ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಹೊಸ ತಂತ್ರಜ್ಞಾನ, ಪೊಲೀಸರ ಜೊತೆ ಕೈಜೋಡಿಸಿದ NMIT
ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೆಟ್ರೋ ಮಾರ್ಗಗಳು ವಿಸ್ತರಣೆಯಾದರೂ ಸಂಚಾರ ದಟ್ಟಣೆ ಕಡಿಮೆಯಾಗಿಲ್ಲ. ಇದೀಗ ಬೆಂಗಳೂರು ಪೊಲೀಸರು ಹೊಸ ತಂತ್ರಜ್ಞಾನದ ಮೂಲಕ ಸಮಸ್ಯೆಗೆ ಮುಕ್ತಿ ನೀಡಲು ಮುಂದಾಗಿದ್ದಾರೆ. ಬೆಂಗಳೂರು ಪೊಲೀಸರ ಜೊತೆ NMIT ಕೈಜೋಡಿಸಿದೆ.
ಬೆಂಗಳೂರು(ಡಿ.17) ದೇಶದ ಪ್ರಮುಖ ನಗರಗಳಲ್ಲಿ ಟ್ರಾಫಿಕ್ ಸಮಸ್ಸೆ ಸಾಮಾನ್ಯವಾಗಿದೆ. ಆದರೆ ಬೆಂಗಳೂರಿನಲ್ಲಿ ತುಸು ಹೆಚ್ಚೇ ಇದೆ. ಬಹುತೇಕ ರಸ್ತೆಗಳು ಸಂಚಾರ ದಟ್ಟಣೆಯಿಂದ ಬೆಂಗಳೂರಿಗರು ಪರದಾಡುತ್ತಿದ್ದಾರೆ. ಮೆಟ್ರೋ ಮಾರ್ಗಗಳ ವಿಸ್ತರಣೆ ಸೇರಿದಂತೆ ಹಲವು ಪರಿಹಾರಗಳನ್ನು ಕೈಗೊಳ್ಳಲಾಗಿದ್ದರೂ, ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದೀಗ ಬೆಂಗಳೂರು ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಪೊಲೀಸರ ಜೊತೆ NMIT ಕೈಜೋಡಿಸಿದೆ.
ಗರದ ಟ್ರಾಫಿಕ್ ಸಮಸ್ಯೆ ನಿವಾರಿಸಲು ತಾಂತ್ರಿಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(NMIT ) ಹಾಗೂ ಬೆಂಗಳೂರು ಟ್ರಾಫಿಕ್ ಪೊಲೀಸರು ಮಹತ್ತರ ಒಂಪ್ಪದಕ್ಕೆ ಸಹಿ ಹಾಕಿದ್ದಾರೆ. ಇದೇ ವೇಳೆ ಮಾತನಾಡಿದ ಬೆಂಗಳೂರು ಟ್ರಾಫಿಕ್ ಪೊಲೀಸ್ ಜಂಟಿ ಆಯುಕ್ತ ಎಂ ಎನ್ ಅನುಚೇತ್, ಬೆಂಗಳೂರಿನ ಟ್ರಾಫಿಕ್ ಕೇವಲ ಸಾರಿಗೆ ಸಮಸ್ಯೆಯಲ್ಲ, ಇದು ಆರ್ಥಿಕ ಮತ್ತು ಪರಿಸರ ಸಮಸ್ಯೆಯಾಗಿದೆ.ಹೀಗಾಗಿ ಸೂಕ್ತ ಪರಿಹಾರ ಅಗತ್ಯ ಎಂದಿದ್ದಾರೆ.
ಸೂಕ್ಷ್ಮ ಮಾಹಿತಿ ಹ್ಯಾಕ್, ಐಫೋನ್ ಬಳಕೆದಾರರಿಗೆ ಕೇಂದ್ರ ಸರ್ಕಾರದ ಹೈರಿಸ್ಕ್ ವಾರ್ನಿಂಗ್!
ತಂತ್ರಜ್ಞಾನ, ಪಾಲುದಾರಿಕೆ ಹಾಗೂ ನೂತನ ವಿಧಾನಗಳ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವುದು ಮಾತ್ರವಲ್ಲದೆ ಉತ್ಪಾದಕತೆಯನ್ನು ಹೆಚ್ಚಿಸಬಹುದು. ಮಾಲಿನ್ಯವನ್ನು ಕಡಿಮೆ ಮಾಡಬಹುದು ಮತ್ತು ನಿವಾಸಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು. NMIT ಯೊಂದಿಗಿನ ಈ ಒಪ್ಪಂದವು ಹೆಚ್ಚು ಪರಿಣಾಮಕಾರಿ ಸಂಚಾರ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅನುಚೇತ್ ಹೇಳಿದ್ದಾರೆ.
ಶಿಕ್ಷಣ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರ ನಡುವೆ ನಾವೀನ್ಯತೆ, ಜ್ಞಾನ ವಿನಿಮಯ ಮತ್ತು ಸಹಯೋಗ ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಎನ್ಎಂಐಟಿ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಕೆ.ಬಿ.ರಾವ್ ಹೇಳಿದ್ದಾರೆ. ಪ್ರಾರಂಭದಲ್ಲಿ ಟ್ರಾಫಿಕ್ ನಿರ್ವಹಣೆಯನ್ನು ಹೆಚ್ಚಿಸಲು ಡ್ರೋನ್‌ಗಳು ಮತ್ತು ಇತರ ತಂತ್ರಜ್ಞಾನಗಳ ಬಳಕೆಯನ್ನು ಒಳಗೊಂಡಂತೆ ನವೀನ ವಿಧಾನಗಳನ್ನು ಅನ್ವೇಷಿಸುವುದನ್ನು ಒಳಗೊಂಡಿದೆ ಎಂದು ರಾವ್ ಹೇಳಿದ್ದಾರೆ.
ವಾಹನ ಸವಾರರಿಗೆ ಗುಡ್ ನ್ಯೂಸ್, ಇಂಧನ ಉಳಿಸಲು ಗೂಗಲ್ ಮ್ಯಾಪ್‍ನಿಂದ ಹೊಸ ಫೀಚರ್!
ಈ ಒಪ್ಪಂದ ಸಂಚಾರ ಮೇಲ್ವಿಚಾರಣೆ, ನಿಯಂತ್ರಣ, ಸಂಚಾರ ಕಾನೂನು ಉಲ್ಲಂಘಿಸುವವರನ್ನು ಗುರುತಿಸುವುದು ಮತ್ತು ಸಂಚಾರ ದಟ್ಟಣೆಯ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಸಂಬಂಧಿಸಿದೆ. ಅಲ್ಲದೆ, ಕಾರ್ಯತಂತ್ರದ ಪಾಲುದಾರಿಕೆಯು ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಅವಕಾಶ ನೀಡುತ್ತದೆ. ಟ್ರಾಫಿಕ್ ನಿರ್ವಹಣೆ ಸವಾಲುಗಳಿಗೆ ನೈಜ-ಸಮಯದ ಪರಿಹಾರಗಳನ್ನು ಒದಗಿಸುವ ಕ್ರಿಯಾತ್ಮಕ ಕಲಿಕೆಯ ವಾತಾವರಣವನ್ನು ಉತ್ತೇಜಿಸುತ್ತದೆ.