂರು ಸದಾ ಬಳ​ಕೆ​ದಾ​ರ​ರಿಂದ ಕೇಳಿ​ಬ​ರು​ತ್ತಿ​ತ್ತು. ಹಾಗಾಗಿ ಇದನ್ನು ಬಗೆ​ಹ​ರಿ​ಸಲು ನಿರ್ಧ​ರಿ​ಸಿ​ರುವ ವಾಟ್ಸಾಪ್‌ ಉತ್ತಮ ಗುಣ​ಮ​ಟ್ಟ​ದಲ್ಲೇ ಫೋಟೋ​ಗ​ಳನ್ನು ಕಳು​ಹಿ​ಸಲು ಅವ​ಕಾ​ಶ​ವನ್ನು ಒದ​ಗಿ​ಸಲು ನಿರ್ಧ​ರಿ​ಸಿದೆ.