ಓಲ್ಡ್ ಈಸ್ ಗೋಲ್ಡ್! ಹಳೆ ಪ್ಲಾನ್ ಮರುಪರಿಚಯಿಸಿದ ಜಿಯೋ
ಮುಂದುವರಿದ ದರ ಸಮರ; ಬಳಕೆದಾರರನ್ನು ಹಿಡಿದಿಟ್ಟುಕೊಳ್ಳಲು ಟೆಲಿಕಾಂ ಕಂಪನಿಗಳಿಂದ ತೀವ್ರ ಪೈಪೋಟಿ; ಹಳೆ ಪ್ಲಾನ್ ಮೊರೆ ಹೋದ ಜಿಯೋ
ಬೆಂಗಳೂರು (ಡಿ.18): ಏರ್ಟೆಲ್ ಮತ್ತು ವೊಡಾಫೋನ್ ಅನ್ಲಿಮಿಟೆಡ್ ವಾಯ್ಸ್ ಕಾಲ್ ಪ್ಲಾನ್ ಬಿಡುಗಡೆ ಮಾಡಿದ ಬೆನ್ನಲ್ಲೇ ರಿಲಯನ್ಸ್ ಜಿಯೋ ತನ್ನ ಹಳೆಯ ಪ್ಲಾನನ್ನು ಮರುಪರಿಚಯಿಸಿದೆ.
₹149 ಮತ್ತು ₹98 ಪ್ರಿಪೇಯ್ಡ್ ಪ್ಲಾನ್‌ಗಳನ್ನು ಜಿಯೋ ಈಗ ಮರು ಪರಿಚಯಿಸಿದೆ. ಕಳೆದ ಡಿ.06ರಿಂದ ಅನ್ವಯವಾಗುವಂತೆ ಜಿಯೋ ದರಗಳನ್ನು ಪರಿಷ್ಕರಿಸಿತ್ತು. ದರಗಳನ್ನು ಸುಮಾರು 39ಶೇ.ರಷ್ಟು ಹೆಚ್ಚಿಸಲಾಗಿತ್ತು.
28 ದಿನಗಳಿಂದ 365 ದಿನಗಳಿಗೆ ಅನ್ವಯವಾಗುವ 11 ಹೊಸ ಆಲ್-ಇನ್-ಒನ್ ಪ್ಲಾನ್‌ಗಳನ್ನು ಕೂಡಾ ಜಿಯೋ ಪ್ರಕಟಿಸಿತ್ತು. 28 ದಿನಗಳ ವ್ಯಾಲಿಡಿಟಿ ಹೊಂದಿದ್ದ ₹129 ಪ್ಲಾನ್ 2GB ಡೇಟಾ ಹಾಗೂ 1000 ನಿಮಿಷ ಟಾಕ್ ಟೈಮ್ ಸೌಲಭ್ಯಹೊಂದಿತ್ತು.
ಇದನ್ನೂ ಓದಿ | ಜನವರಿಯಿಂದ ಈ ಫೋನ್‌ಗಳಲ್ಲಿ ವಾಟ್ಸಪ್ ಬಂದ್!...
₹98 ಪ್ಲಾನ್‌ನಲ್ಲಿ ಏನಿದೆ?
ಈ ಪ್ಲಾನ್ ಕೂಡಾ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಪ್ರತಿದಿನ 2GB ಡೇಟಾ ಸಿಗಲಿದೆ. ಇದು ಮುಗಿದ ಬಳಿಕ ಇಂಟರ್ನೆಟ್ ಸ್ಪೀಡ್ 64Kbps ಆಗಿರಲಿದೆ. ಈ ಪ್ಲಾನ್‌ನಲ್ಲಿ 300 ಉಚಿತ ಎಸ್ಸೆಮ್ಮೆಸ್ ಸೌಲಭ್ಯ ಕೂಡಾ ಇದೆ.
ಈ ಫ್ಲಾನ್‌ನಲ್ಲಿ ಜಿಯೋ ಮತ್ತು ಲ್ಯಾಂಡ್‌ಲೈನ್ ಫೋನ್‌ಗಳಿಗೆ ವಾಯ್ಸ್ ಕಾಲ್ಸ್ ಉಚಿತವಾಗಿವೆ. ಜೀಯೋಯೇತರ ಮೊಬೈಲ್‌ಗಳಿಗೆ ಕಾಲ್ ಮಾಡಬೇಕಾದ್ರೆ ಟಾಪ್‌ಅಪ್ ವೋಚರ್ ಖರೀದಿಸಬೇಕು. ಆಫ್‌ನೆಟ್ ಕಾಲ್‌ಗಳಿಗೆ ₹10 ಖರ್ಚು ಮಾಡಿದರೆ, ಬಳಕೆದಾರರಿಗೆ 1GB ಹೆಚ್ಚುವರಿ ಡೇಟಾ ಉಚಿತವಾಗಿ ಸಿಗಲಿದೆ.
₹149 ಪ್ಲಾನ್‌ನಲ್ಲಿ ಏನಿದೆ?
₹149 ಪ್ಲಾನ್‌ನಲ್ಲಿ 24 ದಿನಗಳ ವ್ಯಾಲಿಡಿಟಿ ಇದೆ. ಒಟ್ಟು 24GB ಡೇಟಾ ಸಿಗಲಿದೆ. ಜಿಯೋಯೇತರ ಮೊಬೈಲ್‌ಗಳಿಗೆ 300 ನಿಮಿಷ ಉಚಿತ ಕರೆ ಮಾಡಬಹುದು. ಜೊತೆಗೆ 100 ಎಸ್ಸೆಮ್ಮೆಸ್ ಮತ್ತು ಜಿಯೋ ಅಪ್ಲಿಕೇಶನ್‌ಗಳ ಉಚಿತ ಸಬ್‌ಸ್ಕ್ರಿಪ್ಶನ್ ಸಿಗಲಿದೆ.