ಕರ್ನಾಟಕದಲ್ಲಿ ಚೀನಾ ಹವಾಲಾ ವಂಚನೆ ಪ್ರಕರಣ; ಸ್ಕಿಲ್ ಗೇಮ್ಸ್ ನಿಯಂತ್ರಿಸಲು ಆಗ್ರಹ!
- ವಂಚನೆ ತಪ್ಪಿಸಲು, ನಾಗರಿಕ ಸಮಾಜ ರಕ್ಷಿಸಲು ಸ್ಕಿಲ್ ಗೇಮ್ಸ್ ನಿಯಂತ್ರಿಸಲು ಆಗ್ರಹ!
- ಆನ್‌ಲೈನ್ ಗೇಮ್, ಆ್ಯಪ್ ಮೂಲಕ 290 ಕೋಟಿ ರೂಪಾಯಿ ವಂಚನೆ
- ಕರ್ನಾಟಕದ CID ಸೈಬರ್ ಪೊಲೀಸರ ಕಾರ್ಯಾಚರಣೆಯಲ್ಲಿ ಪತ್ತೆ
ಬೆಂಗಳೂರು(ಜೂ.17): ಬರೋಬ್ಬರಿ 290 ಕೋಟಿ ರೂ.ಗಳ ಹವಾಲಾ ಹಾಗೂ ಹಣದ ದುರುಪಯೋಗದ ಹಗರಣ ಪತ್ತೆ ಮಾಡುವಲ್ಲಿ ಕರ್ನಾಟಕದ ಸಿಐಡಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಆನ್‌ಲೈನ್ ಗೇಮ್ಸ್, ಸ್ಕಿಲ್ ಗೇಮ್ಸ್, ಆ್ಯಪ್ ಮೂಲಕ ನಡೆಯುತ್ತಿರುವ ವಂಚನೆ ಜಾಲವನ್ನು ನಿಯಂತ್ರಿಸಲು ಆಗ್ರಹ ಹೆಚ್ಚಾಗಿದೆ. ಇದೀಗ ದಿ ಆನ್ ಲೈನ್ ರಮ್ಮಿ ಫೆಡರೇಷನ್, ಕರ್ನಾಟಕ ಸಿಐಡಿ ಸೈಬರ್ ಪೊಲೀಸ್ ವಿಭಾಗಕ್ಕೆ ಈ ಕುರಿತು ವಿಶೇಷ ಮನವಿ ಮಾಡಿದೆ.
ಅಕ್ರಮ ಆನ್‌ಲೈನ್ ಗೇಮ್ ನಿಷೇಧಕ್ಕೆ ಶೀಘ್ರ ಕಾನೂನು!
ಕರ್ನಾಟಕ ಪೊಲೀಸರು ಬಿಡುಗಡೆ ಮಾಡಿದ ಮಾಹಿತಿಯ ಅನ್ವಯ ಈ ಹಗರಣವು ಜನರನ್ನು ಮೋಸಗೊಳಿಸಲು ವಂಚನೆಯ ಹೂಡಿಕೆ ಯೋಜನೆ, ಆನ್ ಲೈನ್ ಗೇಮ್ ಇತ್ಯಾದಿ ಮಾರ್ಗಗಳನ್ನು ಕಂಡುಕೊಂಡಿದ್ದರು. ಇದಕ್ಕೆ ಚೀನಾದ ಸಂಪರ್ಕವೂ ಇದೆ ಎನ್ನಲಾಗಿದೆ. ಹೀಗಾಗಿ ಈ ಕುರಿತು ಕಟ್ಟು ನಿಟ್ಟಿನ ಕ್ರಮ ಆಗತ್ಯ ಎಂದು ರಮ್ಮಿ ಫೆಡರೇಷನ್ ಹೇಳಿದೆ.
ಆನ್‌ಲೈನ್ ಗೇಮ್ಸ್ ನಿಯಂತ್ರಸಲು ಕಟ್ಟುನಿಟ್ಟಿನ ಹಾಗೂ ಪರಿಣಾಮಕಾರಿ ನಿಯಮದ ಅಗತ್ಯವಿದೆ. ಕ್ರೀಡಾಸಕ್ತರನ್ನು ಆಹ್ವಾನಿಸಿ ಕೋಟಿ ಕೋಟಿ ರೂಪಾಯಿ ವಂಚನೆ ನಡೆಯುತ್ತಿದೆ. ಎಸ್ಎಸ್ಎಲ್ ಎನ್ಕ್ರಿಪ್ಟೆಡ್ ಡೇಟಾ ರಕ್ಷಣೆ, ತಂತ್ರಜ್ಞಾನ ಮತ್ತು ಆರ್ಟಿಫೀಶಿಯಲ್ ಇಂಟೆಲಿಜೆನ್ಸಿ ಅನುಷ್ಠಾನದ ಮೂಲಕ ರಮ್ಮಿ ಸಂಸ್ಥೆ ಜವಾಬ್ದಾರಿಯುತ ಆಟವನ್ನು ದೃಢಪಡಿಸುವಲ್ಲಿ ಮುಂಚೂಣಿಯಲ್ಲಿದೆ. ಆದರೆ ಇತರ ವಂಚನೆ ಜಾಲಗಳ ಪ್ರವೇಶದಿಂದ ಅಮಾಯಕರು ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಫೆಡರೇಶನ್ ಹೇಳಿದೆ.