ನಿಕಾನ್ Z5, ನಿಕಾರ್ Z24 ಕ್ಯಾಮಾರ ಬಿಡುಗಡೆ!

 ಅತ್ಯುತ್ಕೃಷ್ಠ ಮಟ್ಟದ ಪೋರ್ಟೇಬಲ್ ಸಾಧನ ಮತ್ತು ವಿಭಿನ್ನವಾದ ಪರಿಸ್ಥಿತಿಗಳಲ್ಲಿ ಯಾವುದೇ ಸಮಸ್ಯೆ ಇಲ್ಲದ ರೀತಿಯಲ್ಲಿ ಬಳಸುವವರಿಗಾಗಿ ನಿಕಾನ್ ನೂತನ 2 ಕ್ಯಾಮರಗಳನ್ನು ಬಿಡುಗಡೆ ಮಾಡಿದೆ. ಈ ಕ್ಯಾಮರದ ವಿಶೇಷತೆ ಇಲ್ಲಿದೆ. 

Nikon launch nikkor z24 and z5 camera in India

ಬೆಂಗಳೂರು(ಜು.23): ವಿಶ್ವದ ಖ್ಯಾತ ಕ್ಯಾಮೆರಾ ತಯಾರಿಕಾ ಸಂಸ್ಥೆಯಾಗಿರುವ ನಿಕಾನ್ ಕಾರ್ಪೊರೇಷನ್ ಟೋಕಿಯೋದ ಅಂಗಸಂಸ್ಥೆಯಾಗಿರುವ ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಭಾರತದಲ್ಲಿ ಹೊಸ NIKKOR Z 24-50mm f/4-6.3 ಮತ್ತು Nikon Z 5 ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ.

ಅತ್ಯುತ್ಕೃಷ್ಠವಾದ ಕಾರ್ಯಕ್ಷಮತೆ ಮತ್ತು ಅತ್ಯಂತ ಹಗುರವಾದ ವಿನ್ಯಾಸವನ್ನು ಹೊಂದಿರುವ Nikon Z 5 ಮತ್ತು  NIKKOR Z 24-50mm f/4-6.3 ಅತ್ಯುತ್ತಮ ಗುಣಮಟ್ಟ ಮತ್ತು ಕಾರ್ಯವನ್ನು ಬಯಸುವವರಿಗಾಗಿ ಸುಸಜ್ಜಿತ ಕ್ಯಾಮೆರಾಗಳಾಗಿವೆ. ಅತ್ಯುತ್ಕೃಷ್ಠ ಮಟ್ಟದ ಪೋರ್ಟೇಬಲ್ ಸಾಧನ ಮತ್ತು ವಿಭಿನ್ನವಾದ ಪರಿಸ್ಥಿತಿಗಳಲ್ಲಿ ಯಾವುದೇ ತೊಂದರೆ ಇಲ್ಲದ ರೀತಿಯಲ್ಲಿ ಬಳಸುವವರಿಗಾಗಿ ಹೇಳಿ ಮಾಡಿಸಿ ಕ್ಯಾಮೆರಾವಾಗಿದೆ. ಇವುಗಳು ಅತ್ಯುತ್ತಮ ಗುಣಮಟ್ಟ, ಸಾಮಾಜಿಕ ಮಾಧ್ಯಮಕ್ಕೆ ಹಂಚಿಕೊಳ್ಳಲು ಸಿದ್ಧವಾದ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಒದಗಿಸಲಿವೆ.

NIKKOR Z 24-50mm f/4-6.3 ನೊಂದಿಗೆ Nikon Z 5 ಕ್ಯಾಮೆರಾ ಕಂಟೆಂಟ್ ರಚನೆಕಾರರು ಮತ್ತು ಉತ್ಸಾಹಿ ಛಾಯಾಚಿತ್ರಕಾರರಿಗೆ ತಮ್ಮ ನಿರೀಕ್ಷೆಗಳನ್ನು ಉನ್ನತ ಮಟ್ಟಕ್ಕೆ ಹೆಚ್ಚಿಸಿಕೊಳ್ಳಲು ಪರಿಪೂರ್ಣವಾದ ಬ್ಲೆಂಡ್ ಆಗಿವೆ. ಈ ಹೊಸ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದ ಚಿತ್ರಗಳು ಮತ್ತು ವಿಡಿಯೋಗಳನ್ನು ಸೆರೆಹಿಡಿಯಲಿವೆ. ಈ ಚಿತ್ರಗಳು ಮತ್ತು ವಿಡಿಯೋಗಳನ್ನು ಇಡೀ ಜಗತ್ತಿಗೆ ಹಂಚಿಕೊಳ್ಳಬಹುದಾಗಿದೆ. ಧೂಳು ಮತ್ತು ನೀರು ನಿರೋಧಕ ವೈಶಿಷ್ಟ್ಯತೆಯನ್ನು ಹೊಂದಿರುವ ಈ ಕ್ಯಾಮೆರಾ ಯಾವುದೇ ಸಂದರ್ಭದಲ್ಲಾದರೂ, ಯಾವುದೇ ಸ್ಥಳದಲ್ಲಿಯಾದರೂ ಯಾವುದೇ ತೊಂದರೆ ಅಥವಾ ಅಡ್ಡಿ ಇಲ್ಲದ ರೀತಿಯಲ್ಲಿ ಬಳಸಲು ಯೋಗ್ಯವಾಗಿದೆ ಎಂದು ನಿಕಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಕುಮಾರ್ ಹೇಳಿದರು.

Nikon Z 5 ಛಾಯಾಚಿತ್ರ ಮತ್ತು ವಿಡಿಯೋಗ್ರಾಫಿಯ ಗಡಿಯನ್ನು ಮೀರಿ ಇನ್ನೂ ಉನ್ನತ ಸ್ಥಾನಕ್ಕೆ ಏರುವ ಆಕಾಂಕ್ಷೆ ಇರುವವರಿಗೆ ಅಥವಾ ತಮ್ಮ ಸೃಜನಾತ್ಮಕ ದೃಷ್ಟಿಯನ್ನು ಮುಂದುವರಿಸಲು ಆಸಕ್ತಿ ಇರುವವರಿಗೆ ಸೂಕ್ತವಾದ ಕ್ಯಾಮೆರಾವಾಗಿದೆ. ಕಡಿಮೆ ಬೆಳಕಿನಲ್ಲಿಯೂ ಸುಂದರವಾದ ಸದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿರುವ ಈ ಕ್ಯಾಮೆರಾ, ಅತಿ ವೇಗದಲ್ಲಿ ಫೋಕಸ್ ಮಾಡಿಕೊಳ್ಳುತ್ತದೆ ಮತ್ತು ಕಾಂಪ್ಯಾಕ್ಟ್ ಪೋರ್ಟೆಬಿಲಿಟಿಯನ್ನು ಹೊಂದಿದೆ. ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅತ್ಯದ್ಭುತವಾಗಿ ಸೆರೆ ಹಿಡಿಯುವ ಕ್ಯಾಮೆರಾದ ಸಾಮರ್ಥ್ಯವನ್ನು ನಮ್ಮ ಗ್ರಾಹಕರು ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮ್ಮದಾಗಿದೆ’’ ಎಂದು ಹೇಳಿದರು.

Nikon Z 5 ಒಂದು ಕಾಂಪ್ಯಾಕ್ಟ್ ಮತ್ತು ಹಗುರವಾದ ಕ್ಯಾಮೆರಾವಾಗಿದೆ. ಕೇವಲ ಸುಮಾರು 675 ಗ್ರಾಂಗಳ ತೂಕವಿರುವುದರಿಂದ ಬಳಕೆದಾರರು ಇದನ್ನು ಅತ್ಯಂತ ಸುಲಭವಾಗಿ ಹಿಡಿದು ಚಿತ್ರಗಳು ಮತ್ತು ವಿಡಿಯೋಗಳನ್ನು ಕಡಿಮೆ ಬೆಳಕಿನಲ್ಲಿಯೂ ಅತ್ಯಂತ ಸುಂದರವಾಗಿ ಸೆರೆ ಹಿಡಿಯಬಹುದಾಗಿದೆ. ಹ್ಯಾಂಡ್ ಹೆಲ್ಡ್ ಶೂಟಿಂಗ್ ಅನ್ನು ಶಾರ್ಪ್ ಆಗಿ ಮಾಡಬಹುದಾಗಿದೆ. ಕ್ಯಾಮೆರಾ ಶೇಕ್ ಆಗುವುದನ್ನು ತಪ್ಪಿಸುತ್ತದೆ ಮತ್ತು ಈ ಬಗ್ಗೆ ನಿಖರತೆಯನ್ನು ಹೊಂದಿರುತ್ತದೆ. ಇದರ ಮೂಲಕ ತನ್ನ 5 ಆ್ಯಕ್ಸಿಸ್ ನೊಂದಿಗೆ ಗರಿಷ್ಠ ಮಟ್ಟದ ಎಫೆಕ್ಟ್ ಗಳನ್ನು ನೀಡಲಿದೆ.

 ಈ ಕ್ಯಾಮೆರಾವು ಬಳಕೆದಾರ ಸ್ನೇಹಿಯಾಗಿದ್ದು, ಹಿಡಿಯುವುದು ಮತ್ತು ಟಚ್ ಸ್ಕ್ರೀನ್ ಮೂಲಕ ಸುಲಭವಾಗಿ ಕಾರ್ಯಾಚರಣೆ ನಡೆಸಬಹುದು. ಇದರಲ್ಲಿನ “i-Menu” ಒಂದು ಇಂಟರ್ ಫೇಸ್ ನಲ್ಲಿ ಹೆಚ್ಚಾಗಿ ಬಳಕೆ ಮಾಡುವ ಶಾರ್ಟ್ ಕಟ್ ಗಳನ್ನು ಒದಗಿಸುತ್ತದೆ.

 ಬಹು ವಿಧದ ಪ್ರಯೋಜನಗಳನ್ನು ನೀಡುವ ಈ ಕ್ಯಾಮೆರಾ ಎರಡು ಎಸ್ ಡಿ ಮೆಮೊರಿ ಕಾರ್ಡ್ ಗಳ ಸ್ಲಾಟ್ ಗಳನ್ನು ಹೊಂದಿರುವುದರಿಂದ ಅತಿ ಹೆಚ್ಚು ಫೋಟೋಗಳು ಮತ್ತು ವಿಡಿಯೋಗಳನ್ನು ಸಂಗ್ರಹ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೇ, ನಿಮ್ಮದೇ ಆದ ಎಫೆಕ್ಟ್ ಗಳೊಂದಿಗೆ ನಿಮ್ಮ ಸೆಟ್ಟಿಂಗ್ ಗಳನ್ನು ಕಸ್ಟಮೈಸ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಲ್ಲಿ 20 ಬಗೆಯ ಕ್ರಿಯೇಟಿವ್ ಪಿಕ್ಚರ್ ಕಂಟ್ರೋಲ್ ಇರಲಿದ್ದು, ಇದು ನಿಮ್ಮ ನೆಚ್ಚಿನ ಆ್ಯಪ್ ಫಿಲ್ಟರ್ ಗಳ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದು ಸ್ಟಿಲ್ ಫೋಟೋಗಳು ಮತ್ತು ಮೂವೀಸ್ ಗೆ ಅನ್ವಯವಾಗಲಿದ್ದು, ನಿಮ್ಮ ಕ್ರಿಯೇಶನ್ ಗಳನ್ನು ತಕ್ಷಣವೇ ಮೇಲ್ದರ್ಜೆಗೇರಿಸಿಕೊಳ್ಳಬಹುದು.

ಇದೇ ರೀತಿಯಲ್ಲಿ #NikonSnapBridge ಮೂಲಕ ನಿಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮಕ್ಕೆ ಅಪ್ ಲೋಡ್ ಮಾಡಬಹುದು. ಈ ನಂಬಿಕಾರ್ಹವಾದ ಕ್ಯಾಮೆರಾವು ದೀರ್ಘ ಗಂಟೆಗಳ ಕಾಲದವರೆಗೆ ಫೋಟೋ ಅಥವಾ ವಿಡಿಯೋ ತೆಗೆಯಲು ಅನುವು ಮಾಡಿಕೊಡುತ್ತದೆ. ಏಕೆಂದರೆ, ಇದರಲ್ಲಿನ ಬ್ಯಾಟರಿಯ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಇದರಲ್ಲಿನ ಮತ್ತೊಂದು ವಿಶೇಷವೆಂದರೆ, ಯುಎಸ್ ಬಿ ಚಾರ್ಜಿಂಗ್ ಗೆ ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡದಿದ್ದರೂ ಪ್ರಯಾಣದ ಸಂದರ್ಭದಲ್ಲಿಯೇ ಯುಎಸ್ ಬಿ ಪೋರ್ಟ್ ಅಥವಾ ಯುಎಸ್ ಬಿ ಆಧಾರಿತ ಪವರ್ ಬ್ಯಾಂಕ್ ಗಳ ಮೂಲಕ ಚಾರ್ಜ್ ಮಾಡಿಕೊಂಡು ನಿಶ್ಚಿಂತೆಯಾಗಿ ಕ್ಯಾಮೆರಾವನ್ನು ಬಳಸಬಹುದಾಗಿದೆ.

NIKKOR Z 24-50mm f/4-6.3 ಪ್ರಯಾಣದ ವೇಳೆ ನಿಮಗೆ ಪರಿಪೂರ್ಣವಾದ ಸಂಗಾತಿಯಾಗಲಿದೆ. ಇದರ ಕಾಂಪ್ಯಾಕ್ಟ್ ಬಾಡಿಯು ಇತರೆ ಫುಲ್ ಫ್ರೇಂ ಮಾದರಿಯ ಝೂಂ ಲೆನ್ಸ್ ಗಳಿಗಿಂತ ಸಣ್ಣದಾಗಿದೆ ಮತ್ತು ಹಗುರವಾಗಿದೆ. 195 ಗ್ರಾಂ ಗಳ ತೂಕದ ಈ ಕ್ಯಾಮೆರಾ ಬಟನ್ ರಹಿತ ರೆಟ್ರಾಕ್ಟೇಬಲ್ ತಾಂತ್ರಿಕತೆಯನ್ನು ಹೊಂದಿದೆ. ಕೇವಲ 51 ಎಂಎಂ ಸುತ್ತಳತೆಯನ್ನು ಹೊಂದಿದ್ದು, ಅತ್ಯಂತ ಸ್ಲಿಮ್ ಕ್ಯಾಮೆರಾ ಎನಿಸಿದೆ.

Latest Videos
Follow Us:
Download App:
  • android
  • ios