Digital India Sale ಗಣರಾಜ್ಯೋತ್ಸವಕ್ಕೆ ಡಿಜಿಟಲ್ ಇಂಡಿಯಾ ಸೇಲ್ ಕೂಡುಗೆ ಘೋಷಿಸಿದ ರಿಲಯನ್ಸ್ !

  • ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಮೇಲೆ ಅದ್ಭುತ ಕೊಡುಗೆ
  • ರಿಲಯನ್ಸ್ ಡಿಜಿಟಲ್‌ನಲ್ಲಿ  ಅತಿ ದೊಡ್ಡ ಎಲೆಕ್ಟ್ರಾನಿಕ್ಸ್ ಮಾರಾಟ
  • ಭರ್ಜರಿ ಆಫರ್ ಘೋಷಿಸಿದ ರಿಲಯನ್ಸ್
     
republic day digital india sale indias biggest electronics sale back at reliance digital ckm

ಮುಂಬೈ(ಜ.23):  ಗಣರಾಜ್ಯೋತ್ಸವ(republic day) ಪ್ರಯುಕ್ತ ರಿಲಯನ್ಸ್‌ ಡಿಜಿಟಲ್‌(Reliance Digital) ಸ್ಟೋರ್‌ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಖರೀದಿ ಮೇಲೆ ವಿಶೇಷ ಕೊಡುಗೆ ನೀಡುತ್ತಿದೆ.  ಎಲ್ಲಾ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳು, ಮೈ ಜಿಯೋ ಸ್ಟೋರ್‌ಗಳಲ್ಲಿ  ತಂತ್ರಜ್ಞಾನದ ಸಲಕರಣೆಗಳ ಮೇಲೆ ಅದ್ಭುತವಾದ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಪಡೆದುಕೊಳ್ಳಬಹುದು. ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ನ(Electronics Product) ಮೇಲೆ ಉತ್ತಮ ಡೀಲ್‌ಗಳ ಹೊರತಾಗಿ, ರಿಲಯನ್ಸ್ ಡಿಜಿಟಲ್ ಯಾವುದೇ ಬ್ಯಾಂಕ್‌ಗಳ* ಕ್ರೆಡಿಟ್ ಕಾರ್ಡ್‌ಗೆ 6% ತ್ವರಿತ ರಿಯಾಯಿತಿ* ಸಹ ನೀಡುತ್ತಿದೆ. ಸಿಟಿಬ್ಯಾಂಕ್‌ ಗ್ರಾಹಕರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಇಎಂಐ ವಹಿವಾಟುಗಳ ಮೇಲೆ 10% ತ್ವರಿತ ರಿಯಾಯಿತಿ* ಪಡೆಯಬಹುದು. ಅಲ್ಲದೆ, ರೂ. 5,000/- ಪ್ರತಿ ಖರೀದಿಯ ಮೇಲೆ ರೂ. 1,000/-* ಮೌಲ್ಯದ ರಿಲಯನ್ಸ್ ಡಿಜಿಟಲ್ ವೋಚರ್‌ಗಳನ್ನು ಪಡೆಯಬಹುದು. ಈ ಕೊಡುಗೆಗಳು 26 ಜನವರಿ 2022 ರವರೆಗೆ ಮಾನ್ಯವಾಗಿರುತ್ತವೆ. ಟಿವಿಗಳು, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ರೆಫ್ರಿಜರೇಟರ್‌ಗಳು, ವಾಷಿಂಗ್ ಮೆಷಿನ್‌ಗಳು, ಧರಿಸಬಹುದಾದ ವಸ್ತುಗಳು ಮತ್ತು ಗೃಹೋಪಯೋಗಿ ವಸ್ತುಗಳಂತಹ ವ್ಯಾಪಕ ಶ್ರೇಣಿಯ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ವಿಶೇಷ ಕೊಡುಗೆಗಳಿವೆ.

ಆಕರ್ಷಕ ಕೊಡುಗೆಗಳೊಂದಿಗೆ(Offers) ವಿವೋ, ಶಓಮಿ, ಸ್ಯಾಮ್‌ಸಂಗ್‌ನ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳನ್ನು(Smartphones) ಖರೀದಿ ಮಾಡಿ. ಒನ್‌ಪ್ಲಸ್‌ 9RT 5G ಅನ್ನು ಕೇವಲ ರೂ. 38,999/-* ಗೆ ಖರೀದಿಸಿ (ಬ್ಯಾಂಕ್ ಕ್ಯಾಶ್‌ಬ್ಯಾಕ್ ನಂತರದ ಬೆಲೆ) ಅಥವಾ ಸ್ಯಾಮ್‌ಸಂಗ್ ಗ್ಯಾಲಾಕ್ಸಿ S20FE 5G ಅನ್ನು ಕೇವಲ ರೂ. 34,990/-* ನಲ್ಲಿ (ಕ್ಯಾಶ್‌ಬ್ಯಾಕ್ ಮತ್ತು ವಿನಿಮಯ ಬೋನಸ್ ನಂತರದ ಬೆಲೆ) ಖರೀದಿಸಿ. ನಿಮ್ಮ ಆಡಿಯೊ ಅನುಭವವನ್ನು ವರ್ಧಿಸಲು ನಿರಾಕರಿಸಲಾಗದ ಡೀಲ್‌ಗಳು ಸಹ ಆಫರ್‌ನಲ್ಲಿವೆ. ರೂ. 18,900/-* ಎಂಆರ್‌ಪಿ ಮೇಲೆ ರೂ. 6,910/- ಕೊಡುಗೆಯೊಂದಿಗೆ ಕೇವಲ ರೂ.11,990/- ನಲ್ಲಿ ವೈರ್‌ಲೆಸ್ ಚಾರ್ಜಿಂಗ್ ಕೇಸ್‌ನೊಂದಿಗೆ ಆಪಲ್ ಏರ್‌ಪಾಡ್‌ಗಳನ್ನು ಪಡೆಯಿರಿ. (ಆಫರ್ ಬೆಲೆಯು ಆಯ್ದ ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ರೂ. 1,500 ಕ್ಯಾಶ್‌ಬ್ಯಾಕ್ ಅನ್ನು ಒಳಗೊಂಡಿರುತ್ತದೆ).

Mukesh Ambani: 984 ಕೋಟಿಗೆ ಅಂಬಾನಿಯಿಂದ ರೋಬೋಟ್‌ ಸ್ಟಾರ್ಟಪ್‌ ಖರೀದಿ

ಗ್ರಾಹಕರು ಸ್ಯಾಮ್‌ಸಂಗ್ ವಾಚ್3 ಬ್ಲೂಟೂತ್ (41 ಎಂಎಂ) ಅನ್ನು ಕೇವಲ ರೂ.14,100/-ಕ್ಕೆ ಪಡೆಯಬಹುದು* (ಆಫರ್ ಬೆಲೆ ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ ಬ್ಯಾಂಕ್ ಕ್ಯಾಶ್‌ಬ್ಯಾಕ್ ಅನ್ನು ಒಳಗೊಂಡಿರುತ್ತದೆ).

ಗೇಮಿಂಗ್ ಲ್ಯಾಪ್‌ಟಾಪ್‌ಗಳಲ್ಲಿಯೂ(Laptops) ಹಲವು ಉತ್ತಮ ಕೊಡುಗೆಗಳಿವೆ. ಎಚ್‌ಪಿ ವಿಕ್ಟಸ್ ಮತ್ತು ಪೆವಿಲಿಯನ್‌ ಗೇಮಿಂಗ್‌ ಲ್ಯಾಪ್‌ಟಾಪ್ ಅನ್ನು ರೂ.59,999/-* ಆರಂಭಿಕ ಬೆಲೆಯಲ್ಲಿ ಖರೀದಿಸಿ. ಲೆನೊವೊ ಕೋರ್‌ i3 8GB ಲ್ಯಾಪ್‌ಟಾಪ್‌ಗಳನ್ನು ರೂ. 37,990/- ಆರಂಭಿಕ ಬೆಲೆಯಲ್ಲಿ ಪಡೆಯಿರಿ. ನಿಮ್ಮ ಖರೀದಿಯ ಮೇಲೆ ರೂ.12,900/-* ವರೆಗಿನ ಹೆಚ್ಚುವರಿ ಪ್ರಯೋಜನಗಳನ್ನು ಸಹ ಪಡೆಯಿರಿ.

Solar Battery ಕಡಿಮೆ ಬೆಲೆಯಲ್ಲಿ ಐಯಾನ್ ಬ್ಯಾಟರಿ ಒದಗಿಸಲಿದೆ ರಿಲಯನ್ಸ್, 1,020 ಕೋಟಿ ರೂಗೆ ಪ್ಯಾರಡಿಯನ್ ಕಂಪನಿ ಸ್ವಾಧೀನ!

ಬಿಪಿಎಲ್‌ 50” ಯುಎಚ್‌ಡಿ ಆಂಡ್ರಾಯ್ಡ್ ಟಿವಿ ಮೇಲೆ 2-ವರ್ಷದ ವಾರಂಟಿಯನ್ನು ಪಡೆದುಕೊಳ್ಳಿ, ರೂ. 29,999/-* ಗೆ ಲಭ್ಯವಿದೆ. ತೋಷಿಬಾ 43" ಯುಎಚ್‌ಡಿ ಸ್ಮಾರ್ಟ್ ಅನ್ನು ರೂ. 24,990/-* ಗೆ ಖರೀದಿಸಿ ಮತ್ತು 32" ಎಚ್‌ಡಿ ಸ್ಮಾರ್ಟ್ ಟಿವಿ ಅನ್ನು 2 ವರ್ಷಗಳ ವಾರಂಟಿಯೊಂದಿಗೆ ರೂ. 12,990/-* ಗೆ ಖರೀದಿಸಿ. ಸ್ಯಾಮ್‌ಸಂಗ್‌ 75” ಯುಎಚ್‌ಡಿ ಸ್ಮಾರ್ಟ್ ಟಿವಿ ಖರೀದಿಯ ಮೇಲೆ 20%* ವರೆಗೆ ಕ್ಯಾಶ್‌ಬ್ಯಾಕ್ ಜೊತೆಗೆ ರೂ. 21,999/-* ಮೌಲ್ಯದ ಸ್ಯಾಮ್‌ಸಂಗ್‌ ಎ7 ಲೈಟ್‌ ಟ್ಯಾಬ್‌ ಪಡೆಯಿರಿ.

ರೆಫ್ರಿಜರೇಟರ್‌ಗಳು, ವಾಶಿಂಗ್ ಮಶಿನ್‌ಗಳು ಮತ್ತು ಇತರ ಗೃಹೋಪಯೋಗಿ ಉಪಕರಣಗಳ ಮೇಲೆ ಆಕರ್ಷಕ ಕೊಡುಗೆಗಳೊಂದಿಗೆ ಮನೆಯನ್ನು ಆರಾಮದಾಯಕ ಮತ್ತು ಐಷಾರಾಮಿ ಮಾಡುವುದು ಎಂದಿಗಿಂತಲೂ ಸುಲಭವಾಗಿದೆ. ಗ್ರಾಹಕರು ಪ್ಯಾನಾಸೋನಿಕ್ 584L ಸೈಡ್-ಬೈ-ಸೈಡ್ ರೆಫ್ರಿಜರೇಟರ್ ಅನ್ನು ರೂ. 55,990/-* ಮತ್ತು ಪ್ಯಾನಾಸೋನಿಕ್ 307L ಫ್ರಾಸ್ಟ್ ಫ್ರೀ ರೆಫ್ರಿಜರೇಟರ್ ರೂ. 25,990/-* ಕ್ಕೆ ಖರೀದಿಸಬಹುದು.

ಕೆಲ್ವಿನೇಟರ್ ಫ್ರಂಟ್-ಲೋಡ್ 6 ಕೆಜಿ ವಾಷಿಂಗ್ ಮೆಷಿನ್ ಅನ್ನು 2 ವರ್ಷಗಳ ವಾರಂಟಿ ಜೊತೆಗೆ ರೂ. 19,490/-* ಗೆ ಪಡೆಯಿರಿ. ಅಷ್ಟೇ ಅಲ್ಲ. ರೂ. 5,093/- ಮೌಲ್ಯದ ಬ್ರೇಕ್‌ಫಾಸ್ಟ್ ಕಾಂಬೊ (ಎಲೆಕ್ಟ್ರಿಕ್ ಕೆಟಲ್ + ಸ್ಯಾಂಡ್‌ವಿಚ್ ಮೇಕರ್ + ಹಾಟ್ ಮತ್ತು ಕೋಲ್ಡ್ ಬಾಟಲ್) ಅನ್ನು ಕೇವಲ ರೂ. 1,699/-* ಗೆ ಪಡೆಯಿರಿ.

ಈ ವರ್ಷ ಶಾಪಿಂಗ್ ಅನುಭವವನ್ನು ಇನ್ನಷ್ಟು ಲಾಭದಾಯಕವಾಗಿಸಲು, ಇಎಂಐ ಮತ್ತು ಸುಲಭ ಹಣಕಾಸು ಸೌಲಭ್ಯಕ್ಕಾಗಿ ಆಕರ್ಷಕ ಆಯ್ಕೆಗಳಿವೆ. ಗ್ರಾಹಕರು www.reliancedigital.in ನಲ್ಲಿ ಶಾಪಿಂಗ್ ಮಾಡಬಹುದು ಮತ್ತು ಇನ್‌ಸ್ಟಾ ಡೆಲಿವರಿ* ಪಡೆಯಬಹುದು (3 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಡೆಲಿವರಿ) ಮತ್ತು ತಮ್ಮ ಹತ್ತಿರದ ಸ್ಟೋರ್‌ಗಳಿಂದ ಪಿಕ್ ಅಪ್* ಆಯ್ಕೆಗಳನ್ನು ಮಾಡಬಹುದು.

*ನಿಯಮಗಳು ಮತ್ತು ಷರತ್ತುಗಳು ಎಲ್ಲಾ ಕೊಡುಗೆಗಳು ಮತ್ತು ಬೆಲೆಗಳಿಗೆ ಅನ್ವಯಿಸುತ್ತವೆ.

Latest Videos
Follow Us:
Download App:
  • android
  • ios