ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾದ 'ಠುಕ್ರಾ ಕೆ ಮೇರಾ ಪ್ಯಾರ್' ವೆಬ್ ಸಿರೀಸ್ ಟ್ರೆಂಡಿಂಗ್‌ನಲ್ಲಿದೆ.
ಎಲ್ಲರ ಗಮನ ಸೆಳೆಯುತ್ತಿರೋ ನಾಯಕಿ
'ಠುಕ್ರಾ ಕೆ ಮೇರಾ ಪ್ಯಾರ್' ನ ನಾಯಕಿ ಜನರ ಗಮನ ಸೆಳೆಯುತ್ತಿದ್ದಾರೆ. ಈ ನಾಯಕಿಯ ಹೆಸರು ಸಂಚಿತಾ ಬಸು, ರೀಲ್ಸ್ ಮಾಡುತ್ತಲೇ ಹೀರೋಯಿನ್ ಆದ ಚೆಲುವೆ.
ಬಿಹಾರದ ಸಂಚಿತಾ ಬಸು
ಸಂಚಿತಾ ಬಸು ಬಿಹಾರದ ಸಲಖುವಾ ಪ್ರಖಂಡದವರು. ಮಾರ್ಚ್ 24, 2004 ರಂದು ಜನಿಸಿದ ಸಂಚಿತಾ ಭಾಗಲ್ಪುರದಲ್ಲಿ ಬೆಳೆದರು. ಮೌಂಟ್ ಕಾರ್ಮೆಲ್ ಶಾಲೆಯಲ್ಲಿ 12 ನೇ ತರಗತಿಯವರೆಗೆ ಓದಿದ್ದಾರೆ.
ಟಿಕ್‌ಟಾಕ್ ವೀಡಿಯೊಗಳಿಂದ ನಾಯಕಿಯಾದ ಸಂಚಿತಾ
ಸಂಚಿತಾ ಬಸು ತಮ್ಮ ನಟನಾ ವೃತ್ತಿಯನ್ನು ಟಿಕ್‌ಟಾಕ್‌ನಲ್ಲಿ ವಿಡಿಯೋ ಮಾಡುವ ಮೂಲಕ ಪ್ರಾರಂಭಿಸಿದರು. ನಂತರ ಅವರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಇವರ್ ರೀಲ್ಸ್ ವೈರಲ್ ಆಗಿದ್ದವು.
ದಕ್ಷಿಣ ಭಾರತದ ಚಿತ್ರದಲ್ಲಿ ಕಾಣಿಸಿಕೊಂಡ ಸಂಚಿತಾ ಬಸು
ಸಂಚಿತಾ ಬಸು 2022 ರಲ್ಲಿ ಬಿಡುಗಡೆಯಾದ ತೆಲುಗು ಹಾಸ್ಯ ಚಿತ್ರ 'ಫಸ್ಟ್ ಡೇ ಫಸ್ಟ್ ಶೋ' ನಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಅಚಂತ ಮತ್ತು ಕುಂದನ್ ಅಲೆಕ್ಸ್‌ಜೆಡ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಒಟಿಟಿಯಲ್ಲಿ ಸಂಚಲನ ಮೂಡಿಸುತ್ತಿರುವ ಸಂಚಿತಾ ಬಸು
'ಠುಕ್ರಾ ಕೆ ಮೇರಾ ಪ್ಯಾರ್' ಸಿರೀಸ್‌ನಲ್ಲಿ ಶಾನ್ವಿಕಾ ಚೌಹಾಣ್ ಎಂಬ ಧೈರ್ಯಶಾಲಿ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಆದ್ರೆ ನಿಜ ಜೀವನದಲ್ಲಿ ಸಿಕ್ಕಾಪಟ್ಟು ಸಾಫ್ಟ್
19 ಎಪಿಸೋಡ್‌ಗಳ 'ಠುಕ್ರಾ ಕೆ ಮೇರಾ ಪ್ಯಾರ್'
ನವೆಂಬರ್ 22 ರಂದು ಬಿಡುಗಡೆಯಾದ 'ಠುಕ್ರಾ ಕೆ ಮೇರಾ ಪ್ಯಾರ್' ನ ಮೊದಲ ಸೀಸನ್‌ನ 19 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸಂಚಿತಾ ಬಸು ಅವರ ಅಭಿಮಾನಿ ಬಳಗ
ಇನ್‌ಸ್ಟಾಗ್ರಾಮ್‌ನಲ್ಲಿ ಸಂಚಿತಾ ಬಸು ಅವರಿಗೆ 4.7 ಮಿಲಿಯನ್ ಅನುಯಾಯಿಗಳಿದ್ದಾರೆ. ಇಲ್ಲಿ ರೀಲ್ಸ್ ಅಪ್ಲೋಡ್ ಮಾಡುತ್ತಿರುತ್ತಾರೆ.