Asianet Suvarna News Asianet Suvarna News

LinkedIn in Hindi: ಪ್ರೊಫೆಷನಲ್ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್ ಈಗ ಹಿಂದಿಯಲ್ಲೂ ಲಭ್ಯ!

*ಪ್ರೊಫೆಷನಲ್ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್!
*ಪ್ರಪಂಚದಾದ್ಯಂತ ಹಿಂದಿ ಮಾತನಾಡುವವರಿಗೆ ಬಳಕೆಗೆ ಲಭ್ಯ
*ಭಾರತದಲ್ಲಿ 82 ಮಿಲಿಯನ್  ಲಿಂಕ್ಡ್‌ಇನ್  ಬಳಕೆದಾರರು

LinkedIn is now available in Hindi Language to support 600 million  speakers globally mnj
Author
Bengaluru, First Published Dec 2, 2021, 1:42 PM IST

ನವದೆಹಲಿ(ಡಿ. 02): ಪ್ರೊಫೆಷನಲ್ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್ (Professional Networking Platform LinkedIn) ಗುರುವಾರ ಹಿಂದಿಯಲ್ಲಿ ಬಳಕೆದಾರಿಗಾಗಿ ಹೊಸ ಇಂಟರ್‌ಫೇಸ್ (Interface) ಅನ್ನು ಅನಾವರಣಗೊಳಿಸಿದ್ದು, ಜಾಗತಿಕವಾಗಿ 600 ಮಿಲಿಯನ್ ಹಿಂದಿ ಭಾಷೆ ಮಾತನಾಡುವವರಿಗೆ ಸೇವೆ ನೀಡುವ ಗುರಿಯನ್ನು ಹೊಂದಿದೆ. ಈ ಬದಲಾವಣೆಯೊಂದಿಗೆ, ಲಿಂಕ್ಡ್‌ಇನ್ ಭಾಷೆಯ ಅಡೆತಡೆಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಹಿಂದಿ ಮಾತನಾಡುವವರಿಗೆ ವೃತ್ತಿಪರ ಮತ್ತು ನೆಟ್‌ವರ್ಕಿಂಗ್ ಅವಕಾಶಗಳಿಗೆ ಹೆಚ್ಚಿನ ಅವಕಾಶಗಳನ್ನು ಇದು ಒದಗಿಸಲಿದೆ. ಹಿಂದಿ ಲಿಂಕ್ಡ್‌ಇನ್  ಪ್ರಾರಂಭದೊಂದಿಗೆ, ಲಿಂಕ್ಡ್‌ಇನ್ ಈಗ ಜಾಗತಿಕವಾಗಿ 25 ಭಾಷೆಗಳನ್ನು (Supports 25 Langauges) ಬೆಂಬಲಿಸುತ್ತದೆ.

"ಕಳೆದ ವರ್ಷದಲ್ಲಿ ನಾವು ಹೆಚ್ಚಿನ ಯೂಸರ್‌ ಎಂಗೇಜ್‌ಮೇಂಟ್ ಮತ್ತು ಬಳಕೆದಾರರ ಬೆಳವಣಿಗೆಗೆ ಸಾಕ್ಷಿಯಾಗಿದ್ದೇವೆ ಮತ್ತು ಈ ಉತ್ತೇಜಕ ಬದಲಾವಣೆಯ ಹಂತದಲ್ಲಿ ನಾವು ಪ್ರತಿಯೊಬ್ಬ ಉದ್ಯೋಗಿಗೂ ಆರ್ಥಿಕ ಅವಕಾಶವನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಮ್ಮ ಕಾರ್ಯ ವಿಧಾನವನ್ನು ಬಲಪಡಿಸುತ್ತಿದ್ದೇವೆ ಮತ್ತು ಜಗತ್ತಿನ್ನೆಲ್ಲೆಡೆ ಹಿಂದಿ ಮಾತನಾಡುವವರಿಗೆ ಭಾಷಾ ಅಡೆತಡೆಗಳನ್ನು ತೆಗೆದುಹಾಕುತ್ತಿದ್ದೇವೆ." ಎಂದು ಲಿಂಕ್ಡ್‌ಇನ್‌ನ ಇಂಡಿಯಾ ಕಂಟ್ರಿ ಮ್ಯಾನೇಜರ್ ಅಶುತೋಷ್ ಗುಪ್ತಾ (Ashutosh Gupta) ಹೇಳಿಕೆಯಲ್ಲಿ ತಿಳಿಸಿದ್ದಾರೆ.

Desktop, Android ಮತ್ತು iOS ಫೋನ್‌ಗಳಲ್ಲಿ ಲಭ್ಯ!

ಗುರುವಾರದಿಂದ, ಹಿಂದಿಯಲ್ಲಿ ಲಿಂಕ್ಡ್‌ಇನ್‌ನ ಹಂತ 1ರ ರೋಲ್-ಔಟ್‌ನ ಭಾಗವಾಗಿ, ಬಳಕೆದಾರರು ಡೆಸ್ಕ್‌ಟಾಪ್‌ (Desktop̧) ಆಂಡ್ರಾಯ್ಡ್  (Android) ಮತ್ತು ಐಒಎಸ್ (iOS) ಫೋನ್‌ಗಳಲ್ಲಿ  ತಮ್ಮ ಫೀಡ್, ಪ್ರೊಫೈಲ್, ಉದ್ಯೋಗಗಳು ಮತ್ತು ಸಂದೇಶ ಕಳುಹಿಸುವಿಕೆಯನ್ನು ಹಿಂದಿ ಭಾಷೆಯಲ್ಲಿ ಬಳಸಬಹುದಾಗಿದೆ.

Book Uber Ride on WhatsApp: ಊಬರ್ ರೈಡ್ ಹೊಸ ಫೀಚರ್‌ : ಈಗ ವಾಟ್ಸಪ್‌ನಲ್ಲೂ ಕ್ಯಾಬ್ ಬುಕ್ಕಿಂಗ್!

ಮುಂದಿನ ಹಂತವಾಗಿ,  ಬ್ಯಾಂಕಿಂಗ್ ಮತ್ತು ಸರ್ಕಾರಿ ಉದ್ಯೋಗಗಳು (Banking and Government Jobs) ಸೇರಿದಂತೆ ಕೈಗಾರಿಕೆಗಳಾದ್ಯಂತ ಹಿಂದಿ ಮಾತನಾಡುವ ವೃತ್ತಿಪರರಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ವ್ಯಾಪ್ತಿಯನ್ನು ವಿಸ್ತರಿಸಲು ಲಿಂಕ್ಡ್‌ಇನ್ ಕೆಲಸ ಮಾಡುತ್ತಿದೆ. ಪ್ಲಾಟ್‌ಫಾರ್ಮ್ ಮುಂಬರುವ ವಾರಗಳಲ್ಲಿ ಹೆಚ್ಚಿನ ಹಿಂದಿ ಪ್ರಕಾಶಕರು (Publishers) ಮತ್ತು ರಚನೆಕಾರರನ್ನು (Creators) ಸೇರಿಸುವುದನ್ನು ಮುಂದುವರಿಸುತ್ತದೆ ಮತ್ತು ಹಿಂದಿಯಲ್ಲಿ ಸದಸ್ಯರ ತೊಡಗಿಸಿಕೊಳ್ಳುವಿಕೆ ಮತ್ತು ಸಂಭಾಷಣೆಗಳನ್ನು ಉತ್ತೇಜಿಸಲಿದೆ.

ಹಿಂದಿಯಲ್ಲಿ ಬಳಕೆ ಹೇಗೆ?

ಸ್ಮಾರ್ಟ್‌ಫೋನ್ ಬಳಕೆದಾರರು ಹಿಂದಿಯಲ್ಲಿ ಲಿಂಕ್ಡ್‌ಇನ್ ಮೊಬೈಲ್ ಅಪ್ಲಿಕೇಶನ್ ಅನ್ನು ವೀಕ್ಷಿಸಲು ಫೋನ್ ಸೆಟ್ಟಿಂಗ್‌ನಲ್ಲಿ (Setting) ತಮ್ಮ ಆದ್ಯತೆಯ ಸಾಧನ ಭಾಷೆಯಾಗಿ (Preffered Langauge) ಹಿಂದಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಈಗಾಗಲೇ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ (Smartphone) ಹಿಂದಿಯನ್ನು ತಮ್ಮ ಆದ್ಯತೆಯ ಭಾಷೆಯಾಗಿ ಬಳಸುತ್ತಿರುವ ಸದಸ್ಯರಿಗೆ, ಲಿಂಕ್ಡ್‌ಇನ್ ಅನುಭವವು ಸ್ವಯಂಚಾಲಿತವಾಗಿ ಹಿಂದಿಯಲ್ಲಿ ಲಭ್ಯವಿರಲಿದೆ.

Google best apps 2021: ಗೂಗಲ್ ಪ್ರಕಾರ 2021ರ ಬೆಸ್ಟ್ ಆಪ್ ಯಾವುದು ಗೊತ್ತಾ?

ಡೆಸ್ಕ್‌ಟಾಪ್‌ನಲ್ಲಿ, ಬಳಕೆದಾರರು ತಮ್ಮ ಲಿಂಕ್ಡ್‌ಇನ್ ಮುಖಪುಟದ ಮೇಲ್ಭಾಗದಲ್ಲಿರುವ 'Me' ಐಕಾನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ಮತ್ತು 'Settings and Privacy' ಆಯ್ಕೆ ಮಾಡಿ, ನಂತರ ಎಡಭಾಗದಲ್ಲಿರುವ 'Account Preferences' ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.  ನಂತರ 'Site Preferences' ಆಯ್ಕೆ ಮಾಡಿ, ಭಾಷೆ ಮುಂದಿನ ಬದಲಾಯಿಸಿ ಕ್ಲಿಕ್ ಮಾಡಿ ಮತ್ತು ಡ್ರಾಪ್ ಡೌನ್ (drop down) ಪಟ್ಟಿಯಿಂದ 'ಹಿಂದಿ' ಆಯ್ಕೆ ಮಾಡಿದರೆ ಲಿಂಕ್ಡ್‌ಇನ್ ಹಿಂದಿ ಬಳಕೆಗೆ ಲಭ್ಯವಾಗಲಿದೆ.

ಭಾರತದಲ್ಲಿ 82 ಮಿಲಿಯನ್  ಲಿಂಕ್ಡ್‌ಇನ್  ಬಳಕೆದಾರರು

ಭಾರತವು ಲಿಂಕ್ಡ್‌ಇನ್‌ ಬೆಳವಣಿಗೆಗೆ ಪ್ರಮುಖ ಮಾರುಕಟ್ಟೆಯಾಗಿದೆ ಮತ್ತು ಅಮೆರಿಕಾ (US) ನಂತರ ಬಳಕೆದಾರರ ವಿಷಯದಲ್ಲಿ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. 800 ಮಿಲಿಯನ್ ಸದಸ್ಯರ ಜಾಗತಿಕ ಸಮುದಾಯದಲ್ಲಿ ಭಾರತ 82 ಮಿಲಿಯನ್ ಸದಸ್ಯರನ್ನು ಹೊಂದಿದೆ. ಕಳೆದ ಮೂರು ವರ್ಷಗಳಲ್ಲಿ ಭಾರತದ ಸದಸ್ಯರ ಮೂಲವು 20+ ಮಿಲಿಯನ್‌ಗಳಷ್ಟು ಬೆಳೆದಿದೆ (15 ಪ್ರತಿಶತ ವರ್ಷದಿಂದ ವರ್ಷಕ್ಕೆ ಬೆಳವಣಿಗೆ). ಜತೆಗೆ  ಕೊರೋನಾ ಸಂಕ್ರಾಮಿಕ ಸಮಯದಲ್ಲಿ ಲಿಂಕ್ಡ್‌ಇನ್ನಲ್ಲಿ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.

Follow Us:
Download App:
  • android
  • ios