ಡಕೋಟಾ(ಜ.05): ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್ ಪ್ರಾಮುಖ್ಯತೆ ಎಷ್ಟು? ತಮ್ಮ ಆತ್ಮೀಯರು, ಆಪ್ತರು ರಿಕ್ವೆಸ್ಟ್ ಸ್ವೀಕರಿಸಿದಿದ್ದಾಗ ಬೇಜಾರಿಗಿರುವ ಊದಾಹರಣೆಗಳು, ನಿರಾಶೆಗೊಂಡಿರುವ ಘಟನೆಗಳು ಇವೆ. ಕಾರಣ ಸದ್ಯ ಎಲ್ಲವೂ ಸಾಮಾಜಿಕ ಜಾಲತಾಣಗಳ ಮೇಲೆ ನಮ್ಮ ಬದುಕು ಅವಲಂಬಿತವಾಗಿದೆ. ಆದರೆ ಇಲ್ಲೊಬ್ಬ ತನ್ನ ಹಳೇ ಬಾಸ್‌ಗೆ ಫ್ರೇಸ್‌ಬುಕ್ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಎರಡೇ ದಿನದಲ್ಲಿ ಆರೆಸ್ಟ್ ಕೂಡ ಆಗಿದ್ದಾನೆ.

ದುರ್ಬಳಕೆ, ಹ್ಯಾಕ್ ತಡೆಯಲು ಹೊಸ ವರ್ಷಕ್ಕೆ ಫೇಸ್‌ಬುಕ್‌ನಿಂದ ಹೊಸ ರೂಲ್ಸ್!..

ಈ ಕತೆಯಲ್ಲಿ ಟ್ವಿಸ್ಟ್‌ ಇದೆ. ಅಮೆರಿಕದ ಉತ್ತರ ಡಕೋಟಾದ ಕಲೆಬ್ ಬರ್ಗ್‌ಝೈಕ್ ತನ್ನ ಹಳೇ ಕಂಪನಿ ಬಾಸ್‌ಗೆ ರಿಕ್ವೆಸ್ಟ್ ಕಳುಹಿಸಿದ್ದಾನೆ. ಡಿಸೆಂಬರ್ 25ರ ಕ್ರಿಸ್ಮಸ್ ದಿನದಂದು ಬಾಸ್ ಪ್ರೋಫೈಲ್ ನೋಡಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಎರಡು ದಿನ ಕಳೆದರೂ ಹಳೇ ಬಾಸ್ ತನ್ನ ಮನವಿಯನ್ನು ಸ್ವೀಕರಿಸಿಲ್ಲ. ಇದು ಕಲೆಬ್ ಪಿತ್ತ ನೆತ್ತಿಗೇರಿಸಿದೆ.

ತಪ್ಪು ಮಾಹಿತಿ ನೀಡಿದ 167 ಮಿಲಿಯನ್ ಫೇಸ್‌ಬುಕ್ ಬಳಕೆದಾರರ ಖಾತೆ ಕಪ್ಪು ಪಟ್ಟಿಗೆ!

ಮೂರನೇ ದಿನ ಈತ ಮೆಸೆಂಜರ್ ಮೂಲಕ ರಿಕ್ವೆಸ್ಟ್ ಸ್ವೀಕರಿಸುವಂತೆ ಎಚ್ಚರಿಸಿದ್ದಾನೆ. ಇದಕ್ಕೂ ಉತ್ತರ ಬಂದಿಲ್ಲ. ಕೆರಳಿ ಕೆಂಡವಾದ ಕಲೆಬ್, ಮೆಸೆಂಜರ್ ಮೂಲಕ ರಿಕ್ವೆಸ್ಟ್ ಸ್ವೀಕರಿಸಿದ್ದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಕಲೆಬ್, ನೇರವಾಗಿ ಬಾಸ್ ಮನೆಗೆ ತೆರಳಿ ಬಾಗಿಲಿಗೆ ಒದ್ದಿದ್ದಾನೆ. ಹೊರಗೆ ಬರುವಂತೆ ಕೂಗಿದ್ದಾನೆ.

ಬಾಗಿಲು ತೆರೆಯದಿದ್ದಾಗ, ಈತ ತನ್ನ ಆಕ್ರೋಶವನ್ನು ಬಾಗಿಲ ಮೇಲೆ ತೋರಿಸಿದ್ದಾನೆ. ಭಯಗೊಂಡ ಬಾಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು  ಕಲೆಬ್ ಪತ್ತೆ ಹಚ್ಚಿ ಬಂಧಿಸಿದ್ದಾರೆ.