ಜಿಯೋ ಗ್ರಾಹಕರಿಗೆ ಐಪಿಎಲ್ ಬಂಪರ್ ಕೊಡುಗೆ, ಪ್ರತಿ ದಿನ ಅನ್‌ಲಿಮಿಟೆಡ್ ಲೈವ್ ಕ್ರಿಕೆಟ್ ಸ್ಟ್ರೀಮ್ ಪ್ಲಾನ್!

150 GB ವರೆಗಿನ ಪ್ರಯೋಜನದೊಂದಿಗೆ ವಿಶೇಷ ಡೇಟಾ ಆಡ್-ಆನ್ ಪ್ಲಾನ್‌, ಕ್ರಿಕೆಟ್ ಸ್ಟ್ರೀಮ್‌ಗಾಗಿ 3 GB ಡೇಟಾ ಪ್ರತಿ ದಿನ ಪ್ಲಾನ್ ಸೇರಿದಂತೆ ಎಲ್ಲಾ ಕ್ರಿಕೆಟ್ ಪ್ಲಾನ್‌ ನೊಂದಿಗೆ ಟ್ರೂ -5G ಡೇಟಾ ಉಚಿತ ಸೇರಿದಂತೆ ಹಲವು ಪ್ಲಾನ್ ಜಿಯೋ ಆರಂಭಿಸಿದೆ.

Reliance Jio launch unlimited cricket live stream plans for this ipl season ckm

ಮುಂಬೈ(ಮಾ.23): ಐಪಿಎಲ್ ಟೂರ್ನಿಗೆ ಕ್ಷಣಗಣನೇ ಆರಂಭಗೊಂಡಿದೆ. ಕ್ರಿಕೆಟ್ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಲೈವ್ ಕ್ರಿಕೆಟ್ ಸ್ಟ್ರೀಮ್‌ಗೆ ಹೆಚ್ಚು ಪ್ರಯಾಸ ಪಡಬೇಕಿಲ್ಲ. ರಿಲಯನ್ಸ್ ಜಿಯೋ ಬಳಕೆದಾರರಿಗೆ ಹೊಸ ಕ್ರಿಕೆಟ್ ಪ್ಲಾನ್ ಲಾಂಚ್ ಮಾಡಿದೆ. ಈ ಮೂಲಕ ಕ್ರಿಕೆಟ್ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿದೆ.  ಜಿಯೋ ಬಳಕೆದಾರರು ಈ ಎಲ್ಲಾ ಕ್ರಿಕೆಟ್ ಪ್ಲಾನ್‌ಗಳು ಟ್ರೂಲಿ ಅನಿಯಮಿತ TRUE-5G ಡೇಟಾದೊಂದಿಗೆ ಪೋನಿನಲ್ಲಿ  4K ಸ್ಪಷ್ಟತೆಯಲ್ಲಿ ಬಹು ಕ್ಯಾಮೆರಾ ಕೋನಗಳ ಮೂಲಕ ಲೈವ್ ಪಂದ್ಯಗಳನ್ನು ವೀಕ್ಷಿಸಬಹುದು. ಕ್ರಿಕೆಟ್ ಪ್ರೇಮಿಗಳು ತಲ್ಲೀನಗೊಳಿಸುವ ಅನುಭವವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಿಯೋ ವಿನ್ಯಾಸಗೊಳಿಸಿದೆ.

ತಡೆರಹಿತ ಸ್ಟ್ರೀಮಿಂಗ್ ಅನುಭವವನ್ನು ನೀಡುವ ಸಲುವಾಗಿ ಜಿಯೋ ಕ್ರಿಕೆಟ್ ಯೋಜನೆಯು ಅತ್ಯಧಿಕ ಡೇಟಾ ಆಫರ್‌ನೊಂದಿಗೆ ಬರುತ್ತದೆ.  3 GB/ದಿನ ಜೊತೆಗೆ ಹೆಚ್ಚುವರಿ ಉಚಿತ ಡೇಟಾ ವೋಚರ್‌ಗಳು ಜಿಯೋ ಬಳಕೆದಾರರಿಗೆ ಅಡೆತಡೆಯಿಲ್ಲದ ಕ್ರಿಕೆಟ್ ವೀಕ್ಷಣೆಯ ಅನುಭವ ನೀಡಲಿದೆ.

ಈ ಸಲ ಐಪಿಎಲ್‌ನಲ್ಲಿ ಸ್ಟಾರ್‌ vs ಜಿಯೋ ಸಮರ..! ಟಿವಿ vs ಡಿಜಿಟಲ್‌: ಖರ್ಚೆಷ್ಟು?

ಜಿಯೋದಲ್ಲಿ, ನಮ್ಮ ಗ್ರಾಹಕರಿಗೆ ಅತ್ಯುತ್ತಮ ಕ್ರೀಡಾ ಅನುಭವವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಭಾರತದಲ್ಲಿ ಕ್ರಿಕೆಟ್ ಉತ್ಸಾಹವನ್ನು ನಾವು ಅರ್ಥಮಾಡಿಕೊಂಡು ಈ ವಿಶೇಷ ಯೋಜನೆಗಳು ಮತ್ತು ಕೊಡುಗೆಗಳನ್ನು ವಿನ್ಯಾಸಗೊಳಿಸಿದ್ದೇವೆ. ನಮ್ಮ ಗ್ರಾಹಕರು ಯಾವುದೇ ತೊಂದರೆಯಿಲ್ಲದೆ ಪಂದ್ಯಗಳನ್ನು ಪೂರ್ಣವಾಗಿ ಆನಂದಿಸಬಹುದು ಎಂದು ಜಿಯೋ ವಕ್ತಾರರು ಹೇಳಿದ್ದಾರೆ. ಜಿಯೋ ತನ್ನ ಬಳಕೆದಾರರಿಗೆ ಒದಗಿಸಿರುವ ಕ್ರಿಕೆಟ್  ತಲ್ಲೀನಗೊಳಿಸುವ ಅನುಭವಗಳಿಗೆ ಸಂಬಂಧಿಸಿದಂತೆ ಮುಂದಿನ ಕೆಲವು ದಿನಗಳಲ್ಲಿ ಇಂತಹ ಹಲವು ಆಸಕ್ತಿದಾಯಕ ಪ್ರಕಟಣೆಗಳು ಹೊರಬರಲಿದೆ.

ಪ್ಲಾನ್‌ ವಿವರ
ರೂ.999 ಗೆ 84 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು, ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್‌ ಡೇಟವ್ನು ಬಳಕೆ ಮಾಡಬಹುದಾಗಿದೆ. ಇದೊರೊಂದಿಗೆ 40 ಜಿಬಿ ಡೇಟಾ ಲಾಭವನ್ನು ನೀಡುವ 241 ರೂಗಳ ವೂಚರ್‌ ಸಹ ಉಚಿತವಾಗಿ ದೊರೆಯಲಿದೆ.

ರೂ.399 ಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು, ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್‌ ಡೇಟವ್ನು ಬಳಕೆ ಮಾಡಬಹುದಾಗಿದೆ. ಇರೊಂದಿಗೆ 6 ಜಿಬಿ ಡೇಟಾ ಲಾಭವನ್ನು ನೀಡುವ 61 ರೂಗಳ ವೂಚರ್‌ ಸಹ ಉಚಿತವಾಗಿ ದೊರೆಯಲಿದೆ. ಇದೊರೊಂದಿಗೆ 40 ಜಿಬಿ ಡೇಟಾ ಲಾಭವನ್ನು ನೀಡುವ 241 ರೂಗಳ ವೂಚರ್‌ ಸಹ ಉಚಿತವಾಗಿ ದೊರೆಯಲಿದೆ.

ಕಾರವಾರ, ಹಾವೇರಿ ಸೇರಿ ದೇಶದ 34 ನಗರಗಳಲ್ಲಿ ಜಿಯೋ ಟ್ರು ಜಿ ಸೇವೆ ಆರಂಭ!

ರೂ.219 ಗೆ 14 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು, ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್‌ ಡೇಟವ್ನು ಬಳಕೆ ಮಾಡಬಹುದಾಗಿದೆ. ಇರೊಂದಿಗೆ 2 ಜಿಬಿ ಡೇಟಾ ಲಾಭವನ್ನು ನೀಡುವ 25 ರೂಗಳ ವೂಚರ್‌ ಸಹ ಉಚಿತವಾಗಿ ದೊರೆಯಲಿದೆ.  ಇದೊರೊಂದಿಗೆ 40 ಜಿಬಿ ಡೇಟಾ ಲಾಭವನ್ನು ನೀಡುವ 241 ರೂಗಳ ವೂಚರ್‌ ಸಹ ಉಚಿತವಾಗಿ ದೊರೆಯಲಿದೆ.

ಇದರ ಜೊತೆಗೆ ಡೇಟಾ ಆಡ್‌ ಆನ್‌ ಪ್ಲಾನ್‌ ಲಾಂಚ್
1)ರೂ.222ಗೆ 50 ಜಿಬಿ ಡೇಟಾವನ್ನು ಬಳಕೆ ನೀಡಲಿದೆ. ಆದರೆ ಇದಕ್ಕೆ ಯಾವುದೇ ವ್ಯಾಲಿಡಿಟಿ ಇರುವುದಿಲ್ಲ. ಪ್ಲಾನ್‌ ಮೇಲೆ ವ್ಯಾಲಿಡಿಟಿ ನಿರ್ಧಾರವಾಗಲಿದೆ.
2) 444ಕ್ಕೆ 60  ದಿನಗಳ ವ್ಯಾಲಿಡಿಟಿಗೆ 100 ಜಿಬಿ ಡೇಟಾವನ್ನು ನೀಡಲಿದೆ ಹಾಗೆಯೇ 667ಕ್ಕೆ 90 ದಿನಗಳ ವ್ಯಾಲಿಡಿಟಿಗೆ 150 ಜಿಬಿ ಡೇಟಾ ನೀಡಲಿದೆ.
3) ಈ ಪ್ಲಾನ್ ಗಳು ಮಾರ್ಚ್ 24 ರಿಂದ ಗ್ರಾಹಕರಿಗೆ ಲಭ್ಯವಿರುತ್ತದೆ
 

Latest Videos
Follow Us:
Download App:
  • android
  • ios