ದೇಶದ ಸುರಕ್ಷತೆಗಾಗಿ ಯಾವುದೇ ಮೊಬೈಲ್ ನೆಟ್‌ವರ್ಕ್ ಸ್ವಾಧೀನ, ಕೇಂದ್ರದ ಹೊಸ ಮಸೂದೆ!

ಕೇಂದ್ರ ಸರ್ಕಾರ ಹೊಸ ಮಸೂದೆ ಮಂಡಿಸಿದೆ. ದೇಶದ ಸುರಕ್ಷತೆ ದೃಷ್ಟಿಯಿಂದ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ಕೇಂದ್ರ ಮುಂದಾಗಿದೆ. ಯಾವುದೇ ಮೊಬೈಲ್ ನೆಟ್‌ವರ್ಕ್ ಸ್ವಾಧೀನ, ಸ್ಥಗಿತ ಸೇರಿದಂತೆ ಹಲವು ಹೊಸ ನೀತಿಗಳನ್ನು ಜಾರಿಗೊಳಿಸುತ್ತಿದೆ
 

Telecom Bill 2023 Govt can take over any mobile network over national security concern ckm

ನವದೆಹಲಿ(ಡಿ.18) ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ. ದೇಶದ ಸುರಕ್ಷತೆ, ಸಾರ್ವಜನಿಕ ಹಿತಾಸಕ್ತಿಗಾಗಿ ಯಾವುದೇ ಮೊಬೈಲ್ ನೆಟ್‌ವರ್ಕ್ ತಾತ್ಕಾಲಿಕವಾಗಿ ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಇನ್ನು ಯಾವುದೇ ಕ್ಷಣದಲ್ಲೂ ಮೊಬೈಲ್ ನೆಟ್‌ವರ್ಕ್ ಸ್ಥಗಿತಗೊಳಿಸುವ,ಟೆಲಿಕಾಂ ಉತ್ಪನ್ನಗಳನ್ನು ನಿಷೇಧಿಸುವ ಸೇರಿದಂತೆ ಹಲವು ಬದಲಾವಣೆಗಳ ಹೊಸ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ.

ಸಂವಹನ ಸಚಿವ ಅಶ್ವಿನಿ ವೈಷ್ಣವ್ ಟೆಲಿಕಾಂ ಬಿಲ್ ಮಂಡಿಸಿದ್ದಾರೆ. ವಿಪಕ್ಷಗಳು ಲೋಕಸಭೆ ಭದ್ರತಾ ಲೋಪ ವಿಚಾರ ಮುಂದಿಟ್ಟು ಗದ್ದಲ ಹಾಗೂ ಪ್ರತಿಭಟನೆ ನಡುವೆ ಈ ಬಿಲ್ ಮಂಡಿಸಲಾಗಿದೆ. ಈ ಮಸೂದೆಯಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿ, ಸಾರ್ವಜನಿಕ ಹಿತಾಸಕ್ತಿ, ದೇಶದ ಸುರಕ್ಷತೆ ಹಾಗೂ ಭದ್ರತೆ ಕಾರಣದಿಂದ ಕೇಂದ್ರ ಸರ್ಕಾರ ಯಾವುದೇ ಮೊಬೈಲ್ ನೆಟ್‌ವರ್ಕ್ ಸ್ವಾಧೀನಪಡಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ಅಥವಾ ರಾಜ್ಯಸರ್ಕಾರ ಪರವಾಗಿ ವಿಶೇಷ ಅಧಿಕಾರ ಹೊಂದಿದ ಅಧಿಕಾರಿ ಸೂಕ್ತವೆನಿಸಿದರೆ ತಾತ್ಕಾಲಿಕವಾಗಿ ಮೊಬೈಲ್ ನೆಟ್‌ವರ್ಕ್ ಸ್ವಾಧೀನಪಡಿಸಿಕೊಳ್ಳಬಹುದು ಎಂದು ಹೊಸ ಮಸೂದೆಯಲ್ಲಿ ಹೇಳಲಾಗಿದೆ. 

2 ಗಂಟೆಯೊಳಗೆ ಸಂಪರ್ಕ ಕಡಿತವಾಗುತ್ತೆಂದು ಕರೆ ಬರ್ತಿದ್ಯಾ? ಮೊಬೈಲ್ ಬಳಕೆದಾರರಿಗೆ ದೂರಸಂಪರ್ಕ ಇಲಾಖೆ ಎಚ್ಚರಿಕೆ!

ರಾಷ್ಟ್ರೀಯ ಹಿತಾಸಕ್ತಿ, ದೇಶದ ಸುರಕ್ಷತೆ ಹಾಗೂ ಭದ್ರತೆ ಕಾರಣದಿಂದ ಯಾವುದೇ ಮೊಬೈಲ್ ನೆಟ್‌ವರ್ಕ್ ಸ್ಥಗಿತಗೊಳಿಸುವ ಅಧಿಕಾರ ಕೇಂದ್ರಕ್ಕಿದೆ ಎಂದು ಹೊಸ ಮಸೂದೆ ಹೇಳುತ್ತಿದೆ. ಯಾವುದೇ ದೇಶ ಅಥವಾ ವ್ಯಕ್ತಿಗಳಿಂದ ಟೆಲಿಕಾಂ ಉತ್ಪನ್ನ ಖರೀದಿಸಿ ಬಳಕೆ ಮಾಡುವುದನ್ನು ನಿಷಧಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಇನ್ನು ದೇಶದಲ್ಲಿ ಯಾರೇ ಸಿಮ್ ಖರೀದಿಸಲು ಬಯೋಮೆಟ್ರಿಕ್ ಐಡೆಂಟಿಪಿಕೇಶನ್ ಕಡ್ಡಾಯ ಮಾಡಲಾಗಿದೆ.

ಭಾರತದ ಸಾರ್ವಭೌಮತ, ಸಮಗ್ರತೆ, ಐಕ್ಯತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಯಾವುದೇ ಸಂದೇಶ, ಅಥವಾ ಯಾವದೇ ವ್ಯಕ್ತಿ, ದೂರಸಂಪರ್ಕ ಸಾಧನಗಳಿಗೆ ಸಂದೇಶ ರವಾನೆಯನ್ನು ಕೇಂದ್ರ ಸರ್ಕಾರ ನಿರ್ದೇಶಿಸವು ಅವಕಾಶವನ್ನು ಹೊಸ ಮಸೂದೆಯಲ್ಲಿ ನೀಡಲಾಗಿದೆ.  ಈ ಕುರಿತು ಹಲವ ಸುಧಾರಣೆ ಹಾಗೂ ಮಹತ್ತರ ಬದಲಾವಣೆಯ ಟೆಲಿಕಾಂ ಮಸೂದೆ 2023ನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.  

ಭಾರತದ ಸಮಗ್ರತೆಗೆ ಧಕ್ಕೆ ತರಲು ಮತ್ತು ದೇಶದಲ್ಲಿ ಅಶಾಂತಿ ಸೃಷ್ಟಿಸಲು ವಿದೇಶಿ ಶಕ್ತಿಗಳ ಪ್ರಯತ್ನದ ಕುರಿತು ಹಲವು ಘಟನೆಗಳು ವರದಿಯಾಗಿದೆ. ಹಲವು ರೂಪದಲ್ಲಿ ಈ ಪ್ರಯತ್ನ ನಡೆಯುತ್ತಲೇ ಇದೆ. ಈ ಎಲ್ಲಾ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಇದೀಗ ಹಲವು ಸುಧಾರಣೆಗಳ ಟಿಲಿಕಾಂ ಬಿಲ್ ಮಂಡಿಸಿದೆ.

ನಿಯಮ ಮೀರಿ ಸಿಮ್ ಕಾರ್ಡ್ ಮಾರಿದ್ರೆ ಟೆಲಿಕಾಮ್ ಸಂಸ್ಥೆಗೆ 10 ಲಕ್ಷ ದಂಡ; ದೂರಸಂಪರ್ಕ ಇಲಾಖೆ ಹೊಸ ಆದೇಶ

 

Latest Videos
Follow Us:
Download App:
  • android
  • ios