ಸ್ಮಾರ್ಟ್‌ಪೋನ್ ಲೋಕದ ಹೊಸ ವಿಸ್ಮಯ OPPO A12
- OPPO ಕಂಪನಿಯಿಂದ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
- ಬಜೆಟ್ ಶ್ರೇಣಿಯ ಸ್ಮಾರ್ಟ್‌ಫೋನ್‌ನಲ್ಲಿ ಪ್ರೀಮಿಯಂ ಫೀಚರ್‌ಗಳು
- ಸರಿಸಾಟಿಯಿಲ್ಲದ ಬ್ಯಾಟರಿ ಬ್ಯಾಕಪ್, ಸ್ಟೋರೆಜ್, ಕ್ಯಾಮೆರಾ
ಸ್ಮಾರ್ಟ್‌ಪೋನ್‌ಗಳು ಈಗ ಬರೀ ಒಂದು ಉಪಕರಣವಾಗಿ ಉಳಿದಿಲ್ಲ, ಕಳೆದ ಕೆಲವು ವರ್ಷಗಳಲ್ಲಿ ಅವು ಭಾರೀ ರೂಪಾಂತರ ಹೊಂದಿದೆ. ಅದು ನಮ್ಮ ಖಾಸಗಿ ಮತ್ತು ವೃತ್ತಿ ಜೀವನದ ಪ್ರತಿಯೊಂದು ಕೆಲಸವನ್ನು ನಿರ್ವಹಿಸುವ ಅವಿಭಾಜ್ಯ ಅಂಗವಾಗಿದೆಯೆಂದರೆ ಖಂಡಿತಾ ತಪ್ಪಾಗಲಾರದು. ಸ್ಟೈಲ್ ಸ್ಟೇಟ್‌ಮೆಂಟ್ ದೃಷ್ಟಿಕೋನದಿಂದ ಸ್ಮಾರ್ಟ್‌ಫೋನನ್ನು ನೋಡೋದರ ಜೊತೆಗೆ, ಅದರ ಬ್ಯಾಟರಿ ಬ್ಯಾಕಪ್, ಉತ್ಕೃಷ್ಟ ಫ್ರಂಟ್ & ರೇರ್ ಕ್ಯಾಮೆರಾ, ಕಾರ್ಯಕ್ಷಮತೆ ಮತ್ತು ವಿನ್ಯಾಸ ಕೂಡಾ ಪ್ರಮುಖ ಅಂಶಗಳಾಗಿವೆ.
ವಿಶಾಲವಾದ ಸ್ಟೋರೆಜ್ ಜೊತೆ ಪವರ್‌ಫುಲ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಪವರ್‌ಪ್ಯಾಕ್ಡ್ ಹೊಸ OPPO A12 ಸ್ಮಾರ್ಟ್ ಡಿವೈಸ್ ಮಾರುಕಟ್ಟೆಗೆ ಬಂದಿದೆ. ಎಐ ಆಧಾರಿತ ರೇರ್ ಕ್ಯಾಮೆರಾ, ಸುಧಾರಿತ ಸೆಕ್ಯೂರಿಟಿ ಫೀಚರ್ಸ್ ಮತ್ತು 3D ಡೈಮಂಡ್ ಬ್ಲೇಝ್ ವಿನ್ಯಾಸ ಹೊಂದಿರುವ ಈ ಹೊಸ ಫೋನ್‌ಗೆ, ಮೊಬೈಲ್ ಪ್ರಿಯರು ಫಿದಾ ಆಗೋದು ಖಂಡಿತಾ.
ಫೋಟೋಗಳಿಗೆ ಭಾರೀ ಸ್ಟೋರೆಜ್ ಜೊತೆಗೆ ಹೆಚ್ಚಿನ ಕಾರ್ಯಕ್ಷಮತೆ!
ಮಹತ್ವದ ದಾಖಲೆಗಳ ಡಿಜಿಟಲ್ ಕಾಪಿಯಿಂದ ಹಿಡಿದು ಪ್ರತಿ ಕ್ಷಣದ ಫೋಟೋ/ವಿಡಿಯೋಗಳನ್ನು ಸ್ಟೋರ್ ಮಾಡಲು ಜನರು ಇಂದು ಸ್ಮಾರ್ಟ್‌ಫೋನ್‌ಗಳನ್ನೇ ಬಳಸುತ್ತಾರೆ. ಅದಕ್ಕಾಗಿಯೇ OPPO A12 ಸ್ಮಾರ್ಟ್‌ಫೋನ್- 3GB + 32GB ಮತ್ತು 4GB + 64GB- ಎರಡು ನಮೂನೆಗಳಲ್ಲಿ ಲಭ್ಯ. ಸ್ಟೋರೆಜ್ ಸಾಮರ್ಥ್ಯವನ್ನು 256GB ವರೆಗೆ ವಿಸ್ತರಿಸಲು ಅನುಕೂಲವಾಗುವಂತೆ 3 ಕಾರ್ಡ್‌ಸ್ಲಾಟ್ ಮೀಸಲಾಗಿಡಲಾಗಿದೆ. OPPO A12 ಬಳಸುವವರಿಗೆ ಆ್ಯಪ್, ಫೋಟೋ, ವಿಡಿಯೋ, ಡಾಕ್ಯುಮೆಂಟ್ಸ್ ಅಥವಾ ಗೇಮ್ಸ್‌ಗಳಿಗೆ ಸ್ಟೋರೆಜ್ ಸ್ಪೇಸ್ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ!
OPPO A12 ಸ್ಮಾರ್ಟ್‌ಫೋನಿನ ಇನ್ನೊಂದು ವಿಶೇಷತೆಯೆಂದರೆ ಸುಧಾರಿತ ಗೇಮಿಂಗ್ ಅನುಭವ. ಇದರಲ್ಲಿ ಬಳಸಲಾಗಿರುವ ಅಡ್ವಾನ್ಸ್ಡ್ ಗ್ರಾಫಿಕ್ಸ್ ಮತ್ತು ಕಾರ್ಯಕ್ಷಮತೆಯು ಮಲ್ಟಿಟಾಸ್ಕಿಂಗ್‌ಅನ್ನು ಸುಲಭವಾಗಿಸುತ್ತದೆ. ColorOS 6.1.2 ಆಧಾರಿತ Android 9 ಹೊಂದಿರುವ OPPO A12ನಲ್ಲಿ ವಿಶ್ಯುವಲ್ಸ್ ನೋಡೋದು ಕಣ್ಣಿಗೆ ಹಬ್ಬ. ಸ್ಮಾರ್ಟ್‌ಪೋನ್ ಅಸಿಸ್ಟಂಟ್‌ನೊಂದಿಗೆ ಹೈಪರ್‌ಬೂಸ್ಟ್ ಬಳಸಿ, ಸಿಂಕ್ ಮಾಡುವ ಮೂಲಕ ನಿಮ್ಮ ಡಿಜಿಟಲ್ ಜೀವನವನ್ನು ಸಮರ್ಥವಾಗಿ ನಿಭಾಯಿಸಬಹುದು.
ಬ್ಯಾಟರಿ ಬ್ಯಾಕಪ್
4230 mAh ಬ್ಯಾಟರಿ ಹೊಂದಿರುವ OPPO A12ನಲ್ಲಿ ಸತತ 8 ಗಂಟೆ ವಿಡಿಯೋ ಕಂಟೆಟ್ ನೋಡಬಹುದಾಗಿದೆ. MediaTek P35 Octa-Core Processor ವಿಳಂಬರಹಿತ ಗೇಮಿಂಗ್ ಮತ್ತು ವಿಡಿಯೋ ಪ್ಲೇ ಬ್ಯಾಕ್ ಅನುಭವವನ್ನು ನೀಡುತ್ತದೆ. ಪವರ್ ಮಿತವ್ಯಯವಾಗೋದರಿಂದ ಫೋನ್‌ಅನ್ನು ಪದೇ ಪದೇ ಚಾರ್ಜ್ ಮಾಡೋ ಅವಶ್ಯಕತೆನೂ ಇರಲ್ಲ. ಇಂತಹ ಒಂದು ಸೌಲಭ್ಯವನ್ನು ಎಲ್ಲರೂ ಬಯಸುತ್ತಿದ್ದರರು, ಈಗ ಅದು ಕಾರ್ಯರೂಪಕ್ಕೆ ಬಂದಿದೆ.
ನಿಮ್ಮೊಳಗಿರವ ಫೋಟೋಗ್ರಾಫರ್‌ಗೆ ವೇದಿಕೆ ಕಲ್ಪಿಸಿ!
ಫೋನ್ ಖರೀದಿಸುವಾಗ ಎಲ್ಲರೂ ಮೊದಲು ನೋಡೋದು ಕ್ಯಾಮೆರಾದ ಕ್ವಾಲಿಟಿಯನ್ನು. ರೇರ್ ಮತ್ತು ಫ್ರಂಟ್ ಕ್ಯಾಮೆರಾದ ಕ್ಲಾರಿಟಿ ಮತ್ತು ರಿಸಲ್ಯೂಶನ್ ಹೇಗಿದೆ ಎಂದು ನೋಡುತ್ತಾರೆ. OPPO A12ನಲ್ಲಿರುವ ರೇರ್ ಡ್ಯುಯಲ್ ಕ್ಯಾಮೆರಾದಲ್ಲಿ ಫೋಟೋ ತೆಗೆಯುವ ಅನುಭವವೇ ವಿಶಿಷ್ಟವಾದುದ್ದು. 6X ಡಿಜಿಟಲ್ ಝೂಮ್ ಸಾಮರ್ಥ್ಯವಿರುವ 13 ಮೆಗಾಪಿಕ್ಸೆಲ್‌ನ ರೇರ್ ಮೈನ್ ಕ್ಯಾಮೆರಾ ಬರ್ಸ್ಟ್ ಮೋಡ್ ಹೊಂದಿದೆ. ಈ ಮೋಡ್‌ನಲ್ಲಿ ಲ್ಯಾಂಡ್‌ಸ್ಕೇಪ್ ಮತ್ತು ಇನ್-ಆಕ್ಷನ್ ಫೋಟೋಗಳನ್ನು ನಿಖರವಾಗಿ ಕ್ಲಿಕ್ಕಿಸಬಹುದಾಗಿದೆ. ಮತ್ತೊಂದು 2 ಮೆಗಾಪಿಕ್ಸೆಲ್ ಕ್ಯಾಮೆರಾ ಪೋರ್ಟ್ರೇಟ್ ಫೋಟೋಗಳನ್ನು ತೆಗೆಯಲು ವಿನ್ಯಾಸಗೊಳಿಸಲಾಗಿದೆ.
ಡ್ಯಾಝಲ್ ಕಲರ್ ಮೋಡ್ ಈ ಫೋನಿನ ಇನ್ನೊಂದು ವೈಶಿಷ್ಯತೆ. ಅವಿಸ್ಮರಣೀಯ ಕ್ಷಣಗಳನ್ನು ಮಂದ ಬೆಳಕಿನ ಕಾರಣದಿಂದ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಪರದಾಡುವ ಪರಿಸ್ಥಿತಿಯನ್ನೊಮ್ಮೆ ಯೋಚಿಸಿ. ಹೊಸ OPPO A12 ಫೋನಿನಲ್ಲಿ ಆ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆನೇ ಇಲ್ಲ! ಪಿಕ್ಸೆಲ್-ಗ್ರೇಡ್ ಕಲರ್ ಮ್ಯಾಪಿಂಗ್ ಅಲ್ಗಾರಿತಂ ಮೂಲಕ ಅಭಿವೃದ್ಧಿಪಡಿಸಲಾದ ಡ್ಯಾಝಲ್ ಕಲರ್ ಮೋಡ್ ಉತ್ಕ್ರಷ್ಟ ಮತ್ತು ಸಹಜವಾದ ಫೋಟೋಗಳನ್ನು ತೆಗೆಯಲು ಸಹಕಾರಿಯಾಗಿದೆ. ಮಂದಬೆಳಕಿನಲ್ಲೂ ನೀವು ಉತ್ತಮವಾದ ಕ್ಲಾರಿಟಿ ಇರುವ ಫೋಟೋಗಳನ್ನು ತೆಗೆಯಬಹುದಾಗಿದೆ.
ಎಐ ಆಲ್ಗಾರಿತಂ ಆಧಾರಿತ ಕ್ಯಾಮೆರಾ ಹೊಂದಿರುವ OPPO A12ನಲ್ಲಿ ಪರ್ಫೆಕ್ಟ್ ನ್ಯಾಚುರಲ್ ಶಾಟ್‌ಗಳನ್ನು ಕ್ಲಿಕ್ಕಿಸಬಹುದಾಗಿದೆ. ಅದು ತ್ವಚೆ, ವಯಸ್ಸು, ಲಿಂಗ, ಮೈಬಣ್ಣವನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ಬೇಕಾದ ಮಾರ್ಪಾಟುಗಳನ್ನು ಮಾಡುತ್ತದೆ. ಈ ಫೋನ್ ಮೂಲಕ ನಿಮ್ಮೊಳಗೆ ಅಡಗಿರುವ ಫೋಟೋಗ್ರಾಫರ್ ಅನಾವರಣಗೊಳ್ಳುವುದು ಖಚಿತ.
ಎಐ ಆಧಾರಿತ ಸುಧಾರಿತ ಸೆಕ್ಯೂರಿಟಿ
ಡೇಟಾ ಸೆಕ್ಯೂರಿಟಿಗಾಗಿ OPPO A12ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಶಿಯಲ್ ಅನ್‌ಲಾಕ್ ಸೌಲಭ್ಯವೂ ಇದೆ. ಫೋನ್ ಅನ್ಲಾಕ್ ಮಾಡಲು ಸುಲಭವಾಗಲು ಫಿಂಗರ್‌ಪ್ರಿಂಟ್ ಸೆನ್ಸರ್‌ಅನ್ನು ಹಿಂಬದಿ ಪ್ಯಾನೆಲ್‌ನಲ್ಲಿ ನೀಡಲಾಗಿದೆ. ಫೇಶಿಯಲ್ ಅನ್ಲಾಕ್ ಫೀಚರ್ ಮೂಲಕ OPPO A12 ನಿಮ್ಮ ಡೇಟಾ ಸೆಕ್ಯೂರಿಟಿಗೆ ಇನ್ನೂ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಈ ದರ-ಶ್ರೇಣಿಯ ಫೋನಿನಲ್ಲಿ ಇಂತಹ ಸೌಲಭ್ಯ ಒಂದು ಸೌಭಾಗ್ಯವೇ ಸರಿ.
ವಿನ್ಯಾಸ ನೋಡಿದ್ರೆ ನೋಡ್ತಾ ಇರ್ಬೆಕು!
ಮೊಬೈಲ್ ಬಳಕೆದರರನ್ನು ಗಮನದಲ್ಲಿಟ್ಟುಕೊಂಡೇ OPPO A12 ಅನ್ನು ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯವಾಗಿ, ಕಣ್ಣಿನ ಮೇಲಿನ ಒತ್ತಡ ಮತ್ತು ಒಂದು ಕೈಯಲ್ಲಿ ಬಳಸಲು ಆಗದಿರುವ ಸಮಸ್ಯೆಯನ್ನು ಬಳಕೆದಾರರು ಎದುರಿಸುತ್ತಾರೆ. ಅವುಗಳನ್ನು ಗಮನದಲ್ಲಿಟ್ಟುಕೊಂಡು, OPPO A12 ಫೋನ್ 6.22 ಇಂಚಿನ ವಾಟರ್‌ಡ್ರಾಪ್ ಐ ಪ್ರೊಟೆಕ್ಷನ್ ಸ್ಕ್ರೀನ್ ಹೊಂದಿದೆ. ಹಾಗಾಗಿ ಬಳಕೆದಾರರ ಕಣ್ಣಿನ ಮೇಲೆ ಒತ್ತಡವನ್ನು ಕಡಿಮೆಮಾಡುವ ಮೂಲಕ ಕಣ್ಣಿಗೆ ಸುರಕ್ಷತೆಯನ್ನು ಒದಗಿಸುತ್ತದೆ. ತೆಳುವಾಗಿರುವ 8.3 mm ಫೋನ್ ಒಂದೇ ಕೈಯಲ್ಲಿ ಹಿಡಿಯಲು, ಬಳಸಲು ಅನುಕೂಲವಾಗಿದೆ.
ನೋಡುವ ಆ್ಯಂಗಲ್ ಬದಲಾದಂತೆ 3D ಡೈಮಂಡ್ ಬ್ಲೇಝ್ ಬ್ಯಾಕ್ ಪ್ಯಾನೆಲ್ ಕೂಡಾ ತನ್ನ ಬಣ್ಣವನ್ನು ಬದಲಾಯಿಸುವ ಮೂಲಕ ನೋಡುಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ನೀಲಿ ಮತ್ತು ಕಪ್ಪು ಬಣ್ಣದಲ್ಲಿ ಈ ಫೋನ್ ಲಭ್ಯವಿದೆ.
ಬೆಲೆ, ಲಭ್ಯತೆ ಮತ್ತು ಆಫರ್:
ಈ ಫೋನ್‌ಅನ್ನು ಪರಿಚಯಿಸುವ ಮೂಲಕ ಬಳಕೆದಾರರ ದಿನನಿತ್ಯದ ಅವಶ್ಯಕತೆಗಳಿಗೆ ತಕ್ಕಂತೆ Oppo ಕಂಪನಿ ಸ್ಪಂದಿಸಿದೆ. OPPO A12 ಫೋನ್ ಆಫ್‌ಲೈನ್ ಸ್ಟೋರ್ ಮಾತ್ರವಲ್ಲದೇ ಇ-ಕಾಮರ್ಸ್ ಸೈಟ್‌ಗಳಲ್ಲೂ ಖರೀದಿಗೆ ಲಭ್ಯವಿದೆ. OPPO A12 3GB+32GB ವೇರಿಯಂಟ್ ಬೆಲೆ Rs 9,990 ಆಗಿದ್ದರೆ, 4GB+64GB ವೇರಿಯಂಟ್ ಬೆಲೆ Rs 11,490 ಆಗಿದೆ.
21 June 2020ಕ್ಕಿಂತ ಮುಂಚೆ ಈ ಪೋನ್ ಖರೀದಿಸುವವರಿಗೆ ಅತ್ಯಾಕರ್ಷಕ ಆಫರ್‌ಗಳ ಜತೆಗೆ 6 ತಿಂಗಳ ಎಕ್ಸ್‌ಟೆಂಡೆಡ್ ವ್ಯಾರಂಟಿ ಕೂಡಾ ಸಿಗಲಿದೆ. ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಸುವವರಿಗೆ, 6 ತಿಂಗಳ ಎಕ್ಸ್‌ಟೆಂಡೆಡ್ ವ್ಯಾರಂಟಿ ಜೊತೆ 5% ಕ್ಯಾಶ್‌ಬ್ಯಾಕ್ (ಬ್ಯಾಂಕ್ ಆಫ್ ಬರೋಡಾ ಕಾರ್ಡ್ ಬಳಕೆದಾರರಿಗೆ) ಸಿಗಲಿದೆ. ಫೆಡರಲ್ ಕಾರ್ಡ್ EMI ಮೂಲಕ ಖರೀದಿಸುವವರಿಗೂ 5% ಕ್ಯಾಶ್‌ಬ್ಯಾಕ್ ಆಫರ್ ಇದೆ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನಲ್ಲಿ 6 ತಿಂಗಳ ಅವಧಿಗೆ ನೋ ಕಾಸ್ಟ್ EMI ಮೂಲಕವೂ ಫೋನ್ ಖರೀದಿಸಬಹುದಾಗಿದೆ. ಬಜಾಜ್ ಫೈನಾನ್ಸ್, IDFC ಫರ್ಸ್ಟ್ ಬ್ಯಾಂಕ್, ಹೋಂ ಕ್ರೆಡಿಟ್, HDB ಫೈನಾನ್ಶಿಯಲ್ ಸರ್ವಿಸಸ್ ಮತ್ತು ICICI ಬ್ಯಾಂಕ್‌ಗಳು ಕೂಡಾ EMI ಸೌಲಭ್ಯ ನೀಡಿವೆ.
OPPO A12 ಸ್ಮಾರ್ಟ್‌ಫೋನ್ ಜೊತೆ ಅಪ್ಗ್ರೇಡ್ ಆಗಲು ಹಿಂದೆಂದಿಗಿಂತಲೂ ಇದು ಪ್ರಶಸ್ತ ಸಮಯ!