Asianet Suvarna News Asianet Suvarna News

ಪಾಕ್ ಉಗ್ರರಿಂದ ಕಾಶ್ಮೀರ ಭಯೋತ್ಪಾದಕರ ಜೊತೆ ಸಂವಹನ, IMO ಸೇರಿ 14 ಆ್ಯಪ್ ನಿಷೇಧಿಸಿದ ಕೇಂದ್ರ!

ಆಡಿಯೋ ವೀಡಿಯೋ ಕಾಲ್, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆ್ಯಪ್ ಮೇಲೆ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಇದೀಗ ಐಎಂಒ ಸೇರಿದಂತೆ ಜನಪ್ರಿಯ 14 ಮೊಬೈಲ್ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಆ್ಯಪ್ ಬಳಸುತ್ತಿರುವ ಪಾಕಿಸ್ತಾನ ಉಗ್ರರು, ಜಮ್ಮು ಮತ್ತು ಕಾಶ್ಮೀರದಲ್ಲಿನ ಉಗ್ರರ ಜೊತೆ ಸಂವಹನ ನಡೆಸುತ್ತಿದ್ದಾರೆ ಅನ್ನೋ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ.

PM Modi Govt Ban messenger platform 14 Mobil app include IMO due to anti india activities ckm
Author
First Published May 1, 2023, 3:32 PM IST

ನವದೆಹಲಿ(ಮೇ.01): IMO ಸೇರಿದಂತೆ 14 ಮೆಸೇಜಿಂಗ್, ಆಡಿಯೋ ವಿಡಿಯೋ ಪ್ಲಾಟ್‌ಫಾರ್ಮ್ ಮೊಬೈಲ್ ಆ್ಯಪ್ ಬಳಸಿ ಪಾಕಿಸ್ತಾನ ಉಗ್ರರು, ಜಮ್ಮು ಮತ್ತು ಕಾಶ್ಮೀರದ ಉಗ್ರರ ಜೊತೆ ಸಂವಹನ ನಡೆಸುತ್ತಿದ್ದಾರೆ. ಮಾಹಿತಿ ರವಾನಿಸಿ, ಕಾಶ್ಮೀರದಲ್ಲಿ ವಿದ್ವಂಸಕ ಕೃತ್ಯ ಎಸಗಲು ಮಾಹಿತಿ ನೆರವು ನೀಡುತ್ತಿರುವ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಇದರ ಪರಿಣಾಮ ಕೇಂದ್ರ ಸರ್ಕಾರ 14 ಮೆಸೇಜಿಂಗ್ ಆ್ಯಪ್ ನಿಷೇಧಿಸಿದೆ. ಇದರಲ್ಲಿ ಅತ್ಯಂತ ಜನಪ್ರೀಯ ಆ್ಯಪ್ IMO ಕೂಡ ಸೇರಿದೆ. ಈ ಆ್ಯಪ್ ಉಗ್ರರೇ ಹೆಚ್ಚಾಗಿ ಬಳಸುತ್ತಿದ್ದಾರೆ. ಭಾರತ ವಿರುದ್ಧ ಚಟುವಟಿಕೆಗೆ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಐಎಂಒ(IMO), ಕ್ರೈಪ್‌ವಿಸರ್(Crypviser), ಸೇಫ್‌ವಿಸ್(Safeswiss)ವಿಕ್ರಮೆ( Wickrme), ಬ್ರಿಯಾರ್( Briar) ಬಿಚಾಟ್(BChat) ನ್ಯಾಂಡ್‌ಬಾಕ್ಸ್(Nandbox)ಕಾನಿಯನ್(Conion), ಎಲಮೆಂಟ್(Element), ಸೆಕೆಂಡ್ ಲೈನ್(Second line), ತ್ರೀಮಾ(Threema) ಸೇರಿದಂತೆ ಕೆಲ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಚಾಟ್ ಲಾಕ್ ಫೀಚರ್ ಪರಿಚಯಿಸಿದ ವ್ಯಾಟ್ಸ್ಆ್ಯಪ್, ಸಂದೇಶ ಕಾಣದಂತೆ ಪ್ರೈವೇಟ್ ಮಾಡಲು ಅವಕಾಶ!

ಈ ಮೊಬೈಲ್ ಆ್ಯಪ್ ಬಳಸಿ ಪಾಕಿಸ್ತಾನದ ಉಗ್ರರು ಕಾಶ್ಮೀರ ಉಗ್ರರ ಜೊತೆ ಸಂವನ ನಡೆಸುತ್ತಿದ್ದಾರೆ. ಕಾಶ್ಮೀರ ಭಯೋತ್ಪಾದಕರು ಇದೇ ಆ್ಯಪ್ ಮೂಲಕ ಸ್ಥಳೀಯರ ಜೊತೆ ಸಂವಹಹನ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ವಿದ್ವಂಸಕ ಕೃತ್ಯಕ್ಕೆ ನೆರವು ನೀಡುವ ಕೆಲಸವೂ ಇದೇ ಆ್ಯಪ್ ಮೂಲಕ ನಡೆಯುತ್ತಿದೆ. ಈ ಆ್ಯಪ್ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ಸರ್ಕಾರ, ಸಂಪೂರ್ಣ ಮಾಹಿತಿ ಕಲೆ ಹಾಕಿದೆ. ಇದರ ಪರಿಣಾಮ 14 ಆ್ಯಪ್ ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ.

14 ಆ್ಯಪ್ ಮೂಲಕ ಉಗ್ರರು ಭಾರತ ವಿರೋಧಿ ಚುಟವಟಿಕೆ ನಡೆಸಿರುವುದು ಸಾಬೀತಾಗಿದೆ. ಈ ಆ್ಯಪ್‌ಗಳಲ್ಲಿ ಬಳಕೆದಾರ ತಮ್ಮ ಮಾಹಿತಿ ನೀಡದೆ ಲಾಗಿನ್ ಆಗಲು ಸಾಧ್ಯವಿದೆ. ಕರೆ, ವಿಡಿಯೋ ಕಾಲ್ ಮಾಡಲು ಸಾಧ್ಯವಿದೆ. ಹೀಗಾಗಿ ಈ ಆ್ಯಪ್ ಯಾರು ಬಳಸುತ್ತಿದ್ದಾರೆ ಅನ್ನೋದು ಪತ್ತೆ ಹಚ್ಚುವುದೇ ಸವಾಲಿನ ಕೆಲಸವಾಗಲಿದೆ. ಈ ಆ್ಯಪ್ ಉಪಯೋಗಕ್ಕಿಂತ ಉಗ್ರರು ದುರುಪಯೋಗ ಪಡಿಸಿಕೊಂಡಿದ್ದೇ ಹೆಚ್ಚು. ಕಾಶ್ಮೀರದ ಯುವಕರ ಜೊತೆ ಮಾತನಾಡಿ ಅವರನ್ನು ಪ್ರಚೋದಿಸಿ ಉಗ್ರ ಕೃತ್ಯಕ್ಕೂ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅಡಿಯಲ್ಲಿ ಸೆಕ್ಷನ್ 69ಎ ಅಡಿಯಲ್ಲಿ ಕೇಂದ್ರ ಸರ್ಕಾರ ಆ್ಯಪ್‌ಗೆ ನಿಷೇಧ ಹೇರಿದೆ.

ದೇಶದ ಸಾರ್ವಭೌಮತೆ, ಐಕ್ಯತೆ ಧಕ್ಕೆ ಬರುವ ಹಲವು ಆ್ಯಪ್‌ಗಳನ್ನು ಭಾರತ ಬ್ಯಾನ್ ಮಾಡಿದೆ. ಇದರಲ್ಲಿ ಅತೀ ಹೆಚ್ಚು ಚೀನಾ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. 2020ರಿಂದ ಸರಿಸುಮಾರು 250ಕ್ಕೂ ಚೀನಾ ಆ್ಯಪ್‌ನ್ನು ಭಾರತ ಬ್ಯಾನ್ ಮಾಡಿದೆ. ಇದರಲ್ಲಿ ಟಿಕ್‌ಟಾಕ್, ಶೇರ್‌ಇಟ್, ವಿಚ್ಯಾಟ್, ಹೆಲೋ, ಯುಸಿ ನ್ಯೂಸ್, ಯುಸಿ ಬ್ರೌಸರ್ ಸೇರಿದಂತೆ ಹಲವು ಜನಪ್ರಿಯ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

Google Play store ನಿಂದ 12 ಜನಪ್ರಿಯ Apps Deleteಗೆ ಸೂಚನೆ

ಇತ್ತೀಚೆಗೆ ಭಾರತದಲ್ಲಿ ಚೀನಾ ಆ್ಯಪ್ ಸಾಲದಿಂದ ಹಲವರು ವಂಚನೆಗೊಳಗಾಗಿದ್ದರು. ಇದಕ್ಕೆ ಕಡಿವಾಣ ಹಾಕಲು ಭಾರತ ಚೀನಾದ ಹಲವು ಲೋನ್ ಆ್ಯಪ್ ನಿಷೇಧಿಸಿತ್ತು. ಇದರ ಜೊತೆಗೆ 54 ಬ್ಯೂಟಿ ಆ್ಯಪ್‌ಗಳನ್ನೂ ಭಾರತ ನಿಷೇಧಿಸಿತ್ತು. ಭದ್ರತಾ ಕಾರಣಗಳಿಗಾಗಿ ಭಾರತ ಚೀನಾ ಆ್ಯಪ್‌ಗಳನ್ನು ಬ್ಯಾನ್‌ ಮಾಡಿರುವುಕ್ಕೆ ಚೀನಾ ತೀವ್ರ ಕಳವಳ ವ್ಯಕ್ತಪಡಿಸಿತ್ತು. ‘ಚೀನಾ ಸೇರಿದಂತೆ ಎಲ್ಲಾ ವಿದೇಶಿ ಹೂಡಿಕೆದಾರರನ್ನು ತಾರತಮ್ಯರಹಿತ ರೀತಿಯಲ್ಲಿ ಭಾರತ ಪರಿಗಣಿಸುತ್ತದೆ ಎಂದು ಚೀನಾ ಆಶಿಸುತ್ತದೆ’ ಎಂದು ವಾಣಿಜ್ಯ ಸಚಿವಾಲಯದ ವಕ್ತಾರ ಗಾವೋ ಫೆಂಗ್‌ ಹೇಳಿದ್ದರು. ‘ದ್ವಿಪಕ್ಷೀಯ ಆರ್ಥಿಕ ಮತ್ತು ವ್ಯಾಪಾರ ಸಹಕಾರದ ಉತ್ತಮ ಅಭಿವೃದ್ಧಿಗಾಗಿ ಭಾರತವು ಪಾರದರ್ಶಕ, ನ್ಯಾಯೋಚಿತ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ’ ಎಂದಿದ್ದರು.
 

Follow Us:
Download App:
  • android
  • ios