ನವೆಂಬರ್ 2022 ರಲ್ಲಿ ಈ ಅಪ್ಲಿಕೇಶನ್  ಅಧಿಕೃತವಾಗಿ ಪ್ರಾರಂಭವಾದಾಗಿನಿಂದ, ತನ್ನಲ್ಲಿರುವ ವಿವಿಧ ದಿನನಿತ್ಯದ ಸಮಸ್ಯೆಗಳಿಗೆ ನೀಡುತ್ತಿರುವ ಪ್ರತಿಕ್ರಿಯೆಗಳಿಗೆ ಟ್ರೆಂಡಿಂಗ್ ಆಗಿದೆ ಮತ್ತು ಫಲಿತಾಂಶಗಳು ಪ್ರಭಾವಶಾಲಿಯಾಗಿವೆ. ಆದರೆ, ಈ ಚಾಟ್‌ಬಾಟ್‌ ಸಹ ಒಮ್ಮೊಮ್ಮೆ ತಪ್ಪು ಮಾಡುತ್ತವೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. 

 ಬಿರಿಯಾನಿ (Biryani) ಅಂದ್ರೆ ಕೇವಲ ಹೈದರಾಬಾದ್‌ (Hyderabad) ಜನತೆಗೆ ಅಥವಾ ದಕ್ಷಣ ಭಾರತದ (South India) ಜನತೆಗೆ ಮಾತ್ರವಲ್ಲ, ಬಹುತೇಕ ದೇಶದ (Country) ಎಲ್ಲರಿಗೂ ಈ ತಿನಿಸು ಅಚ್ಚುಮೆಚ್ಚಿನ ತಿನಿಸಲ್ಲಿ ಒಂದು ಎಂದರೆ ತಪ್ಪಾಗಲ್ಲ. ನಾನ್‌ವೆಜ್‌ ತಿನ್ನದವರು ಸಹ ವೆಜಿಟೇಬಲ್‌ ಬಿರಿಯಾನಿಯನ್ನು ತಿನ್ನಲು ಇಷ್ಟಪಡುತ್ತಾರೆ. ಕಳೆದ ವರ್ಷ ಹಾಗೂ ಇತ್ತೀಚೆಗೆ ನ್ಯೂ ಇಯರ್‌ ಪಾರ್ಟಿಗೆ ಸ್ವಿಗ್ಗಿ, ಜೊಮ್ಯಾಟೋ ಮುಂತಾದೆಡೆ ಹೆಚ್ಚು ಸೇಲಾದ ತಿನಿಸಲ್ಲಿ ಬಹುತೇಕ ಬಿರಿಯಾನಿಗೆ ಅಗ್ರಸ್ಥಾನ. ಪ್ರಸ್ತುತ ಅಮೆರಿಕದಲ್ಲಿರುವ ಹೈದರಾಬಾದ್‌ ಮೂಲದ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾಗೆ ಇತ್ತೀಚೆಗೆ ಬಿರಿಯಾನಿ ವಿಚಾರವಾಗಿ ಚಾಟ್‌ಬಾಟ್‌ ಸಂಸ್ಥೆಯೊಂದು ಕ್ಷಮೆ ಕೋರಿದೆ.

ಚಾಟ್‌ಬಾಟ್‌ ಬಗ್ಗೆ ಗೊತ್ತಿಲ್ಲದವರಿಗೆ, ಇದು ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ ಅಪ್ಲಿಕೇಷನ್‌ ಆಗಿದೆ. ಈ ಪೈಕಿ ChatGPT ಎಂಬುದು ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಚಾಟ್‌ಬಾಟ್‌ಗಳಲ್ಲಿ ಒಂದಾಗಿದೆ. ಇದು ವಿವಿಧ ವಿಷಯಗಳ ಕುರಿತು ಮನುಷ್ಯರೊಂದಿಗೆ ನಿಯಮಿತವಾಗಿ ಸಂಭಾಷಣೆ ನಡೆಸಬಹುದು. 

ಇದನ್ನು ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ನವೆಂಬರ್ 2022 ರಲ್ಲಿ ಈ ಅಪ್ಲಿಕೇಶನ್ ಅಧಿಕೃತವಾಗಿ ಪ್ರಾರಂಭವಾದಾಗಿನಿಂದ, ತನ್ನಲ್ಲಿರುವ ವಿವಿಧ ದಿನನಿತ್ಯದ ಸಮಸ್ಯೆಗಳಿಗೆ ನೀಡುತ್ತಿರುವ ಪ್ರತಿಕ್ರಿಯೆಗಳಿಗೆ ಟ್ರೆಂಡಿಂಗ್ ಆಗಿದೆ ಮತ್ತು ಫಲಿತಾಂಶಗಳು ಪ್ರಭಾವಶಾಲಿಯಾಗಿವೆ. ಆದರೆ, ಈ ಚಾಟ್‌ಬಾಟ್‌ ಸಹ ಒಮ್ಮೊಮ್ಮೆ ತಪ್ಪು ಮಾಡುತ್ತವೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ ನೋಡಿ..

ಮೈಕ್ರೋಸಾಫ್ಟ್ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲ ಅವರು ಜನಪ್ರಿಯ ಆಹಾರ ಪದಾರ್ಥವಾದ ಬಿರಿಯಾನಿ ಕುರಿತು ಚಾಟ್‌ಬಾಟ್ ಅನ್ನು ಸರಿಪಡಿಸಿದ್ದಾಗಿ ಗುರುವಾರ ಹೇಳಿಕೊಂಡಿದ್ದಾರೆ. ಮೈಕ್ರೋಸಾಫ್ಟ್‌ನ ಫ್ಯೂಚರ್ ರೆಡಿ ಲೀಡರ್‌ಶಿಪ್ ಶೃಂಗಸಭೆಗಾಗಿ ಬೆಂಗಳೂರಿಗೆ ಬಂದಿರುವ ಸತ್ಯ ನಾದೆಲ್ಲ ಅವರು ತಂತ್ರಜ್ಞಾನದ ಮಹತ್ವ ಮತ್ತು ಅದು ನಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ ಎಂಬುದರ ಕುರಿತು ಮಾತನಾಡುತ್ತಿದ್ದರು.

ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಧೂಳಿಬ್ಬಿಸಿದ ಸತ್ಯ ನಡೆಲ್ಲಾ ಹಳೆ ವಿಡಿಯೋ

ಈ ವೇಳೆ ವೇದಿಕೆಯಲ್ಲಿ ChatGPT ಬಗ್ಗೆ ಮಾತನಾಡಿದ ಸತ್ಯ ನಾದೆಲ್ಲ, "ನಾನು ಅದಕ್ಕೆ ನಿಜವಾಗಿಯೂ ಪ್ರಶ್ನೆಯೊಂದನ್ನು ಕೇಳೋಣ ಎಂದು ಹೇಳಿದೆ. ದಕ್ಷಿಣ ಭಾರತದ ಟಿಫಿನ್ ಬಗ್ಗೆ ಈ ಪ್ರಶ್ನೆ ಇತ್ತು. ಹಾಗೂ, ನೀವು ಅವೆಲ್ಲವನ್ನೂ ಹೇಗೆ ಶ್ರೇಣೀಕರಿಸುತ್ತೀರಿ ಎಂದು ಕೇಳಿದೆ. ಇದಕ್ಕೆ ಉತ್ತರಿಸಿದ ಚಾಟ್‌ಬಾಟ್‌, ನಾನು ಪ್ರತಿದಿನ ಬೆಳಗಿನ ಉಪಾಹಾರಕ್ಕಾಗಿ ನಾನು ಬಯಸುವ ಎಲ್ಲಾ ವಿಷಯಗಳನ್ನು ಉತ್ತರಿಸಿತು.

ಕೆಲವು ಕಾರಣಗಳಿಂದ ಅದು ಬಿರಿಯಾನಿಯನ್ನು ಟಿಫಿನ್ (ತಿಂಡಿ) ಎಂದು ಭಾವಿಸುತ್ತದೆ ಎಂದು ಸತ್ಯ ನಾದೆಲ್ಲ ಹೇಳಿದರು. ಆದರೆ, ಬಿರಿಯಾನಿಯನ್ನು ತಿಂಡಿ ಎಂದು ನಾನು ಭಾವಿಸುವುದಿಲ್ಲ ಎಂದು ನಾನು ಉತ್ತರ ನೀಡಿದೆ. ಮತ್ತು ನಂತರ ಅದು ತುಂಬಾ ನಯವಾಗಿ ನನ್ನಲ್ಲಿ ಕ್ಷಮೆಯಾಚಿಸಿದೆ. ಹೈದರಾಬಾದಿಯಾದ ನೀವು ಬಿರಿಯಾನಿಯನ್ನು ಟಿಫಿನ್ ಎಂದು ಹೇಳಿ ನನ್ನನ್ನು ಅವಮಾನಿಸಲು ಸಾಧ್ಯವಿಲ್ಲ ಎಂದು ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲ ವೇದಿಕೆಯಲ್ಲಿ ಹೇಳಿದಾಗ ಅಲ್ಲಿದ್ದ ಪ್ರೇಕ್ಷಕರು ಇದಕ್ಕೆ ನಕ್ಕು ಚಪ್ಪಾಳೆ ತಟ್ಟಿದ್ದಾರೆ.

ಇದನ್ನು ಓದಿ: ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಳ್ಲ 'ಪದ್ಮಭೂಷಣ', ಜನವರಿಯಲ್ಲಿ ಭಾರತಕ್ಕೆ ಭೇಟಿ!

ನಂತರ, ಇಡ್ಲಿ, ದೋಸೆ ಮತ್ತು ವಡಾ ಎಲ್ಲಕ್ಕಿಂತ ಉತ್ತಮವಾದ ಟಿಫಿನ್ ಯಾವುದು ಎಂದು ವಾದಿಸುವ ನಾಟಕವನ್ನು ಬರೆಯಲು ChatGPTಯನ್ನು ಕೇಳಿದೆ ಎಂದೂ ಸತ್ಯ ನಾದೆಲ್ಲಾ ಹೇಳಿದರು. ಹಾಗೆ, "ಇದು ಮೋಜಿನ ಸಂಗತಿಯಾಗಿದೆ, ಈ ಉತ್ಪಾದಕ ಮಾದರಿಗಳು ಹೇಗೆ ಕಲ್ಪನೆಯನ್ನು ಸೆರೆಹಿಡಿಯುತ್ತಿವೆ ಎಂಬುದನ್ನು ನೋಡಲು ಆಕರ್ಷಕವಾಗಿದೆ" ಎಂದೂ ಮೈಕ್ರೋಸಾಫ್ಟ್ ಸಿಇಒ ಹೇಳಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ಅತ್ಯಾಧುನಿಕ AI ಮತ್ತು ಕ್ಲೌಡ್ ಆವಿಷ್ಕಾರದ ಬಗ್ಗೆ ತಮ್ಮ ಪ್ರಸ್ತುತಿಯನ್ನೂ ನೀಡಿದ್ದಾರೆ ಸತ್ಯ ನಾದೆಲ್ಲ. ಭಾರತ ಪ್ರವಾಸದಲ್ಲಿರುವ ಇವರು ಬುಧವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿ ಮಾಡಿ ಡಿಜಿಟಲ್ ಡೊಮೇನ್‌ನಲ್ಲಿ ಆಡಳಿತ ಮತ್ತು ಭದ್ರತೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದ್ದರು.

ಇದನ್ನೂ ಓದಿ: ಮನೆಯಿಂದ ಕೆಲಸ ಮಾಡ್ತಿರುವವರು ಸೋಮಾರಿಗಳಾ?: Microsoft ಸಿಇಒ ಏನ್ ಹೇಳಿದ್ರು ನೋಡಿ

ಇಂದು, ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಡಿಜಿಟಲ್ ರೂಪಾಂತರ-ನೇತೃತ್ವದ ಸುಸ್ಥಿರ ಮತ್ತು ಅಂತರ್ಗತ ಆರ್ಥಿಕ ಬೆಳವಣಿಗೆಯ ಮೇಲೆ ಭಾರತದ ಗಮನ ನೋಡಲು ಸ್ಫೂರ್ತಿದಾಯಕವಾಗಿದೆ ಎಂದು ಶ್ಲಾಘಿಸಿದ್ದಾರೆ ಎಂದು ತಿಳಿದುಬಂದಿದೆ.