Asianet Suvarna News Asianet Suvarna News

Broadband Service ಭಾರತದಲ್ಲಿ ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್ ಸೇವೆ ನೀಡಲು ಜಿಯೋ ಸ್ಪೇಸ್ ಟೆಕ್ನಾಲಜಿ ಆರಂಭ!

  • ಇಂಟರ್ನೆಟ್ ಡೇಟಾದಲ್ಲಿ ಜಿಯೋದಿಂದ ಮತ್ತೊಂದು ಕ್ರಾಂತಿ
  • ಸ್ಯಾಟಲೈಟ್ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆ ನೀಡಲು ಜಿಯೋ ತಯಾರಿ
  • ಜಿಯೋ ಸ್ಪೇಸ್ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆ ಆರಂಭ
Reliance Jio announces affordable satellite broadband services with SES Joint Venture ckm
Author
Bengaluru, First Published Feb 14, 2022, 4:19 PM IST | Last Updated Feb 14, 2022, 4:19 PM IST

ಮುಂಬಯಿ(ಫೆ.14):  ಕೊರೋನಾ(Coronavirus) ವಕ್ಕರಿಸಿದ ಬಳಿಕ ಪ್ರತಿ ಮನೆಗೂ ಇಂಟರ್ನೆಟ್ ಡೇಟಾ(Internet Data) ಅವಶ್ಯಕತೆಯಾಗಿದೆ. ಅತ್ಯುತ್ತಮ ಸ್ಪೀಡ್, ಡೌನ್ಲೋಡ್ ಸೇರಿದಂತೆ ಡೇಟಾ ಕ್ಷಮತೆ ಕೂಡ ಅಷ್ಟೇ ಉತ್ತಮವಾಗಿರಬೇಕು. ಇದೀಗ ಗ್ರಾಹಕರಿಗೆ ಸ್ಯಾಟಲೈಟ್ ಆಧಾರಿತ ಬ್ರಾಡ್‌ಬ್ಯಾಂಡ್(satellite broadband) ಸೇವೆ ಒದಗಿಸಲು ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಮುಂದಾಗಿದೆ. ಇದಕ್ಕಾಗಿ SES ಜೊತೆ ಸಹಭಾಗಿತ್ವ ಘೋಷಿಸಿದೆ. 

ಭಾರತದ ಪ್ರಮುಖ ಡಿಜಿಟಲ್ ಸೇವಾದಾತ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (JPL) ಹಾಗೂ ಜಾಗತಿಕ ಉಪಗ್ರಹ ಆಧಾರಿತ ಕಂಟೆಂಟ್ ಕನೆಕ್ಟಿವಿಟಿ ಸಲ್ಯೂಶನ್ಸ್ ಪೂರೈಕೆದಾರ SES ಇಂದು ಜಿಯೋ ಸ್ಪೇಸ್ ಟೆಕ್ನಾಲಜಿ ಲಿಮಿಟೆಡ್ ಎಂಬ ಸಹಭಾಗಿತ್ವದ ಸಂಸ್ಥೆಯ ಪ್ರಾರಂಭವನ್ನು ಘೋಷಿಸಿವೆ. ಈ ಸಹಭಾಗಿತ್ವವು ಭಾರತದಲ್ಲಿ(India) ಉಪಗ್ರಹ ತಂತ್ರಜ್ಞಾನವನ್ನು ಬಳಸಿಕೊಂಡು ವಿಸ್ತರಿಸಬಲ್ಲ ಮತ್ತು ಕೈಗೆಟುಕುವ ಮುಂದಿನ ಪೀಳಿಗೆಯ ಬ್ರಾಡ್‌ಬ್ಯಾಂಡ್(next generation broadband) ಸೇವೆಗಳನ್ನು ಒದಗಿಸಲಿದೆ. ಈ ಸಹಭಾಗಿತ್ವದಲ್ಲಿ ಜೆಪಿಎಲ್ ಮತ್ತು ಎಸ್‌ಇಎಸ್ ಅನುಕ್ರಮವಾಗಿ 51% ಮತ್ತು 49% ಈಕ್ವಿಟಿ ಪಾಲನ್ನು ಹೊಂದಿರುತ್ತವೆ. ಇದು ಬಹು-ಕಕ್ಷೆಯ ಬಾಹ್ಯಾಕಾಶ ನೆಟ್‌ವರ್ಕ್‌ಗಳನ್ನು ಬಳಸಲಿದ್ದು, ಜಿಯೋಸ್ಟೇಷನರಿ (GEO) ಮತ್ತು ಮೀಡಿಯಂ ಅರ್ಥ್ ಕಕ್ಷೆಗಳೆರಡರಲ್ಲೂ (MEO) ಇರುವ ಉಪಗ್ರಹಪುಂಜಗಳ ಸಂಯೋಜನೆಯಾಗಿರಲಿದೆ. ಇದು ಭಾರತದ ಉದ್ದಗಲ ಹಾಗೂ ನೆರೆಯ ಪ್ರದೇಶಗಳ ಉದ್ಯಮಗಳಿಗೆ, ಮೊಬೈಲ್ ಬ್ಯಾಕ್‌ಹಾಲ್ ಹಾಗೂ ರೀಟೇಲ್ ಬಳಕೆದಾರರಿಗೆ ಮಲ್ಟಿ-ಗಿಗಾಬಿಟ್ ಲಿಂಕ್‌ಗಳನ್ನೂ ಸಾಮರ್ಥ್ಯವನ್ನೂ ಒದಗಿಸಲು ಶಕ್ತವಾಗಿದೆ.  

JioPhone 5G: ಭಾರತದ ಅತಿ ಅಗ್ಗದ ರಿಲಯನ್ಸ್‌ 5G ಫೋನ್ ಬಿಡುಗಡೆ ಸಾಧ್ಯತೆ: ಫೀಚರ್ಸ್‌ ಲೀಕ್!‌

ಎಸ್‌ಇಎಸ್‌ನಿಂದ ಸೇವೆ ಪಡೆದುಕೊಳ್ಳಬಹುದಾದ ಕೆಲವು ಅಂತರಾಷ್ಟ್ರೀಯ ಏರೋನಾಟಿಕಲ್ ಮತ್ತು ಸಮುದ್ರಯಾನ ಸಂಸ್ಥೆಗಳನ್ನು ಹೊರತುಪಡಿಸಿ ಈ ಸಹಭಾಗಿತ್ವವು ಭಾರತದಲ್ಲಿ ಎಸ್‌ಇಎಸ್‌ನ ಉಪಗ್ರಹ ಡೇಟಾ ಮತ್ತು ಸಂಪರ್ಕ ಸೇವೆಗಳನ್ನು ಒದಗಿಸಲಿದೆ. ಇದು ಎಸ್‌ಇಎಸ್‌ನಿಂದ 100 Gbps ಸಾಮರ್ಥ್ಯದವರೆಗೆ ಲಭ್ಯತೆಯನ್ನು ಹೊಂದಿರುತ್ತದೆ ಮತ್ತು ಈ ಮಾರುಕಟ್ಟೆ ಅವಕಾಶವನ್ನು ಬಳಸಿಕೊಳ್ಳಲು ಭಾರತದಲ್ಲಿ ಜಿಯೋನ ಮುಂಚೂಣಿ ಸ್ಥಾನ ಮತ್ತು ಮಾರಾಟದ ವ್ಯಾಪ್ತಿಯ ಪ್ರಯೋಜನವನ್ನು ಪಡೆದುಕೊಳ್ಳಲಿದೆ. ಹೂಡಿಕೆ ಯೋಜನೆಯ ಭಾಗವಾಗಿ, ಈ ಸಹಭಾಗಿತ್ವವು ಭಾರತದಲ್ಲಿ ಸೇವೆಗಳನ್ನು ಒದಗಿಸಲು ವ್ಯಾಪಕವಾದ ಗೇಟ್‌ವೇ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಿದೆ. ಸಹಭಾಗಿತ್ವದ ಪ್ರಮುಖ ಗ್ರಾಹಕ ಸ್ಥಾನದಲ್ಲಿರುವ ಜಿಯೋ, ಕೆಲವು ಮೈಲಿಗಲ್ಲುಗಳ ಹಾಗೂ ಗೇಟ್‌ವೇಗಳು ಮತ್ತು ಉಪಕರಣಗಳ ಖರೀದಿಯ ಆಧಾರದ ಮೇಲೆ ಬಹು-ವರ್ಷಗಳ ಸಾಮರ್ಥ್ಯ ಖರೀದಿ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದದ ಒಟ್ಟು ಮೌಲ್ಯ ಸುಮಾರು 100 ಮಿಲಿಯನ್ ಡಾಲರ್ ಆಗಿದೆ.

Jio 499 Recharge: ದೈನಂದಿನ 2GB ಹೈ ಸ್ಪೀಡ್ ಡೇಟಾದೊಂದಿಗೆ ಜನಪ್ರಿಯ ಪ್ರಿಪೇಯ್ಡ್ ಯೋಜನೆ ಮರುಪ್ರಾರಂಭ!

ಜಿಯೋದ ಟೆರೆಸ್ಟ್ರಿಯಲ್ ಜಾಲವನ್ನು ವಿಸ್ತರಿಸಲು ಹಾಗೂ ಅದಕ್ಕೆ ಪೂರಕವಾಗಿರಲು, ಈ ಸಹಭಾಗಿತ್ವವು ಭಾರತಕ್ಕೆ ಸೇವೆನೀಡುತ್ತಿರುವ ಎಸ್‌ಇಎಸ್‌ನ ಉನ್ನತ-ಥ್ರೂಪುಟ್ GEO ಉಪಗ್ರಹವಾದ SES-12 ಹಾಗೂ ಎಸ್‌ಇಎಸ್‌ನ ಮುಂದಿನ ಪೀಳಿಗೆಯ MEO ಉಪಗ್ರಹಪುಂಜವಾದ O3b mPOWER ಅನ್ನು ಬಳಸಲಿದೆ. ಆ ಮೂಲಕ ಡಿಜಿಟಲ್ ಸೇವೆಗಳು ಹಾಗೂ ಅನ್ವಯಗಳಿಗೆ ಇದು ಹೆಚ್ಚಿನ ಪ್ರವೇಶಾವಕಾಶ ನೀಡಲಿದೆ. ಈ ಸಹಭಾಗಿತ್ವಕ್ಕೆ ಮ್ಯಾನೇಜ್ಡ್ ಸೇವೆಗಳು ಮತ್ತು ಗೇಟ್‌ವೇ ಮೂಲಸೌಕರ್ಯ ಕಾರ್ಯಾಚರಣೆಗಳ ಸೇವೆಗಳನ್ನು ಜಿಯೋ ಒದಗಿಸಲಿದೆ.

ಕೋವಿಡ್-19 ನಮಗೆ ತೋರಿಸಿಕೊಟ್ಟಿರುವಂತೆ, ಹೊಸ ಡಿಜಿಟಲ್ ಆರ್ಥಿಕತೆಯಲ್ಲಿ ಪೂರ್ಣಪ್ರಮಾಣದ ಪಾಲ್ಗೊಳ್ಳುವಿಕೆಗಾಗಿ ಬ್ರಾಡ್‌ಬ್ಯಾಂಡ್‌ ಅತ್ಯಗತ್ಯವಾಗಿದೆ. ಈ ಸಹಭಾಗಿತ್ವವು ಭಾರತ ಹಾಗೂ ನೆರೆಯ ಪ್ರದೇಶದೊಳಗಿನ ಸಂಪರ್ಕ ರಹಿತ ಪ್ರದೇಶಗಳನ್ನು ಸಂಪೂರ್ಣ ಶ್ರೇಣಿಯ ಡಿಜಿಟಲ್ ಸೇವೆಗಳಿಗೆ ಸಂಪರ್ಕಿಸಲು ವೇಗವರ್ಧಕವಾಗಲಿದ್ದು, ಆರೋಗ್ಯ, ಸರ್ಕಾರಿ ಸೇವೆಗಳು ಮತ್ತು ದೂರಶಿಕ್ಷಣದ ಅವಕಾಶಗಳಿಗೆ ಅಂತರಜಾಲದ ಮೂಲಕವೇ ಪ್ರವೇಶವನ್ನು ನೀಡಲಿದೆ.

5G Launch in India: 13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ: 4Gಗಿಂತ 100 % ಹೆಚ್ಚು ವೇಗದ ಇಂಟರ್ನೆಟ್‌!

ನಾವು ನಮ್ಮ ಫೈಬರ್ ಆಧಾರಿತ ಸಂಪರ್ಕ ಮತ್ತು FTTH ವ್ಯವಹಾರವನ್ನು ವಿಸ್ತರಿಸಲು ಮತ್ತು 5Gಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸುತ್ತಿರುವಂತೆಯೇ, ಎಸ್‌ಇಎಸ್‌ನೊಂದಿಗಿನ ಈ ಹೊಸ ಸಹಭಾಗಿತ್ವವು ಮಲ್ಟಿಗಿಗಾಬಿಟ್ ಬ್ರಾಡ್‌ಬ್ಯಾಂಡ್‌ನ ಬೆಳವಣಿಗೆಗೆ ಇನ್ನಷ್ಟು ವೇಗ ನೀಡಲಿದೆ. ಉಪಗ್ರಹ ಸಂವಹನ ಸೇವೆಗಳಿಂದ ದೊರಕುವ ಹೆಚ್ಚುವರಿ ವ್ಯಾಪ್ತಿ ಮತ್ತು ಸಾಮರ್ಥ್ಯದೊಂದಿಗೆ, ದೂರದ ಪಟ್ಟಣಗಳು ಮತ್ತು ಹಳ್ಳಿಗಳು, ಉದ್ಯಮಗಳು, ಸರ್ಕಾರಿ ಸಂಸ್ಥೆಗಳು ಮತ್ತು ಗ್ರಾಹಕರನ್ನು ಹೊಸ ಡಿಜಿಟಲ್ ಇಂಡಿಯಾಕ್ಕೆ ಸಂಪರ್ಕಿಸಲು ಜಿಯೋಗೆ ಸಾಧ್ಯವಾಗುತ್ತದೆ. ಎಸ್‌ಇಎಸ್‌ನ ಪ್ರಯೋಗಶೀಲ ನಾಯಕತ್ವ ಮತ್ತು ಉಪಗ್ರಹ ಉದ್ಯಮದ ಪರಿಣತಿಯೊಂದಿಗೆ ನಮ್ಮ ಬೃಹತ್ ವ್ಯಾಪ್ತಿ ಮತ್ತು ಗ್ರಾಹಕ ಬಲವನ್ನು ಸಂಯೋಜಿಸುವ ಈ ಹೊಸ ಪ್ರಯಾಣದ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಎಂದು  ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ.

ಉತ್ತಮ ಗುಣಮಟ್ಟದ ಸಂಪರ್ಕವನ್ನು ನೀಡಲು ಎಸ್‌ಇಎಸ್ ಅತ್ಯಂತ ವ್ಯಾಪಕವಾದ ಟೆರೆಸ್ಟ್ರಿಯಲ್ ಜಾಲಗಳಿಗೆ ಹೇಗೆ ಪೂರಕವಾಗಬಲ್ಲದು ಮತ್ತು ನೂರಾರು ಮಿಲಿಯನ್ ಜನರ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಬಲ್ಲದು ಎನ್ನುವುದಕ್ಕೆ ಜೆಪಿಎಲ್‌ನೊಂದಿಗಿನ ಈ ಸಹಭಾಗಿತ್ವವು ಉತ್ತಮ ಉದಾಹರಣೆಯಾಗಿದೆ. ಭಾರತದಲ್ಲಿ ಡಿಜಿಟಲ್ ಒಳಗೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ನಾವು ಪಾತ್ರವಹಿಸುವುದನ್ನು  ಸಾಧ್ಯವಾಗಿಸುವ ಈ ಸಹಭಾಗಿತ್ವಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ ಎಂದು ಎಸ್‌ಇಎಸ್‌ನ ಸಿಇಒ ಸ್ಟೀವ್ ಕಾಲರ್ ಹೇಳಿದ್ದಾರೆ.

ವೈವಿಧ್ಯಮಯ ಮೂಲಸೌಕರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಮಗ್ರ ಮತ್ತು ತಡೆರಹಿತ ಸಂಪರ್ಕವನ್ನು ಒದಗಿಸಲು ಗೌರವಾನ್ವಿತ ಪ್ರಧಾನ ಮಂತ್ರಿಯವರ 'ಗತಿ ಶಕ್ತಿ: ಬಹು-ಮಾದರಿ ಸಂಪರ್ಕಕ್ಕಾಗಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್' ಉಪಕ್ರಮದೊಂದಿಗೂ ಈ ಸಹಭಾಗಿತ್ವವು ಹೊಂದಿಕೊಳ್ಳುತ್ತದೆ. ಇದು ದೇಶದಾದ್ಯಂತ ಇರುವ ಭಾರತೀಯ ನಾಗರಿಕರಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ವಿಸ್ತರಿಸುವ ಮೂಲಕ 2018ರ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ ಮತ್ತು ಡಿಜಿಟಲ್ ಇಂಡಿಯಾ ಕಾರ್ಯಕ್ರಮದಲ್ಲಿನ ಕನೆಕ್ಟ್ ಇಂಡಿಯಾ ಗುರಿಗಳ ಸಾಧನೆಗೂ ವೇಗ ನೀಡಲಿದೆ.

Latest Videos
Follow Us:
Download App:
  • android
  • ios