ಹಲವರಿಗೆ ದೀಪಾವಳಿ ಗಿಫ್ಟ್ ನೀಡಿದ ಮುಕೇಶ್ ಅಂಬಾನಿಗೆ RBIನಿಂದ ಬಂತು ಅತೀ ದೊಡ್ಡ ಉಡುಗೊರೆ!

ಗ್ರಾಹಕರು, ಸಿಬ್ಬಂದಿಗಳಿಗೆ ದೀಪಾವಳಿ ಉಡುಗೊರೆ ನೀಡಿದ ಮುಕೇಶ್ ಅಂಬಾನಿಗೆ ಇದೀಗ ಆರ್‌ಬಿಐ ದೀಪಾವಳಿಗೆ ಅತೀ ದೊಡ್ಡ ಗಿಫ್ಟ್ ನೀಡಿದೆ. ಅಷ್ಟಕ್ಕೂ ಅಂಬಾನಿಗೆ ಸಿಕ್ಕ ಈ ಗಿಫ್ಟ್ ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಅತೀ ದೊಡ್ಡ ಬದಲಾವಣೆ ತರಲಿದೆ.

Jio payments solution receives to operate online payments aggregator nod from RBI ck

ನವದೆಹಲಿ(ಅ.30) ರಿಲಯನ್ಸ್ ಜಿಯೋ ಗ್ರಾಹಕರು, ರಿಲಯನ್ಸ್ ಸಿಬ್ಬಂದಿಗಳು ಸೇರಿದಂತೆ ಹಲವರಿಗೆ ಮುಕೇಶ್ ಅಂಬಾನಿ ದೀಪಾವಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಇದರ ನಡುವೆ ಇದೀಗ ಭಾರತೀಯ ರೀಸರ್ವ್ ಬ್ಯಾಂಕ್ ಮುಕೇಶ್ ಅಂಬಾನಿಗೆ ಅತೀ ದೊಡ್ಡ ಉಡುಗೊರೆ ನೀಡಿದ್ದಾರೆ. ಆರ್‌ಬಿಐ ನೀಡಿದ ಉಡುಗೊರೆ ಭಾರತದ ಪೇಮೆಂಟ್ ವ್ಯವಸ್ತೆಯಲ್ಲಿ ಹೊಸ ಕ್ರಾಂತಿ ಮಾಡುವ ಸಾಧ್ಯತೆ ಇದೆ. ಹೌದು, ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಗ್ರೂಪ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಯೋ ಪೇಮೆಂಟ್ಸ್ ಸೊಲ್ಯೂಶನ್ ಕಂಪನಿಗೆ ಇದೀಗ ಆನ್‌ಲೈನ್ ಪೇಮೆಂಟ್ ಅಗ್ರೀಗೇಟರ್ ಆಗಿ ಕಾರ್ಯನಿರ್ವಹಿಸಲು ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ ಅನುಮೋದನೆ ನೀಡಿದೆ.

ಅನ್‌ಲೈನ್ ಪಾವತಿ ಸಂಗ್ರಾಹಕರಾಗಿ ಕಾರ್ಯನಿರ್ವಹಿಸಲು ಜಿಯೋ ಪೇಮೆಂಟ್ಸ್  ಸೊಲ್ಯುಶನ್‌ಗೆ ಅಕ್ಟೋಬರಿ 28 ರಿಂದ ಆರ್‌ಬಿಐ ಅನುಮೋದನೆ ನೀಡಿದೆ. ಆಗಾಗಲೇ ಆರ್‌ಬಿಐ ಅಧಿಕೃತ ಪ್ರಮಾಣ ಪತ್ರವನ್ನೂ ನೀಡಿದೆ ಎಂದು ವರದಿಯಾಗಿದೆ. ಪಾವತಿ ಹಾಗೂ ಸೆಟಲ್ಮೆಂಟ್ ಸಿಸ್ಟಮ್ ಕಾಯ್ದೆ(2007)ರ ಸೆಕ್ಷನ್ 7ರ ಅಡಿಯಲ್ಲಿ ಡಿಜಿಟಲ್ ವಹಿವಾಟುಗಳನ್ನು ನಡೆಸಲು ಜಿಯೋ ಪೇಮೆಂಟ್ಸ್ ಸೊಲ್ಯೂಶನ್‌ಗೆ ಅನುಮತಿ ನೀಡಲಾಗಿದೆ. ಇದರಿಂದ ಜಿಯೋ ಪೇಮೆಂಟ್ಸ್ ಥರ್ಟ್ ಪಾರ್ಟಿ ಸೇವಾ ಪೂರೈಕೆದಾರರಾಗಿ ಕಾರ್ಯನಿರ್ವಹಿಸಲಿದೆ. ಇಷ್ಟೇ ಅಲ್ಲ ಗ್ರಾಹಕರಿಗೆ ಅನ್‌ಲೈನ್ ಹಣ ಪಾವತಿ, ಟ್ರಾನ್ಸಾಕ್ಷನ್ ಮಾಡಲು ಅನುಮತಿಸುತ್ತದೆ. 

ದೀಪಾವಳಿಗೆ ಅಂಬಾನಿ ಕೊಡುಗೆ, ಕೇವಲ 10 ರೂಪಾಯಿಗೆ ಖರೀದಿಸಿ 24 ಕಾರೆಟ್ ಶುದ್ಧ ಚಿನ್ನ!

ಆರ್‌ಬಿಐ ನೀಡಿದ ಈ ಅನುಮತಿ ಭಾರತದ ಡಿಜಿಟಲ್ ಪೇಮೆಂಟ್ಸ್ ವ್ಯವಸ್ಥೆಯಲ್ಲಿ ಬಹುದೊಡ್ಡ ಕ್ರಾಂತಿಯಾಗಲಿದೆ ಎಂದೇ ಹೇಳಲಾಗುತ್ತಿದೆ. ಕಾರಣ ಆರ್‌ಬಿಐ ಅನುಮೋದನೆಯಿಂದ ಜಿಯೋ ಪೇಮೆಂಟ್ಸ್ ಸೊಲ್ಯೂಶನ್ ತಮ್ಮ ಗ್ರಾಹಕರಿಗೆ ಡೆಬಿಡ್ ಕಾರ್ಡ್, ಕ್ರಿಡಿಟ್ ಕಾರ್ಟ್, ಕಾರ್ಡ್‌ಲೆಸ್, ಆನ್‌ಲೈನ್ ಪಾವತಿ ಸೇರಿದಂತೆ ಸುಲಭ ಡಿಜಿಟಲ್ ಪಾವತಿ ಮೂಲಕ ಗ್ರಾಹಕರಿಗೆ ಸೇವೆ ನೀಡಲಿದೆ. ಇಷ್ಟೇ ಅಲ್ಲ, ಇದೀಗ ಭಾರತದ ಎಲ್ಲೆಡೆ ಕಾರ್ಯನಿರ್ವಹಿಸುತ್ತಿರುವ ಯುಪಿಐ ಪಾವತಿ ವ್ಯವಸ್ಥೆಗೂ ಅನುಮತಿ ಸಿಕ್ಕಿದೆ. 

ಈ ಅನುಮತಿಯಿಂದ ಇದೀಗ ಗೂಗಲ್ ಪೇಮ, ಫೋನ್ ಪೇ ರೀತಿಯಲ್ಲಿ ಜಿಯೋ ಪೇ ಕೂಡ ಆರಂಭಗೊಳ್ಳಲಿದೆ. ಜಿಯೋ ಕ್ರಿಡಿಟ್ ಕಾರ್ಡ್, ಜಿಯೋ ಬ್ಯಾಂಕ್ ಖಾತೆ, ಜಿಯೋ ಡೆಬಿಟ್ ಕಾರ್ಡ್, ಜಿಯೋ ಇ ವ್ಯಾಲೆಟ್ ಸೇರದಂತೆ ಹಲವು ಪಾವತಿ ವ್ಯವಸ್ಥೆಗಳು ಕಾರ್ಯನಿರ್ವಿಹಿಸಲಿದೆ. ಜಿಯೋ ಪೇಮೆಂಟ್ಸ್ ಸೂಲ್ಯೂಶನ್‌ನಿಂದ ಇದೀಗ ಯುಪಿಐ ಪಾವತಿ ಬರಲಿದೆ. ಜೊತೆಗೆ ಇ ವ್ಯಾಲೆಟ್ ಸೇರಿದಂತೆ ಹಲವು ಪಾವತಿ  ವ್ಯವಸ್ಥೆಗಳನ್ನು ಜಿಯೋ ಪರಿಚಯಿಸಲಿದೆ. ಸದ್ಯ ಭಾರತದಲ್ಲಿ ಹಲವು ಯುಪಿಐ ಪಾವತಿ ಸೇವೆಗಳು, ಇ ವ್ಯಾಲೆಟ್ ಸೇವೆಗಳು ಲಭ್ಯವಿದೆ. ಇದೀಗ ಜಿಯೋ ಎಂಟ್ರಿಕೊಡುತ್ತಿದೆ. ಗೂಗಲ್ ಪೇ ಸೇರಿದಂತೆ ಇತರ ಯುಪಿಐ ಪಾವತಿ ವ್ಯವಸ್ಥೆ ಭಾರತದಲ್ಲಿ ಸೇವೆ ಆರಂಭಿಸಿದಾಗ ಭರ್ಜರಿ ಕ್ಯಾಶ್‌ಬ್ಯಾಕ್ ಸೇರಿದಂತೆ ಹಲವು ಕೊಡುಗೆ ನೀಡಿತ್ತು. ಇದೀಗ ಜಿಯೋ ಕೂಡ ಇದೇ ರೀತಿಯ ಕ್ಯಾಶ್‌ಬ್ಯಾಕ್ ಸೇರಿದಂತೆ ಹಲವು ಆಫರ್ ನೀಡುವ ಸಾಧ್ಯತೆ ಇದೆ.

ಆರ್‌ಬಿಐನಿಂದ ಪ್ರೀಪೇಯ್ಡ್ ಪೇಮೆಂಟ್ ಇನ್ಸ್‌ಸ್ಟ್ರುಮೆಂಟ್(PPI)ಅನುಮತಿ ಕೂಡ ಸಿಕ್ಕಿದೆ ಎಂದು ಜಿಯೋ ಪೇಮೆಂಟ್ಸ್ ಸೊಲ್ಯೂಶನ್ ಹೇಳಿಕೊಂಡಿದೆ. ಈ ಅನುಮತಿಯಿಂದ ಜಿಯೋ ಪೇಮೆಂಟ್ಸ್ ಇದೀಗ ವಹಿವಾಟುಗಳಲ್ಲಿ ಮೊಬೈಲ್ ವ್ಯಾಲೆಟ್, ಪ್ರೀಪೇಯ್ಡ್ ಕಾರ್ಡ್ಸ್ ಹಾಗೂ ವೋಚರ್ ಬಳಸಲು ಅನುಮತಿ ಸಿಕ್ಕಿದೆ ಎಂದಿದೆ.

ಸುರಕ್ಷತೆ, ಅಡೆತಡೆ ಇಲ್ಲದ ವಹಿವಾಟು ಸೇರಿದಂತೆ ಹಲವು ಸ್ಪಷ್ಟ ಸೂಚನೆಗಳನ್ನು ಆರ್‌ಬಿಐ ನೀಡಿದೆ ಎಂದು ವರದಿಯಾಗಿದೆ. ಇದೀಗ ಭಾರತದಲ್ಲಿ ಜಿಯೋ ಪಾವತಿ ವ್ಯವಸ್ಥೆ ಆರಂಭಗೊಳ್ಳಲಿದೆ. ಇದು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಬರೆಯು ಸಾಧ್ಯತೆ ಇದೆ.

ಕೇವಲ 699 ರೂಗೆ ಜಿಯೋ ಭಾರತ್ 4ಜಿ ಫೋನ್, ಇದು ದೀಪಾವಳಿ ಹಬ್ಬದ ಲಿಮಿಟೆಡ್ ಆಫರ್!
 

Latest Videos
Follow Us:
Download App:
  • android
  • ios