ಕೋವಿಡ್-19 ಸಂದರ್ಭದಲ್ಲಿ ಟ್ವಿಟ್ಟರ್ ಪರಿಣಾಮಕಾರಿ ಬಳಕೆ ಹೇಗೆ? ಇಲ್ಲಿದೆ ಸಲಹೆ!
ಕೊರೋನಾ ವೈರಸ್ ವ್ಯಾರಕವಾಗಿ ಹರಡುತ್ತಿುರುವ ಸಂದರ್ಭದಲ್ಲಿ ಎಲ್ಲರೂ ಎಚ್ಚರ ವಹಿಸಬೇಕಾಗಿದೆ. ಜೊತೆಗೆ ಸುಳ್ಳು ಸುದ್ದಿಗಳಿಗೆ ವದಂತಿಗಳಿಗೆ ಕಿವಿಗೊಡದೆ ನಿಜಾಂಶ ತಿಳಿಯುವುದು ಅಗತ್ಯವಾಗಿದೆ. ಸದ್ಯದ ಸ್ಥಿತಿಗೆ ಸಂಬಂಧಿಸಿದಂತೆ ಜಾಗತಿಕವಾಗಿ ಸಂಬಂಧಪಟ್ಟ ಹಾಗು ಸ್ಥಳೀಯ ಮಾಹಿತಿಗೆ ಜನರು ತಡೆರಹಿತವಾದ ಮತ್ತು ವಾಸ್ತವ ಸಮಯದ ಮಾಹಿತಿಯನ್ನು ಟ್ವಿಟರ್ ನೀಡುತ್ತಿದೆ. ಲಾಕ್‍ಡೌನ್ ಸಮಯದಲ್ಲಿ ನಾವೆಲ್ಲರೂ ದೂರದೂರವಾಗಿ ಒಟ್ಟಿಗಿರುವುದಕ್ಕಾಗಿ ಟ್ವಿಟ್ಟರ್‌ನಲ್ಲಿ ವಿಶ್ವಸನೀಯ ಮಾಹಿತಿಯನ್ನು ಪಡೆಯುವುದಕ್ಕೆ ಕೆಳಗೆ ಕೆಲವು ಸಲಹೆಗಳನ್ನು ನೀಡಲಾಗಿದೆ
ಬೆಂಗಳೂರು(ಏ.10) ಕೋವಿಡ್-19ನ ಇದೀಗ ವಿಶ್ವವನ್ನೇ ವ್ಯಾಪಿಸುತ್ತಿದೆ. ಕೊರೋನಾ ವೈರಸ್ ಕುರಿತು ಜಗತ್ತಿನಾದ್ಯಂತ ಕೋಟ್ಯಂತರ ಟ್ವೀಟ್ ಹಾಗು ಮರುಟ್ವೀಟ್‍ಗಳು ನಡೆಯುತ್ತಿದೆ. ಪರಿಸ್ಥಿತಿಯ ಕುರಿತು ಇತ್ತೀಚಿನ ಹಾಗು ವಿಶ್ವಸನೀಯ ಮಾಹಿತಿಗಾಗಿ ಜನರು ಟ್ವಿಟ್ಟರ್‍ಅ ಫಾಲೋ ಮಾಡುತ್ತಿದ್ದಾರೆ. ಕೊರೋನಾ ವೈರಸ್ ಕುರಿತು ಸ್ಪಷ್ಟ, ನಿಖರವಾದ ಹಾಗೂ ವಿಶ್ವಾಸನೀಯ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗಳು ನೀಡುತ್ತಿದೆ. ಈ ಕುರಿತು ಗಮನಹರಿಸಿದರೆ, ವದಂತಿಗಳಿಂದ ದೂರವಿರಬಹುದು.
ಸುಳ್ಳು ಸುದ್ದಿಗೆ ಕಿವಿಗೊಡಬೇಡಿ, ಟ್ವಿಟರ್ ಮೂಲಕ ಪಡೆಯಿರಿ ಕೊರೋನಾ ವೈರಸ್ ಸ್ಪಷ್ಟ ಮಾಹಿತಿ
ವಿಶ್ವಸನೀಯ ಮೂಲಗಳನ್ನೇ ಅನುಸರಿಸಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೇರಿದಂತೆ ಸರ್ಕಾರ ಹಾಗೂ ಇಲಾಖೆಗಳ ಅಧೀಕೃತ ಖಾತೆಗಳಿಗೆ ನೋಟಿಫಿಕೇಶನ್ಸ್ ಆನ್ ಮಾಡಿ ಅಥವಾ ಫಾಲೋ ಮಾಡಿ.
ಪರಿಶೀಲಿತ ಮೂಲಗಳಿಂದ ಕೋವಿಡ್-19 ಕುರಿತಾದ ಇತ್ತೀಚಿನ ವಾಸ್ತವಾಂಶಗಳಿಗಾಗಿ ಟ್ವಿಟರ್‌ನ dedicated bilingual events page ನೋಡಿ. ಭಾರತೀಯರು ತಮ್ಮ ದೇಶದ ಕಾಲಮಾನದ ಮೇಲ್ಭಾಗದಲ್ಲಿ ಈ ಪುಟವನ್ನು ನೋಡಬಹುದು. ಈ ಕಾಲಮಾನವು ಇತ್ತೀಚಿನ ಸಾಮಾಜಿಕ ಪ್ರತ್ಯೇಕರಣ ಮತ್ತು ಆರೋಗ್ಯಶುಶ್ರೂಷಾ ಮಾಹಿತಿಗಳ ಸುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಲು ಜನರಿಗೆ ನೆರವಾಗುತ್ತದೆ.
ದೊಡ್ಡ ಸಂವಾದಗಳ ಗುಂಪನ್ನು ಸೇರಿಕೊಳ್ಳಲು, ನಿಮ್ಮ ಟ್ವೀಟ್‍ಗಳಲ್ಲಿ ಅತ್ಯಂತ ತತ್ಸಂಬಂಧಿತ ಹ್ಯಾಶ್‍ಟ್ಯಾಗ್ ಉಪಯೋಗಿಸುವ ಮೂಲಕ ನಿಮ್ಮ ಟ್ವೀಟ್‍ಗಳನ್ನು ತತ್ಸಂಬಂಧಿಗೊಳಿಸಿ. ಉದಾಹರಣೆಗೆ, ವೈರಾಣುವನ್ನು ನಿಗ್ರಹಿಸಲು ಭಾರತದ ಪ್ರಯತ್ನಗಳು ಮತ್ತು ಕಾರ್ಯಾಚರಣೆಗಳ ಕುರಿತಾದ ಟ್ವೀಟ್‍ಗಳನ್ನು ಅನುಸರಿಸಲು #IndiaFightsCorona ಸೂಕ್ತವಾದ ಹ್ಯಾಶ್‍ಟ್ಯಾಗ್ ಆಗಿದೆ.
ಬಹಳ ಜವಾಬ್ದಾರಿಯುತವಾಗಿ ಟ್ವೀಟ್ ಮರುಟ್ವೀಟ್ ಮಾಡಿ ಮತ್ತು ತೊಡಗಿಕೊಳ್ಳಿ. ನಿಮ್ಮ ಮಾಹಿತಿಯ ಮೂಲವು ವಿಶ್ವಸನೀಯವಾಗಿರುವುದನ್ನು ಖಾತರಿಪಡಿಸಿಕೊಳ್ಳಿ. ಅಧಿಕೃತ ಮೂಲದಿಂದ ಬಂದಿದ್ದರೆ ಅಥವಾ ಪರಿಶೀಲಿಸಲ್ಪಟ್ಟಿರುವುದನ್ನು ಹೊರತುಪಡಿಸಿ ಇತರ ಅಪರಿಶೀಲಿತ ಸಂದೇಶಗಳು ಅಥವಾ ಸ್ರ್ಕೀನ್‍ಶಾಟ್‍ಗಳನ್ನು ಹಂಚಿಕೊಳ್ಳುವ ಮೂಲಕ ತಪ್ಪು ಮಾಹಿತಿ ಸಂಗ್ರಹಿಸಬೇಡಿ ಅಥವಾ ಕಳುಹಿಸಬೇಡಿ.
ಒಂದು ಟ್ವೀಟ್ ಕೋವಿಡ್-19 ಕುರಿತು ಗಾಳಿಸುದ್ದಿ ಹರಡುತ್ತಿದೆ ಅಥವಾ ಮೂಢನಂಬಿಕೆ ಬೆಳೆಸುತ್ತಿದೆ ಎಂದು ನಿಮಗನಿಸಿದರೆ, ಅಥವಾ Twitter rules ಉಲ್ಲಂಘಿಸುತ್ತಿದೆ ಎನಿಸಿದರೆ ದಯವಿಟ್ಟು ಅದನ್ನು ವರದಿ ಮಾಡಿ.
ಸ್ವಲ್ಪ ವಿಶ್ರಮಿಸಿ. ತೊಡಗಿಕೊಳ್ಳುವ ಇಚ್ಛೆಯಿಲ್ಲದ ಖಾತೆಗಳನ್ನು ಅನುಸರಿಸದಿರುವುದರ ಮೂಲಕ, ಖಾತೆಗಳು ನಿಮ್ಮನ್ನು ಅನುಸರಿಸುವುದನ್ನು ಬ್ಲಾಕ್ ಮಾಡುವ ಮೂಲಕ ಮತ್ತು ಖಾತೆಗಳು, ಪದಗಳು, ಸಂವಾದಗಳು, ಮಾತುಗಳು, ಬಳಕೆದಾರರ ಹೆಸರು, ಇಮೋಜಿಗಳು, ಅಥವಾ ಹ್ಯಾಶ್‍ಟ್ಯಾಗ್‍ಗಳನ್ನು ಮ್ಯೂಟ್ ಮಾಡುವ ಮೂಲಕ ನಿಮ್ಮ ಅನುಭವವನ್ನು ವೈಯಕ್ತೀಕೃತಗೊಳಿಸಿ. ನಿಮ್ಮ ಕುಟುಂಬದವರು ಮತ್ತು ಸ್ನೀಹಿತರೊಂದಿಗೆ ಸಂಪರ್ಕಗೊಂಡಿರುವ ಮೂಲಕ ನಿಮ್ಮ ಮಾನಸಿಕ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಿ.
ನಿಮ್ಮ ಆಸಕ್ತಿಯನ್ನು ಗಮನಿಸಿ. ನೀವು ಅನುಸರಿಸಲು ಬಯಸುವ ಖಾತೆಗಳ ಪಟ್ಟಿ ಮಾಡಿ. ಪಟ್ಟಿಯ ಸಮಯಸೂಚಿ ನೋಡುವುದರಿಂದ ನೀವು ಕೇವಲ ಆ ಪಟ್ಟಿಯಲ್ಲಿರುವ ಖಾತೆಗಳಿಗೆ ಮಾತ್ರ ಟ್ವೀಟ್ ಮಾಡಲು ವ್ಯವಸ್ಥಿತವಾಗುತ್ತೀರಿ. ನಿಮ್ಮ ಸಮಯಸೂಚಿಗೆ ಪಟ್ಟಿಯನ್ನು ಪಿನ್ ಮಾಡುವುದರಿಂದ ನಿಮ್ಮ ಸರಿಸಮಾನ ಆಸಕ್ತರು ಅದನ್ನು ನೋಡಬಹುದು.
ನೇರ ಸಂದೇಶಗಳನ್ನು ನೀವು ನಿಷ್ಕ್ರಿಯಗೊಳಿಸು ನಿಮ್ಮ ನೋಟಿಫಿಕೇಶನ್‍ಗಳನ್ನು ಫಿಲ್ಟರ್ ಮಾಡಬಹುದು.