Asianet Suvarna News Asianet Suvarna News

Lickable TV Srceen: ಇನ್ನು ಮುಂದೆ ಟಿವಿ ನೋಡೋದಷ್ಟೇ ಅಲ್ಲ ಸ್ಕ್ರೀನ್ ಮೇಲೆ ರುಚಿ ಕೂಡ ಆಸ್ವಾದಿಸಬಹುದು!

ಕೋವಿಡ್ -19 ಯುಗದಲ್ಲಿ, ಈ ರೀತಿಯ ತಂತ್ರಜ್ಞಾನವು ಜನರು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸುವ ಮತ್ತು ಸಂವಹನ ನಡೆಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಮೀಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹೋಮಿ ಮಿಯಾಶಿತಾ ಹೇಳಿದ್ದಾರೆ.

A Japanese professor has developed a lickable TV screen that can imitate food flavours mnj
Author
Bengaluru, First Published Dec 24, 2021, 11:53 AM IST

Tech Desk: ತಂತ್ರಜ್ಞಾನ ಕ್ಷೇತ್ರ ಬೆಳದಂತೆ ಜನರನ್ನು ಅಚ್ಚರಿಗೊಳಿಸುವ ಆವಿಷ್ಕಾರಗಳು ಬೆಳಕಿಗೆ ಬರುತ್ತಿವೆ. ಇಲ್ಲಿವರೆಗೂ ಕೇವಲ ಮನರಂಜನೆಯ ಕಾರ್ಯಕ್ರಮಗಳನ್ನು ನೋಡಲು, ಹೆಚ್ಚೆಂದರೆ ಗೇಮ್ಸ ಆಟವಾಡಲು ಬಳಕೆಯಾಗುತ್ತಿದ್ದ ಟಿವಿ ಪರದೆಗಳು ಇನ್ನು ಮುಂದೆ ಆಹಾರದ ರುಚಿಯನ್ನು ಅನುಭವಿಸುವ ಅವಕಾಶ ನೀಡಲಿವೆ. ಹೌದು! ಇಂಥಹದೊಂದ್ದು ವಿಶಿಷ್ಟ ಟಿವಿ ಮಾದರಿಯನ್ನು ಜಪಾನಿನ ಪ್ರಾಧ್ಯಾಪಕರೊಬ್ಬರು ಅಭಿವೃದ್ಧಿಪಡಿಸಿದ್ದು ಹಲವು ವಿಧವಾದ ಆಹಾರದ ರುಚಿಗಳನ್ನು ಆಸ್ವಾದಿಸಬಹುದಾಗಿದೆ.  ಇದು ಸೆನ್ಸರ್‌ ತಂತ್ರಜ್ಞಾನದ ಅನುಭವವನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತೊಂದು ಹೆಜ್ಜೆಯಾಗಿದೆ.

ಟೇಸ್ಟ್ ದಿ ಟಿವಿ (ಟಿಟಿಟಿವಿ) ಎಂದು ಕರೆಯಲಾಗುವ ಈ ಸಾಧನವು ನಿರ್ದಿಷ್ಟ ಆಹಾರದ ರುಚಿಯನ್ನು ನೀಡಲು  10 ಫ್ಲೇವರ್‌ಗಳುಳ್ಳ ಡಬ್ಬಿಗಳ ಬಳಸುತ್ತದೆ. ಈ ಸುವಾಸನೆಗಳು ನಂತರ ಟಿವಿ ಪರದೆಯ ಮೇಲೆ ಬಂದು  ಬಳಕೆದಾರರು ರುಚಿ ಆಸ್ವಾದಿಸಬಹುದಾಗಿದೆ. ಕೋವಿಡ್ -19 ಹರಡುತ್ತಿರುವ ಈ ಸಮಯದಲ್ಲಿ ಈ ರೀತಿಯ ತಂತ್ರಜ್ಞಾನವು ಜನರು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸುವ ಮತ್ತು ಸಂವಹನ ನಡೆಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಮೀಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹೋಮಿ ಮಿಯಾಶಿತಾ (Homei Miyashita) ಹೇಳಿದ್ದಾರೆ.

 

 

"ಮನೆಯಲ್ಲಿಯೇ ಇರುವಾಗಲೂ ಜನರು ಪ್ರಪಂಚದ ಇನ್ನೊಂದು ಬದಿಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ತಿನ್ನುವಂತಹ ಅನುಭವವನ್ನು ಹೊಂದಲು ಸಾಧ್ಯವಾಗುವಂತೆ ಮಾಡುವುದು ಇದರ ಗುರಿಯಾಗಿದೆ" ಎಂದು ಮಿಯಾಶಿತಾ ಹೇಳಿದ್ದಾರೆ. ಮಿಯಾಶಿತಾ ತಮ್ಮ ಸುಮಾರು 30 ವಿದ್ಯಾರ್ಥಿಗಳ ತಂಡದೊಂದಿಗೆ ಈ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ. ಇದು ಆಹಾರದ ರುಚಿಯನ್ನು ಉತ್ಕೃಷ್ಟಗೊಳಿಸುವ ಫೋರ್ಕ್ ಸೇರಿದಂತೆ ವಿವಿಧ ಸುವಾಸನೆ-ಸಂಬಂಧಿತ ಸಾಧನಗಳನ್ನು ತಯಾರಿಸಿದೆ.

ಗಾಳಿಯಿಂದಲೇ ಶುದ್ಧ ನೀರು ಉತ್ಪಾದಿಸುತ್ತಿದೆ ಬೆಂಗಳೂರು ಮೂಲದ ಈ ಸ್ಟಾರ್ಟಪ್

ನವೀಕರಿಸಬಹುದಾದ ಶಕ್ತಿ (Renewable Energy) ಬಳಕೆ ಚರ್ಚೆಗಳು ದೇಶಾದ್ಯಂತ ನಡೆಯುತ್ತಿವೆ. ಉದ್ಯಮಗಳಲ್ಲಿ ನವೀಕರಿಸಬಹುದಾದ ಶಕ್ತಿ ಬಳಕೆ ಬಗ್ಗೆ ಜಾಗೃತಿ ಮೂಡುತ್ತಿದೆ. ಈ ಬೆನ್ನಲ್ಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ.   ಸೌರ ವಿಕಿರಣವನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ದ್ಯುತಿವಿದ್ಯುಜ್ಜನಕ ಸೌರಶಕ್ತಿ ಅಥವಾ  ವಿದ್ಯುತ್ ಉತ್ಪಾದಿಸಲು ಗಾಳಿ ಟರ್ಬೈನ್‌ಗಳ (Air Turbine) ಬಳಕೆ ಇತ್ಯಾದಿ ನವೀಕರಿಸಬಹುದಾದ ಶಕ್ತಿಯ ಉದಾಹರಣೆಗಳಾಗಿವೆ. ವಿದ್ಯುಚ್ಛಕ್ತಿ ಕ್ಷೇತ್ರ ಅಭಿವೃದ್ಧಿ ಜತೆಗೆ ಈ ಸಮಯದಲ್ಲಿ ತುರ್ತಾಗಿ ಅಭಿವೃದ್ಧಿ ಹೊಂದಬೇಕಾದ ಮತ್ತೊಂದು ವಲಯ ಎಂದರೆ ನೀರಿನ ಉದ್ಯಮ.

ಈ ನಿಟ್ಟಿನಲ್ಲಿ ಬೆಂಗಳೂರು ಮೂಲದ ವಾಟರ್ ಟೆಕ್ ಸ್ಟಾರ್ಟ್ಅಪ್ ಉರವು ಲ್ಯಾಬ್ಸ್ (Uravu Labs) ನವೀಕರಿಸಬಹುದಾದ ಮೂಲಗಳಿಂದ ನೀರನ್ನು ಉತ್ಪಾದಿಸುವತ್ತ ಹೆಜ್ಜೆ ಇಟ್ಟಿದೆ.  2019 ರಲ್ಲಿ ಪರ್ದೀಪ್, ಸ್ವಪ್ನಿಲ್ ಶ್ರೀವಾಸ್ತವ್, ವೆಂಕಟೇಶ್ ಆರ್ ಮತ್ತು ಗೋವಿಂದ ಬಾಲಾಜಿ ಸ್ಥಾಪಿಸಿದ ಉರವು 100 ಪ್ರತಿಶತ ನವೀಕರಿಸಬಹುದಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು  ಕುಡಿಯುವ ನೀರನ್ನು ಉತ್ಪಾದಿಸಲು ವಾತಾವರಣದ ತೇವಾಂಶ ಮತ್ತು ನವೀಕರಿಸಬಹುದಾದ ಶಕ್ತಿಯನ್ನು ಮಾತ್ರ ಬಳಸಿಕೊಳ್ಳುತ್ತದೆ. ಸಂಪೂರ್ಣ ಸ್ಟೋರಿಯನ್ನು ಇಲ್ಲಿ ಓದಿ.

ಇದನ್ನೂ ಓದಿ:

1) World’s First SMS: ವಿಶ್ವದ ಮೊದಲ ಎಸ್‌ಎಮ್‌ಎಸ್ 'Merry Christmas' ₹91 ಲಕ್ಷಕ್ಕೆ ಮಾರಾಟ!

2) Money Stuck in ATM : ಎಟಿಎಂ ಯಂತ್ರದಿಂದ ನಗದು ಬರದೆ ಖಾತೆಯಲ್ಲಿ ಹಣ ಕಟ್ ಆದ್ರೆ ತಕ್ಷಣ ಹೀಗೆ ಮಾಡಿ!

3) Ola Cabs: ರೈಡ್‌ ಸ್ವೀಕರಿಸುವ ಮುನ್ನವೇ ಚಾಲಕರಿಗೆ ಡ್ರಾಪ್‌ಲೊಕೇಶನ್‌, ಪೇಮೆಂಟ್‌ ಮಾಹಿತಿ ಲಭ್ಯ!

Follow Us:
Download App:
  • android
  • ios