Instagram ತಿಂಗಳ ಚಂದಾದಾರಿಕೆ ಪಡೆದರಷ್ಟೇ ಬಳಕೆಗೆ ಲಭ್ಯ ?

*Instagram ಹೊಸ ಚಂದಾದಾರಿಕೆ ಆರಂಭ?
*ಇನ್ಸ್ಟಾಗ್ರಾಮ್‌ Influencers ಹಣ ಗಳಿಸಲು ಅವಕಾಶ
*ಚಂದಾದಾರಿಕೆ ಪಡೆದವರಿಗೆ ವಿಶೇಷ ಫೀಚರ್ಸ್‌!

Instagram testing monthly subscriptions feature priced at Rs 89 per month mnj

ನವದೆಹಲಿ(ನ. 9 ) : ಮೆಟಾ (Meta -Facebook) ಒಡೆತನದ ಪ್ರಪಂಚದ ಜನಪ್ರಿಯ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ (Instagram) ಹೊಸದೊಂದು ಫೀಚರ್ ಬಿಡುಗಡೆ ಮಾಡಲಿದೆ ಎಂದು ವರದಿಗಳು ತಿಳಿಸಿವೆ. ಇನ್ನೂ  Instagramನ ಚಂದಾದಾರಿಕೆ ಮೂಲಕ ಇನ್ಸ್ಟಾಗ್ರಾಮ್‌ ಇನ್ಲ್ಫುಯೆನ್ಸರ್ಸ್ (Influencers) ಹಣ ಗಳಿಸಬಹುದಾದಂತಹ ಹೊಸ ಫೀಚರ್‌ ಸೇರಿಸಲಿದೆ ಎಂದು ತಿಳಿದುಬಂದಿದೆ. Instagram ಹೊಸ ಚಂದಾದಾರಿಕೆ ಯೋಜನೆಯ ಮೂಲಕ ಕ್ರಿಯೆಟರ್ಸ್‌ (Creators)  ಮತ್ತು ಇನ್ಲ್ಫುಯೆನ್ಸರ್ಸ್ ಹಣವನ್ನು ಗಳಿಸಬಹುದು. ಈ ವರ್ಷದ ಆರಂಭದಲ್ಲಿ Instagram ಮುಖ್ಯಸ್ಥ ಆಡಮ್ ಮೊಸಿಯರ್ (Adam Mossier) ಕಂಪನಿಯು ಚಂದಾದಾರಿಕೆಗಳನ್ನು ಆರಂಭಿಸಲಿದೆ ಎಂದು ಹೇಳಿದ ನಂತರ ಈ ಬೆಳವಣಿಗೆ ಬಂದಿದೆ. 

ಕನ್ನಡಿಗರೊಂದಿಗೆ ಕನ್ನಡದಲ್ಲಿ ಸಂವಾದ ನಡೆಸಲು ಕೂ ಖಾತೆ ತೆರೆದ ಕರ್ನಾಟಕ ಬಿಜೆಪಿ!

TechCrunch ನ ವರದಿಯ ಪ್ರಕಾರ, IOS ಸ್ಟೋರ್‌ನಲ್ಲಿ Instagram ಆಪ್ ಸ್ಟೋರ್ ಪಟ್ಟಿಯಲ್ಲಿ "In-App Purchases" ವಿಭಾಗದಲ್ಲಿ ಹೊಸ "Instagram Subscriptions"ಕಾಣಬಹುದಾಗಿದೆ. Instagram ಸಬ್‌ಸ್ಕ್ರಿಪ್ಶನ್‌ಗಳ (Subscription) ಬೆಲೆ ತಿಂಗಳಿಗೆ 89 ರೂ.ಗಳಾಗಿದ್ದು ಟೆಸ್ಟಿಂಗ್‌ (Testing) ನಂತರ ಎಲ್ಲರಿಗೂ ಫೀಚರ್ ಲಭ್ಯವಾದಾಗ ಇದರ ಬೆಲೆ ಬದಲಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. Instagram ಚಂದಾದಾರಿಕೆಗಳು ಟ್ವೀಟರ್‌ ಬ್ಲ್ಯೂ ( Twitter Blue) ಚಂದಾದಾರಿಕೆಯಂತೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. US ಆಪ್ ಸ್ಟೋರ್ (App store) ಪಟ್ಟಿಉಲ್ಲಿ ಮೊದಲ ಬಾರಿಗೆ Instagram ಚಂದಾದಾರಿಕೆಗಳ ಫೀಚರ್ ನವೆಂಬರ್ 1 ರಂದು $4.99 ಬೆಲೆಯಲ್ಲಿ ಸೇರಿಸಲಾಗಿತ್ತು.

ಚಂದಾದಾರಿಕೆ ಪಡೆದವರಿಗೆ ವಿಶೇಷ ಫೀಚರ್ಸ್!

ಇದಲ್ಲದೆ, ರಿವರ್ಸ್ ಇಂಜಿನಿಯರ್ (Reverse Engineer) ಮತ್ತು ಟಿಪ್‌ಸ್ಟರ್ ಅಲೆಸ್ಸಾಂಡ್ರೊ ಪಲುಝಿ (tipster Alessandro Paluzzi) ಅವರು ಟ್ವೀಟ್‌ಗಳ ಸರಣಿಯ ಮೂಲಕ Instagram ಕ್ರಿಯೇಟರ್ಸ್‌ ಪ್ರೊಫೈಲ್‌ನಲ್ಲಿ ಕಾಣಿಸಿಕೊಳ್ಳುವ ಚಂದಾದಾರಿಕೆ ಬಟನ್ ಅನ್ನು Instagram ಪರೀಕ್ಷಿಸುತ್ತಿದೆ ಎಂದು ತಿಳಿಸಿದ್ದರು. ಇದರರ್ಥ ಅಭಿಮಾನಿಗಳು ಚಂದಾದಾರರಾಗುವ ಮೂಲಕ, ಚಂದಾದಾರರಿಗೆಂದೇ ಕ್ರಿಯೇಟರ್ಸ್‌ ಶೇರ್‌ ಮಾಡುವ  ಪೋಸ್ಟ್‌ (Post) ಮತ್ತು ಲೈವ್ ವೀಡಿಯೊಗಳಲ್ಲಿ (Live Video) ಭಾಗಿಯಾಗಬಹುದು. ನೀವು ಕ್ರಿಯೇಟರ್ಸ್‌ಗೆ  DM (ನೇರ ಸಂದೇಶ) ಮಾಡಿದಾಗ ಅಥವಾ ಅವರ ಪೋಸ್ಟ್‌ಗಳಲ್ಲಿ ಕಾಮೆಂಟ್ (Comment) ಮಾಡಿದಾಗ ನಿಮ್ಮ ಬಳಕೆದಾರ ಹೆಸರಿನ (User Name) ಪಕ್ಕದಲ್ಲಿ ವಿಶೇಷ ಸದಸ್ಯ ಬ್ಯಾಡ್ಜ್ ಸಹ ಕಾಣಿಸಿಕೊಳ್ಳುತ್ತದೆ. ಈ ಬ್ಯಾಡ್ಜ್ (Badge) ಹೊಂದಿರುವ ಬಳಕೆದಾರರ ಜತೆ  ಕ್ರಿಯೇಟರ್ಸ್‌ ಆದ್ಯತೆಯ ಸಂವಾದಗಳನ್ನು ಮಾಡುವ ಅವಕಾಶವಿರಲಿದೆ.

WhatsApp community features; ಇದರಿಂದ ಸರಳವಾಗಲಿದೆ Group Talks

TechCrunch ವರದಿಯ ಪ್ರಕಾರ ಕ್ರಿಯೇಟರ್ಸ್‌ಗೆ  ತಮ್ಮ ಅಂದಾಜು ಗಳಿಕೆಗಳು (Earnings), ಸಕ್ರಿಯ ಸದಸ್ಯರು (Active membership) ಮತ್ತು ಅವಧಿ ಮೀರಿದ ಸದಸ್ಯರದ (Expired Membership) ಬಗ್ಗೆ ಮೇಲ್ವಿಚಾರಣೆ ಮಾಡಲು ಸಾಧ್ಯವಾಗಲಿದೆ. Instagram ತಮ್ಮ ಚಂದಾದಾರಿಕೆಯ ಹೆಸರು ಮತ್ತು ಬೆಲೆಯನ್ನು ಕಸ್ಟಮೈಸ್ (Customise) ಮಾಡಲು ಕ್ರಿಯೇಟರ್ಸ್‌ಗೆ ಅವಕಾಶ ನೀಡಲಿದೆ. ಜತೆಗೆ ಚಂದಾದಾರರು ಯಾವಾಗ ಬೇಕಾದರೂ ಚಂದಾದಾರಿಕಯನ್ನು  ರದ್ದು ಮಾಡುವ ಅವಕಾಶವಿರಲಿದೆ.

ಇತ್ತೀಚೆಗೆ ಟ್ವೀಟರ್‌ ಕೂಡ ಟ್ವೀಟರ್‌ (Twitter) ಬ್ಲ್ಯೂ ಎಂಬ ಚಂದಾದಾರಿಕೆ ಆರಂಭ ಮಾಡಿದ್ದು ಕೇವಲ ಚಂದಾದಾರರಿಗಷ್ಟೇ ಆಯ್ದ ಪೋಸ್ಟ್‌ಗಳನ್ನು ತೋರಿಸುತ್ತಿದೆ. ಜತೆಗೆ ಚಂದಾದಾರಿಕೆ ಪಡೆದ ಬಳಕೆದಾರರಿಗೆ ವಿಶೇಷ ಫೀಚರ್ಸ್‌ಗಳನ್ನು ನೀಡಿದೆ. ಆದರೆ ಭಾರತದಲ್ಲಿ ಸದ್ಯಕ್ಕೆ ಟ್ವೀಟರ್‌ ಬ್ಲ್ಯೂ ಬಳಕೆಗೆ ಲಭ್ಯವಿಲ್ಲ. ಈಗ ಇದೇ ಮಾದರಿಯಲ್ಲಿ Instagram ಕೂಡ ಚಂದಾದಾರಿಕೆ ಯೋಜನೆ ಆರಂಭ ಮಾಡಿದ್ದು ಶೀಘ್ರದಲ್ಲೇ ಬಳಕಗೆ ಲಭ್ಯವಿರಲಿದೆ ಎಂದು ತಿಳಿದು ಬಂದಿದೆ.

Latest Videos
Follow Us:
Download App:
  • android
  • ios