ಮೈಕ್ರೋಚಿಪ್‌ ಇರುವ ಇ - ಪಾಸ್‌ಪೋರ್ಟ್‌ ಬೆರಳಚ್ಚು ಹಾಗೂ ಫೇಸ್‌ ರಿಕಗ್ನಿಷನ್‌ನಂಥ ಸುಧಾರಿತ ಅಂಶಗಳನ್ನು ಒಳಗೊಂಡಿರುತ್ತದೆ. ಇದರಿಂದ ಪಾಸ್‌ಪೊರ್ಟ್‌ ತಿರುಚುವಿಕೆ ಹಾಗೂ ನಕಲಿ ಪಾಸ್‌ಪೋರ್ಟ್‌ ಮಾಡುವುದು ಅಸಾಧ್ಯವಾಗಲಿದೆ.

ನವದೆಹಲಿ (ಜೂನ್ 25, 2023): ಎಲೆಕ್ಟ್ರಾನಿಕ್‌ ಚಿಪ್‌ ಅಳವಡಿಸಲಾದ ಹೊಸ ಮತ್ತು ಸುಧಾರಿತ ಪಾಸ್‌ಪೋರ್ಟ್‌ ಅನ್ನು ಶೀಘ್ರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಪಾಸ್‌ಪೋರ್ಟ್‌ ತಿರುಚುವಿಕೆ ಹಾಗೂ ನಕಲಿ ಪಾಸ್‌ಪೋರ್ಟ್‌ ಸೃಷ್ಟಿಸುವ ದಂಧೆಗೆ ಬ್ರೇಕ್‌ ಬೀಳಲಿದೆ. ಪಾಸ್‌ಪೋರ್ಟ್‌ ಸೇವಾ ದಿನ ಅಂಗವಾಗಿ ಟ್ವೀಟ್‌ ಮಾಡಿರುವ ಜೈಶಂಕರ್‌ ಈ ವಿಷಯ ತಿಳಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಜನಸ್ನೇಹಿ ಕನಸು ಈಡೇರಿಸುವ ಭಾಗವಾಗಿ ಶೀಘ್ರವೇ ನಾವು ಹೊಸ ಮತ್ತು ಸುಧಾರಿತ ಪಾಸ್‌ಪೋರ್ಟ್‌ ಸೇವಾ ಯೋಜನೆಯ ಎರಡನೇ ಹಂತವನ್ನು (ಪಾಸ್‌ಪೋರ್ಟ್‌ ವರ್ಷನ್ 2.0) ಆರಂಭಿಸಲಿದ್ದೇವೆ. ಇದರಿಂದ ಕಾಲಮಿತಿಯಲ್ಲಿ ವಿಶ್ವಾಸಾರ್ಹ, ಪಾರದರ್ಶಕವಾಗಿ ಪಾಸ್‌ಪೋರ್ಟ್‌ ಸಂಬಂಧಿ ಸೇವೆಗಳನ್ನು ನೀಡಲು ಸಾಧ್ಯವಾಗಲಿದೆ’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಇದನ್ನು ಓದಿ: ರಾಹುಲ್‌ ಗಾಂಧಿಗೆ ಸಿಕ್ತು ಸಾಮಾನ್ಯ ಪಾಸ್‌ಪೋರ್ಟ್‌: 10 ವರ್ಷದ ಬದಲು 3 ವರ್ಷಕ್ಕೆ ಮಾತ್ರ ಅನುಮತಿ!

EASE (E: ಎನ್‌ಹ್ಯಾನ್ಸ್ಡ್‌ ಪಾಸ್‌ಪೋರ್ಟ್‌ ಸರ್ವೀಸ್‌, A: ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧರಿತ ಸೇವಾ ವಿತರಣೆ, S: ಚಿಪ್‌ ಬೇಸ್ಡ್‌ ಇ ಪಾಸ್‌ಪೋರ್ಟ್‌ನಿಂದಾಗಿ ಸುಲಲಿತ ವಿದೇಶ ಪ್ರವಾಸ ಮತ್ತು E: ಎನ್‌ಹ್ಯಾನ್ಸ್ಡ್‌ ಡಾಟಾ ಸೆಕ್ಯುರಿಟಿ’ ) ಜಾರಿಗೊಳಿಸಲಿದ್ದೇವೆ. ಇದು ಡಿಜಿಟಲ್‌ ವ್ಯವಸ್ಥೆ ಬಳಸಿಕೊಂಡು ಜನರಿಗೆ ಸುಧಾರಿತ ಪಾಸ್‌ಪೋರ್ಟ್‌ ಸೇವೆ ನೀಡಲು ನೆರವಾಗಲಿದೆ, ಕೃತಕ ಬದ್ಧಿಮತ್ತೆ ವ್ಯವಸ್ಥೆ ಆಧರಿತವಾಗಿ ಸೇವೆಯನ್ನು ನೀಡಲಾಗುವುದು, ಚಿಪ್‌ ಆಧರಿತ ಇ ಪಾಸ್‌ಪೋರ್ಟ್‌ನಿಂದ ವಿದೇಶಗಳಿಗೆ ಸುಲಲಿತ ಭೇಟಿ ನೀಡಬಹುದು ಮತ್ತು ಮಾಹಿತಿಯನ್ನು ಇನ್ನಷ್ಟು ಸುರಕ್ಷಿತವಾಗಿ ಇಡಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಇ - ಪಾಸ್‌ಪೋರ್ಟ್‌ ವಿಶೇಷತೆ ಏನು?
ಮೈಕ್ರೋಚಿಪ್‌ ಇರುವ ಇ - ಪಾಸ್‌ಪೋರ್ಟ್‌ ಬೆರಳಚ್ಚು ಹಾಗೂ ಫೇಸ್‌ ರಿಕಗ್ನಿಷನ್‌ನಂಥ ಸುಧಾರಿತ ಅಂಶಗಳನ್ನು ಒಳಗೊಂಡಿರುತ್ತದೆ. ಇದರಿಂದ ಪಾಸ್‌ಪೊರ್ಟ್‌ ತಿರುಚುವಿಕೆ ಹಾಗೂ ನಕಲಿ ಪಾಸ್‌ಪೋರ್ಟ್‌ ಮಾಡುವುದು ಅಸಾಧ್ಯವಾಗಲಿದೆ. ವಿಮಾನ ನಿಲ್ದಾಣಗಳ ಚೆಕ್‌ ಪಾಯಿಂಟ್‌ನಲ್ಲಿ ಪಾಸ್‌ಪೋರ್ಟ್‌ ಹೊಂದಿದವನ ಗುರುತು ದೃಢೀಕರಣ ಸುಲಭವಾಗಲಿದೆ. 

ಇದನ್ನೂ ಓದಿ: ಸಂಸತ್‌ ಸ್ಥಾನ ಕಳ್ಕೊಂಡ ರಾಹುಲ್‌ ಗಾಂಧಿಗೆ ಈಗ ಹೊಸ ಪಾಸ್‌ಪೋರ್ಟ್‌ ಪಡೆಯಲೂ ಸಂಕಷ್ಟ!