Asianet Suvarna News Asianet Suvarna News

ಕಾರವಾರ, ಹಾವೇರಿ ಸೇರಿ ದೇಶದ 34 ನಗರಗಳಲ್ಲಿ ಜಿಯೋ ಟ್ರು ಜಿ ಸೇವೆ ಆರಂಭ!

ಕಾರವಾರ, ಹಾವೇರಿ, ರಾಣೆಬೆನ್ನೂರು ಸೇರಿ ದೇಶದ 34 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆ ಆರಂಭ ಗೊಂಡಿದೆ. ಈ ಮೂಲಕ ದೇಶದ ಸಣ್ಣ ನಗರ, ಪಟ್ಟಣಗಳಿಗೆ 5ಜಿ ವಿಸ್ತರಣೆಗೊಳ್ಳುತ್ತಿದೆ.
 

Reliance jio introduce True 5G in Karwar haveri Karnataka total count to 365 cities in India ckm
Author
First Published Mar 15, 2023, 10:06 PM IST

ಬೆಂಗಳೂರು(ಮಾ.15): ದೇಶದಲ್ಲಿ 5ಜಿ ಸೇವೆ ಇದೀಗ ಹಳ್ಳಿ ಹಳ್ಳಿಗಳಲ್ಲಿ ಸಿಗುವಂತಾಗಿದೆ. ಆರಂಭಿಕ ಹಂತದಲ್ಲಿ ನಗರ ಪ್ರದೇಶಗಳಲ್ಲಿದ್ದ 5ಜಿ ಸೇವೆ ಇದೀಗ ವಿಸ್ತರಣೆಯಾಗುತ್ತಿದೆ. ರಿಲಯನ್ಸ್ ಜಿಯೋ 5ಜಿ ಸೇವೆ ನೀಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ಜಿಯೋ ಇದೀಗ ಕಾರವಾರ, ರಾಣೆಬೆನ್ನೂರು, ಹಾವೇರಿಯಲ್ಲಿ ಜಿಯೋ ಟ್ರೂ 5ಜಿ ಸೇವೆ ಇಂದಿನಿಂದ (ಮಾರ್ಚ್ 15) ಆರಂಭಗೊಂಡಿದೆ. ಕರ್ನಾಟಕದ ಈ 3 ನಗರ ಸೇರಿದಂತೆ ದೇಶದ ಹತ್ತು ರಾಜ್ಯಗಳ, ಒಟ್ಟು 34 ಹೊಸ ನಗರಗಳಲ್ಲಿ ತನ್ನ ಟ್ರೂ 5G ಸೇವೆಗಳನ್ನು ಆರಂಭಿಸಿದೆ.

ರಿಲಯನ್ಸ್ ಜಿಯೋದಿಂದ ಟ್ರೂ 5ಜಿ ಸೇವೆಗಳನ್ನು ಆರಂಭಿಸಿದ ಇತರ ನಗರಗಳು ಹೀಗಿವೆ ಆಂಧ್ರಪ್ರದೇಶದ ಅಮಲಾಪುರಂ, ಧರ್ಮಾವರಂ, ಕವಲಿ, ತನುಕು, ತುನಿ, ವಿನುಕೊಂಡ, ಹರಿಯಾಣದ ಭಿವಾನಿ, ಜಿಂದ್, ಕೈತಾಲ್, ರೇವಾರಿ, ರೇವಾರಿ, ಹಿಮಾಚಲ ಪ್ರದೇಶದ ಧರ್ಮಶಾಲಾ, ಕಾಂಗ್ರಾ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ, ಕಥುವಾ, ಕತ್ರಾ, ಸೋಪೋರ್, ಕೇರಳದ ಅಟ್ಟಿಂಗಲ್, ಮೇಘಾಲಯದ ತುರಾ, ಒಡಿಶಾದ ಭವಾನಿಪಟ್ನಾ, ಜತಾನಿ, ಖೋರ್ಧಾ, ಸುಂದರ್‌ಗಢ, ತಮಿಳುನಾಡಿನ ಅಂಬೂರ್, ಚಿದಂಬರಂ , ನಾಮಕ್ಕಲ್, ಪುದುಕೋಟ್ಟೈ, ರಾಮನಾಥಪುರಂ, ಶಿವಕಾಶಿ, ತಿರುಚೆಂಗೋಡ್, ವಿಲುಪ್ಪುರಂ ಹಾಗೂ ತೆಲಂಗಾಣದ ಸೂರ್ಯಪೇಟ್ ನಲ್ಲಿ ಲಭ್ಯ ಇದೆ. ಇದರೊಂದಿಗೆ ದೇಶದ 365 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳು ಲಭ್ಯ ಆಗಲಿವೆ.

 

ಬಿಎಸ್‌ಎನ್ಎಲ್‌ಗೆ ಗುಡ್ ಬೈ ಹೇಳಿದ ರಾಜ್ಯ ಪೊಲೀಸ್ ಇಲಾಖೆ: ಜಿಯೋಗೆ ಫೋರ್ಟ್ ಆಗಲು ಸರ್ಕಾರದ ಆದೇಶ

ಅಂದಹಾಗೆ, ಈ ಮೇಲ್ಕಂಡ ನಗರಗಳ ಪೈಕಿ ಬಹುತೇಕ ನಗರಗಳಲ್ಲಿ ಟ್ರೂ 5ಜಿ ಸೇವೆಗಳನ್ನು ಆರಂಭಿಸಿದ ಮೊದಲ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ. ಟೆಲಿಕಾಂ ಆಪರೇಟರ್ ಜಿಯೋ ಭಾರತದ ಡಿಜಿಟಲ್ ರೂಪಾಂತರದ ಕಡೆಗೆ ಕೆಲಸ ಮಾಡುತ್ತಿದೆ. ಇಂದಿನಿಂದ ಹೆಚ್ಚಿನ ವೇಗದ, ಲೋ- ಲೇಟೇನ್ಸಿ, ಅದ್ವಿತೀಯ ಟ್ರೂ 5ಜಿ ಸೇವೆಗಳ ತಾಂತ್ರಿಕ ಪ್ರಯೋಜನಗಳನ್ನು ಈ ನಗರಗಳ ಜನರು ಮತ್ತು ವ್ಯವಹಾರಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಪ್ರವಾಸೋದ್ಯಮ, ಉತ್ಪಾದನೆ, ಎಸ್ ಎಂಇಗಳು, ಆಡಳಿತ, ಶಿಕ್ಷಣ, ಆರೋಗ್ಯ, ಕೃಷಿ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್ ಮತ್ತು ಐಟಿ ಈ ಕ್ಷೇತ್ರಗಳಲ್ಲಿ ಹೊಸ ಬೆಳವಣಿಗೆಯ ಅವಕಾಶಗಳನ್ನು ತೆರೆಯುತ್ತದೆ.

ಈ 34 ನಗರಗಳಲ್ಲಿ ಜಿಯೋ ಟ್ರೂ 5ಜಿ ಅನ್ನು ಆರಂಭಿಸಲು ನಾವು ಹೆಮ್ಮೆಪಡುತ್ತೇವೆ. ಜಿಯೋ ಟ್ರೂ 5ಜಿ ತಂತ್ರಜ್ಞಾನದ ಪ್ರಯೋಜನಗಳನ್ನು ಆನಂದಿಸಲು ಪ್ರಾರಂಭಿಸುವ ಈ ನಗರಗಳಲ್ಲಿನ ಲಕ್ಷಾಂತರ ಜಿಯೋ ಬಳಕೆದಾರರಿಗೆ ಇದು ಗೌರವವಾಗಿದೆ. ಪ್ರತಿ ಭಾರತೀಯನಿಗೂ ಟ್ರೂ-5ಜಿ ಅನ್ನು ತಲುಪಿಸಲು ಜಿಯೋ ಇಂಜಿನಿಯರ್‌ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರಿಂದಾಗಿ ಈ ತಂತ್ರಜ್ಞಾನದ ಪರಿವರ್ತನಾ ಶಕ್ತಿ ಮತ್ತು ಅಮೋಘ ಪ್ರಯೋಜನಗಳನ್ನು ದೇಶದ ಪ್ರತಿ ನಾಗರಿಕರು ಅನುಭವಿಸಬಹುದು ಎಂದು ಜಿಯೋ ವಕ್ತಾರ ಹೇಳಿದ್ದಾರೆ.

ಕೊಡಗಿನ ತಲಕಾವೇರಿಯಲ್ಲಿ ಜಿಯೋ 4ಜಿ ಆರಂಭ, ಬೆಟ್ಟದ ತಪ್ಪಲಿನಲ್ಲೂ ನೆಟ್‌ವರ್ಕ್!

2023ರ ಡಿಸೆಂಬರ್ ವೇಳೆಗೆ ಜಿಯೋ ಟ್ರೂ 5ಜಿ ದೇಶದ ಪ್ರತಿ ಪಟ್ಟಣವನ್ನು ತಲುಪಲಿದೆ. ಭಾರತವನ್ನು ಡಿಜಿಟಲ್ ಸೊಸೈಟಿಯನ್ನಾಗಿ ಪರಿವರ್ತಿಸುವ ಜಿಯೋ ಬದ್ಧತೆಗೆ ಇದು ಸಾಕ್ಷಿಯಾಗಿದೆ. ತಮ್ಮ ಪ್ರದೇಶಗಳನ್ನು ಡಿಜಿಟಲೈಸ್ ಮಾಡುವುದಕ್ಕೆ ಬೆಂಬಲ ನೀಡಿದ ರಾಜ್ಯ ಸರ್ಕಾರಗಳು ಮತ್ತು ಆಡಳಿತಗಾರರಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ.

Follow Us:
Download App:
  • android
  • ios