Asianet Suvarna News Asianet Suvarna News

ಮಕ್ಕಳ ಮುಖ ಮರೆಮಾಚಿ ಫೋಟೋ ಹಂಚಿಕೊಂಡ ಫೇಸ್‌ಬುಕ್ ಸಿಇಒ, ನೀವು ಹೇಗೆ ಮಾಡುತ್ತೀರಾ?

ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಫೋಟೋ ಹಂಚಿಕೊಳ್ಳುವುದು ಪೋಷಕರಿಗೆ ಎಲ್ಲಿಲ್ಲದ ಉತ್ಸಾಹ. ಮಕ್ಕಳ ಖಾಸಗಿತನದ ಬಗ್ಗೆ ಪೋಷಕರು ಕಿಂಚಿತ್ತು ಯೋಚಿಸುವುದಿಲ್ಲ. ಆದರೆ ಇದೇ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ಕುಟುಂಬದ ಫೋಟೋವನ್ನು ಹಂಚಿಕೊಳ್ಳುವಾಗ ತೋರಿದ ಜಾಣ್ಮೆ ಹಾಗೂ ಎಚ್ಚರಿಕೆ ನಮ್ಮಲ್ಲಿ ಎಷ್ಟು ಮಂದಿಗೆ ಇದೆ?

Mark Zuckerberg share family photo in Instagram hide 2 daughter face for privacy concerns ckm
Author
First Published Jul 10, 2023, 3:33 PM IST

ನವದೆಹಲಿ(ಜು.10) ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ಫ್ಯಾಮಿಲಿ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲೇನಿದೆ ಹೊಸದು ಅಂತೀರಾ? ಈ ಫೋಟೋದಲ್ಲಿ ಯಾವುದೇ ವಿಶೇಷತೆ ಇಲ್ಲ. ಆದರೆ ಇದನ್ನು ಹಂಚಿಕೊಂಡ ರೀತಿಯಲ್ಲಿ ಹಲವು ಸಂದೇಶಗಳಿವೆ. ಅದರಲ್ಲೂ ಭಾರತೀಯರಿಗೆ ಈ ಫೋಟೋ ನೀಡಿದ ಎಚ್ಚರಿಕೆಯನ್ನು ಗಮನಿಸಿದೇ ಹೋದರೆ ಅಪಾಯವೂ ತಪ್ಪಿದ್ದಲ್ಲ. ತನ್ನದೇ ಮಾಲೀಕತ್ವದ ಸಾಮಾಜಿಕ ಮಾಧ್ಯಮದಲ್ಲಿ ಜುಕರ್‌ಬರ್ಗ್ ಫೋಟೋ ಹಂಚಿಕೊಳ್ಳುವಾಗ ಮಕ್ಕಳ ಮುಖವನ್ನು ಮರೆಮಾಚಿದ್ದಾರೆ. ಈ ಮೂಲಕ ಮಕ್ಕಳ ಖಾಸಗೀತನಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಂಡಿದ್ದಾರೆ. ಇದೀಗ ಇದೇ ಪ್ರೈವಸಿ ಭಾರಿ ಚರ್ಚೆಯಾಗುತ್ತಿದೆ.

ಭಾರತದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಪೋಟೋಗಳನ್ನು ಪೋಸ್ಟ್ ಮಾಡುವುದು ದೊಡ್ಡ ವಿಷವೇ ಅಲ್ಲ. ಪುಟ್ಟ ಮುಗುವಿನ ಪ್ರತಿಯೊಂದು ಹಂತ, ಬೆಳವಣಿಗೆ ಸೇರಿದಂತೆ ಎಲ್ಲವನ್ನೂ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದು ಸಾಮಾನ್ಯ. ನಾವೆಂದು ಮಕ್ಕಳ ಖಾಸಗೀತನ, ಅವರ ಸುರಕ್ಷತೆ ಸೇರಿದಂತೆ ಹಲವು ವಿಚಾರಗಳನ್ನು ಯಾವತ್ತೂ ಯೋಚನೆ ಮಾಡಿಲ್ಲ. ಇದೇ ಕಾರಣಕ್ಕೆ ಮಾರ್ಕ್ ಜುಕರ್‌ಬರ್ಗ್ ಹಾಕಿದ ಫ್ಯಾಮಿಲಿ ಪೋಸ್ಟ್ ಇದೀಗ ಎಚ್ಚರಿಕೆ ಕರೆಗಂಟೆಯಾಗಿದೆ.

 

ಸೋಶಿಯಲ್ ಮೀಡಿಯಾದಿಂದ ರೊಮ್ಯಾಂಟಿಕ್ ಲೈಫೂ ಹಾಳು!

ಮಾರ್ಕ್ ಜುಕರ್‌ಬರ್ಗ್ ತನ್ನ ಪತ್ನಿ ಹಾಗೂ ಮೂವರು ಮಕ್ಕಳ ಜೊತೆಗಿನ ಫ್ಯಾಮಿಲಿ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಜುಕರ್‌ಬರ್ಗ್ 5 ವರ್ಷದ ಪುತ್ರಿ ಹಾಗೂ 7 ವರ್ಷದ ಪುತ್ರಿಯ ಮುಖಕ್ಕೆ ಇಮೋಜಿ ಹಾಕಿದ್ದಾರೆ. ಇನ್ನು ಪುಟ್ಟ ಕಂದನ ಮುಖವನ್ನು ಮರೆ ಮಾಚಿಲ್ಲ. ಜುಕರ್‌ಬರ್ಗ್ ಕಂದನ ಹೊರತುಪಡಿಸಿ ಇನ್ನುಳಿದ ಮಕ್ಕಳ ಫೋಟೋವನ್ನು ಮರೆ ಮಾಚುವ ಮೂಲಕ ಓರ್ವ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಾಕುವ ವ್ಯಕ್ತಿ ಯಾವೆಲ್ಲ ಮುನ್ನಚ್ಚೆರಿಕೆ ವಹಿಸಬೇಕು ಅನ್ನೋದನ್ನು ಸೂಚ್ಯವಾಗಿ ಹೇಳಿದ್ದಾರೆ.

ಜುಕರ್‌ಬರ್ಗ್ ಪೋಸ್ಟ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ನಡೆಯನ್ನು ಹಲವರು ಪ್ರಶಂಸಿದ್ದಾರೆ. ಮಕ್ಕಳ ಖಾಸಗೀತನವನ್ನು ರಕ್ಷಿಸಿದ್ದಾರೆ. ಮಕ್ಕಳ ವೈಯುಕ್ತಿಕ ಮಾಹಿತಿ ಕದಿಯುವ ಭೀತಿಯಿಂದ ಪಾರಾಗಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ತಮ್ಮದೆ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಪೋಟೋವನ್ನು ಜುಕರ್‌ಬರ್ಗ್ ಬ್ಲರ್ ಮಾಡಿದ್ದಾರೆ. ನಾವು ಕಲಿಯಬೇಕಾದ ಪಾಠ ಇದು ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಕೆಲವರು ವ್ಯತಿರಿಕ್ತ ಕಮೆಂಟ್ ಮಾಡಿದ್ದಾರೆ. ಜುಕರ್‌ಬರ್ಗ್ ಫೇಸ್‌ ರೆಕಗ್ನೀಶನ್ ಟೆಕ್ನಾಲಜಿಗೆ ಬಗ್ಗೆ ಮಾತನಾಡುತ್ತಾರೆ. ಆದರೆ ತಮ್ಮ ಮಕ್ಕಳ ಮುಖವನ್ನೇ ಬ್ಲರ್ ಮಾಡಿದ್ದಾರೆ ಬಳಕೆದಾರ ಮಾಹಿತಿ ಕದಿಯವ ಈ ಸಾಮಾಜಿಕ ಮಾಧ್ಯಮಗಳು, ತಮ್ಮ ಮಕ್ಕಳ ಬಗ್ಗೆ ಅತೀವ ಕಾಳಜಿ ವಹಿಸುತ್ತಾರೆ. ಬಳಕೆದಾರರ ಕಾಳಜಿ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಜುಕರ್‌ಬರ್ಗ್ ಮಾತ್ರವಲ್ಲ ಹಲವು ದಿಗ್ಗಜರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮಕ್ಕಳ ಫೋಟೋಗಳನ್ನು ಪೋಸ್ಟ್ ಮಾಡಿದ್ದು ಕಡಿಮೆ. ಒಂದು ವೇಳೆಪೋಸ್ಟ್ ಮಾಡಿದ್ದರೂ ಮುಖ ಮರೆ ಮಾಚುವ ಪ್ರಯತ್ನ ಮಾಡಿದ್ದಾರೆ.ಬಿಲ್ ಗೇಟ್ಸ್, ಸ್ಟೀವ್ಸ್ ಜಾಬ್ ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮದಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. 

ಕಮೆಂಟ್ ಮಾಡಿದರೂ ಸಾಕು ನಿಮ್ಮ ಡೇಟಾ ಕದಿಯುತ್ತೆ ChatGPT, 300 ಬಿಲಿಯನ್ ಮಾಹಿತಿಗೆ ಕನ್ನ!

ಸಾಮಾಜಿಕ ಮಾಧ್ಯಮ ಅತೀ ಹೆಚ್ಚು ಮನರಂಜನೆ ನೀಡುತ್ತದೆ, ಹಲವರು ಸಂಪರ್ಕಕ್ಕೆ ತರುತ್ತದೆ. ಗೆಳೆತನ, ಪರಿಚಯ, ಪ್ರೀತಿ ಹೀಗೆ ಸಂಬಂಧಗಳು ಮುಂದುವರಿಯುತ್ತದೆ. ಇದೀಗ ವ್ಯವಾಹರ, ಮಾರುಕಟ್ಟೆ, ಪ್ರಚಾರ ಎಲ್ಲವೂ ಇದೇ ಸಾಮಾಜಿಕ ಮಾಧ್ಯಮದಲ್ಲಿ ನಡೆಯತ್ತದೆ. ಆದರೆ ಇದು ಸುರಕ್ಷಿತ ತಾಣವಲ್ಲ. ಫೋಟೋಗಳಿಂದ ವಯಸ್ಕರು ತಮಗೆ ಅರಿವಿಲ್ಲದಂತೆ ಅಪಾಯಕ್ಕೆ ಸಿಲುಕಬಹುದು. ಮಾಹಿತಿಗಳನ್ನು ಕದಿಯಬಹುದು. ಏನೂ ಅರಿಯ ಮಕ್ಕಳು ಒಂದು ಫೋಟೋದಿಂದ ಈ ಎಲ್ಲಾ ತಪ್ಪಿಗೆ ಗುರಿಯಾಗುವುದನ್ನು ತಪ್ಪಿಸಲು ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳ ಫೋಟೋ ಹಾಕುವಾಗ ಎಚ್ಚರಿಕೆ ಅತೀ ಅಗತ್ಯ. 

Follow Us:
Download App:
  • android
  • ios