Asianet Suvarna News Asianet Suvarna News

Most Used Emoji: 2021 ರಲ್ಲಿ ನೆಟ್ಟಿಗರು ಅತಿ ಹೆಚ್ಚು ಬಳಸಿದ ಇಮೋಜಿ ಯಾವುದು ಗೊತ್ತಾ?

*ಸಾಮಾಜಿಕ ಮಾಧ್ಯಮದಲ್ಲಿ ಇಮೋಜಿಗಳದ್ದೇ ದರ್ಬಾರ್‌
*ನೆಟ್ಟಿಗರು ಅತಿ ಹೆಚ್ಚು ಬಳಸಿದ ಇಮೋಜಿ ಯಾವುದು ಗೊತ್ತಾ?
*ಕನ್ಸೋರ್ಟಿಯಂ ವರದಿಯಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ!

Most used emoji of 2021 report by The Unicode Consortium Tears of Joy emoji leads mnj
Author
Bengaluru, First Published Dec 4, 2021, 1:23 PM IST

ಯುಎಸ್‌ಎ(ಡಿ. 04): ಪ್ರಪಂಚದಾದ್ಯಂತ ಬಿಲಿಯನ್‌ಗಟ್ಟಲೆ ಜನ ಸಾಮಾಜಿಕ ಜಾಲತಾಣವನ್ನು (Social Media) ಬಳಸುತ್ತಾರೆ. ಸಾಮಾಜಿಕ ಜಾಲತಾಣಗಳು ಬಳಕೆದಾರರಿಗೆ  ಸಾವಿರಾರು ವಿಧದ ಚಟುವಟಿಕೆಗಳಿಗಾಗಿ ಅವಕಾಶ ನೀಡುತ್ತವೆ. ಫೋಟೋ ಶೇರಿಂಗ್‌ (Photo Sharing) ನಿಂದ ಹಿಡಿದು ಮೇಸೆಜಿಂಗ್‌ವರೆಗೆ (Messaging) ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಟ ಆಡಬಹುದು. ಇದೆಲ್ಲದರ ಮಧ್ಯೆ  ಅಂತರ್ಜಾಲ ಬಳಸುವ ಪ್ರತಿಯೊಬ್ಬರು ಇಮೋಜಿಗಳನ್ನು (Emoji) ಬಳಸಿಯೇ ಬಳಸಿರುತ್ತಾರೆ. ವೇಗವಾಗಿ ಒಡುತ್ತಿರುವ ಈ ದುನಿಯಾದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಮಾತುಗಳ ಬದಲಾಗಿ ಬಹುತೇಕರು ಇಮೋಜಿಗಳನ್ನೇ ಬಳಸುತ್ತಾರೆ. ಸೋಷಿಯಲ್‌ ಮೀಡಿಯಾ ತುಂಬಾ ಇಮೋಜಿಗಳದ್ದೇ ದರ್ಬಾರ್. ಹಾಗಾದರೆ ಅಂತರ್ಜಾಲದಲ್ಲಿ  ಅತಿ ಹೆಚ್ಚು ಬಳಕೆಯಾದ ಇಮೋಜಿ ಯಾವುದು ಗೊತ್ತಾ?

ಇಂಥಹ ಇಂಟ್ರಸ್ಟಿಂಗ್‌ ವರದಿಯೊಂದನ್ನು ಯುನಿಕೋಡ್ ಕನ್ಸೋರ್ಟಿಯಂ (Unicode Consortium) ಬಿಡುಗಡೆ ಮಾಡಿದ್ದೂ 2021 ರ ಉದ್ದಕ್ಕೂ ಯಾವ ಎಮೋಜಿಗಳನ್ನು ಹೆಚ್ಚು ಬಳಸಲಾಗಿದೆ ಎಂಬ ವಿವರಗಳನ್ನು ನೀಡಿದೆ. ವರದಿಯು ಸ್ಮೈಲಿಗಳು (Smiley) ಅಥವಾ ಭಾವನೆ-ಸಂಬಂಧಿತ ಎಮೋಜಿಗಳು ಮತ್ತು ಇತರ ವಸ್ತುಗಳು, ಕ್ರಿಯೆಗಳು ಮತ್ತು ಕ್ರೀಡೆಗಳನ್ನು ಆಧರಿಸಿದ ಎಮೋಜಿಗಳನ್ನು ಒಳಗೊಂಡಿದೆ.

ಟಿಯರ್ಸ್ ಆಫ್ ಜಾಯ್ ಇಮೋಜಿ ಅತ್ಯಂತ ಜನಪ್ರಿಯ!

ಟಿಯರ್ಸ್ ಆಫ್ ಜಾಯ್ ಇಮೋಜಿ (Tears of Joy Emoji (🤣)) ಅತ್ಯಂತ ಜನಪ್ರಿಯ ಎಮೋಜಿಯಾಗಿದ್ದು ನೆಟ್ಟಿಗರು ಅದನ್ನೇ ಹೆಚ್ಚು ಬಳಸಿದ್ದಾರೆ ಎಂದು ವರದಿ ಹೇಳಿದೆ.  ಈ ವರದಿ ಪ್ರಕಾರ ಹೃದಯ ಇಮೋಜಿ (Heart Emoji) (❤️) ಎರಡನೇ ಸ್ಥಾನ ಪಡೆದಿದೆ.  ಯುನಿಕೋಡ್ ಕನ್ಸೋರ್ಟಿಯಂ ( Unicode Consortium) ವಿಶ್ವದ ಭಾಷೆಗಳನ್ನು ಡಿಜಿಟೈಸ್ ಮಾಡುವ ಜವಾಬ್ದಾರಿಯುತ ಲಾಭೋದ್ದೇಶವಿಲ್ಲದ (Non Profit) ಸಂಸ್ಥೆಯಾಗಿದೆ. ನೆಟ್ಟಿಗರು ಬಳಸಿದ ಒಟ್ಟು ಇಮೋಜಿಗಳಲ್ಲಿ ಟಿಯರ್ಸ್ ಆಫ್ ಜಾಯ್ ಇಮೋಜಿ  5% ಕ್ಕಿಂತ ಹೆಚ್ಚು ಬಳಸಲಾಗಿದೆ ಹಾಗೂ ಹೃದಯದ ಎಮೋಜಿಗಳು ಎರಡನೇ ಸ್ಥಾನದಲ್ಲಿದೆ ಎಂದು ಸಂಸ್ಥೆ ತಿಳಿಸಿದೆ.

Most used emoji of 2021 report by The Unicode Consortium Tears of Joy emoji leads mnj

Promobot Robots: ನಿಮ್ಮ ಮುಖಛಾಯೆ ರೋಬೋ ಕಂಪನಿಗೆ ಕೊಟ್ಟು ಕೋಟ್ಯಧಿಪತಿಯಾಗುವ ಸುವರ್ಣವಕಾಶ!

ಟಿಯರ್ಸ್ ಆಫ್ ಜಾಯ್ ಇಮೋಜಿ ಹೋಲಿಸಿದರೆ ಇತರ ಎಲ್ಲಾ ಎಮೋಜಿಗಳು ತುಂಬಾ ಹಿಂದುಳಿದಿವೆ. 2021 ವರ್ಷದಲ್ಲಿ ಹೆಚ್ಚು ಬಳಸಿದ ಎಮೋಜಿಗಳೆಂದರೆ 🤣, 👍 , 😭, 🙏, 😘, 🥰, 😍 ಮತ್ತು 😊. 2019ರಲ್ಲಿ ಕೂಡ ಈ ರೀತಿಯ ವರದಿಯನ್ನು ಸಂಸ್ಥೆ ಬಿಡುಗಡೆ ಮಾಡಿತ್ತು. 2019ರ ವರದಿಗಿಂತ ಈ ಡೇಟಾವು ಹೆಚ್ಚು ಭಿನ್ನವಾಗಿಲ್ಲ ಎಂದು ಸಂಸ್ಥೆ ಹೇಳಿದೆ.  ಅಂತರ್ಜಾಲದಲ್ಲಿ (Internet) ಆಯ್ಕೆ ಮಾಡಲು ಸುಮಾರು 3,663 ಇಮೋಜಿಗಳಿವೆ. ಆದರೆ ಟಾಪ್ 100 ಎಮೋಜಿಗಳು (Top 100 Emoji) ಇತರ ಎಮೋಜಿಗಳಿಗಿಂತ ಹೆಚ್ಚು ಜನಪ್ರಿಯವಾಗಿವೆ ಎಂದು ವರದಿಯು ಹೇಳಿದೆ. ಈ ಟಾಪ್ 100 ಎಮೋಜಿಗಳು 2021 ರಲ್ಲಿ ಬಳಸಲಾದ  ಎಲ್ಲಾ ಎಮೋಜಿಗಳಲ್ಲಿ ಶೇಕಡಾ 82ರಷ್ಟು ಪಾಲು ಹೊಂದಿವೆ. 

 ವರ್ಗವಾರು ಡೇಟಾದ ಪಟ್ಟಿ ಸಹ ಬಿಡುಗಡೆ!

ಯುನಿಕೋಡ್  ಕನ್ಸೋರ್ಟಿಯಂ  'ಸ್ಮೈಲೀಸ್ ಅಂಡ್ ಎಮೋಷನ್', 'ಪೀಪಲ್ ಮತ್ತು ಬಾಡಿ', 'ಚಟುವಟಿಕೆಗಳು', 'ಫ್ಲ್ಯಾಗ್‌ಗಳು' ಗಳಂತಹ ವಿವಿಧ ವರ್ಗಗಳಲ್ಲಿ ಹೆಚ್ಚು ಜನಪ್ರಿಯವಾದ ಎಮೋಜಿಗಳಿಗಾಗಿ ವರ್ಗವಾರು ಡೇಟಾದ ಪಟ್ಟಿಯನ್ನು (Category Wise Data) ಸಹ ಬಹಿರಂಗಪಡಿಸಿದೆ. ನಗುತ್ತಿರುವ ಮುಖ (Smiley Face) ಮತ್ತು ಕೈಗಳಂತಹ (Hand Gestures) ಇಮೋಜಿಗಳನ್ನು ಜನರು ಹೆಚ್ಚಾಗಿ ಬಳಸುತ್ತಾರೆ ಎಂದು ಫಲಿತಾಂಶಗಳು ತೋರಿಸುತ್ತಿವೆ.

Meme on Parag Agrawal: ಪರಾಗ್ ಅಗರ್‌ವಾಲ್ ಮೀಮ್ ವೈರಲ್‌ : ಎಲೋನ್‌‌ ಮಸ್ಕ್ ಟ್ವೀಟ್ ಹಿಂದಿನ ಮರ್ಮವೇನು?

ಏತನ್ಮಧ್ಯೆ, ಸಸ್ಯಗಳು ಮತ್ತು ಹೂವುಗಳ (Plants and Flowers) ಎಮೋಜಿಗಳನ್ನು ಸಹ ಆಗಾಗ್ಗೆ ಬಳಸಲಾಗುತ್ತಿದೆ ಜತೆಗೆ 'ಪ್ರಾಣಿಗಳು ಮತ್ತು ಪ್ರಕೃತಿ' (Animal and environment) ವಿಭಾಗದಲ್ಲಿನ ಇಮೋಜಿಗಳನ್ನು  ಕೂಡ ಬಳಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, ಧ್ವಜಗಳು (Flags) ಅತಿ ದೊಡ್ಡ ವರ್ಗವಾಗಿದ್ದರೂ (258 ಎಮೋಜಿ) ಕಡಿಮೆ ಸಂಖ್ಯೆಯಲ್ಲಿ ಜನ ಧ್ವಜದ ಇಮೋಜಿ ಬಳಸಿದ್ದಾರೆ. 

Follow Us:
Download App:
  • android
  • ios