ಜನಪ್ರಿಯಗೊಳ್ಳುತ್ತಿದೆ ಭಾರತದ ರೊಪೊಸೋ ವಿಡಿಯೋ ಶೇರಿಂಗ್ ಆ್ಯಪ್!

ಸ್ವಾವಲಂಬಿ ಭಾರತ ನಿರ್ಮಾಣದತ್ತ ಭಾರತ ಸಾಗುತ್ತದೆ. ಹೀಗಾಗಿ ವಿದೇಶಿ ಆ್ಯಪ್‌ಗಳನ್ನು ಜನರು ಬಹಿಷ್ಕರಿಸುತ್ತಿದ್ದಾರೆ. ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಗಳು ಆರಂಭಗೊಂಡಿದೆ. ಇದರ ನಡುವೆ ಭಾರತದ ರೊಪೊಸೋ ವಿಡಿಯೋ ಶೇರಿಂಗ್ ಆ್ಯಪ್ ಜನಪಪ್ರಿಯಗೊಳ್ಳುತ್ತಿದೆ.

New Roposo video sharing app become popular in India

ಬೆಂಗಳೂರು(ಮೇ.24): ಭಾರತದಲ್ಲಿ ಮುಂಚೂಣಿಯಲ್ಲಿರುವ ವಿಡಿಯೋ-ಶೇರಿಂಗ್ ಸಾಮಾಜಿಕ ಜಾಲತಾಣವಾಗಿರುವ ರೊಪೊಸೋ ಇಂಗ್ಲೀಷ್ ಮತ್ತು 10 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಇದೀಗ ಲಭ್ಯವಿದೆ. ಇದು ಸಂಪೂರ್ಣವಾಗಿ ಭಾರತ ಮತ್ತು ಗ್ಲಾನ್ಸ್ ನ ಮಾಲೀಕತ್ವದ್ದಾಗಿದೆ. ಈ ರೊಪೊಸೋ ವಿಡಿಯೋ ಆ್ಯಪ್ ಗ್ರಾಹಕರು ಅಥವಾ ಬಳಕೆದಾರರು ತಮ್ಮದೇ ಆದ ರೀತಿಯಲ್ಲಿ ತಮ್ಮ ಅನಿಸಿಕೆಗಳು ಮತ್ತು ಚಿಕ್ಕದಾದ ವಿಡಿಯೋ ಕಂಟೆಂಟ್ ಗಳನ್ನು ಹಂಚಿಕೊಳ್ಳಲು ನೆರವಾಗುತ್ತದೆ.

ರೊಪೊಸೋನಲ್ಲಿರುವ ಶಕ್ತಿಶಾಲಿ ವಿಡಿಯೋ ಕ್ರಿಯೇಷನ್ ಮತ್ತು ಎಡಿಟಿಂಗ್ ಟೂಲ್ ಗಳು ಬಳಕೆದಾರರು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣ ಮಾಡಲು ಸಹಕಾರಿಯಾಗಿದೆ. ಇದರ ಜತೆಗೆ ತಮ್ಮದೇ ಭಾಷೆಯಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸುವ ವೇದಿಕೆಯಾಗಿದೆ. ಈ ಪ್ಲಾಟ್ ಫಾರ್ಮ್ ಈಗಾಗಲೇ 50 ದಶಲಕ್ಷ ಬಳಕೆದಾರರನ್ನು ಹೊಂದಿದ್ದು, ತಿಂಗಳೊಂದಕ್ಕೆ 5 ಬಿಲಿಯನ್ ವಿಡಿಯೋ ವೀಕ್ಷಣೆಗಳನ್ನು ಮಾಡಬಹುದಾದ ವಿಡಿಯೋಗಳನ್ನು ಹೊಂದಿದೆ. 

ಯಾರಿಗೆ ಡ್ಯಾನ್ಸ್ ಬರುವುದಿಲ್ಲವೋ ಅವರಿಗೆ ಡ್ಯಾನ್ ಮಾಡುವಂತೆ ಮಾಡಬೇಡಿ (‘If Pappu can’t dance, don’t make him’). ಬಳಕೆದಾರರಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಅತ್ಯದ್ಭುತವಾದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿವೆ. ವಿಶೇಷವಾಗಿ ಯುವ ಪೀಳಿಗೆಯಲ್ಲಿ ಸಾಮಾಜಿಕ ಮಾಧ್ಯಮದ ಗೀಳು ಹೆಚ್ಚಾಗಿದ್ದು, ತೀವ್ರ ರೀತಿಯ ಪರಿಣಾಮವನ್ನು ಬೀರುತ್ತಿದೆ’’ ಎಂದು  ರೊಪೊಸೋದ ಸಹ ಸಂಸ್ಥಾಪಕ, ಗ್ಲಾನ್ಸ್ ನ ಉಪಾಧ್ಯಕ್ಷ ಮಾನ್ಯಕ್ ಭಾಂಗಡಿಯಾ ಹೇಳಿದರು.

ರೊಪೊಸೋದಲ್ಲಿ ನಾವು ಧನಾತ್ಮಕವಾದ ಕಂಟೆಂಟ್ ಮತ್ತು ಸ್ವಚ್ಛವಾದ ಮನೋರಂಜನೆಗೆ ಆದ್ಯತೆ ನೀಡುತ್ತಿದ್ದೇವೆ. ಆಕ್ಷೇಪಾರ್ಹವಾದ ವಿಷಯವನ್ನು ನೀಡುವುದು ಸವಾಲಿನದ್ದಾಗಿದೆ. ಆದರೆ ಇದು ರಾಕೆಟ್ ವಿಜ್ಞಾನವಲ್ಲ. ನಾವು ಸತತ ಮೂರು ವರ್ಷಗಳ ಕಾಲ ಬೇರುಮಟ್ಟದಿಂದ ಬೆಳೆಯಲು ಶ್ರಮ ವಹಿಸಿದ್ದೇವೆ. ಇದರ ಪರಿಣಾಮ ನಾವು ಈಗ 50 ದಶಲಕ್ಷಕ್ಕೂ ಅಧಿಕ ಬಳಕೆದಾರರನ್ನು ಹೊಂದಿದ್ದೇವೆ. ಇದರಲ್ಲಿ ನಾವು ನಮ್ಮ ಬಳಕೆದಾರರು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣ ಮಾಡಿಕೊಳ್ಳುವ ವೇದಿಕೆಯನ್ನು ಕಲ್ಪಿಸಿದ್ದೇವೆ. ರೊಪೊಸೋದಲ್ಲಿರುವ ನಮ್ಮ ಕುಟುಂಬಗಳು ಮತ್ತು ಸ್ನೇಹಿತರು ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ವೇದಿಕೆಯನ್ನು ಎಲ್ಲಿಯೂ ಚ್ಯುತಿ ಬಾರದ ರೀತಿಯಲ್ಲಿ ಸ್ವಚ್ಛವಾಗಿ ಬಳಸಿಕೊಳ್ಳುತ್ತಿದ್ದಾರೆ’’ ಎಂದರು. 

ಈ ಭಾಷೆಗಳಲ್ಲಿ ಲಭ್ಯ:
ಕನ್ನಡ, ಹಿಂದಿ, ಪಂಜಾಬಿ, ಗುಜರಾತಿ, ಮರಾಠಿ, ತಮಿಳು, ತೆಲುಗು, ಬೆಂಗಾಲಿ, ಮಲಯಾಳಂ, ಅರೇಬಿಕ್, ಅಸ್ಸಾಮೀಸ್, ಒಡಿಯಾ, ಉರ್ದು.
 

Latest Videos
Follow Us:
Download App:
  • android
  • ios