ಕೇಂದ್ರದಿಂದ ಮತ್ತೊಂದು ಬ್ಯಾನ್ ನೋಟಿಸ್, 67 ಅಶ್ಲೀಲ ವೆಬ್‌ಸೈಟ್ ನಿಷೇಧಕ್ಕೆ ಆದೇಶ!
ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ ಭಾರಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಮತ್ತೊಂದು ಬ್ಯಾನ್ ನೋಟೀಸ್ ನೀಡಿದೆ. ದೇಶದಲ್ಲಿನ 67 ಅಶ್ಲೀಲ ವೆಬ್‌ಸೈಟ್ ಬ್ಲಾಕ್ ಮಾಡುವಂತೆ ನೋಟಿಸ್ ನೀಡಿದೆ.
ನವದೆಹಲಿ(ಸೆ.29): ಭಯೋತ್ಪಾದನೆ ಚಟುವಟಿಕೆ, ಉಗ್ರವಾದ ಪೋಷಣೆ ನೀಡುತ್ತಿದ್ದ ಪಿಎಫ್ಐ ಹಾಗೂ ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಬ್ಯಾನ್ ಆದೇಶ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕೇಂದ್ರದಿಂದ ಮತ್ತೊಂದು ಬ್ಯಾನ್ ನೋಟಿಸ್ ಹೊರಬಿದ್ದಿದೆ. 2021ರ ಐಟಿ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ 67 ಅಶ್ಲೀಲ ವೆಬ್‌ಸೈಟ್ ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಅಂತರ್ಜಾಲ ಕಂಪನಿಗಳಿಗೆ ನೋಟಿಸ್ ನೀಡಿದೆ. ಈ ಕುರಿತು ಕೇಂದ್ರ ಸರ್ಕಾರ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್‌ಗಳಿಗೆ ಇಮೇಲ್ ಮಾಡಿದೆ. 63 ಅಶ್ಲೀಲ ವೆಸ್‌ಸೈಟ್‌ಗಳನ್ನು ಪುಣೆ ಕೋರ್ಟ್ ನೀಡಿದ ಆದೇಶದಂತೆ ಹಾಗೂ ಇನ್ನುಳಿದ 4 ವೆಬ್‌ಸೈಟ್‌ಗಳನ್ನು ಉತ್ತರಖಂಡ ಹೈಕೋರ್ಟ್ ನೀಡಿದ ಆದೇಶದ ಅಡಿಯಲ್ಲಿ ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ನೋಟಿಸ್ ನೀಡಿದೆ.
2021ರಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊಸ ಐಟಿ ನಿಯಮ ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ಇದೀಗ 67 ಪೋರ್ನ್ ವೆಬ್‌ಸೈಟ್ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಇಂಟರ್ನೆಟ್ ಸರ್ವೀಸ್ ಪ್ರೊವೈಡರ್‌ಗೆ ವೆಬ್‌ಸೈಟ್ ಮಾಹಿತಿ, ಯೂಆರ್‌ಎಲ್ ನೀಡಿರುವ ಕೇಂದ್ರ ಸರ್ಕಾರ, ಈ ವೆಬ್‌ಸೈಟ್‌ನಲ್ಲಿ ಮಹಿಳೆಯರ ಘನತೆಗೆ ಕಳಂಗ ತರುವ ಅಶ್ಲೀಲ ವಿಡಿಯೋಗಳು ಇವೆ. ಈ ವಿಡಿಯೋಗಳು ಮಾರ್ಫ್ ಮಾಡಲಾಗಿರುವ ವಿಡಿಯೋಗಳಾಗಿವೆ. 2021ರ ಐಟಿ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವ ಈ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ನೋಟಿಸ್‌ನಲ್ಲಿ ಸೂಚಿಸಿದೆ.
ಭಾರತದ ವಿರುದ್ಧ ಸುಳ್ಳು ಮಾಹಿತಿ, 1 ವರ್ಷದಲ್ಲಿ 747 ವೆಬ್‌ಸೈಟ್, 94 ಯೂಟ್ಯೂಬ್‌ಗೆ ನಿರ್ಬಂಧ!
ನಿಯಮಬಾಹಿರವಾಗಿ ಈ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುತ್ತಿದೆ. ಮಹಿಳೆಯ ಮುಖಗಳನ್ನು, ನಗ್ನ ವಿಡಿಯೋಗಳನ್ನು ಮಾರ್ಫ್ ಮಾಡಲಾಗಿದೆ. ಮಹಿಳೆಯರ ನಮತ್ರಕೆ ಕಳಂಕ ತರುವ, ಕೌರ್ಯವನ್ನು, ಅತ್ಯಾಚಾರವನ್ನು ಪ್ರಚೋಧಿಸುವ ಕುರಿತು ವಿಡಿಯೋಗಳು ಈ ವೆಬ್‌ಸೈಟ್‌ಗಳಲ್ಲಿದೆ. ಭಾರತದ ಐಟಿ ನಿಯಮಕ್ಕೆ ವಿರುದ್ಧವಾಗಿರುವ ಈ ವೆಬ್‌ಸೈಟ್‌ಗಳನ್ನು ಈ ಕೂಡಲೆ ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಸೂಚಿಸಿದೆ.
ವೆಬ್‌ಸೈಟ್, ಯೂಟ್ಯೂಬ್ ಚಾನೆಲ್, ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ಬಧಿಸುವುದು ಇದೇ ಮೊದಲಲ್ಲ. ಭಾರತದ ಸೌರ್ವಭೌಮತೆಗೆ, ಸುಳ್ಳು ಮಾಹಿತಿ ಹರಡುವ, ಜನರನ್ನು ದಾರಿ ತಪ್ಪಿಸುವ, ಪ್ರಚೋದಿಸುವ ಮಾಹಿತಿಗಳ ವಿರುದ್ಧವೂ ಕೇಂದ್ರ ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ
WhatsApp Accounts Ban: ಅಕ್ಟೋಬರ್‌ನಲ್ಲಿ 20 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಪ್!
ಸುಳ್ಳು ಮಾಹಿತಿ ಪ್ರಸಾರ: 16 ಯೂಟ್ಯೂಬ್ ಚಾನೆಲ್ ನಿರ್ಬಂಧ
ದೇಶದ ಭದ್ರತೆ, ಅಂತಾರಾಷ್ಟ್ರೀಯ ಸಂಬಂಧ ಮತ್ತು ಸಾರ್ವಜನಿಕ ಆಡಳಿತಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದ ಪಾಕಿಸ್ತಾನ ಮೂಲದ ಚಾನೆಲ್ ಸೇರಿದಂತೆ 16 ಯೂಟ್ಯೂಬ್ ಚಾನೆಲ್‌ಗಳನ್ನು ಭಾರತ ನಿರ್ಬಂಧಿಸಿತ್ತು. ಇವುಗಳಲ್ಲಿ 6 ಚಾನಲ್‌ಗಳು 1 ಫೇಸ್‌ಬುಕ್ ಪೇಜ್ ಪಾಕಿಸ್ತಾನದಿಂದ ನಿರ್ವಹಿಸಲ್ಪಡುತ್ತಿದ್ದವು ಎಂದು ಸರ್ಕಾರದ ಪ್ರಕಟಣೆ ತಿಳಿಸಿತ್ತು. ಈ ಎಲ್ಲಾ ಯೂಟ್ಯೂಬ್ ಚಾನೆಲ್‌ಗಳು ಒಟ್ಟಾರೆಯಾಗಿ 68 ಕೋಟಿಗೂ ಅಧಿಕ ವೀಕ್ಷಕರನ್ನು ಹೊಂದಿದ್ದವು. ದೇಶದಲ್ಲಿ ಆತಂಕ, ಕೋಮು ದ್ವೇಷ ಸೃಷ್ಟಿಸಲು ಈ ಚಾನಲ್‌ಗಳ ಮೂಲಕ ಸುಳ್ಳು, ಪರೀಶೀಲಿಸದ ಮಾಹಿತಿಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಇವುಗಳಲ್ಲಿ ಯಾವುದೇ ಚಾನೆಲ್‌ಗಳು ಐಟಿ ನಿಯಮದಂತೆ ಸರ್ಕಾರದಿಂದ ಅನುಮತಿ ಪಡೆದುಕೊಂಡಿರಲಿಲ್ಲ ಎಂದು ಐಟಿ ಸಚಿವಾಲಯ ತಿಳಿಸಿದೆ.