ಟೂಲ್ ಕಿಟ್ ಪ್ರಕರಣ; ಟ್ವಿಟರ್ ಕಚೇರಿ ಮೇಲೆ ದೆಹಲಿ ಪೊಲೀಸ್ ದಾಳಿ!
- ದೇಶದ ಇಮೇಜ್ ಕೆಡಿಸಲು ಕಾಂಗ್ರೆಸ್ ಮೇಲೆ ಟೂಲ್ ಕಿಟ್ ಆರೋಪ
- ಪ್ರಕರಣ ತನಿಖೆ ಚುರುಕುಗೊಳಿಸಿದ ದೆಹಲಿ ಪೊಲೀಸ್
- ಟ್ವಿಟರ್ ಕಚೇರಿ ಮೇಲೆ ದಾಳಿ
ದೆಹಲಿ(ಮೇ.24): ಕೊರೋನಾ ಸಂಕಷ್ಟದ ಸಮಯದಲ್ಲಿ ದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಮೇಜ್ ಕೆಡಿಸಲು ಕಾಂಗ್ರೆಸ್ ಟೂಲ್‌ಕಿಟ್ ಪಿತೂರಿ ನಡೆಸಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಮಾಡಿದ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇತ್ತ ಕಾಂಗ್ರೆಸ್ ಕೂಡ ಅಷ್ಟೇ ಖಾರವಾಗಿ ತಿರುಗೇಟು ನೀಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಜಟಾಪಟಿ ನಡುವೆ ದೆಹಲಿ ಪೊಲೀಸರು ದಿಢೀರ್ ಟ್ವಿಟರ್ ಕಚೇರಿ ಮೇಲೆ ದಾಳಿ ನಡೆಸಿದೆ.
ಟೂಲ್ ಕಿಟ್ ಪ್ರಕರಣ; ಸಂಬೀತ್ ವಿರುದ್ಧ ಕಾಂಗ್ರೆಸ್ ದೂರು, FIR
ಸಂಬಿತ್ ಪಾತ್ರ ಮಾಡಿದ ಟೂಲ್‌ಕಿಟ್ ಆರೋಪವನ್ನು ಟ್ವಿಟರ್ ನಿರಾಕರಿಸಿತು. ಇದು ತಿರುಚಿದ ದಾಖಲೆ ಎಂದು ಟ್ವಿಟರ್ ಹೇಳಿತ್ತು. ಈ ಕುರಿತು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ತಿರುಚಿದ ದಾಖಲೆ ಟ್ಯಾಗ್‌ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಇಷ್ಟೇ ಅಲ್ಲ ಮ್ಯಾನಿಪ್ಯುಲೇಟೆಡ್ ಮೀಡಿಯಾ ಟ್ಯಾಗ್ ತೆಗೆಯುವಂತೆ ಸೂಚಿಸಿತ್ತು. ಇತ್ತ ದೆಹಲಿ ಪೊಲೀಸರು ಕಾರಣ ನೀಡುವಂತೆ ಟ್ವಿಟರ್‌ಗೆ ನೊಟೀಸ್ ನೀಡಲಾಗಿತ್ತು. ಆದರೆ ಸ್ಪಷ್ಟ ಉತ್ತರ ಬರದ ಕಾರಣ, ಇದೀಗ ನೊಟೀಸ್ ಹಿಡಿದು ದೆಹಲಿ ಪೊಲೀಸರು ನೇರವಾಗಿ ಟ್ವಿಟರ್ ಕಚೇರಿಗೆ ತೆರಳಿದ್ದಾರೆ.
ತಿರುಚಿದ ದಾಖಲೆ ಎಂದು ಟ್ವಿಟರ್ ಹೇಳಿರುವುದಕ್ಕೆ ಉತ್ತರ ನೀಡುವಂತೆ ಸೂಚಿಸಲಾಗಿತ್ತು. ಆದರೆ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ನೀಡಿದ ಹೇಳಿಕೆ ಅಸ್ಪಷ್ಟವಾಗಿದೆ. ಹೀಗಾಗಿ ನೊಟೀಸ್ ನೀಡಲು ಸರಿಯಾದ ವ್ಯಕ್ತಿ ಯಾರು ಎಂದು ಪತ್ತೆಹತ್ತಲು ಟ್ವಿಟರ್ ಕಚೇರಿಗೆ ತೆರಳಿರುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ.
ಕಾಂಗ್ರೆಸ್ ಟೂಲ್ ಕಿಟ್ ಪ್ರಕರಣ; ದಾಖಲೆ ಬಿಡುಗಡೆ ಮಾಡಿದ ಬಿಜೆಪಿ ವಕ್ತಾರ ಸಂಬಿತ್‌ಗೆ ಟ್ವಿಟರ್ ಶಾಕ್!
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪಿತೂರಿ ಟೂಲ್‌ಕಿಟ್ ಪೋಸ್ಟ್‌ಗಳಿಗೆ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಎಂದು ಟ್ವಿಟರ್ ಹೇಳಿತ್ತು. ಮ್ಯಾನಿಪ್ಯುಲೇಟೆಡ್ ಮೀಡಿಯಾ ಟ್ಯಾಗ್ ಬಳಸಿದ ಕಾರಣ ಕೇಳಿತ್ತು. ಕುರಿತ ಸತ್ಯ ಹೊರಬರಬೇಕಿದೆ. ಇದು ತಿರುಚಿದ ದಾಖಲೆ ಅಥವಾ ನೈಜ ದಾಖಲೆಯೇ? ಅನ್ನೋ ಸತ್ಯ ಬಯಲಿಗೆಳೆಯಲು ದೆಹಲಿ ಪೊಲೀಸ್ ಟ್ವಿಟರ್ ಕಚೇರಿಗೆ ಹೋಗಿರುವುದಾಗಿ ಹೇಳಿದೆ.