ಜಿಯೋ ಘೋಷಣೆಗೆ ಭಾರತದಲ್ಲಿ ಸಂಚಲನ, ದೀಪಾವಳಿ ಹಬ್ಬಕ್ಕೆ 5ಜಿ ಸೇವೆ ಆರಂಭ!

ಜಿಯೋದಿಂದ ಮತ್ತೊಂದು ಮಹತ್ವದ ಘೋಷಣೆ ಹೊರಬಿದ್ದಿದೆ. ದೀಪಾವಳಿ ಹಬ್ಬಕ್ಕೆ ಜಿಯೋ 5ಜಿ ಸೇವೆ ದೇಶಾದ್ಯಂತ ಆರಂಭಗೊಳ್ಳುತ್ತಿದೆ. ಈ ಕುರಿತು ಸ್ವತ ಮುಕೇಶ್ ಅಂಬಾನಿ ಹೇಳಿದ್ದಾರೆ. ಜಿಯೋ 5ಜಿ ಸೇವೆ, ಬೆಲೆ, ಪ್ರಯೋಜನ ಸೇರಿದಂತೆ ಎಲ್ಲಾ ಮಾಹಿತಿ ಇಲ್ಲಿದೆ.

Reliance jio set to launch fastest ever 5G network on Diwali 2022 festival ckm

ಮುಂಬೈ(ಆ.29): ರಿಲಾಯನ್ಸ್ ಇಂಡಸ್ಟ್ರೀ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾಡಿದ ಘೋಷಣೆಯೊಂದು ಇದೀಗ ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಇದಕ್ಕೆ ಕಾರಣ ಜಿಯೋ ಮುಖ್ಯಸ್ಥ ಮುಕೇಶ್ ಅಂಬಾನಿ ಘೋಷಣೆ. ಸಭೆಯಲ್ಲಿ ಅಂಬಾನಿ, ದೀಪಾವಳಿ ಹಬ್ಬಕ್ಕೆ ಜಿಯೋ 5ಜಿ ಸೇವೆ ದೇಶಾದ್ಯಂತ ಆರಂಭಗೊಳ್ಳುತ್ತಿದ ಎಂಬ ಘೋಷಣೆ ಮಾಡಿದ್ದಾರೆ. ಪ್ಯಾನ್ ಇಂಡಿಯಾದಲ್ಲಿ 5 ಜಿ ಸೇವೆ ಆರಂಭಿಸಲು 2 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಾಗಿದೆ. ಇದೇ ದೀಪಾವಳಿ ಹಬ್ಬಕ್ಕೆ ಭಾರತದಲ್ಲಿ ಅತೀ ವೇಗದ ಬಹುನಿರೀಕ್ಷಿತ 5ಜಿ ಸೇವೆಯನ್ನು ಜಿಯೋ ಆರಂಭಿಸಲಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.  ಇನ್ನು ಎರಡು ತಿಂಗಳಲ್ಲಿ ಅಂದರೆ 2022ರ ದೀಪಾವಳಿ ಹಬ್ಬಕ್ಕೆ ಜಿಯೋ 5ಜಿ ಸೇವೆ ದೇಶಾದ್ಯಂತ ಲಭ್ಯವಾಗಲಿದೆ ಎಂದು ಅಂಬಾನಿ ಹೇಳಿದ್ದಾರೆ. ಮೊದಲ ಹಂತದಲ್ಲಿ ಮೆಟ್ರೊ ನಗರಗಳಲ್ಲಿ 5ಜಿ ಸೇವೆ ಆರಂಭಗೊಳ್ಳುತ್ತಿದೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾ ಸೇರಿದಂತೆ ಪ್ರಮುಖ ನಗರಗಳಲ್ಲಿ 5ಜಿ ಸೇವೆ ಆರಂಭಗೊಳ್ಳುತ್ತಿದೆ. ಬಳಿಕ ಹಂತ ಹಂತವಾಗಿ ಇತರ ನಗರ, ಪಟ್ಟಣಗಳಿಗೆ ತಲುಪಲಿದೆ ಎಂದು ಅಂಬಾನಿ ಹೇಳಿದ್ದಾರೆ.

ಡಿಸೆಂಬರ್ 2023ರ ವೇಳೆ ಅಂದರೆ ಇಂದಿನಿಂದ 18 ತಿಂಗಳಲ್ಲಿ ಜಿಯೋ 5ಜಿ ಸೇವೆ ಭಾರತದ ಎಲ್ಲಾ ಪಟ್ಟಣಗಳಲ್ಲಿ ಲಭ್ಯವಾಗಲಿದೆ. ಫೈಬರ್ ಕ್ವಾಲಿಟಿ ಬ್ರಾಡ್‌ಬ್ಯಾಂಡ್‌ಗಾಗಿ 3.3 ಮಿಲಿಯನ್ ಚದರ ಅಡಿ ವೈಯರ್‌ಲೆಸ್ ಹಾಗೂ ವೈಯರ್ ಲೈನ್ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ಮುಕೇಶ್ ಅಂಬಾನಿ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೇಳಿದ್ದಾರೆ.

ಅಕ್ಚೋಬರ್ 12ಕ್ಕೆ ಭಾರತದಲ್ಲಿ 5G ಸೇವೆ ಆರಂಭ, ಟೆಲಿಕಾಂ ಸಚಿವ ಘೋಷಣೆ!

700MHz ಸ್ಪೆಕ್ಟ್ರಮ್ ಬಳಕೆ:
ಭಾರತದಾದ್ಯಂತ 700MHz ಸ್ಪೆಕ್ಟ್ರಮ್ ಬಳಕೆಯ ಹಕ್ಕನ್ನು ಪಡೆಯುವ ಮೂಲಕ ಜಿಯೋ ಸ್ವತಂತ್ರ (ಸ್ಟಾಂಡ್ ಅಲೋನ್, SA) 5G ವಿನ್ಯಾಸವನ್ನು ರಚಿಸಲು ಯೋಜಿಸುತ್ತಿದ್ದು, ಇದು ಉತ್ತಮ ಗುಣಮಟ್ಟ ಹಾಗೂ ಅತಿಕಡಿಮೆ ವಿಳಂಬದ 5G ಅನುಭವ ಮತ್ತು ಸಾಂಸ್ಥಿಕ ಗ್ರಾಹಕರಿಗಾಗಿ ವಿಭಿನ್ನ ಮತ್ತು ವ್ಯಾಪಕ ಶ್ರೇಣಿಯಂತಹ ದೀರ್ಘಾವಧಿಯ ಪ್ರಯೋಜನಗಳನ್ನು ಹೊಂದಿದೆಯೆಂದು ಜೆಎಂ ಫೈನಾನ್ಶಿಯಲ್ ತನ್ನ ವರದಿಯಲ್ಲಿ ತಿಳಿಸಿದೆ. ಹಾಗಾಗಿ, ಇದು ಮಧ್ಯಮದಿಂದ ದೀರ್ಘಾವಧಿಯಲ್ಲಿ ಹೆಚ್ಚಿನ ARPU ಗ್ರಾಹಕರನ್ನು ತನ್ನ ಪ್ರತಿಸ್ಪರ್ಧಿಗಳಿಂದ ತನ್ನೆಡೆಗೆ ಸೆಳೆಯಲು ಜಿಯೋಗೆ ನೆರವಾಗಬಹುದು ಎನ್ನಲಾಗಿದೆ.

ಇದಲ್ಲದೆ, ಭಾರ್ತಿಯು ಸ್ವತಂತ್ರವಲ್ಲದ (ನಾನ್ ಸ್ಟಾಂಡ್ ಅಲೋನ್, NSA) ವಿನ್ಯಾಸದ ಆಧಾರದ ಮೇಲೆ 5G ಸೇವೆಗಳನ್ನು ಪ್ರಾರಂಭಿಸಲು ಯೋಜಿಸಿದ್ದು, ಅದು ಮೂಲಭೂತವಾಗಿ 4Gಯ ಮೂಲಸೌಕರ್ಯವನ್ನೇ ಬಳಸಿ ಅದರ ಮೇಲೆ 5G ಪದರವೊಂದನ್ನಷ್ಟೇ ಸೇರಿಸಲಿದೆ.  ಇದು ದುಬಾರಿ 700 MHz ಸ್ಪೆಕ್ಟ್ರಮ್ ವೆಚ್ಚವನ್ನು ಉಳಿಸುವುದರಿಂದ ಭಾರ್ತಿಯು ಹೂಡಬೇಕಾದ ಬಂಡವಾಳವನ್ನು ಹಾಗೂ SA ವಿನ್ಯಾಸಕ್ಕೆ ಸಂಬಂಧಿಸಿದ ಯಂತ್ರಾಂಶ ಉನ್ನತೀಕರಣದ ಮೇಲಿನ ಹೂಡಿಕೆಯನ್ನು ಕಡಿಮೆ ಮಾಡುತ್ತದೆ, ಕ್ಷಿಪ್ರ 5G ನಿಯೋಜನೆಗಳನ್ನು ಸಾಧ್ಯವಾಗಿಸುತ್ತದೆ ಹಾಗೂ ಕಾರ್ಯಾಚರಣೆಯ ವೆಚ್ಚವನ್ನೂ ಕಡಿಮೆಗೊಳಿಸುತ್ತದೆ.5Gಯಿಂದ ಆದಾಯ ಪಡೆಯುವ ವಿಷಯದಲ್ಲಿ, ತಕ್ಷಣದಲ್ಲಿ 5G ಬಳಕೆದಾರರಿಂದ ಹೆಚ್ಚಿನ ಡೇಟಾ ಬಳಕೆಯ ಮೂಲಕ ಹಣಗಳಿಸಲು ಆಡಳಿತ ಮಂಡಲಿಯು ನಿರೀಕ್ಷಿಸುತ್ತಿದೆ, ಆದರೆ ವಿಶೇಷವಾಗಿ ಸಾಂಸ್ಥಿಕ ಗ್ರಾಹಕರ ವಿಭಾಗದಲ್ಲಿ ಬಳಕೆಯ ಹೆಚ್ಚಿನ ಸಾಧ್ಯತೆಗಳ ಅಭಿವೃದ್ಧಿಯು ಮಧ್ಯಮದಿಂದ ದೀರ್ಘಾವಧಿಯಲ್ಲಿ ಹಣಗಳಿಕೆಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ.

Latest Videos
Follow Us:
Download App:
  • android
  • ios