Asianet Suvarna News Asianet Suvarna News

ನ್ಯೂಕ್ಲಿಯಾ ಹಾಗೂ ಒನ್‌ಪ್ಲಸ್‌ನಿಂದ ತೇರೆ ಬಿನಾ ಒನ್‌ಪ್ಲಸ್ BWZ ಬಾಸ್ ಹಾಡು ಬಿಡುಗಡೆ!

Tere Bina - OnePlus BWZ - Bass Edition ಸಾಂಗ್ ಬಿಡುಗಡೆ ಮಾಡಲಾಗಿದೆ.  ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ (EDM) ಕಲಾವಿದರಾದ ನ್ಯೂಕ್ಲಿಯಾ ಸಿದ್ದಪಡಿಸಿದ ನೂತನ ಆವೃತ್ತಿಗೆ ಒನ್‌ಪ್ಲಸ್ ಸಾಥ್ ನೀಡಿದೆ.

Nucleya and Oneplus launched Tere Bina OnePlus BWZ Bass Edition song ckm
Author
Bengaluru, First Published Dec 23, 2020, 9:56 PM IST

ಬೆಂಗಳೂರು(ಡಿ.23): ಮುಂಚೂಣಿಯಲ್ಲಿರುವ ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ ಆಗಿರುವ ಒನ್ ಪ್ಲಸ್, ಒನ್ ಪ್ಲಸ್ ಬುಲೆಟ್ಸ್ ವೈರ್ ಲೆಸ್ Z-ಬಾಸ್ ಎಡಿಶನ್ ಹಾಡನ್ನು ಬಿಡುಗಡೆ ಮಾಡಿದೆ. ಇದನ್ನು ಭಾರತದ ಅತ್ಯಂತ ಜನಪ್ರಿಯ ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ (EDM) ಕಲಾವಿದರಾದ ನ್ಯೂಕ್ಲಿಯಾ ಅವರು ಸಿದ್ದಪಡಿಸಿದ್ದು, ಸಮುದಾಯವು ಅಧಿಕ ಬಾಸ್ ವೈಶಿಷ್ಟ್ಯತೆಗಳನ್ನು ಡಿವೈಸ್ ನಲ್ಲಿ ಗರಿಷ್ಠ ಸ್ಪಷ್ಟತೆಯಿಂದ ಕೇಳುವ ಅನುಭವವನ್ನು ನೀಡಲಿದೆ.

ಉಸಿರಾಡುವಾಗ ಬದಲಾಗಲಿದೆ ಫೋನ್ ಕಲರ್; ಬರುತ್ತಿದೆ ಒನ್‌ಪ್ಲಸ್ 8T ಸ್ಮಾರ್ಟ್‌ಫೋನ್!

ಉದ್ಯಮದ ಪ್ರಮುಖ ಬಾಸ್ ಪ್ರತಿಕ್ರಿಯೆಯನ್ನು ಒದಗಿಸಲು ಮರು ವಿನ್ಯಾಸಗೊಳಿಸಲಾಗಿರುವ ಒನ್ ಪ್ಲಸ್ ಬಿಡಬ್ಲ್ಯುಝಡ್ ಬಾಸ್ ಆವೃತ್ತಿಯು 9.2ಎಂಎಂ ಡೈನಾಮಿಕ್ ಡ್ರೈವರ್ ಗಳನ್ನು ಒಳಗೊಂಡಿದೆ. ಇದು ಉತ್ಕೃಷ್ಠವಾದ ಗಾಯನ ಮತ್ತು ಹೆಚ್ಚು ಆಳವಾದ ಸ್ಪಷ್ಟ ಬಾಸ್ ಪ್ರತಿಕ್ರಿಯೆಯನ್ನು ನೀಡುತ್ತದೆ. ಬಾಸ್ ‘Tere Bina - OnePlus BWZ - Bass Edition’ ಪಲ್ಸ್ ಆಗಿರುವುದರಿಂದ ಇದರ ಸಹಯೋಗವು ಬಿಡಬ್ಲ್ಯುಝಡ್ ಆವೃತ್ತಿಯಲ್ಲಿ ಉತ್ಕೃಷ್ಠ ಮತ್ತು ಹೆಚ್ಚು ವಿವರವಾದ ಧ್ವನಿಪಥವನ್ನು ನಿಜವಾಗಿಯೂ ಪರೀಕ್ಷಿಸುತ್ತದೆ. ಇದರ ಮೂಲಕ ಹೊಸ ಮತ್ತು ಸುಧಾರಿತವಾಅದ ಬಾಸ್ ಪ್ರತಿಕ್ರಿಯೆಯನ್ನು ಎತ್ತಿ ತೋರಿಸುತ್ತದೆ. 

ಇದರ ಮತ್ತೊಂದು ವಿಶೇಷತೆಯೆಂದರೆ ಶಬ್ಧವನ್ನು ಕಡಿಮೆ ಮಾಡುವ ಅಂಶವನ್ನು ಒಳಗೊಂಡಿದೆ. ಈ ಬಿಡಬ್ಲ್ಯುಝಡ್ ಬಾಸ್ ಆವೃತ್ತಿಯು ಅಸಾಧಾರಣವಾದ ರೀತಿಯಲ್ಲಿ ಧ್ವನಿಯನ್ನು ಸ್ವೀಕರಿಸುತ್ತದೆ ಮತ್ತು ಕರೆಗಳನ್ನು ಸ್ಪಷ್ಟವಾಗಿ ಕ್ಯುರೇಟ್ ಮಾಡುತ್ತದೆ. ಇದರಿಂದಾಗಿ ಬಳಕೆದಾರರು ಗದ್ದಲದ ಸಂದರ್ಭದಲ್ಲಿಯೂ ಕರೆಗಳನ್ನು ಸ್ವೀಕರಿಸಿ ಸ್ಪಷ್ಟ ಧ್ವನಿಯನ್ನು ಆಲಿಸಬಹುದಾಗಿದೆ. ಅಂತಿಮವಾಗಿ, ಒನ್ ಪ್ಲಸ್ ನ ಸಿಗ್ನೇಚರ್ ಹೊರೆಯಿಲ್ಲದ ಅನುಭವವದೊಂದಿಗೆ ಉತ್ಪನ್ನವನ್ನು ಪೂರ್ಣಗೊಳಿಸಲು, ಸಾಧನವು ವಾರ್ಪ್ ಚಾರ್ಜ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದರ ಮೂಲಕ ಬಳಕೆದಾರರು ಬ್ಯಾಟರಿಯನ್ನು ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 10 ಗಂಟೆಗಳ ಸುದೀರ್ಘ ಅವಧಿವರೆಗೆ ಆಲಿಸಬಹುದಾಗಿದೆ. ಇದರ ವೈಶಿಷ್ಟ್ಯತೆಗಳು ಇಲ್ಲಿಗೇ ನಿಲ್ಲುವುದಿಲ್ಲ. ಬಿಡಬ್ಲ್ಯುಝಡ್ ಬಾಸ್ ಆವೃತ್ತಿಯು ಐಪಿ 55 ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಇದು ಈ ವಿಭಾಗದಲ್ಲಿ ಹೆಚ್ಚು ಬಾಳಿಕೆ ಬರುವ ವೈರ್ ಲೆಸ್ ಇಯರ್ ಫೋನ್ ಗಳಲ್ಲಿ ಒಂದಾಗಿದೆ.

ಗೇಮಿಂಗ್ ಉತ್ಸಾಹಿಗಳಿಗೆ, ಒನ್ ಪ್ಲಸ್ ಫೆನಾಟಿಕ್ ಮೋಡ್ ಗಾಗಿ ಅಲ್ಟ್ರಾ-ಲೋ ಲ್ಯಾಟೆನ್ಸಿಯನ್ನು ಸಕ್ರಿಯಗೊಳಿಸಿದ್ದು, ಬಳಕೆದಾರರು ತಮ್ಮ ನೆಚ್ಚಿನ ಗೇಮ್ ಗಳನ್ನು ಆಡುವಾಗ ವಾಸ್ತವಿಕವಾಗಿ ಅತ್ಯುತ್ತಮವಾದ ಗೇಮಿಂಗ್ ಅನುಭವವನ್ನು ನೀಡುತ್ತದೆ.

 ನ್ಯೂಕ್ಲಿಯಾದೊಂದಿಗೆ ಮಾಡಿಕೊಂಡಿರುವ ಹೊಸ ಸಹಭಾಗಿತ್ವದ ಬಗ್ಗೆ ಮಾತನಾಡಿದ ಒನ್ ಪ್ಲಸ್ ಇಂಡಿಯಾದ ಮಾರುಕಟ್ಟೆ ಮುಖ್ಯಸ್ಥ ಸಿದ್ಧಾಂತ್ ನಾರಾಯಣ್ ಅವರು, ``ಒನ್ ಪ್ಲಸ್ ಬ್ರ್ಯಾಂಡ್ ತನ್ನ ಸಮುದಾಯಕ್ಕೆ ಯಾವಾಗಲೂ ಅತ್ಯುತ್ತಮವಾದ ಆಫರ್ ಗಳನ್ನು ನೀಡುವುದನ್ನು ಎದುರು ನೋಡುತ್ತಿದೆ. ಈ ಪ್ರಯತ್ನವು ಗ್ರಾಹಕರಿಗೆ ನಿರಂತರವಾದ ಸೇವೆಗಳನ್ನು ನೀಡುತ್ತಿರುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಅತ್ಯುತ್ಕೃಷ್ಠವಾದ ಬಾಸ್, ಸ್ಪಷ್ಟ ಗಾಯನ ಮತ್ತು ಅತ್ಯುತ್ತಮವಾಗಿ ಆಲಿಸುವ ಅನುಭವವನ್ನು ನೀಡುವಲ್ಲಿ ಈ ಹಾಡು ಜನಪ್ರಿಯತೆಯನ್ನು ಗಳಿಸಿದೆ ಮತ್ತು ಹೆಚ್ಚು ಜನರು ಇದನ್ನು ಪ್ರೀತಿಸುತ್ತಿದ್ದಾರೆ ಎಂಬುದನ್ನು ನಾವು ಪ್ರಾಮಾಣಿಕವಾಗಿ ಭಾವಿಸುತ್ತೇವೆ’’ ಎಂದು ತಿಳಿಸಿದರು.

ಭಾರತದ ಖ್ಯಾತ ಇಡಿಎಂ ಕಲಾವಿದರಾದ ನ್ಯೂಕ್ಲಿಯಾ ಅವರು ಮಾತನಾಡಿ, ``ನಾನು ಯಾವಾಗಲೂ ಅರ್ಥಪೂರ್ಣವಾದ ಸಹಭಾಗಿತ್ವವನ್ನು ನಂಬುತ್ತೇನೆ ಮತ್ತು ಒನ್ ಪ್ಲಸ್ ನೊಂದಿಗಿನ ಈ ಸಹಭಾಗಿತ್ವವು ಒಂದು ಅದ್ಭುತ ಪ್ರಯಾಣವಾಗಿದೆ. ಒನ್ ಪ್ಲಸ್ ವೈರ್ ಲೆಸ್ ಝಡ್ ಬಾಸ್ ಎಡಿಶನ್ ಗೆ ನಾನು ಒಂದು ಹಾಡನ್ನು ಸೃಷ್ಟಿಸಿದ್ದೇನೆ. ತೇರೆ ಬಿನಾ-ಒನ್ ಪ್ಲಸ್ ಬಿಡಬ್ಲ್ಯುಝಡ್ ಆವೃತ್ತಿ ಇದಾಗಿದೆ. ಈ ಹಾಡು ಒಂದು ಪಂಜಾಬಿ ಸಂಸ್ಕೃತಿಯಲ್ಲಿ ಒಂದು ಹೆಸರಾಂತ ದುಃಖದ ಪ್ರಣಯಗಳಲ್ಲಿ ಒಂದಾಗಿರುವ ಪುರಾತನ ಕಥೆಯಾದ ಹೀರ್ ಮತ್ತು ರಂಝಾದ ಕಥೆಯನ್ನು ಹೇಳುತ್ತದೆ. ಇದು ಮತ್ತೊಂದು ಶತಮಾನದ ಕಥೆಯಾಗಿದ್ದರೂ, ಕಾವ್ಯಾತ್ಮಕ ನಿರೂಪಣೆಯೊಂದಿಗೆ ಇದನ್ನು ಹಾಡುತ್ತಾ ಜನರು ನೃತ್ಯ ಮಾಡುವಂತ ಮಾಡುವುದನ್ನು ಬಾಸ್ ನ ಅವಕಾಶ ಕಲ್ಪಿಸುತ್ತದೆ’’ ಎಂದು ತಿಳಿಸಿದರು.
 
``ಒನ್ ಪ್ಲಸ್ ವೈರ್ ಲೆಸ್ ಝಡ್ ಬಾಸ್ ಎಡಿಶನ್ ನಲ್ಲಿ ಈ ಹಾಡನ್ನು ಕೇಳುವಾಗ ಸಂಗೀತ ಪ್ರಿಯರು ಉನ್ನತೀಕರಿಸಿದ ಬಾಸ್ ಅನುಭವವನ್ನು ಪಡೆದುಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಒನ್ ಪ್ಲಸ್ ನೊಂದಿಗೆ ಸೇರಿ ಇಂತಹ ಟ್ರ್ಯಾಕ್ ಅನ್ನು ತಯಾರಿಸಿರುವುದು ಅದ್ಭುತವಾದ ಅನುಭವವಾಗಿದೆ’’ ಎಂದು ಅವರು ಹೇಳಿದರು. 
 
ಒನ್ ಪ್ಲಸ್ ವೈರ್ ಲೆಸ್ ಝಡ್ ಬಾಸ್ ಎಡಿಶನ್ ಪ್ರಸ್ತುತ OnePlus.in, ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ 1,999 ರೂಪಾಯಿಗಳಾಗಿದೆ.

Follow Us:
Download App:
  • android
  • ios