ಬೆಂಗಳೂರಿನಲ್ಲಿ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗೆ ಚಾಲನೆ; ನಾಳೆ ಬಾ ವಿಶೇಷ ಅಭಿಯಾನ!

  • ಬೆಂಗಳೂರು ನಗರದಲ್ಲಿ ಸ್ವಿಗ್ಗಿಯಿಂದ ‘ಇನ್‌ಸ್ಟಾಮಾರ್ಟ್‌’ಗೆ ಚಾಲನೆ
  • ಪುರಾತನ  ಮತ್ತು ಜಾನಪದ ಕಥೆಗಳಿಂದ ಪ್ರೇರೇಪಿತ
  • ದಿನಸಿ ಸಾಮಾಗ್ರಿಗಳನ್ನು ತ್ವರಿತವಾಗಿ ಪೂರೈಸುವ ‘ನಾಳೆ ಬಾ’ ವಿಶೇಷ ಮಾರುಕಟ್ಟೆ ಅಭಿಯಾನಕ್ಕೆ ಚಾಲನೆ
Swiggy launched Instamart a quick delivery service at doorsteps within 45 minutes

ಬೆಂಗಳೂರು(ಸೆ.20): ದಿನಸಿ ಸಾಮಗ್ರಿಗಳನ್ನು ತಕ್ಷಣವೇ ತಲುಪಿಸುವ ಹಾಗೂ ಸ್ವಿಗ್ಗಿ ಪ್ರಾಯೋಜಿತ ‘ಇನ್‌ಸ್ಟಾಮಾರ್ಟ್‌’ ಸೇವೆಯನ್ನು ಪ್ರಚುರಪಡಿಸುವ ಹೊಸ ರೀತಿಯ ‘ನಾಳೆ ಬಾ’ ಎಂಬ ಮಾರುಕಟ್ಟೆ ಅಭಿಯಾನ ಆರಂಭಿಸಲಾಗಿದೆ. ಸರಕು ಖಾಲಿಯಾದಾಗ, ಸಾಮಾಗ್ರಿಗಳನ್ನು ಸುಲಭವಾಗಿ ಪಡೆಯುವುದು ಸದ್ಯ ಕಷ್ಟವಾಗಿದೆ. ಕೊರೋನಾ ಕಾರಣ   ಸಾಮಾಜಿಕ ಅಂತರ ಕಾಪಾಡಬೇಕಾದ ಹಾಗೂ ದಿನಸಿ ಸಾಮಾಗ್ರಿ ತಲುಪಿಸುವುದಕ್ಕೆ ಆ್ಯಪ್‌ಗಳನ್ನು ಅವಲಂಬಿಸಬೇಕಾದ ಇಂದಿನ ದಿನಗಳಲ್ಲಂತೂ ಇದರ ಅಗತ್ಯ ಇನ್ನೂ ಹೆಚ್ಚಾಗಿದೆ.

ಮನೆಬಾಗಿಲಿಗೆ ಮದ್ಯ ಪೂರೈಕೆ; ಸ್ವಿಗ್ಗಿಯಿಂದ ಭರ್ಜರಿ ಆಫರ್!..

ಬೆಂಗಳೂರಿಗರ ಈ ಆತಂಕಗಳನ್ನು ಅರ್ಥ ಮಾಡಿಕೊಂಡು ಇದಕ್ಕೆ ಪರಿಹಾರ ರೂಪಿಸಲು ಸ್ವಿಗ್ಗಿ ದಿನಸಿ ಸಾಮಗ್ರಿಗಳನ್ನು 30ರಿಂದ 45 ನಿಮಿಷಗಳ ಒಳಗೆ ತಲುಪಿಸುವ ಅತ್ಯಾಧುನಿಕ ಇನ್‌ಸ್ಟಾಮಾರ್ಟ್‌ ಅನ್ನು ಪರಿಚಯಿಸಿದ್ದು, ಇದನ್ನು ಮನೆಮಾತಾಗಿಸಲು ‘ ನಾಳೆ ಬಾ’ ಎಂಬ ಪ್ರಚಾರ ಅಭಿಯಾನ ಆರಂಭಿಸಿದೆ.

ಗ್ರಾಹಕರಿಗೆ SWIGGY ಬಂಪರ್ ಕೊಡುಗೆ; ಪಿಕಪ್ ಮತ್ತು ಡ್ರಾಪ್ ಸೇವೆ ಆರಂಭ!

ಈ ಅಭಿಯಾನವು ಬೆಂಗಳೂರು ನಗರ ಸಿಲಿಕಾನ್‌ ಕಣಿವೆ ಎಂಬ ಗುರುತಿಸಿಕೊಳ್ಳುವ ಮುನ್ನ 1990ರ ದಶಕದಲ್ಲಿ ಈ ನಗರದಲ್ಲಿ ದಂತಕತೆಯಾಗಿದ್ದ ‘ನಾಳೆ ಬಾ’ ಪ್ರಸಂಗದಿಂದ ಸ್ಫೂರ್ತಿ ಪಡೆದಿದೆ. ಈ ಕಟ್ಟುಕತೆಯ ಪ್ರಕಾರ ಒಬ್ಬಳು ಮಾಟಗಾತಿಯು ರಾತ್ರಿ ವೇಳೆ ನಗರದ ಬೀದಿಬೀದಿಗಳಲ್ಲಿ ಅಲೆದಾಡುತ್ತಾ, ಮನೆ ಮನೆಯ ಬಾಗಿಲು ತಟ್ಟುತ್ತಿರುತ್ತಾಳೆ. ಉಪಾಯದಿಂದ ಆಕೆಯನ್ನು ತಮ್ಮ ಮನೆಯ ಹೊಸ್ತಿಲಿನಿಂದಲೇ ಆಚೆ ಕಳುಹಿಸಲು ಇಲ್ಲಿನ ನಿವಾಸಿಗಳು ತಮ್ಮ ಮನೆಯ ಬಾಗಿಲಿನಲ್ಲಿ ಹಾಗೂ ಗೋಡೆಗಳಲ್ಲಿ ‘ನಾಳೆ ಬಾ’ ಎಂದು ಬರೆಯುತ್ತಿದ್ದರು. ಇದನ್ನು ಓದಿ ಆಕೆ ವಾಪಾಸ್‌ ಹೋಗುತ್ತಾಳೆ. ಮರುದಿನ ಮತ್ತೆ ಬಂದಾಗಲೂ ಅದೇ ಸಂದೇಶವು ಕಾಣಿಸುತ್ತದೆ. ಈ ಪ್ರಕ್ರಿಯೆ ಹೀಗೆಯೇ ಮುಂದುವರಿಯುತ್ತದೆ ಎಂಬುದು ಜನರ ನಂಬಿಕೆಯಾಗಿತ್ತು. ಬಾಲಿವುಡ್‌ನ ಪ್ರಖ್ಯಾತ ‘ಸ್ತ್ರೀ’ ಚಲನಚಿತ್ರವೂ ಇದೇ ಪರಿಕಲ್ಪನೆಯನ್ನು ಆಧರಿಸಿದೆ.

‌ಸಾಮಾಗ್ರಿಗಳನ್ನು ಮನೆಗೆ ಸುಲಭವಾಗಿ ತರಿಸಿಕೊಳ್ಳುವ ಸ್ಲಾಟ್‌ಗಳು ಸಿಗದೆ ಪರದಾಡುತ್ತಿರುವ ಹಾಗೂ ಬಹುತೇಕ ಸಲ ಮರುದಿನ ಸಾಮಾಗ್ರಿ ತಲುಪಿಸುವ ಸ್ಲಾಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಗ್ರಾಹಕರ ಭಯಾನಕ ಸಂಕಟವನ್ನು ಸ್ವಿಗ್ಗಿ ಮನಗಂಡಿದೆ. ಈ ಜನಪ್ರಿಯ ಸಾಂಸ್ಕೃತಿಕ ಪ್ರಸಂಗವನ್ನು ಜಾಣ್ಮೆಯಿಂದ ಬಳಸಿಕೊಂಡಿರುವ ಸ್ವಿಗ್ಗಿ, ‘ಸಾಮಾಗ್ರಿಗಳನ್ನು ಮನೆಗೆ ತಲುಪಿಸುವ ಯಾವುದೇ ಸ್ಲಾಟ್‌ಗಳು ಇವತ್ತು ಲಭ್ಯವಿಲ್ಲ’ ಎನ್ನುವ ಮೂಲಕ ಪ್ರಸ್ತುತ ಕಾಲದಲ್ಲೂ ಗ್ರಾಹಕರು ಅನುಭವಿಸುತ್ತಿರುವ ಆಧುನಿಕ ದುಃಸ್ವಪ್ನದ ತೀವ್ರತೆಯನ್ನು ಕಟ್ಟಿಕೊಟ್ಟಿದೆ.

ಈ ಅಭಿಯಾನವು ಬೆಂಗಳೂರಿನಲ್ಲಿ ಈ ವಾರ ಚಾಲ್ತಿಯಲ್ಲಿತ್ತು. ನಾಗರಿಕರು ವೃತ್ತಪತ್ರಿಕೆಗಳಲ್ಲಿ ಬೆಳಿಬೆಳಿಗ್ಗೆ ‘ನಾಳೆ ಬಾ’ ಫ್ಲೈಯರ್‌ಗಳನ್ನು ಕಂಡು ಎಚ್ಚೆತ್ತುಕೊಂಡರು. ಅನೇಕ ಬಳಕೆದಾರರ ಹಾಗೂ ಪ್ರಭಾವಶಾಲಿ ವ್ಯಕ್ತಿಗಳ ಗಮನವನ್ನೂ ಇದು ಸೆಳೆಯಿತು. ಸಾಮಾಜಿಕ ಜಾಲತಾಣಗಳಲ್ಲೂ ಮನೆ ಮಾತಾಯಿತು. ಸಾಮಾಜಿಕ ಜಾಲತಾಣಗಳಲ್ಲಿನ ಸ್ವಿಗ್ಗಿ ಖಾತೆಗಳ ಮೂಲಕ ಹಾಗೂ ವೃತ್ತಪತ್ರಿಕೆಗಳಲ್ಲಿನ ಫ್ಲೈಯರ್ ಜಾಹೀರಾತುಗಳ ಮೂಲಕ ಈ ಅಭಿಯಾನದ ಹಿಂದಿನ ಗುಟ್ಟನ್ನು ರಟ್ಟುಮಾಡಲಾಯಿತು. ಈ ಅಭಿಯಾನವು 50ಸಾವಿರಕ್ಕೂ ಅಧಿಕ ಮಂದಿಯ ಗಮನಸೆಳೆದಿದೆ. ಬಿಡುಗಡೆ ಮಾಡಿದ 24 ಗಂಟೆಗಳಲ್ಲೇ 30 ಸಾವಿರ ಮಂದಿ ಇದಕ್ಕೆ ಸ್ಪಂದಿಸಿದರು.

ಈ ಅಭಿಯಾನದ ಉದ್ದೇಶವು ಇಂದಿನ ಗ್ರಾಹಕರ ಆಗುಹೋಗುಗಳಿಗೆ ಸ್ಪಂದಿಸುವುದು ಹಾಗೂ ಸಾಮಾಗ್ರಿಗಳನ್ನು ಮನೆಗೆ ತರಿಸಿಕೊಳ್ಳುವ ಸ್ಲಾಟ್‌ಗಾಗಿ ನಾಳೆಯವರೆಗೆ ಕಾಯಬೇಕಾಗುತ್ತದೆಯೇನೋ ಎಂಬ ಅವರ ಆತಂಕಕ್ಕೆ ಪರಿಹಾರ ಹುಡುಕುವುದೇ ಆಗಿದೆ.  ಇನ್‌ಸ್ಟಾಮಾರ್ಸ್‌ ಮೂಲಕ ಗ್ರಾಹಕರಿಗೆ ಅನುಕೂಲ ಕಲ್ಪಿಸುವುದು ಹಾಗೂ ಆಧುನಿಕ ಕಾಲದ ‘ನಾಳೆ ಬಾ’ ಎಂಬ ಚಕ್ರವ್ಯೂಹದಿಂದ ಅವರಿಗೆ ಬಿಡುಗಡೆ ನೀಡುವುದೇ ಸ್ವಿಗ್ಗಿಯ ಆಶಯ.

Latest Videos
Follow Us:
Download App:
  • android
  • ios