Asianet Suvarna News Asianet Suvarna News

iPhone 15 ಮತ್ತು iPhone 15 Pro ವಿಭಿನ್ನ USB-C ಪೋರ್ಟ್‌?

*ಎಲ್ಲಾ ಗ್ಯಾಜೆಟ್‌ಗಳಿಗೆ ಒಂದೇ ತೆರನಾದ ಚಾರ್ಜಿಂಗ್ ಕನೆಕ್ಟರ್
*ಯುರೋಪಿಯನ್ ಯುನಿಯನ್ ಮತ್ತು ಭಾರತ ಸರ್ಕಾರದ ನಿಯಮ
*ಹೊಸ ನಿಮಯಗಳನ್ನು ಅಳವಡಿಸಿಕೊಳ್ಳಲಿರುವ ಆಪಲ್ ಕಂಪನಿ

iPhone 15 and iPhone 15 Pro to have different USB-C ports
Author
First Published Nov 18, 2022, 10:51 AM IST

ಎಲ್ಲಾ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರ ಸಾಧನಗಳಿಗೆ ಸ್ಟ್ಯಾಂಡರ್ಡ್ ಆಗಿರುವ USB-C ಚಾರ್ಜಿಂಗ್ ಕನೆಕ್ಟರ್‌‌ ಇರಬೇಕೆಂಬುದು ಯುರೋಪಿಯನ್ ಯುುನಿಯನ್ ಭಾರತ ಸರ್ಕಾರಗಳ ನಿಯಮವಾಗಿದೆ. ಆದರೆ, ಈ ಹೊಸ ಅವಶ್ಯಕತೆಗಳು ಆಪಲ್ ಮೇಲೆ ಒತ್ತಡವನ್ನು ಹೇರುತ್ತಿವೆ. ಈಗ ಅನಿವಾರ್ಯವಾಗಿ ಆಪಲ್ ಕೂಡ ಒಂದೇ ಮಾದರಿಯ ಯುಎಸ್‌ಬಿ ನಿಯಮ ಅನುಸರಿಸಬೇಕಾದ ಅಗತ್ಯವಿದೆ. ವ್ಯಾಪಾರವು ನಿಯಮಗಳಿಗೆ ಬದ್ಧವಾಗಿ ಮಾಡಬೇಕಾಗುತ್ತದೆ. ಹಾಗಾಗಿ, ಭವಿಷ್ಯದ  ಆಪಲ್ ಐಫೋನ್ 15 (Apple iPhone 15) ಸರಣಿಯು USB-C ಟೈಪ್ ಕನೆಕ್ಟರ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ ಎಂದು ಆ್ಯಪಲ್ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ವಲ್ಪ ಸಮಯದಿಂದ, ಆಪಲ್ ಹೊಸ ಮಾದರಿಯ ನಿಯಮಗಳನ್ನು ಅಳವಡಿಸಲು ತಯಾರಿ ನಡೆಸುತ್ತಿದೆ. ಇದಕ್ಕೆ ಪುಷ್ಟಿಯಾಗಿ ಖ್ಯಾತ ವಿಶ್ಲೇಷಕ ಮಿಂಗ್-ಚಿ ಕುವೊ (Ming-Chi Kuo) ಅವರ ಇತ್ತೀಚಿನ ಟ್ವೀಟ್‌ಗಳು ಇಂಟರ್ನೆಟ್ ದೈತ್ಯ ಆಪಲ್ ಬದಲಾವಣೆಗೆ ಸಿದ್ಧವಾಗಿದೆ ಎಂದು ಸೂಚಿಸುತ್ತವೆ.

ಐಫೋನ್ 14 , Apple iPhone 15 ಸರಣಿಯು ನಾಲ್ಕು ಮಾದರಿಗಳನ್ನು ಒಳಗೊಂಡಿರುತ್ತದೆ: iPhone 15, iPhone 15 Plus, iPhone 15 Pro ಮತ್ತು iPhone 15 Pro Max ಆ ಮಾದರಿಗಳಾಗಿವೆ. iPhone 15 ಸರಣಿಯ ಎಲ್ಲಾ ನಾಲ್ಕು ಸಾಧನಗಳು, ತಜ್ಞರ ಪ್ರಕಾರ, USB-C ಚಾರ್ಜಿಂಗ್ ಪೋರ್ಟ್ ಹೊಂದಿರುವ ಸಾಧ್ಯತೆಗಳಿವೆ. ಆದರೆ ಪ್ರೊ ಆವೃತ್ತಿಗಳು ಮಾತ್ರ ಹೆಚ್ಚಿನ ವೇಗದ ಪ್ರಸರಣವನ್ನು ನೀಡುತ್ತವೆ ಎಂದು ಹೇಳಲಾಗುತ್ತಿದೆ.

ಕುತೂಹಲ ಹೆಚ್ಚಿಸಿದ OnePlus 11 ಮತ್ತು Oppo Find N2 ಮಾಹಿತಿಗಳು!

ಈ ಕುರಿತು ಟ್ವಿಟರ್ನಲ್ಲಿ ಬರೆದುಕೊಂಡಿರುವ ಕುವೊ, “2H23 ಹೊಸ ಉನ್ನತ-ಮಟ್ಟದ ಐಫೋನ್ಗಳ ವೈರ್ಡ್ ವರ್ಗಾವಣೆ ವೇಗವು ಗಮನಾರ್ಹವಾಗಿ ಸುಧಾರಿಸುತ್ತದೆ, ಇದು ಹೆಚ್ಚಿನ ವೇಗದ ವರ್ಗಾವಣೆ IC ವಿನ್ಯಾಸ ಉದ್ಯಮದ ಬೆಳವಣಿಗೆಗೆ ಪ್ರಯೋಜನವನ್ನು ನೀಡುತ್ತದೆ. ಆಪಲ್ನ ಅಸ್ತಿತ್ವದಲ್ಲಿರುವ ಪೂರೈಕೆದಾರರು (ಉದಾ, ಪರೇಡ್, ಅಸ್ಮೀಡಿಯಾ, ಜೆನೆಸಿಸ್ ಲಾಜಿಕ್, ರೆನೆಸಾಸ್, ಇತ್ಯಾದಿ) ಇದರ ಪ್ರಮುಖ ಫಲಾನುಭವಿಗಳೆಂದು ನಿರೀಕ್ಷಿಸಲಾಗಿದೆ."

ಕುವೋ ಅವರ ಇತರ ಟ್ವೀಟ್ಗಳ ಪ್ರಕಾರ,  “ನನ್ನ ಇತ್ತೀಚಿನ ಸಮೀಕ್ಷೆಯು ಎಲ್ಲಾ 2H23 ಹೊಸ ಐಫೋನ್ಗಳು ಲೈಟನಿಂಗ್ ಬಿಟ್ಟು USB-Cಗೆ ಬದಲಾಯಿಸುತ್ತದೆ ಎಂದು ಸೂಚಿಸುತ್ತದೆ, ಆದರೆ ಕೇವಲ ಎರಡು ಉನ್ನತ-ಮಟ್ಟದ ಮಾದರಿಗಳು (15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್) ವೈರ್ಡ್ ಹೈ-ಸ್ಪೀಡ್ ವರ್ಗಾವಣೆಯನ್ನು ಬೆಂಬಲಿಸುತ್ತವೆ. ಈ ವಿಶೇಷತೆಗಳ ಅಪ್ಗ್ರೇಡ್ ಎಂದರೆ ವೈರ್ಡ್ ವರ್ಗಾವಣೆ ಮತ್ತು ವೀಡಿಯೋ ಔಟ್ಪುಟ್ ಬಳಕೆದಾರರ ಅನುಭವವು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Lava Blaze 5G, ಇದು ದೇಶದ ಅತ್ಯಂತ ಅಗ್ಗದ 5ಜಿ ಫೋನ್!

ಆಪಲ್ ಏರ್ಪಾಡ್ಸ್ ಪ್ರೊ 2 (Apple AirPods Pro 2) ಯುಎಸ್ಬಿ-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿರುತ್ತದೆ ಎಂಬ ಮಾಹಿತಿಯು ಈ ಹಿಂದಿನಿಂದಲೂ ಇದೆ. ಈ ಮಾಹಿತಿಯು ನಿಜವೇ ಆದರೆ, ಆ್ಯಪಲ್ ಬದಲಾವಣೆಯ ಹಾದಿಯಲ್ಲಿರುವುದನ್ನು ಇದು ಖಾತರಿಪಡಿಸುತ್ತಿದೆ ಎಂದು ವಿಶ್ಲೇಷಣೆ ಮಾಡಬಹುದಾಗಿದೆ.ಆಪಲ್ 2012 ರಿಂದ ಐಫೋನ್ನ ಲೈಟ್ನಿಂಗ್ ಪೋರ್ಟ್ ಅನ್ನು ಮುಂದುವರಿಸಿಕೊಂಡು ಬಂದಿದ. ಆದರೆ ಅದರ ಹೆಚ್ಚಿನ ಉತ್ಪನ್ನಗಳಾದ ಮ್ಯಾಕ್ ಮತ್ತು ಐಪ್ಯಾಡ್ಗಳು ಯುಎಸ್ಬಿ-ಸಿಗೆ ಬದಲಾಗಿವೆ. ಈಗ ನಿಧಾನವಾಗಿ ಎಲ್ಲ ಉತ್ಪನ್ನಗಳನ್ನು ಅದು ಯುಎಸ್ಬಿ- ಸಿ ಚಾರ್ಜರ್ಗೆ ಬದಲಾಯಿಸುತ್ತಿದೆ ಎಂದು ಹೇಳಬಹುದು.  ಆಪಲ್ ತನ್ನ ಉತ್ಕೃಷ್ಟ ಉತ್ಪನ್ನಗಳಿಂದಾಗಿ ಹೆಚ್ಚು ಪ್ರಸಿದ್ಧಿಯಾಗಿದೆ. ತಾಂತ್ರಿಕವಾಗಿ ಒಂದು ಹೆಜ್ಜೆ ಮುಂದೆ ಯೋಚಿಸುವ ಆಪಲ್ ಅದೇ ಕಾರಣಕ್ಕೆ ಇತರ ಕಂಪನಿಗಳನ್ನು ಹಿಂದಿಕ್ಕಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು (Smart Phone Market) ನಾಯಕನ ಸ್ಥಾನವನ್ನು ವಹಿಸಿಕೊಂಡಿದೆ. ಈಗ ನಿಯಮಗಳ ಅನುಸಾರ ಯುಎಸ್‌ಬಿ ಟೈಪ್ ಸಿಗೆ (USB Type C) ಬದಲಾವಣೆಯಾಗುತ್ತಿದೆ.

Follow Us:
Download App:
  • android
  • ios