ಅ.1ಕ್ಕೆ 5ಜಿ ಆರಂಭ, ಹೊಸ ಸೇವೆಯಿಂದ 3G, 4G ಫೋನ್ ಕರೆ, ಡೇಟಾ ಕಾರ್ಯನಿರ್ವಹಿಸುತ್ತಾ?
ಅಕ್ಟೋಬರ್ 1 ರಂದು ಭಾರತದಲ್ಲಿ 5ಜಿ ನೆಟ್‌ವರ್ಕ್ ಸೇವೆ ಆರಂಭಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹೊಸ ಸೇವೆಗೆ ಚಾಲನೆ ನೀಡಲಿದ್ದಾರೆ. ಇದೀಗ ಹಲವು ಪ್ರಶ್ನೆಗಳು ಜನರಲ್ಲಿ ಮೂಡಿದೆ. 5ಜಿ ಆರಂಭದಿಂದ 4ಜಿ, 3ಜಿ ಸೇವೆಯಲ್ಲಿರುವ ಗ್ರಾಹಕರಿಗೆ ಸಮಸ್ಯೆಯಾಗುತ್ತಾ? 4G ಫೋನ್ 5ಜಿಗೆ ಅಪ್‌ಗ್ರೇಡ್ ಮಾಡಬಹುದಾ? 4ಜಿ ನೆಟ್‌ವರ್ಕ್ ಬಳಸುತ್ತಿರುವ ಗ್ರಾಹಕರ ನೆಟ್ ವೇಗ ಪಡೆಯುತ್ತಾ? ಇಂತಹ ಹತ್ತು ಹಲವು ಪ್ರಶ್ನಗಳಿಗೆ ಇಲ್ಲಿದೆ ಉತ್ತರ.
ಬೆಂಗಳೂರು(ಸೆ.27): ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ಪ್ರಮುಖ ಕಾರಣವಾಗಿದ್ದು ದೇಶದ ಟಿಲಿಕಾಂ ನೆಟ್‌ವರ್ಕ್. ಭಾರತದಲ್ಲಿ 3ಜಿ, 4ಜಿ ಸೇವೆಯಿಂದ ಇದೀಗ 5ಜಿಗೆ ಅಪ್‌ಗ್ರೇಡ್ ಆಗುತ್ತಿದೆ. ಅಕ್ಟೋಬರ್ 1 ರಂದು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ 5ಜಿ ಸೇವೆಗೆ ಚಾಲನೆ ನೀಡಲಿದ್ದಾರೆ. ಅತೀ ವೇಗದ 5ಜಿ ನೆಟ್‌ವರ್ಕ್ ಬಳಕೆದಾರರಿಗೆ ಮತ್ತಷ್ಟು ಅನುಕೂಲ ಒದಗಿಸಲಿದೆ. ಆದರೆ 5ಜಿ ನೆಟ್‌ವರ್ಕ್ ಸೇವೆ ಆರಂಭಗೊಳ್ಳುತ್ತಿರುವ ಬೆನ್ನಲ್ಲೇ ಹಲವು ಬಳಕೆದಾರರಲ್ಲಿ ಆತಂಕ ಎದುರಾಗಿದೆ. 5ಜಿ ಸೇವೆಯಿಂದ ಈಗಾಲೇ 3ಜಿ ಅಥವಾ 4ಜಿ ಸೇವೆ ಬಳಸುತ್ತಿರುವ ಬಳಕೆದಾರರು ಫೋನ್ ಕರೆ, ಡೇಟಾ ಕಾರ್ಯನಿರ್ವಹಿಸುತ್ತಾ? 2,ಜಿ, 3ಜಿ, 4ಜಿ ರದ್ದಾಗುತ್ತಾ? ಈ ರೀತಿಯ ಹಲವು ಆತಂಕ, ಗೊಂದಲಕ್ಕೆ ಇಲ್ಲಿದೆ ಉತ್ತರ.
1. 5G ಬಂದಾಗ, 3G ಮತ್ತು 4G ಫೋನ್‌ಗಳು ಧ್ವನಿ ಕರೆ ಮತ್ತು ಡೇಟಾದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆಯೇ?
ಉತ್ತರ:ಹೌದು, ಅಸ್ತಿತ್ವದಲ್ಲಿರುವ ಎಲ್ಲಾ ಫೋನ್ ಧ್ವನಿ ಕರೆಗಳು ಮತ್ತು ಡೇಟಾದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿರುತ್ತವೆ. ಆಪರೇಟರ್ ತಮ್ಮ 2G ಅಥವಾ 3G ನೆಟ್‌ವರ್ಕ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದಾಗ ಮಾತ್ರ ಈ ಸೇವೆಗಳು ನಿಲ್ಲುತ್ತವೆ.
ಅಕ್ಟೋಬರ್ 1 ರಂದು ಭಾರತದಲ್ಲಿ 5ಜಿ ಸೇವೆ ಆರಂಭ, ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಮೋದಿ ಅನಾವರಣ!
2. ಹಾಗಾದರೆ, ಅಂತಹ ಬಳಕೆದಾರರಿಗೆ ಯಾವ ಬದಲಾವಣೆಗಳು ಕಂಡುಬರುತ್ತವೆ? ಅವರ ಸಾಧನ 4G ಆಗಿದ್ದರೂ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗ ಹೆಚ್ಚುತ್ತದೆಯೇ?
ಉತ್ತರ: ನೀವು 5G ಅನ್ನು 5G ಇರುವ ಸಾಧನದಲ್ಲಿ ಮಾತ್ರ ಅನುಭವಿಸಬಹುದು. ಈಗಾಗಲೇ ಇರುವ 4G ಸಾಧನಗಳಲ್ಲಿ 5G ಲಭ್ಯವಿರುವುದಿಲ್ಲ.
3. 4G ನೆಟ್‌ವರ್ಕ್ ಮುಂದುವರಿಯುತ್ತದೆಯೇ?
ಉತ್ತರ: ಹೌದು, 4G ನೆಟ್‌ವರ್ಕ್ ಮುಂದುವರಿಯುತ್ತದೆ.
4. 5G ಸಾಧನಗಳ ಲಭ್ಯತೆ ಹೇಗಿದೆ?
ಉತ್ತರ: ಉದ್ಯಮದ ಅಂದಾಜಿನ ಪ್ರಕಾರ, ಭಾರತದಲ್ಲಿ ಪ್ರಸ್ತುತ ಸುಮಾರು 50 ಮಿಲಿಯನ್ 5G ಸಾಧನಗಳಿವೆ. ಈ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ.
5. 5G ಮೊಬೈಲ್ ಫೋನ್‌ಗಳು ಸುಲಭವಾಗಿ ಲಭ್ಯವಿದೆಯೇ?
ಉತ್ತರ:ಹೌದು. 5G ಫೋನ್‌ಗಳ ಹಲವು ಮಾದರಿಗಳು ಸುಲಭವಾಗಿ ಲಭ್ಯವಿವೆ. ಆಪಲ್ ಐಫೋನ್, ಸ್ಯಾಮ್‌ಸಂಗ್, ಒನ್‌ಪ್ಲಸ್ ಇತ್ಯಾದಿ ಪ್ರಮುಖ ಬ್ರ್ಯಾಂಡ್‌ಗಳ ಸಾಧನಗಳು 5G ಫೋನ್‌ಗಳನ್ನು ಮಾರಾಟ ಮಾಡುತ್ತಿವೆ.
ಜಿಯೋ ಘೋಷಣೆಗೆ ಭಾರತದಲ್ಲಿ ಸಂಚಲನ, ದೀಪಾವಳಿ ಹಬ್ಬಕ್ಕೆ 5ಜಿ ಸೇವೆ ಆರಂಭ!
6. 4G (ಜಿಯೋಫೈ) ಯಲ್ಲಿ ನಮಗೆ ಲಭ್ಯವಿರುವ ಹಾಗೆ 5G ಯಲ್ಲೂ ಸಣ್ಣ ವೈಫೈ ಸಾಧನಗಳು ಇರುತ್ತವೆಯೇ?
ಉತ್ತರ: ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಿಸಿದಂತೆ, ಜಿಯೋ ಏರ್ ಫೈಬರ್ ಸಾಧನವನ್ನು ಜಿಯೋ ಹೊರತರಲಿದೆ. ಇದು ಪೋರ್ಟಬಲ್ 5G ಸಾಧನವಾಗಿದೆ.
7. ಪ್ರಸ್ತುತ 4G ಫೋನ್‌ಗಳನ್ನು 5G ಗೆ ಅಪ್‌ಗ್ರೇಡ್ ಮಾಡಬಹುದೇ?
ಉತ್ತರ:ಇಲ್ಲ, ಪ್ರಸ್ತುತ 4G ಫೋನ್‌ಗಳನ್ನು 5G ಗೆ ಅಪ್‌ಗ್ರೇಡ್ ಮಾಡಲು ಸಾಧ್ಯವಿಲ್ಲ.
8. ಬಳಕೆದಾರರು ಅಷ್ಟು ದೊಡ್ಡ ಪ್ರಮಾಣದಲ್ಲಿ ಡೇಟಾ ಬಳಕೆಯನ್ನು ಹೊಂದಿಲ್ಲದಿದ್ದರೆ, 4G ಫೋನ್ ಬಿಟ್ಟು ಹೊಸ 5G ಫೋನ್ ಖರೀದಿಸಬೇಕೆ?
ಉತ್ತರ: 5G ಹೆಚ್ಚಿನ ವೇಗ ಮತ್ತು ಕಡಿಮೆ ಲೇಟೆನ್ಸಿಯ ವಿಶಿಷ್ಟ ಪ್ರಯೋಜನವನ್ನು ಹೊಂದಿದೆ. ಇದು ಡಿಜಿಟಲ್ ಗ್ರಾಹಕರು ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಬಳಸಲು ಸಹಾಯ ಮಾಡುತ್ತದೆ.
9. 5G ಯಾರಿಗೆ ಹೆಚ್ಚು ಅನುಕೂಲ? ಯಾವ ರೀತಿಯ ಬಳಕೆಗೆ ಇದು ಹೆಚ್ಚು ಸೂಕ್ತವಾಗಿದೆ?
ಉತ್ತರ: 5G ಯ ಅನುಕೂಗಳಿಂದ ಎಲ್ಲಾ ವಿಭಾಗದ ಗ್ರಾಹಕರು ಪ್ರಯೋಜನ ಪಡೆಯುತ್ತಾರೆ. ಮನೆಯಲ್ಲಿ 5G ಬಳಸುವ ಗ್ರಾಹಕರು ಜಿಯೋ ಏರ್ ಫೈಬರ್ ಸಾಧನ ಅಥವಾ 5G ಹ್ಯಾಂಡ್‌ಸೆಟ್ ಬಳಸಿ ಹೆಚ್ಚಿನ ವೇಗದ ಇಂಟರ್ನೆಟ್ ಪಡೆಯಬಹುದು. 5G ಉದ್ಯಮ 4.0 ಪರಿಹಾರಗಳನ್ನು ಬಳಸಬಹುದು. ಸಾಮಾಜಿಕ ವಲಯದಲ್ಲಿ ಇದು ಕೃಷಿ, ಆರೋಗ್ಯ, ಶಿಕ್ಷಣ, ಇತ್ಯಾದಿಗಳಿಗೆ ನೆರವಾಗಬಹುದು.
10. 5G ವಿತರಣೆ ಹೇಗೆ ನಡೆಯುತ್ತದೆ? ದೊಡ್ಡ ಟವರ್‌ಗಳ ಬದಲಿಗೆ ಸಣ್ಣ ಪೋಸ್ಟ್‌ಗಳು (ಮೈಕ್ರೋ ಸೈಟ್‌ಗಳು) ಇರುತ್ತವೆಯೇ? ಅವು ಹೇಗೆ ಕಾರ್ಯನಿರ್ವಹಿಸುತ್ತವೆ?
ಉತ್ತರ:ಅಸ್ತಿತ್ವದಲ್ಲಿರುವ ಟವರ್‌ಗಳಲ್ಲಿ 5G ಉಪಕರಣಗಳನ್ನು ಅಳವಡಿಸಬಹುದಾಗಿದೆ. ಇನ್ನು, ರಸ್ತೆ ಬದಿಗಳಲ್ಲೂ ಅಳವಡಿಸಬಹುದಾಗಿದೆ.