Twitter NFT Profile Picture ಬಿಡುಗಡೆ: ಟ್ವೀಟರ್ ಬ್ಲೂ ಚಂದಾದಾರರಿಗೆ ಪ್ರಸ್ತುತ ಲಭ್ಯ!

ಪ್ರಸ್ತುತ ಎನ್‌ಎಫ್‌ಟಿ ಹಣಕಾಸು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಮಧ್ಯೆ ಟ್ವಿಟರ್  ಹೊಸ ವೈಶಿಷ್ಟ್ಯವೊಂದನ್ನು ಪ್ರಕಟಿಸಿದೆ. ಪ್ಲಾಟ್‌ಫಾರ್ಮ್‌ನ Blue’s early access ಲ್ಯಾಬ್ಸ್ ವೈಶಿಷ್ಟ್ಯದ ಮೂಲಕ ಹೊಸ ವೈಶಿಷ್ಟ್ಯವು ಪ್ರಸ್ತುತ ಟ್ವೀಟರ್ ಬ್ಲೂ ಚಂದಾದಾರರಿಗೆ ಮಾತ್ರ ಲಭ್ಯವಿದೆ.‌

Twitter now lets people add hexagon shaped NFT profile pictures into its platform mnj

Tech Desk: ಎನ್‌ಎಫ್‌ಟಿ ಡಿಜಿಟಲ್ ವಸ್ತುಗಳ ಮಾಲೀಕತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ. ಡಿಜಿಟಲ್ 'ಸ್ವತ್ತು'ಗಳಿಗೆ ಮಾಲೀಕತ್ವದ ರಚನೆ, ಸಂಗ್ರಹಣೆ ಮತ್ತು ವರ್ಗಾವಣೆಗೆ ಇದು ವೇದಿಕೆಯನ್ನು ಒದಗಿಸುತ್ತದೆ. ಪ್ರಸ್ತುತ ಎನ್‌ಎಫ್‌ಟಿ ಹಣಕಾಸು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಮಧ್ಯೆ ಟ್ವಿಟರ್ (Twitter) ಹೊಸ ವೈಶಿಷ್ಟ್ಯವೊಂದನ್ನು ಪ್ರಕಟಿಸಿದೆ. ಇದು ಬಳಕೆದಾರರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಷಡ್ಭುಜಾಕೃತಿಯ (Hexagon) ಪ್ರೊಫೈಲ್ ಪಿಕ್ಷರ್ ಅವರು ಹೊಂದಿರುವ ಎನ್‌ಎಫ್‌ಟಿಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ. 

ಟ್ವೀಟರ್‌ ಎನ್‌ಎಫ್‌ಟಿ ಆಕ್ಟಿವೇಟ್‌ ಮಾಡಲು ಕ್ರಿಪ್ಟೋ ವ್ಯಾಲೆಟನ್ನು ಟ್ವೀಟರ್‌ಗೆ ಕನೆಕ್ಟ್ ಮಾಡುವ ಮತ್ತು ಅದರ ವಿಳಾಸವನ್ನು ಪರಿಶೀಲಿಸುವ ಅಗತ್ಯವಿದೆ.‌ ಈ ಮೂಲಕ ನಿಮ್ಮ ಟ್ವಿಟರ್ ಖಾತೆಯು ನಿಮ್ಮ ಪ್ರಸ್ತುತ ಮತ್ತು ಈ ಹಿಂದಿನ ಕ್ರಿಪ್ಟೋ ವ್ಯಾಲೆಟ್ ವಹಿವಾಟುಗಳು ಮತ್ತು ಆ ವ್ಯಾಲೆಟ್‌ನಲ್ಲಿರುವ ಎಲ್ಲಾ ಇತರ ಎನ್‌ಎನ್ಎಫ್‌ಟಿಗಳನ್ನು ಒಳಗೊಂಡಂತೆ ಇತರ ಮಾಹಿತಿಯೊಂದಿಗೆ ಸಂಯೋಜಿಸಲ್ಪಡುತ್ತದೆ.

ಇದನ್ನೂ ಓದಿAnti India Propaganda ಭಾರತ ವಿರೋಧಿ ಚಟುವಟಿಕೆ, ಪಾಕ್ ಮೂಲದ 35 ಯೂಟ್ಯೂಬ್, ಟ್ವಿಟರ್, ಇನ್‌ಸ್ಟಾ ಖಾತೆ ಬ್ಲಾಕ್!

ಟ್ವೀಟರ್ ಬ್ಲೂ ಚಂದಾದಾರರಿಗೆ ಮಾತ್ರ ಲಭ್ಯ:  ಹೊಸ ವೈಶಿಷ್ಟ್ಯವು ಪ್ರಸ್ತುತ ಪ್ಲಾಟ್‌ಫಾರ್ಮ್‌ನ Blue’s early access Labs ವೈಶಿಷ್ಟ್ಯದ ಮೂಲಕ ಟ್ವೀಟರ್ ಬ್ಲೂ ಚಂದಾದಾರರಿಗೆ ಮಾತ್ರ ಲಭ್ಯವಿದೆ. ಟ್ವೀಟರ್ ಬ್ಲೂ ಚಂದಾದಾರಿಕೆಯನ್ನು ಇತ್ತೀಚೆಗೆ ಕೆಲವು ಮಾರುಕಟ್ಟೆಗಳಲ್ಲಿ ಪ್ರಾರಂಭಿಸಲಾಗಿದೆ ಮತ್ತು ಅದನ್ನು ಖರೀದಿಸಿದವರು NFT ಪ್ರೊಫೈಲ್ ಚಿತ್ರವನ್ನು ಒಳಗೊಂಡಿರುವ ಕೆಲವು ಪ್ರೀಮಿಯಂ ವೈಶಿಷ್ಟ್ಯಗಳಿಗೆ ಆಕ್ಸಸ್ ಹೊಂದಿರುತ್ತಾರೆ.‌

ಮೈಕ್ರೋ-ಬ್ಲಾಗಿಂಗ್ ಸೈಟ್ ಐಒಎಸ್ ಬಳಕೆದಾರರಿಗಾಗಿ ಮೊದಲು ಎನ್‌ಎಫ್‌ಟಿ ವೈಶಿಷ್ಟ್ಯವನ್ನು ಬಿಡುಗಡೆ ಮಾಡುತ್ತಿದೆ. ಆಂಡ್ರಾಯ್ಡ್ ಮತ್ತು ವೆಬ್ ಆವೃತ್ತಿಗಳು ಮುಂದಿನ ದಿನಗಳಲ್ಲಿ ಅದನ್ನು ಪಡೆಯಬಹುದು ಎಂದು ವರದಿಗಳು ತಿಳಿಸಿವೆ. ಆದರೆ, ಐಒಎಸ್ ಬಳಕೆದಾರರು ಅಪ್‌ಲೋಡ್ ಮಾಡಿರುವ ಹೊಸ ಷಡ್ಭುಜಾಕೃತಿಯ ಚಿತ್ರವನ್ನು ಟ್ವಿಟರ್‌ನಲ್ಲಿರುವ ಪ್ರತಿಯೊಬ್ಬರೂ ಪರಿಶೀಲಿಸಲು ಸಾಧ್ಯವಾಗುತ್ತದೆ. ಬ್ಲೂ ಚಂದಾದಾರಿಕೆ ಯುಎಸ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ದೇಶಗಳಿಗೆ ಸೀಮಿತವಾಗಿದೆ. ಈ ಸೇವೆಯು ಜಾಗತಿಕವಾಗಿ ಲಭ್ಯವಿಲ್ಲ.  ಹಾಗಾಗಿ ಸದ್ಯಕ್ಕೆ ಇದು ಎನ್‌ಎಫ್‌ಟಿ ಪ್ರೊಫೈಲ್ ಚಿತ್ರಗಳ ಅಳವಡಿಕೆಯನ್ನು ಮಿತಿಗೊಳಿಸುತ್ತದೆ.

ಇದನ್ನೂ ಓದಿ: I&B Ministry‌: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವೀಟರ್‌ ಖಾತೆ ಹ್ಯಾಕ್!

ಬಳಕೆದಾರರು ಜಾಗರೂಕರಾಗಿರಬೇಕು:  ಪ್ರಸ್ತುತ, ಟ್ವಿಟರ್ ಹಲವಾರು ಕ್ರಿಪ್ಟೋ ವ್ಯಾಲೆಟ್‌ಗಳಿಗೆ ಬೆಂಬಲವನ್ನು ನೀಡುತ್ತಿದ್ದು, ಬಳಕೆದಾರರು ತಮ್ಮ ಪ್ರೊಫೈಲ್‌ಗಳಿಗೆ ಸಂಪರ್ಕಿಸಲು ಮತ್ತು ಅವರ  ಎನ್‌ಎಫ್‌ಟಿ ಟೋಕನ್‌ಗಳನ್ನು ಪರಿಶೀಲಿಸಲು ಬಳಸಬಹುದಾಗಿದೆ. ಇವುಗಳಲ್ಲಿ ಅರ್ಜೆಂಟ್, ಕಾಯಿನ್‌ಬೇಸ್ ವಾಲೆಟ್, ಲೆಡ್ಜರ್ ಲೈವ್, ಮೆಟಾಮಾಸ್ಕ್, ರೇನ್‌ಬೋ ಮತ್ತು ಟ್ರಸ್ಟ್ ವಾಲೆಟ್ ಸೇರಿವೆ. ಬಳಕೆದಾರರು  ಮುಂದೆ  ಪ್ರೊಫೈಲ್ ಚಿತ್ರವಾಗಿ  ಎನ್‌ಎಫ್‌ಟಿಯನ್ನು ಪ್ರದರ್ಶಿಸಲು ಬಯಸದಿದ್ದರೆ  ಎನ್‌ಎಫ್‌ಟಿಯನ್ನು ತೆಗೆದುಹಾಕುವ ಆಯ್ಕೆಯನ್ನು ಹೊಂದಿರುತ್ತಾರೆ. ಇದಕ್ಕಾಗಿ ತಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಬೇಕು.

FAQ ಪುಟವೊಂದರಲ್ಲಿ, ನಿಮ್ಮ ಕ್ರಿಪ್ಟೋ ವ್ಯಾಲೆಟ್‌ನಿಂದ ಪ್ಲಾಟ್‌ಫಾರ್ಮ್ ಎಂದಿಗೂ ಹಣವನ್ನು ವಿನಂತಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಟ್ವೀಟರ್ ತಿಳಿಸಿದೆ. ಆದ್ದರಿಂದ, ಬಳಕೆದಾರರು ಜಾಗರೂಕರಾಗಿರಬೇಕು ಮತ್ತು ಅವರ ವ್ಯಾಲೆಟ್‌ಗೆ ಒಳಬರುವ ಎಲ್ಲಾ ವಿನಂತಿಗಳನ್ನು ಪರಿಶೀಲಿಸಿ ಹಾಗೂ ಅಜ್ಞಾತ ವರ್ಗಾವಣೆ ವಿನಂತಿಗಳನ್ನು ಸಹ ತಪ್ಪಿಸಿ ಎಂದು ಟ್ವೀಟರ್‌ ಹೇಳಿದೆ.

ಕಂಪನಿಯು ನಿಮ್ಮ ಖಾಸಗಿ ಕೀ ಅಥವಾ ಸೀಡ್‌ ಫ್ರೇಸ್‌ ಎಂದಿಗೂ ವಿನಂತಿಸುವುದಿಲ್ಲ  ಮತ್ತು ಟ್ವೀಟರನಲ್ಲಿ ಸೇರಿದಂತೆ ನಿಮ್ಮ ಖಾಸಗಿ ಕೀಗಳನ್ನು ಅಥವಾ ಸೀಡ್‌ ಫ್ರೇಸ್‌ (seed phrase) ನೀವು ಎಲ್ಲಿಯೂ ಹಂಚಿಕೊಳ್ಳಬಾರದು. "ನಿಮ್ಮ ಕ್ರಿಪ್ಟೋ ವ್ಯಾಲೆಟ್‌ನೊಂದಿಗಿನ ವ್ಯವಹಾರದ  ಸಂಪರ್ಕವನ್ನು ನಾವು ನಿರ್ವಹಿಸುವುದಿಲ್ಲವಾದರೂ, ನಿಮ್ಮ ಪ್ರೊಫೈಲ್ ಚಿತ್ರವಾಗಿ ನೀವು ಹೊಂದಿಸಿರುವ ಎನ್‌ಎಫ್‌ಟಿಯನ್ನು ಹಿಡಿದಿಟ್ಟುಕೊಳ್ಳುವುದನ್ನು ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿಮ್ಮ ಸಾರ್ವಜನಿಕ ವಿಳಾಸವನ್ನು (Address) ಸಂಗ್ರಹಿಸುತ್ತೇವೆ" ಎಂದು ಟ್ವೀಟರ್ ಹೇಳಿದೆ.

Latest Videos
Follow Us:
Download App:
  • android
  • ios