ಬದಲಾದ ಸನ್ನಿವೇಶ ಹೆಚ್ಚಾದ ಅವಶ್ಯಕತೆ: ಜಿಯೋ ಗ್ರಾಹಕರಿಗೆ ಡಬಲ್ ಡೇಟಾ ಸೌಲಭ್ಯ!
ಗ್ರಾಹಕರ ಬೆನ್ನಿಗೆ ನಿಂತ ಜಿಯೋ, ಹೆಚ್ಚು ಡೇಟಾ ಬಳಸಿ, ಇನ್ನಷ್ಟು ಮಾತನಾಡಿ; ಬಳಕೆದಾರರಿಗೆ ತಡೆರಹಿತ ಸಂಪರ್ಕ; ಜಿಯೋ ನೆಟ್‌ವರ್ಕ್ ಬಿಟ್ಟು ಬೇರೆ ಆಪರೇಟರ್‌ಗಳಿಗೆ ಮಾಡುವ ಕರೆ ಸಮಯ ಮತ್ತು ಎರಡು ಪಟ್ಟು ಡೇಟಾ
ಬೆಂಗಳೂರು (ಮಾ.20): ಅಗತ್ಯ ಸಮಯದಲ್ಲಿ ಮೊಬೈಲ್ ಬಳಕೆದಾರರು ಹೊರ ಜಗತ್ತಿನೊಂದಿಗೆ ನಿರಂತರ ಸಂಪರ್ಕದಲ್ಲಿ ಇರಲಿ ಎನ್ನುವ ಕಾರಣಕ್ಕಾಗಿ ಜಿಯೋ ತನ್ನ ಬಳಕೆದಾರರಿಗೆ ತನ್ನ ಹಳೆಯ ರಿರ್ಚಾಜ್ ವೋಚರ್‌ಗಳ ಬದಲಾಯಿಸಿದ್ದು, ಡಬಲ್ ಡೇಟಾ ಮತ್ತು ಹೆಚ್ಚುವರಿ ಬೇರೆ ನೆಟ್‌ವರ್ಕ್‌ಗಳಿಗೆ ಕರೆ ಮಾಡುವ ಟಾಕ್‌ಟೈಮ್ ಒದಗಿಸಲು ಮುಂದಾಗಿದೆ.
ಜಿಯೋ ಅಪ್‌ಗ್ರೇಡ್ ಮಾಡಿರುವ ಪ್ಲಾನ್‌ಗಳ ಮಾಹಿತಿ ಇಲ್ಲಿದೆ, ರೂ.11, ರೂ.21, ರೂ. 51 ಮತ್ತು ರೂ.101 ರೀಚಾರ್ಜ್ ವೋಚರ್ ಪ್ಲಾನ್‌ಗಳು ಇನ್ನು ಮುಂದೆ ಗ್ರಾಹಕರಿಗೆ ಹೆಚ್ಚಿನ ಲಾಭ ಮಾಡಿಕೊಡಲಿದೆ.
ಇದನ್ನೂ ಓದಿ | ಪವರ್ ಬ್ಯಾಂಕ್ ಕುರಿತು ತಿಳಿದಿರಬೇಕಾದ 10 ಅಂಶಗಳು! ...
ಈ ಪ್ಲಾನ್‌ಗಳು ಕ್ರಮವಾಗಿ 800 MB, 2GB, 6GB ಮತ್ತು 12 GB ಹೈಸ್ಪೀಡ್ ಡೇಟಾದೊಂದಿಗೆ ದೊರೆಯಲಿದೆ. ಇದಲ್ಲದೇ ಈ ವೋಚರ್‌ಗಳಲ್ಲಿ ಜಿಯೋ ಬಿಟ್ಟು ಬೇರೆ ನೆಟ್‌ವರ್ಕ್‌ಗಳಿಗೆ ಕರೆ ಮಾಡುವ ಟಾಕ್ ಟೈಮ್ ಸಹ ನೀಡಲಿದೆ.
ಕ್ರಮವಾಗಿ 75, 200, 500 ಮತ್ತು 1000 ನಿಮಿಷಗಳ ಟಾಕ್ ಟೈಮ್ ಅನ್ನು ಬಳಕೆದಾರರು ಆನಂದಿಸಬಹುದಾಗಿದೆ. ಈ ಪ್ಲಾನ್‌ಗಳ ಭಾರತದಾದ್ಯಂತ ದೊರೆಯಲಿದೆ.
ಎಲ್ಲಾ ಉದ್ಯಮಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಲು (ವರ್ಕ್ ಫ್ರಮ್ ಹೋಮ್) ಪ್ರೋತ್ಸಾಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಯೋ ತನ್ನ ಬಳಕೆದಾರರಿಗೆ ಈ ಸೌಲಭ್ಯ ಕಲ್ಪಿಸಲು ಮುಂದಾಗಿದೆ.
ಜನರು ಸಂವಹನ ಮತ್ತು ಮನರಂಜನೆಗಾಗಿ ಹೆಚ್ಚಿನ ಸಮಯವನ್ನು ಮೀಸಲು ಇಡುವ ಕಾರಣಕ್ಕಾಗಿ ತಡೆರಹಿತ ಮತ್ತು ಹೆಚ್ಚಿನ ಡೇಟಾ ಬಳಕೆ ಅವಶ್ಯಕತೆ ಹೆಚ್ಚುತ್ತಿದೆ. ಹಾಗಾಗಿ ಈ ಮೇಲಿನ ವೋಚರ್‌ಗಳ ಲಾಭವನ್ನು ಹೆಚ್ಚು ಮಾಡಿದೆ. ಈ ಮೂಲಕ ಜಿಯೋ ಬಳಕೆದಾರರಿಗೆ ಸೌಲಭ್ಯವನ್ನು ವಿಸ್ತರಿಸುತ್ತಿದೆ.
ಇದನ್ನೂ ಓದಿ | ಮತ್ತೆರಡು ರಿಯಲ್‌ಮಿ ಸ್ಮಾರ್ಟ್‌ಫೋನ್ ಲಾಂಚ್!...
ನವೀಕರಿಸಿದ ವೋಚರ್‌ಗಳ ವಿವರಗಳು:
ಪ್ಯಾಕ್ |
ಅಸ್ತಿತ್ವದಲ್ಲಿರುವ ಡೇಟಾ (ಎಫ್‌ಯುಪಿ) |
ಪರಿಷ್ಕೃತ ಡೇಟಾ (ಎಫ್‌ಯುಪಿ) |
ಡೇಟಾ (ಪೋಸ್ಟ್ ಎಫ್‌ಯುಪಿ) |
ಹೊಸ ಆಫ್‌ನೆಟ್ ನಿಮಿಷಗಳು |
MRP 11 |
400 MB |
800 MB |
Unlimited at 64 Kbps |
75 |
MRP 21 |
1 GB |
2 GB |
Unlimited at 64 Kbps |
200 |
MRP 51 |
3 GB |
6 GB |
Unlimited at 64 Kbps |
500 |
MRP 101 |
6 GB |
12 GB |
Unlimited at 64 Kbps |
1000 |