Google best apps 2021: ಗೂಗಲ್ ಪ್ರಕಾರ 2021ರ ಬೆಸ್ಟ್ ಆಪ್ ಯಾವುದು ಗೊತ್ತಾ?
ಪ್ರತಿ ವರ್ಷದಂತೆ ಈ ವರ್ಷವೂ ಗೂಗಲ್ (Google), ವರ್ಷದ ಅತ್ಯುತ್ತಮ ಆಪ್‌ಗಳ ಪಟ್ಟಿಯನ್ನು ಪ್ರಕಟಿಸಿದೆ. ಬೆಂಗಳೂರು ಮೂಲದ ಬಿಟ್‌ಕ್ಲಾಸ್ (BitClass) ಭಾರತದ ಅತ್ಯುತ್ತಮ ಆಪ್ ಎಂಬ ಕೀರ್ತಿಗೆ ಪಾತ್ರವಾಗಿದೆ. ಅದೇ ರೀತಿ, ಬೇರೆ ಬೇರೆ ವಿಭಾಗದಲ್ಲಿ ಗೂಗಲ್ ಹಲವು ಆಪ್‌ಗಳ ಪಟ್ಟಿಯನ್ನು ಪ್ರಕಟಿಸಿದೆ.
2022 ಹೊಸ ವರ್ಷದ ಸ್ವಾಗತಕ್ಕೆ ಇನ್ನು ಕೇವಲ 30 ದಿನಗಳು ಮಾತ್ರ ಬಾಕಿ. ಈ ಹೊತ್ತಿನಲ್ಲಿ ಕಳೆದು ಹೋಗುತ್ತಿರುವ 2021ರ ವರ್ಷದಲ್ಲಿನ ಬೆಳವಣಿಗೆ ನೋಡುವುದು ಸಹಜ. ಅದರಂತೆ ಪ್ರತಿ ವರ್ಷದ ಅಂತ್ಯಕ್ಕೆ ಗೂಗಲ್ (Google) ಕಂಪನಿಯು, ಗೂಗಲ್ ಪ್ಲೇ ಸ್ಟೋರ್ (Google Play Sotre)ನಲ್ಲಿ ಅತ್ಯುತ್ತಮ ಆಪ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ವರ್ಷವೂ ಅಂಥ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರತಿ ವರ್ಷವೂ ಅತ್ಯತ್ತಮ ಆಪ್ ಘೋಷಣೆ ಮಾಡಲಾಗುತ್ತದೆ. ಅದರಂತೆ ಕಂಪನಿಯು 2021ರ ಅತ್ಯುತ್ತಮ ಆಪ್ ಎಂದು ಬಿಟ್‌ಕ್ಲಾಸ್ (BitClass- Best of App of 2021) ಅನ್ನು ಗುರುತಿಸಿದೆ. ಬಿಟ್‌ಕ್ಲಾಸ್ ಆಪ್ ಒಂದು cohort ಆಧರಿತ ಲರ್ನಿಂಗ್ ಆಪ್ ಆಗಿದೆ. ಇನ್ನು ಕಂಪನಿಯು ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ-ಬಿಜಿಎಂಐ(Battlegrounds Mobile India- BGMI) ಅನ್ನು 2021ರ ಅತ್ಯುತ್ತಮ ಗೇಮ್ ಆಪ್ ಎಂದು ಘೋಷಿಸಿದೆ. ಇದೇ ವೇಳೆ, ಕ್ಲಬ್‌ಹೌಸ್ (Clubhouse) ಆಪ್ ಅನ್ನು ಗೂಗಲ್, 2021ರ ಬಳಕೆದಾರರ ಆಯ್ಕೆ ಆಪ್ (Users' Choice App of 2021) ಎಂದು ಪ್ರಕಟಿಸಿದೆ. ಇಷ್ಟು ಮಾತ್ರವಲ್ಲದೇ ಬೇರೆ ಬೇರೆ ಕೆಟಗರಿಯಲ್ಲಿ ಗೂಗಲ್ ಇನ್ನೂ ಅನೇಕ ಆಪ್‌ಗಳಲ್ಲಿ ಭಾರತದ ಮಟ್ಟಿಗೆ ಘೋಷಿಸಿದೆ.
2021ರ ವರ್ಷದ ಅತ್ಯುತ್ತಮ ಆಪ್ ಆಗಿರುವ ಬಿಟ್‌ಕ್ಲಾಸ್ ಅನ್ನು ಬೆಂಗಳೂರು ಮೂಲದ ಉದ್ದಿಮೆದಾರರು ಅಭಿವೃದ್ಧಿಪಡಿಸಿದ್ದಾರೆ. ಈ ಬಿಟ್‌ಕ್ಲಾಸ್ ಟೀಚರ್ಸ್ ತಮಗೆ ಇಷ್ಟವಾದ ಕೋರ್ಸ್ ಅಥವಾ ಕ್ಲಾಸ್‌ಗಳನ್ನು ರಚಿಸಲು ಇದು ಅನುವು ಮಾಡಿಕೊಡುತ್ತದೆ. ಒಮ್ಮೆ ಬಿಟ್‌ಕ್ಲಾಸ್‌ನಲ್ಲಿ ಟೀಚರ್ಸ್ ನೋಂದಣಿ ಮಾಡಿಕೊಂಡರೆ ಸಾಕು, ಅವರು ತಮ್ಮದೇ ಕ್ಲಾಸ್ ರಚಿಸಿಕೊಳ್ಳಬಹುದು, ಅದನ್ನು ಷೆಡ್ಯೂಲ್ ಮಾಡಬಹುದು ಮತ್ತು ವಿದ್ಯಾರ್ಥಿಗಳಿಂದೆ ನೋಂದಣಿ ಪಡೆದುಕೊಂಡ ಬಳಿಕ ಲೈವ್ ಆಗಿ ಕ್ಲಾಸ್ ಮಾಡಬಹುದು. ಈ ಆಪ್ ಅನ್ನು ವರ್ಷದ ಅತ್ಯುತ್ತಮ ಆಪ್ ಎಂದು ಘೋಷಿಸಿರುವ ಗೂಗಲ್, ಭಾರತದಲ್ಲಿ ಡಿಜಿಟಲ್ ಕಲಿಕೆಯ ಸಂಸ್ಕೃತಿಯ ಪ್ರತಿಷ್ಠಾಪಿಸಲು ನಾವೀನ್ಯತೆಯ ಸ್ಥಳೀಯ ಪರಿಹಾರಗಳಿಂದ ಉತ್ತೇಜಿಸಲಾಗಿದೆ ಎಂದು ಹೇಳಿದೆ.
Infinix Note 11S: ಭಾರತದಲ್ಲಿ ಶೀಘ್ರ ಲಾಂಚ್
ಗೂಗಲ್ ಹಲವು ಕೆಟಗರಿಗಳಲ್ಲಿ 2021ರ ಬೆಸ್ಟ್ ಆಪ್‌ಗಳನ್ನು ಘೋಷಿಸದೆ. ಆ ಪೈಕಿ ಬೆಸ್ಟ್ ಆಪ್ ಫಾರ್ ಫನ್ ವಿಭಾಗದಲ್ಲಿ FrontRow ಆಪ್ ಅನ್ನು ಪ್ರಕಟಿಸಲಾಗಿದೆ.
ಭಾರತದಲ್ಲಿ ಗೂಗಲ್ ಪ್ರಕಟಿಸಿರುವ 2021ರ ಬೆಸ್ಟ್ ಆಪ್‌ಗಳ ಪಟ್ಟಿ ಹೀಗಿದೆ: ಬಿಟ್‌ಕ್ಲಾಸ್ (Bitclass: Learn Anything. Live. Together!), ಫ್ರಂಟ್‌ರೋ (FrontRow: Learn Singing, Music, Rap, Comedy & More), ಕ್ಲಬ್‌ಹೌಸ್ (Clubhouse: The Social Audio App), ಹಾಟ್‌ಸ್ಟೆಪ್ (Hotstep), ಸೋರ್ಟ್ಜಿ (Sortizy - Recipes, Meal Planner & Grocery Lists), ಸರ್ವ (Sarva - Yoga & Meditation), ಗಾರ್ಡಿಯನ್ಸ್ ಫ್ರಮ್ ಟ್ರೂಕಾಲರ್ (Guardians from Truecaller), ಎಂಬೈಬ್ (Embibe: Learning Outcomes App), ಇವಾಲ್ವ್ ಮೆಂಟಲ್ ಹೆಲ್ತ್(Evolve Mental Health: Meditations, Self-Care & CBT), ಜಂಪಿಂಗ್ ಮೈಂಡ್ಸ್ (Jumping Minds - Talk & Feel Better), ಮೂನ್‌ಬೀಮ್(Moonbeam I Podcast Discovery), ಎವರ್‌ಗ್ರೀನ್ ಕ್ಲಬ್ (Evergreen Club - Health, Fitness, Fun & Learning), ಬೀಯಿಂಗ್ (Being: your mental health friend), ಸ್ಪೀಚೀಫೈ (Speechify - text to speech tts), ಹೌಜ್ (Houzz - Home Design & Remodel), ಕ್ಯಾನ್ವಾ (Canva), ಕಾನ್ಸೆಪ್ಟ್ಟ್ (Concepts: Sketch, Note, Draw), ಸ್ಲೀಪ್ ಸೈಕಲ್ (Sleep Cycle: Sleep analysis & Smart alarm clock.
Screen Glass Protector:ಇನ್ನು ಫೋನ್ ಸ್ಕ್ರೀನ್ ಒಡೆಯಲ್ಲ ಬಿಡಿ, ಬರ್ತಿದೆ ಅಲ್ಟ್ರಾಹಾರ್ಡ್ ಗ್ಲಾಸ್!