ಕಾರ್ಯನಿರ್ವಹಿಸುತ್ತಿಲ್ಲ ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್; ಬಳಕೆದಾರರ ಪರದಾಟ!
ಸಾಮಾಜಿಕ ಮಾಧ್ಯಮ ಪ್ರತಿಯೊಬ್ಬರ ಭಾಗವಾಗಿದೆ. ಹಲವರ ಕೆಲಸ ಕಾರ್ಯಗಳು ಸಾಮಾಜಿಕ ಜಾಲತಾಣವಿಲ್ಲದೆ ಮುಂದೆ ಸಾಗುವುದಿಲ್ಲ. ಆದರೆ ಇಂದು ಸಂಜೆಯಿಂದ ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ
ನವದೆಹಲಿ(ಮಾ,19): ಸದ್ಯ ಪ್ರತಿ ಹೆಜ್ಜೆಗೂ ಸೋಶಿಯಲ್ ಮೀಡಿಯಾ ಸಾಥ್ ಇರಲೇಬೇಕು ಅನ್ನೋ ಪರಿಸ್ಥಿತಿಯಲ್ಲಿದ್ದೇವೆ. ಅಷ್ಟರಮಟ್ಟಿಗೆ ಸೋಶಿಯಲ್ ಮೀಡಿಯಾ ಜನರ ಜೀವನ ಹಾಸುಹೊಕ್ಕಿದೆ. ಆದರೆ ದಿಢೀರ್ ಈ ಸೋಶಿಯಲ್ ಮೀಡಿಯಾ ಕಾರ್ಯನಿರ್ವಹಣೆ ಸ್ಥಗಿತಗೊಂಡರೆ. ಊಹಿಸಲು ಸಾಧ್ಯವಿಲ್ಲ. ಆದರೆ ಇಂದು ಸಂಜೆಯಿಂದ ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಫೇಸ್‌ಬುಕ್ ಜತೆ ಬಳಕೆದಾರರ ಮಾಹಿತಿ ಹಂಚಿಕೆ ಪರಿಶೀಲಿಸಿ: ವಾಟ್ಸಾಪ್‌ಗೆ ಕೇಂದ್ರ ಸೂಚನೆ!
ಸಾಮಾಜಿಕ ಜಾಲತಾಣದ ದೈತ್ಯ ಎಂದೇ ಗುರುತಿಸಿಕೊಂಡಿರುವ ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸಮಸ್ಯೆ ಎದುರಿಸುತ್ತಿದೆ. ತಡರಾತ್ರಿ 10.55ರ ಹೊತ್ತಿಗೆ ಆನ್‌ಲೈನ್ ಮೂಲಕ ಬಳಕೆದಾರರು ಈ ಸಮಸ್ಯೆಯನ್ನು ವರದಿ ಮಾಡಿದ್ದಾರೆ.
ದಿಢೀರ್ ಈ ಸಮಸ್ಯೆಗೆ ಕಾರಣವೇನು ಅನ್ನೋದು ಸ್ಪಷ್ಟವಾಗಿಲ್ಲ. ಭಾರತ , ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಸಮಸ್ಯೆ ಎದರಾಗಿದೆ ಬಳಕೆದಾರರು ದೂರಿದ್ದಾರೆ.