ಭಾರತದಲ್ಲಿ ಡೈನಾಮಿಕ್ಸ್ 365 ಬಿಸಿನೆಸ್ ಸೆಂಟ್ರಲ್ ಲಭ್ಯತೆ ಪ್ರಕಟಿಸಿದ ಮೈಕ್ರೋಸಾಫ್ಟ್!

ಉದ್ಯಮ ಅಭಿವೃದ್ಧಿ, ಪರಿಹಾರ,  ಸ್ಥಳೀಯ ನಿಯಂತ್ರಣ ಮತ್ತು ಮಾರುಕಟ್ಟೆ ಅವಶ್ಯಕತೆಗಳನ್ನು ಪರಿಹರಿಸುವ ಹಾಗೂ ಉದ್ಯಮದಲ್ಲಿ ಡಿಜಿಟಲೀಕರಣ ತಂದು ಪಾರದರ್ಶಕತೆ ಹಾಗೂ ಸೋರಿಕೆ ತಡೆಯಲು ಮೈಕ್ರೋಸಾಫ್ಟ್ ಡೈನಾಮಿಕ್ಸ್ 365 ಬಿಸಿನೆಸ್ ಸೆಂಟ್ರಲ್ ಸೇವೆ ಪ್ರಕಟಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

Microsoft announces general availability of Dynamics 365 Business Central in India ckm

ಬೆಂಗಳೂರು(ಏ.24): ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ ಸಮಗ್ರ ವ್ಯಾಪಾರ ನಿರ್ವಹಣಾ ಪರಿಹಾರವಾದ ಡೈನಾಮಿಕ್ಸ್ 365 ಬಿಸಿನೆಸ್ ಸೆಂಟ್ರಲ್‍ನ ಸಾಮಾನ್ಯ ಲಭ್ಯತೆಯನ್ನು ಮೈಕ್ರೋಸಾಫ್ಟ್ ಇಂಡಿಯಾ ಪ್ರಕಟಿಸಿದೆ. ಆಲ್-ಇನ್-ಒನ್ ಕ್ಲೌಡ್ ಪರಿಹಾರವಾದ ಡೈನಾಮಿಕ್ಸ್ 365 ಬಿಸಿನೆಸ್ ಸೆಂಟ್ರಲ್, ಕಂಪನಿಯು ವೇಗವಾಗಿ ರೂಪಾಂತರಗೊಳ್ಳಲು ಮತ್ತು ಉತ್ತಮ ಫಲಿತಾಂಶಗಳನ್ನು ನೀಡಲು ಅವರಿಗೆ ಸಹಾಯ ಮಾಡಲು ಮಾರಾಟ, ಸೇವೆ, ಹಣಕಾಸು ಮತ್ತು ಕಾರ್ಯಾಚರಣೆ ತಂಡಗಳನ್ನು ಸಂಪರ್ಕಿತವಾಗಿಡುವ ಮೂಲಕ ವ್ಯವಹಾರವು ನಿರಂತರವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. 

ಇದು ತಾಜ್ ಮಹಲ್ ಅಲ್ವೇ ಅಲ್ಲ, ಹೀಗಿದೆ ನೋಡಿ Microsoft ಹೊಸ ಆಫೀಸ್!

ಇದು ಕ್ಲೌಡ್‍ನಲ್ಲಿ ಅಥವಾ ಕಂಪನಿಯ ಆವರಣದಲ್ಲಿ ನಿಯೋಜಿಸಲು ಕಂಪನಿಯ ಎಂಟರ್‍ಪ್ರೈಸ್  ರಿಸೋರ್ಸ್ ಎಡಿಷನ್ (ಇಆರ್‍ಪಿ) ಅಪ್ಲಿಕೇಶನ್ ಮೈಕ್ರೋಸಾಫ್ಟ್ ಡೈನಾಮಿಕ್ಸ್ ನ್ಯಾವಿಷನ್‍ನ ಸಮೃದ್ಧ ಕಾರ್ಯಕ್ಷಮತೆ ಮತ್ತು ಸಂಪೂರ್ಣ ನಮ್ಯತೆಯನ್ನು ತರುತ್ತದೆ. ಈ ಪರಿಹಾರವನ್ನು ಭಾರತಕ್ಕಾಗಿ ಕಸ್ಟಮೈಸ್ ಮಾಡಲಾಗಿದ್ದು, ಇದರಲ್ಲಿ 500 ಕ್ಕೂ ಹೆಚ್ಚು ಪೂರ್ವ-ಕಾನ್ಫಿಗರ್ ಮಾಡಲಾದ ಬಳಕೆಯ ಪ್ರಕರಣಗಳು ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ), ಮೂಲಆದಾಯದಿಂದ ತೆರಿಗೆಯಿಂದ ಕಡಿತ (ಟಿಡಿಎಸ್), ಮತ್ತು ಮೂಲಆದಾಯದಿಂದ ಸಂಗ್ರಹಿಸಿದ ತೆರಿಗೆ (ಟಿಸಿಎಸ್) ಗಾಗಿ ವ್ಯಾಪಾರ ಸನ್ನಿವೇಶಗಳನ್ನು ಒಳಗೊಂಡಿರುವ ಟ್ಯಾಕ್ಸ್ ಎಂಜಿನ್ ಅಲ್ಲದೆ  ವ್ಯವಹಾರವು ಸುಗಮವಾಗಿ ನಡೆಯಲು ಸ್ಥಳೀಯ ನಿಯಂತ್ರಣ ಮತ್ತು ಮಾರುಕಟ್ಟೆ ಅವಶ್ಯಕತೆಗಳನ್ನು ಪರಿಹರಿಸುವ ಅಂತರ್ಗತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಎಂಎಸ್‍ಎಂಇಗಳ ಅಭಿವೃದ್ಧಿಯಲ್ಲಿ ಡಿಜಿಟಲೀಕರಣವು ಅತ್ಯಂತ ಮಹತ್ವದ್ದಾಗಿದೆ ಮತ್ತು ಅದು ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ, ಸಮಯೋಚಿತ ಗಡುವು ಮತ್ತು ಫಲಿತಾಂಶ-ಆಧಾರಿತವಾಗಿಸುತ್ತದೆ ಎಂಡರು. ತಾಂತ್ರಿಕ ಸಹಯೋಗ, ಸಹಕಾರ ಮತ್ತು ತಂತ್ರಜ್ಞಾನ ಸಂಸ್ಥೆಗಳಿಂದ ಮಾರ್ಗದರ್ಶನಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು. ಭವಿಷ್ಯದಲ್ಲಿ, ಇದು ದಕ್ಷತೆಗಳನ್ನು ಹೆಚ್ಚಿಸುತ್ತದೆ, ಹೆಚ್ಚಿನ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ ಮತ್ತು ದೇಶದ ಎಂಎಸ್‍ಎಂಇಗಳ ಬೆಳವಣಿಗೆಗೆ ಮುಖ್ಯವಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು. 

ಹೊಸ ಪರಿಹಾರದ ಲಭ್ಯತೆಯನ್ನು ಬಿಲ್ಡಿಂಗ್ ಎ ರೆಸಿಲಿಯಂಟ್ ಫ್ಯೂಚರ್ ಎಂಬ ಭಾರತದ ಸಣ್ಣ ಮತ್ತು ಮಧ್ಯಮ ವ್ಯವಹಾರ (ಎಸ್‍ಎಂಬಿ) ಗಳಲ್ಲಿ ಸ್ಥಿತಿಸ್ಥಾಪಕತ್ವದ ನಿರ್ಮಾಣವನ್ನು ಚರ್ಚಿಸಲು ಆಯೋಜಿಸಲಾದ ಶೃಂಗಸಭೆಯಲ್ಲಿ ಘೋಷಿಸಲಾಯಿತು. ಶೃಂಗಸಭೆಯಲ್ಲಿ ಮಾತನಾಡಿದವರಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ, ಮೈಕ್ರೋಸಾಫ್ಟ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೀವ್ ಸೋಧಿ, ಮೈಕ್ರೋಸಾಫ್ಟ್ ಇಂಡಿಯಾದ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಖಾ ತಲ್ಲೂರಿ ಸೇರಿದಂತೆ ಹಲವು ಪ್ರಮುಖ ಭಾರತದ ಉದ್ಯಮದಲ್ಲಿನ ಡಿಜಿಟಲೀಕರಣ ಕುರಿತು ಮಹತ್ವದ ಚರ್ಚೆ ನಡೆಸಿದರು.

Latest Videos
Follow Us:
Download App:
  • android
  • ios