* 25 ವರ್ಷಗಳಿಗಿಂತ ಹೆಚ್ಚು ಕಾಲ ಬಳಕೆಯಲ್ಲಿರುವ ಅಂತರ್ಜಾಲ ಶೋಧ ತಾಣ* 2022ರ ಜೂ.15ಕ್ಕೆ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ ಸ್ಥಗಿತ* ವಿಂಡೋಸ್‌ 10 ಹಾಗೂ ಇತರ ಕೆಲವು ಆಪರೇಟಿಂಗ್‌ ಸಿಸ್ಟಮ್‌ಗಳಲ್ಲಿ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ 11ನೇ ಆವೃತ್ತಿಯ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಕಾರ್ಯನಿರ್ವಹಿಸುವುದಿಲ್ಲ

ವಾಷಿಂಗ್ಟನ್‌(ಮೇ.22): 25 ವರ್ಷಗಳಿಗಿಂತ ಹೆಚ್ಚು ಕಾಲ ಬಳಕೆಯಲ್ಲಿರುವ ಅಂತರ್ಜಾಲ ಶೋಧ ತಾಣ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ 2022ರ ಜೂ.15ರ ಬಳಿಕ ತನ್ನ ಸೇವೆ ಸ್ಥಗಿತಗೊಳಿಸಲಿದೆ.

ವಿಂಡೋಸ್‌ 10 ಹಾಗೂ ಇತರ ಕೆಲವು ಆಪರೇಟಿಂಗ್‌ ಸಿಸ್ಟಮ್‌ಗಳಲ್ಲಿ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ 11ನೇ ಆವೃತ್ತಿಯ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಕಾರ್ಯನಿರ್ವಹಿಸುವುದಿಲ್ಲ ಎಂದು ಮೈಕ್ರೋಸಾಪ್ಟ್‌ ತಿಳಿಸಿದೆ. ವಿಂಡೋಸ್‌ - 95 ಆಪರೇಟಿಂಗ್‌ ಸಿಸ್ಟಂ ಜೊತೆಗೆ 1995ರಲ್ಲಿ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ ಅನ್ನು ಪರಿಚಯಿಸಲಾಗಿತ್ತು.

2002ರಲ್ಲಿ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ನ ಬಳಕೆ ಉಚ್ಛಾಯ ಹಂತ ತಲುಪಿತ್ತು. 2 ದಶಕಗಳ ಹಿಂದೆ ಅತಿ ಹೆಚ್ಚು ಬಳಸಿದ ವೆಬ್‌ ಬ್ರೌಸರ್‌ ಎನಿಸಿತ್ತು. ಆದರೆ, ಗೂಗಲ್‌ ಕ್ರೋಮ್‌ ಹಾಗೂ ಇನ್ನಿತರ ಶೋಧ ತಾಣಗಳ ಪೈಪೋಟಿಯಿಂದಾಗಿ ನೇಪತ್ಯಕ್ಕೆ ಸರಿದಿದೆ.

2010ರಲ್ಲಿ ಎಕ್ಸ್‌ಪ್ಲೋರರ್‌ ಬಳಕೆ ಶೇ.50ರಷ್ಟುತಗ್ಗಿತ್ತು. ಈಗ ಕೇವಲ ಶೇ.5ರಷ್ಟುಮಂದಿ ಮಾತ್ರ ಎಕ್ಸ್‌ಪ್ಲೋರರ್‌ ಅನ್ನು ಬಳಕೆ ಮಾಡುತ್ತಿದ್ದಾರೆ.