Asianet Suvarna News Asianet Suvarna News

ಅಭಿವ್ಯಕ್ತಿ ಸ್ವಾತಂತ್ರ್ಯ ವಿದೇಶಿ ಕಂಪನಿಯ ಲಾಭಕ್ಕಲ್ಲ: ಟ್ವಿಟರ್‌ಗೆ ಖಡಕ್ ವಾರ್ನಿಂಗ್ ನೀಡಿದ ಭಾರತ!

  • ಟ್ವಿಟರ್ ಹೇಳಿಕಿಗೆ ಕೇಂದ್ರ ಸರ್ಕಾರದ ಖಡಕ್ ವಾರ್ನಿಂಗ್
  • ಅಭಿವ್ಯಕ್ತಿ ಸ್ವಾತಂತ್ರ್ಯ ಖಾಸಗಿ ಲಾಭಕ್ಕಾಗಿ ಬಳಸಲು ಸಾಧ್ಯವಿಲ್ಲ
  • ದಾಖಲೆ ಸಮೇತ ಟ್ವಿಟರ್‌ಗೆ ಉತ್ತರ ನೀಡಿದ ಐಟಿ ಸಚಿವಾಲಯ
Twitter cannot dictate terms cannot undermine India legal system says Ministry of Electronics and IT ckm
Author
Bengaluru, First Published May 27, 2021, 7:49 PM IST

ನವದೆಹಲಿ(ಮೇ.27):  ಟ್ವಿಟರ್ ಅಸಂಬದ್ಧ ಹೇಳಿಕೆಗೆ  ಇದೀಗ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವಾಲಯ ಖಡಕ್ ವಾರ್ನಿಂಗ್ ನೀಡಿದೆ. ಟೂಲ್‌ಕಿಟ್ ಮ್ಯಾನ್ಯುಪ್ಯುಲೇಟೆಡ್ ಲೇಬಲ್ ಕುರಿತು ಟ್ವಿಟರ್ ಕಚೇರಿ ಮೇಲೆ  ದೆಹಲಿ ಪೊಲೀಸರ ದಾಳಿಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ, ಇಂತಹ ಬೆದರಿ ಅಪಾಯಕಾರಿ ಎಂದು ಟ್ವಿಟರ್ ಹೇಳಿತ್ತು. ಜೊತೆಗೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಯತ್ನಕ್ಕೆ ಟ್ವಿಟರ್ ಮುಂದಾಗಿತ್ತು. ಈ ಯತ್ನದ ಬೆನ್ನಲ್ಲೇ ಕೇಂದ್ರ ಸರ್ಕಾರ ಭಾರತದ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಶತಮಾನಗಳ ಇತಿಹಾಸವನ್ನೇ ತೆರೆದಿಟ್ಟಿದೆ.

ಟೂಲ್‌ಕಿಟ್ ಜಟಾಪಟಿ: ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಹೇಳಿಕೆಗೆ ದೆಹಲಿ ಪೊಲೀಸರ ತಿರುಗೇಟು!

ಭಾರತವು ವಾಕ್ಚಾತುರ್ಯ ಮತ್ತು ಪ್ರಜಾಪ್ರಭುತ್ವದ ಆಚರಣೆಗಳ ಅದ್ಭುತ ಸಂಪ್ರದಾಯವನ್ನು ಹೊಂದಿದೆ.  ಇದನ್ನು ಶತ ಶತಮಾನಗಳಿಂದಲೂ ಗುರುತಿಸಬಹುದು. ಭಾರತದಲ್ಲಿ ವಾಕ್ಚಾತುರ್ಯವನ್ನು ಖಾಸಗಿ ಲಾಭಕ್ಕಾಗಿ, ವಿದೇಶಿಯ ಸಂಸ್ಥೆಗೆ ಬಳಲು ಸಾಧ್ಯವಿಲ್ಲ.  ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಬದ್ಧತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ವಿವರಣೆ ಬೇಕಿಲ್ಲ  ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವಾಲಯ ಹೇಳಿದೆ. 

ಟ್ವಿಟರ್ ಈ ದೇಶದ ಕಾನೂನು ಹಾಳು ಮಾಡಲು ಅಥವಾ ಈ ದೇಶಕ್ಕೆ ಕಾನೂನು ನಿರ್ದೇಶಿಸಲು ಸಾಧ್ಯವಿಲ್ಲ. ನೆಲದ ಕಾನೂನನ್ನು ಗೌರವಿಸಬೇಕು. ಇದಕ್ಕೆ ಎಲ್ಲರೂ ಬದ್ಧರಾಗಿರಬೇಕು. ಆದರೆ ಟ್ವಿಟರ್ ಉದ್ದೇಶಪೂರ್ವಕವಾಗಿ ಭಾರತದ ಕಾನೂನು ವ್ಯವಸ್ಥೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದೆ. ಮಾರ್ಗಸೂಚಿಗಳಲ್ಲಿನ ನಿಯಮಗಳನ್ನು ಅನುಸರಿಸಲು ಟ್ವಿಟರ್ ನಿರಾಕರಿಸುತ್ತಿದೆ ಎಂದು ಐಟಿ ಸಚಿವಾಲಯ ಹೇಳಿದೆ.

ಭಾರತದ ಕಾನೂನಿಗೆ ಗೂಗಲ್ ಬದ್ಧ; ನೂತನ ಡಿಜಿಟಲ್ ನಿಯಮ ಕುರಿತು ಸುಂದರ್ ಪಿಚೈ ಸ್ಪಷ್ಟನೆ!.

ಟ್ವಿಟ್ಟರ್ ಪಾರದರ್ಶಕವಾಗಿದೆ ಎಂಬ ಹೇಳಿಕೆಯನ್ನು ಐಟಿ ಸಚಿವಾಲಯ ಪ್ರಶ್ನಿಸಿದೆ. ಆದರೆ  ಪಾರದರ್ಶಕ ಕಾರ್ಯವಿಧಾನವನ್ನು ಟ್ವಿಟರ್ ಯಾಕೆ ಸ್ಥಾಪಿಸಲಿಲ್ಲ ಎಂದು ಪ್ರಶ್ನಿಸಿದೆ. ಹಲವು ಭಾರತದ ಟ್ವಿಟರ್ ಸಂಪೂರ್ಣ ಅಧಿಕಾರ ಅಮೆರಿಕದ ಕೇಂದ್ರಕಚೇರಿಗೆ ಮಾತ್ರ ಎಂದಿದೆ. ಆದರೆ ಟ್ವಿಟರ್ ಭಾರತೀಯ ಬಳಕೆದಾರರ ಹಿತಾಸಕ್ತಿಗೆ ಬದ್ಧವಾಗಿದೆ ಎಂದು ಸುಳ್ಳು ಹೇಳುತ್ತಲೇ ಬಂದಿದೆ. ಭಾರತದಲ್ಲಿ ಟ್ವಿಟರ್ ಅತೀ ಹೆಚ್ಚು ಬಳಕೆದಾರರನ್ನು ಹೊಂದಿದೆ. ಇದರಿಂದ ಗರಿಷ್ಠ ಆದಾಯವನ್ನು ಪಡೆಯುತ್ತಿದೆ. ಆದರೆ ಭಾರತದ ನಿಯಮ ಅನುಸರಣೆಗೆ ಮಾತ್ರ ಹಿಂದೇಟು ಹಾಕುತ್ತಿದೆ ಎಂದಿದೆ.

ಭಾರತದ ಕಾನೂನು ಚೌಕಟ್ಟು ಹೇಗಿರಬೇಕು ಎಂದು ನಿರ್ದೇಶಿಸುವ ಅಧಿಕಾರ ಟ್ವಿಟರ್‌ಗಿಲ್ಲ. ಕೋವಿಡ್ -19 B.1.617 ರೂಪಾಂತರಿ ವೈರಸನ್ನು ಭಾರತೀಯ ವೈರಸ್ ಎಂದು ದುರುದ್ದೇಶಪೂರಿತವಾಗಿ ಟ್ವಿಟರ್ ಟ್ಯಾಗ್ ಮಾಡಿದೆ.  ಕೆಂಪು ಕೋಟೆ ಗಲಭೆಯನ್ನು ಪ್ರಚೋದಿಸಿದವರ ಮತ್ತು ಭಾರತದ ವಿರುದ್ಧ ಪಿತೂರಿ ನಡೆಸುತ್ತಿದ್ದವರ ಖಾತೆಗಳನ್ನು ನಿರ್ಬಂಧಿಸುವಲ್ಲಿ ಟ್ವಿಟರ್ ಯಾವುದೇ ಆಸಕ್ತಿ ತೋರಿಲ್ಲ ಎಂದು ಐಟಿ ಸಚಿವಾಲಯ ಉದಾಹರಣೆ ಸಹಿತಿ ಟ್ವಿಟರ್‌ಗೆ ದ್ವಂದ್ವ ನಿಲುವಿಗೆ ತಿರುಗೇಟು  ನೀಡಿದೆ.

ಟ್ವಿಟರ್ ಹೇಳಿಕೆಗಳು ಸಂಪೂರ್ಣವಾಗಿ ಆಧಾರ ರಹಿತ ಹಾಗೂ ಸುಳ್ಳು. ಭಾರತವನ್ನು ಕೆಣಕುವ ಪ್ರಯತ್ನ ಎಂದು ಐಟಿ ಸಚಿವಾಲಯ ಹೇಳಿದೆ. ಇದೇ ವೇಳೆ  ಸಾಮಾಜಿಕ ಮಾಧ್ಯಮ ಕಂಪನಿಗಳ ಪ್ರತಿನಿಧಿಗಳು ಭಾರತದಲ್ಲಿ ಸದಾ ಸುರಕ್ಷಿತವಾಗಿರುತ್ತದೆ. ಇಷ್ಟೇ ಅಲ್ಲ ವೈಯಕ್ತಿಕತೆಗೆ ಯಾವುದೇ ಬೆದರಿಕೆ ಇಲ್ಲ ಸರ್ಕಾರ ಹೇಳಿದೆ.

Follow Us:
Download App:
  • android
  • ios