Asianet Suvarna News Asianet Suvarna News

ಜಿಯೋದಿಂದ ಬಂಪರ್ ಆಫರ್, ಕೇವಲ 61 ರೂಪಾಯಿಗೆ 5G ಡೇಟಾ ಪ್ಯಾಕ್!

ಜಿಯೋ ಇದೀಗ ಬಂಪರ್ ಆಫರ್ ಘೋಷಿಸಿದೆ. ಕೇವಲ 61 ರೂಪಾಯಿಗೆ 5ಜಿ ಡೇಟಾ ಪ್ಯಾಕ್ ನೀಡುತ್ತಿದೆ. ಪ್ರಿಪೈಡ್ ಬಳಕೆದಾರರಿಗೆ ಜಿಯೋ ತಂದಿರುವ ಹೊಸ ಪ್ಲಾನ್ ಇದೀಗ ಟಿಲಿಕಾಂ ಕ್ಷೇತ್ರದಲ್ಲಿ ಬಾರಿ ಸಂಚಲನ ಸೃಷ್ಟಿಸಿದೆ.

Reliance Jio launches first ever 5G data pack for prepaid users with rs Rs 61 along  64kbps speed ckm
Author
First Published Jan 10, 2023, 7:32 PM IST

ಮುಂಬೈ(ಜ.10):  ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಈಗಾಲೇ ಹಲವು ಆಫರ್ ಮೂಲಕ ಸಂತೈಸಿದೆ. ಇದೀಗ ದೇಶದ ಮೂಲೆ ಮೂಲೆಗಳಲ್ಲಿ ಜಿಯೋ 5ಜಿ ಸರ್ವೀಸ್ ಆರಂಭಿಸುತ್ತಿದೆ. ಇದೀಗ ಹೊಸ ವರ್ಷದಲ್ಲಿ ಜಿಯೋ ಬಂಪರ್ ಕೊಡುಗೆ ನೀಡುತ್ತಿದೆ. ಕೇವಲ 61 ರೂಪಾಯಿಗೆ 5ಜಿ ಡೇಟಾ ಪ್ಯಾಕ್ ಪ್ಲಾನ್ ನೀಡುತ್ತಿದೆ. ಈ ಡೇಟಾ ಪ್ಯಾಕ್ ಸದ್ಯ ಸಕ್ರಿಯವಾಗಿರುವ ಪ್ಲಾನ್‌ಗೆ ಸೇರ್ಪಡೆಯಾಗಲಿದೆ. 64kbps ಸ್ಪೀಡ್‌ನಲ್ಲಿ 6ಜಿಬಿ 5ಜಿ ಪ್ಯಾಕ್ ಈ ಪ್ಲಾನ್‌ನಿಂದ ಸಿಗಲಿದೆ. ಈ ಡೇಟಾ ಪ್ಯಾಕ್ 119,  149,  179,199 ಹಾಗೂ  209 ರೂಪಾಯಿಗಳ ಪ್ರೀಪೈಡ್ ಪ್ಲಾನ್‌ಗೆ ಅನ್ವಯವಾಗಲಿದೆ.

5ಜಿ ಡೇಟಾ ಪ್ಯಾಕ್ ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ. ಇಷ್ಟೇ ಅಲ್ಲ ಸಕ್ರಿಯ ಪ್ಲಾನ್‌ಗೆ ಸೇರ್ಪಡೆಗೊಳ್ಳುವ ಕಾರಣ ಬಳಕೆಗಾರರ ಅವಶ್ಯಕತೆಗೆ ತಕ್ಕಂತೆ ಇದನ್ನು ಬಳಸಬಹುದಾಗಿದೆ. ಅತೀ ಕಡಿಮೆ ಬೆಲೆಯಲ್ಲಿ ಜಿಯೋ 5ಜಿ ಡೇಟಾ ಪ್ಯಾಕ್ ಘೋಷಣೆ ಮಾಡಿದೆ. ಈ ಘೋಷಣೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಂದು ಸಂಚಲನಕ್ಕೆ ಕಾರಣವಾಗಿದೆ.

ಐಫೋನ್ ಬಳಕೆದಾರರಿಗೆ ಗುಡ್ ನ್ಯೂಸ್, ಅನ್‌ಲಿಮಿಟೆಡ್ ಡೇಟಾ ಜೊತೆ ಜಿಯೋ ಟ್ರು 5ಜಿ ಸೇವೆ ಲಭ್ಯ!

ಒಡಿಶಾದಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಬಿಡುಗಡೆ
 ಕೇಂದ್ರ ಸಚಿವ ಅಶ್ವಿನಿ ವೈಷ್ಣವ್  ಒಡಿಶಾದಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಉದ್ಘಾಟಿಸಿದ್ದಾರೆ.  ದೇಗುಲಗಳ ನಗರಿ ಭುವನೇಶ್ವರ ಮತ್ತು ಬೆಳ್ಳಿ ನಗರ ಕಟಕ್ ಗುರುವಾರದಿಂದ ಜಿಯೋ ಟ್ರೂ 5ಜಿ ಸೇವೆಗಳನ್ನು ಪಡೆಯುವ ಮೊದಲ ನಗರಗಳಾಗಿವೆ. ಭುವನೇಶ್ವರದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಒಡಿಶಾದಲ್ಲಿ 5ಜಿ ಸೇವೆಗಳಿಗೆ ಚಾಲನೆ ನೀಡಲಾಯಿತು. ಜಿಯೋ ವಿಶಿಷ್ಟವಾದ ಟ್ರೂ 5ಜಿ ಅನುಭವ ವಲಯವನ್ನು ರಚಿಸಿತು ಮತ್ತು ಜಿಯೋ ಸಮುದಾಯ ಕ್ಲಿನಿಕ್ ವೈದ್ಯಕೀಯ ಕಿಟ್, ಶಿಕ್ಷಣ, ಕ್ಲೌಡ್ ಗೇಮಿಂಗ್, ಸ್ಮಾರ್ಟ್ ಮೂಲಕ ಆರೋಗ್ಯ ಕ್ಷೇತ್ರದಲ್ಲಿ 5ಜಿ ಪ್ರಯೋಜನಗಳನ್ನು ಪ್ರದರ್ಶಿಸಿತು. ಕಚೇರಿ, ಸ್ಮಾರ್ಟ್ ಸಿಟಿ ಮತ್ತು ಕ್ರಾಂತಿಕಾರಿ ಎಆರ್ (AR)- ವಿಆರ್ (VR) ಸಾಧನ, ಜಿಯೋ ಗ್ಲಾಸ್ ಅನಾವರಣಗೊಳಿಸಿತು. ಈ ಪ್ರಯೋಜನಗಳು ಒಡಿಶಾದ ಜನರ ಜೀವನಕ್ಕೆ ಪರಿವರ್ತನೆಯ ಬದಲಾವಣೆಗಳನ್ನು ತರುತ್ತವೆ. ರಿಲಯನ್ಸ್ ಜಿಯೋ ಮತ್ತು ಭುವನೇಶ್ವರ ಮೂಲದ ಎಸ್‌ಒಎ ವಿಶ್ವವಿದ್ಯಾನಿಲಯವು 5ಜಿ-ಲ್ಯಾಬ್ ಅನ್ನು ನಿರ್ಮಿಸಲು ಮತ್ತು ಸಂಬಂಧಿತ ಬಳಕೆ ಪ್ರಕರಣಗಳ ಸಹಯೋಗದಲ್ಲಿ ತಿಳಿವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿದೆ.

ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಮಹಾಕಾಲ್ ಭಕ್ತರಿಗೆ ಮತ್ತೊಂದು ಕೊಡುಗೆ, ಜಿಯೋ ಟ್ರು 5ಜಿ ಸೇವೆ!

 ಜಿಯೋ ಟ್ರೂ 5ಜಿ ಭುವನೇಶ್ವರ್‌ಗೆ ನಿಜವಾದ ಗೇಮ್ ಚೇಂಜರ್ ಆಗಿರುತ್ತದೆ. ಇದು ಹೆಚ್ಚಿನ ವಿದ್ಯಾರ್ಥಿ ಜನಸಂಖ್ಯೆಯನ್ನು ಹೊಂದಿದೆ ಮತ್ತು ಪೂರ್ವದ ಐಟಿ ಕೇಂದ್ರವೆಂದು ಪರಿಗಣಿಸಿದೆ. ಏಕೆಂದರೆ ಇದು ನಾಗರಿಕರಿಗೆ ಮತ್ತು ಸಂದರ್ಶಕರಿಗೆ ಸಾಕಷ್ಟು ಅವಕಾಶಗಳು ಹಾಗೂ ಶ್ರೀಮಂತ ಅನುಭವಗಳನ್ನು ನೀಡುತ್ತದೆ. ಮುಂದಿನ ಕೆಲವು ದಿನಗಳಲ್ಲಿ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್  ಆಯೋಜಿಸಲು ಸಜ್ಜಾಗುತ್ತಿರುವಂತೆ ಭಾರತದ ವೇಗವಾಗಿ ಬೆಳೆಯುತ್ತಿರುವ ಕ್ರೀಡಾ ರಾಜಧಾನಿಯಾದ ಭುವನೇಶ್ವರದಲ್ಲಿ ಜಿಯೋದ ಟ್ರೂ 5ಜಿ ಡೇಟಾವನ್ನು ಸೂಕ್ತ ಸಮಯದಲ್ಲಿ ಪ್ರಾರಂಭಿಸಲಾಗುತ್ತಿದೆ. ಅದೇ ರೀತಿ, 1,000 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ನಗರವಾದ ಕಟಕ್‌ನಲ್ಲಿರುವ ಬಳಕೆದಾರರು5ಜಿ ಸೇವೆ ಬಳಕೆ ಮಾಡಲಿದ್ದಾರೆ. 

Follow Us:
Download App:
  • android
  • ios