'ಟ್ವಿಟರ್‌ನಲ್ಲಿ ರಾಜಕೀಯ ಮಾಡ್ತಿದ್ದವರು ಇದೀಗ ಟ್ವಿಟರ್‌ಗಾಗಿ ರಾಜಕೀಯ'; ಕಾಂಗ್ರೆಸ್‌ಗೆ ತಿರುಗೇಟು!
- ದೇಶದ ಕಾನೂನು ಗೌರವಿಸಲು ಟ್ವಿಟರ್‌ಗೆ ಕೇಂದ್ರ ತಾಕೀತು
- ಟ್ವಿಟರ್ ಪರ ನಿಂತು ಕೇಂದ್ರದ ವಿರುದ್ಧ ಕಾಂಗ್ರೆಸ್ ಸಮರ ಆರಂಭ
- ಕಾಂಗ್ರೆಸ್ ರಾಜಕಾರಣಕ್ತೆ ತಕ್ಕ ತಿರುಗೇಟು ನೀಡಿದ ರವಿಶಂಕರ್ ಪ್ರಸಾದ್
ನವದೆಹಲಿ(ಮೇ.30): ಹೊಸ ಡಿಜಿಟಲ್ ನಿಯಮ ಪಾಲನೆಗೆ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ವ್ಯಾಟ್ಸ್ಆ್ಯಪ್, ಲಿಂಕ್ಡ್ ಇನ್ ಸೇರಿದಂತೆ ಬಹುತೇಕ ಸಂಸ್ಥೆಗಳು ಒಪ್ಪಿಕೊಂಡಿದ್ದರೆ, ಟ್ವಿಟರ್ ತನ್ನ ಮೊಂಡುವಾದ ಮುಂದುವರಿಸಿದೆ. ಈ ದೇಶದ ಕಾನೂನು ಗೌರವಿಸಲು ಕೇಂದ್ರ ತಾಕೀತು ಮಾಡಿದ ಬೆನ್ನಲ್ಲೇ ಇದೀಗ ಟ್ವಿಟರ್ ಪರ ಕಾಂಗ್ರೆಸ್ ಬ್ಯಾಟಿಂಗ್ ಮಾಡುತ್ತಿದೆ. ಕಾಂಗ್ರೆಸ್ ನಡೆಯನ್ನು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಖಂಡಿಸಿದ್ದಾರೆ.
ಕೇಂದ್ರದ ಎಚ್ಚರಿಕೆಗೆ ಫೇಸ್‌ಬುಕ್, ವ್ಯಾಟ್ಸ್ಆ್ಯಪ್ ಥಂಡಾ; ಹೊಸ ನಿಯಮಕ್ಕೆ ಸಮ್ಮತಿ!.
ಟ್ವಿಟರ್ ತಾಣದಲ್ಲಿ ಮಾತ್ರ ರಾಜಕೀಯ ಮಾಡುತ್ತಿದ್ದ ಕಾಂಗ್ರೆಸ್ ನಾಯಕರು ಇದೀಗ ಟ್ವಿಟರ್‌ನಿಂದ ರಾಜಕಾರಣ ಆರಂಭಿಸಿದ್ದಾರೆ ಎಂದು ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಈ ರೀತಿಯ ನೀಚ ರಾಜಕಾರಣ ಹಾಗೂ ಪರಿಸ್ಥಿತಿಗೆ ತಕ್ಕಂತೆ ತನ್ನ ನಿಲುವಗಳನ್ನೇ ಬದಲಿಸಿಕೊಳ್ಳುವ ಸ್ಥಿತಿಗೆ ಇಳಿದಿದೆ. ಕಾಂಗ್ರೆಸ್ ರಾಜಕಾರಣವನ್ನು ಈ ದೇಶದ ಜನ ನೋಡಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ.
ಪ್ರತಿಯೊಬ್ಬರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಟ್ವಿಟರ್ ಉತ್ತಮ ವೇದಿಕೆಯಾಗಿದೆ. ಟ್ವಿಟರ್ ಭಾರತದ ಬಹುದೊಡ್ಡ ಸಾಮಾಜಿಕ ಮಾಧ್ಯಮವಾಗಿದೆ. ಉತ್ತಮ ಲಾಭ ಮಾಡಿಕೊಳ್ಳುತ್ತಿದೆ. ಇದರಲ್ಲಿ ನಮಗೇನು ತಕರಾರಿಲ್ಲ. ಆದರೆ ಈ ದೇಶದ ಕಾನೂನು, ಈ ದೇಶದ ಸಂವಿಧಾನವನ್ನು ಎಲ್ಲರೂ ಪಾಲಿಸಲೇಬೇಕು ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಸಾಮಾನ್ಯ ವ್ಯಾಟ್ಸ್ಆ್ಯಪ್ ಬಳಕೆದಾರರು ಭಯಪಡಬೇಕಿಲ್ಲ; ಹೊಸ ನಿಯಮ ಕುರಿತು ಕೇಂದ್ರ ಸ್ಪಷ್ಟನೆ!
ಹೊಸ ಡಿಜಟಲ್ ನಿಯಮ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದು ಟ್ವಿಟರ್ ಕೇಂದ್ರದ ಮೇಲೆ ಆರೋಪ ಮಾಡಿತ್ತು. ಈ ಹೇಳಿಕೆಗೆ ಖಡಕ್ ಪ್ರತಿಕ್ರಿಯೆ ನೀಡಿದ ಕೇಂದ್ರ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಪಾಠ ಬೇಕಿಲ್ಲ ನಿಯಮ ಪಾಲಿಸಿ ಎಂದು ತಾಕೀತು ಮಾಡಿತ್ತು.