ಮಾರಾಟವಾಗುತ್ತಾ ಗೂಗಲ್ ಕ್ರೋಮ್? ಸರ್ಚ್ ಎಂಜಿನ್ ಎಕಸ್ವಾಮ್ಯ ಮುರಿಯಲು DOJ ಶಿಫಾರಸು!
ವಿಶ್ವದ ಟೆಕ್ ದಿಗ್ಗಜ ಗೂಗಲ್‌ಗೆ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಅತೀ ದೊಡ್ಡ ಸರ್ಚ್ ಎಂಜಿನ್ ಪ್ಲಾಟ್‌ಫಾರ್ಮ್ ಗೂಗಲ್ ಕ್ರೋಮ್ ಮಾರಾಟ ಮಾಡುವಂತೆ ಅಮೆರಿಕ DOJ ಒತ್ತಾಯಿಸಿದೆ. ಏನಿದು ಹೊಸ ಸಂಘರ್ಷ? DOJ ಒತ್ತಾಯ ಮಾಡಿದ್ದೇಕೆ?
ವಾಶಿಂಗ್ಟನ್(ನ.19) ಗೂಗಲ್ ಕ್ರೋಮ್ ಬಳಸದವರು ಯಾರಿದ್ದಾರೆ? ಭಾರತ ಸೇರಿದಂತೆ ಎಲ್ಲಾ ದೇಶಗಳಲ್ಲು ಗೂಗಲ್ ಕ್ರೋಮ್ ಸರ್ಚ್ ಎಂಜಿನ್ ಬಳಕೆಯಾಗುತ್ತಿದೆ. ಗೂಗಲ್ ಕ್ರೋಮ್ ಎಲ್ಲಾ ವಿಷಗಳ ಆಗರ. ಗೂಗಲ್ ತನ್ನ ವಹಿವಾಟುಗಳನ್ನು ವಿಸ್ತರಿಸುತ್ತಲೇ ಇದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಗೂಗಲ್ ಹೊಸ ಹೊಸ ಕ್ಷೇತ್ರಗಳಿಗೆ ಎಂಟ್ರಿಕೊಡುತ್ತಿದೆ. ಇದೀಗ ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್‌ಗೆ ತೀವ್ರ ಸಂಕಷ್ಟ ಎದುರಾಗಿದೆ. ಅಮೆರಿಕದ ಡಿಪಾರ್ಟ್‌ಮೆಂಟ್ ಆಪ್ ಜಸ್ಟೀಸ್( DOJ) ಆ್ಯಂಟಿಟ್ರಸ್ಟ್ ಅಧಿಕಾರಿಗಳು ಇದೀಗ ಕೋರ್ಟ್ ಮುಂದೆ ಮಹತ್ವದ ಒತ್ತಾಯ ಮಾಡಿದ್ದಾರೆ. ಗೂಗಲ್ ತನ್ನ ಕ್ರೋಮ್ ಬ್ರೌಸರ್ ಮಾರಾಟ ಮಾಡುವಂತೆ ನಿರ್ದೇಶಿಸಲು ಒತ್ತಾಯಿಸಿದೆ.
ಗೂಗಲ್ ಗ್ರೂಮ್ ಆಗಸ್ಟ್ ತಿಂಗಳಲ್ಲಿ ಕಾನೂನು ಬಾಹಿರವಾಗಿ ಸರ್ಚ್ ಎಂಜಿನ್ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಿದೆ. ಇತರ ಪ್ರತಿಸ್ಪರ್ಧಿಗಳಿರಬಹುದು, ಅಥವಾ ಇತರರನ್ನು ಸರ್ಚ್ ಎಂಜಿನ್ ಪ್ಲಾಟ್‌ಫಾರ್ಮ್‌ನಲ್ಲಿರದಂತೆ ಗೂಗಲ್ ಮಾಡಿದೆ. ಸರ್ಚ್ ಎಂಜಿನ್ ವೇದಿಕೆಯಲ್ಲಿ ಗೂಗಲ್ ಏಕಸ್ವಾಮ್ಯ ಸಾಧಿಸಿರುವುದು ನೇರ ಮಾರ್ಗದಲ್ಲಿ ಅಲ್ಲ ಅನ್ನೋದು ಆ್ಯಂಟಿ ಟ್ರಸ್ಟ್ ನಿಯಂತ್ರಕ ಅಧಿಕಾರಿಗಳು ಕೋರ್ಟ್‌ನಲ್ಲಿ ಕೆಲ ದಾಖಲೆಗಳೊಂದಿಗೆ ಮುಂದಿಟ್ಟಿದ್ದಾರೆ.
ನ.1ರಿಂದ UPI ಪಾವತಿಯಲ್ಲಿ 2 ಬದಲಾವಣೆ; ಗೂಗಲ್ ಪೇ, ಫೋನ್‌ಪೇ,ಪೇಟಿಎಂ ಬಳಕೆದಾರರೇ ಗಮನಿಸಿ!
ಸರ್ಚ್ ಎಂಜಿನ್ ಪ್ಲಾಟ್‌ಫಾರ್ಮ್‌ನಲ್ಲಿ ಏಕಸ್ವಾಮ್ಯ ಮುರಿಯಲು ಆಲ್ಭಾಬೆಟ್ ಸಂಸ್ಥೆಯ ಗೂಗಲ್ ಕ್ರೋಮ್ ಬ್ರೌಸರ್ ಮಾರಾಟ ಮಾಡುವಂತೆ ನ್ಯಾಯಾಧೀಶರು ಆದೇಶಿಸಬೇಕು ಎಂದು DOJ ಆಗ್ರಹಿಸಿದೆ. ಇದೇ ವೇಳೆ ಗೂಗಲ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಹಾಗೂ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮೇಲೆ ನಿರ್ಬಂಧ ವಿಧಿಸುವಂತೆಯೂ ಆಗ್ರಹಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಬ್ಲೂಮ್‌ಬರ್ಗ್ ವರದಿ ಕುರಿತು ಪ್ರತಿಕ್ರಿಯಿಸಲು ಅಮೆರಿಕ ಡಿಪಾರ್ಟ್‌ಮೆಂಟ್ ಆಫ್ ಜಸ್ಟೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.
ಮಾರುಕಟ್ಟಯಲ್ಲಿ ಏಕಸ್ವಾಮ್ಯ ಉತ್ತಮವಲ್ಲ. ಇದು ದೇಶಕ್ಕೆ ಅಪಾಯ ತಂದೊಡ್ಡಲಿದೆ. ಗೂಗಲ್ ತನ್ನ ವ್ಯವಹಾರಗಳಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳಬೇಕಿದೆ. ರಚನಾತ್ಮಕ ಬದಲಾಣೆಗಳನ್ನು ಪರಿಗಣಿಸಲಾಗುತ್ತದೆ. ಇದೀಗ ಕೋರ್ಟ್ ಮುಂದೆ ಡಿಒಜೆ ಕೆಲ ಪ್ರಮುಖ ವಿಚಾರಗಳನ್ನು ಮುಂದಿಟ್ಟಿದೆ. ಇಷ್ಟೇ ಅಲ್ಲ ಕೋರ್ಟ್ ಈ ಶಿಫಾರಸುಗಳನ್ನು ಪರಿಗಣಿಸಿ ಗೂಗಲ್ ಮಾತ್ರ ಸಂಸ್ತೆ ಆಲ್ಫಾಬೆಟ್‌ಗೆ ನಿರ್ದೇಶ ನೀಡುವಂತೆ ಕೋರಿದೆ.
ಗೂಗಲ್ ವಹಿವಾಟುಗಳ ಮೇಲೆ ನಿರ್ಬಂಧ ಅತ್ಯಗತ್ಯ, ಜಾಹೀರಾತು ಡೇಟಾ ಹಂಚಿಕೊಳ್ಳುವಿಕೆ, ಗೂಗಲ್ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಎದುರಾಗುವ ನಿರ್ಬಂಧ ತೆರವು, ಗೂಗಲ್ ಕ್ರೋಮ್ ಬ್ರೌಸರ್ ಪ್ರತಿಸ್ಪರ್ಧಿಗಳಿಗೆ ಸರ್ಚ್ ಎಂಜಿನ್ ಡೇಟಾ ಅನುಮತಿ ನೀಡುವುದು, ಗೂಗಲ್ ಆರ್ಟಿಫೀಶಿಯಲ್ ಇಂಟಿಲಿಜೆನ್ಸ್ ಮೂಲಕ ಏಕಸ್ವಾಮ್ಯ ಸಾಧಿಸುವ ಮಾರ್ಗಕ್ಕೆ ಬ್ರೇಕ್ ಹಾಕಬೇಕು ಎಂದು ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಜಸ್ಟೀಸ್ ಅಧಿಕಾರಿಗಳು ಕೋರ್ಟ್ ಮುಂದೆ ಶಿಫಾರಸು ಮಾಡಿದ್ದಾರೆ. ಮುಂದಿನ ವಿಚಾರಣೆ ಏಪ್ರಿಲ್ 2025ರಲ್ಲಿ ನಡೆಯಲಿದೆ. ಅದೇ ದಿನ ತೀರ್ಪು ಹೊರಬೀಳುವ ಸಾಧ್ಯತೆ ಇದೆ.