Cyber Attack 9 ತಿಂಗಳಲ್ಲಿ 51 ದಶಲಕ್ಷ ಸೈಬರ್ ದಾಳಿ ಎದುರಿಸಿದ ಭಾರತ!

* 2021ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಸಂಭವಿಸಿದ ಸೈಬಲ್ ದಾಳಿಗಳು
*  ಐಟಿ, ಫೈನಾನ್ಸ್, ಹೆಲ್ತ್ ಕೇರ್ ಸೇರಿದಂತೆ ಅನೇಕ ವಲಯಗಳು ಸೈಬರ್ ಅಟ್ಯಾಕ್‌ಗೆ ಗುರಿಯಾಗಿವೆ
* 40,000 ವಿಶಿಷ್ಟ IP ಅಡ್ರೆಸ್‌ಗಳನ್ನು ಸೈಬರ್ ಅಟ್ಯಾಕ್‌ಗೆ ವಂಚಕೋರರು ಬಳಸಿಕೊಂಡಿದ್ದಾರೆ.
 

India Face 51 million cyber attacks in just nine month says expert report

ಇದು ಡಿಜಿಟಲ್ (Digital) ಯುಗ. ಇದರಿಂದ ನಾಗರಿಕರ ಬದುಕು ಸಾಕಷ್ಟು ಸುಧಾರಣೆಯನ್ನು ಕಂಡಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಸಾಧ್ಯವಾದ ಕೆಲಸಗಳು ಬೆರಳ ತುದಿಯಲ್ಲೇ ಆಗುತ್ತಿವೆ ಎಂಬುದೂ ಸತ್ಯ. ಆದರೆ, ಅದೇ ಡಿಜಿಟಲ್ ಹಲವು ಅಪಾಯಗಳನ್ನು ತಂದೊಡ್ಡುತ್ತಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಯಾಕಂದರೆ, 2021 ಸಾಲಿನ ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಭಾರತದಲ್ಲಿನ ಡೇಟಾ ಸೆಂಟರ್‌ (Data Centers) ಗಳು 5.1 ಕೋಟಿ (51 Million) ಸೈಬರ್ ಅಟ್ಯಾಕ್‌ (Cyber Attacks) ಗಳನ್ನು ದಾಖಲಿಸಿವೆ ಮತ್ತು ಇವು 40,000 ವಿಶಿಷ್ಟ ಐಪಿ ಅಡ್ರೆಸ್‌ಗಳಿಂದ  ಬಂದದ್ದು ಆಗಿವೆ ಎಂಬ ಮಾಹಿತಿ ಇದೀಗ ಹೊರ ಬಿದ್ದಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಈಗ ಎಲ್ಲವೂ ವ್ಯವಹಾರವು ಆನ್‌ಲೈನ್ ಆಗಿರುವುದರಿಂದ ಬಹುತೇಕರು ಈ ಸೈಬರ್ ಅಟ್ಯಾಕ್‌ಗಳಿಗೆ ಹೆಚ್ಚು ಅವಕಾಶವನ್ನು ಸೃಷ್ಟಿಸಿಕೊಟ್ಟಂತಾಗಿರುವುದು. ಹಾಗೆಯೇ, ಆನ್‌ಲೈನ್ ಬಳಕೆಯಲ್ಲಿ ಸಾಕಷ್ಟು ಮುಂಚಾಗೃತೆಗಳ ಬಗ್ಗೆ ಬಳಕೆದಾರರಲ್ಲಿ ಜ್ಞಾನ ಇಲ್ಲದಿರುವುದು ಇಂಥ ಸೈಬರ್ ಅಟ್ಯಾಕ್‌ಗಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂಬುದುನ್ನು ಅಲ್ಲಗಳೆಯುವಂತಿಲ್ಲ. 

ದಾಳಿಕೋರರಿಂದ ನೆಟ್‌ವರ್ಕ್‌ಗಳಿಗೆ ಲಾಗ್ ಇನ್ ಮಾಡಲು ಬಳಸಲಾದ ಒಟ್ಟು 26,166 ಬಳಕೆದಾರ ಹೆಸರು (User name)ಗಳನ್ನು ಕಂಡು ಹಿಡಿಯಲಾಗಿದೆ ಎಂಬ ಮಾಹಿತಿಯನ್ನು ಈ ಅಧ್ಯಯನ ವರದಿಯು ಒಳಗೊಂಡಿದೆ. ಮತ್ತು ಒಟ್ಟು 80282 ಪಾಸ್‌ವರ್ಡ್‌ಗಳನ್ನು ದಾಳಿಕೋರರಿಂದ ನೆಟ್‌ವರ್ಕ್‌ಗಳಿಗೆ ಲಾಗ್ ಇನ್ ಮಾಡಲು ಬಳಸಲಾಗಿದೆ ಎಂಬುದು ಕಂಡುಬಂದಿದೆ.

OnePlus Tablet: OLED ಡಿಸ್‌ಪ್ಲೇ, ಫಾಸ್ಟ್ ಚಾರ್ಜಿಂಗ್ ಸೇರಿ ಸೂಪರ್ಬ್ ಫೀಚರ್ಸ್

ದಿ ಇನ್‌ಸ್ಟಿಟ್ಯೂಷನ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಶನ್ ಇಂಜಿನಿಯರ್ಸ್ (The Institution of Electronics and Telecommunication Engineers  - IETE) ಮತ್ತು ಸೈಬರ್‌ಪೀಸ್ ಫೌಂಡೇಶನ್ (CyberPeace Foundation - CPF) ಜೊತೆಗೆ Autobot Infosec ನಡೆಸಿದ ಸಂಶೋಧನೆಯ ಪ್ರಕಾರ, ಸೈಬರ್ ಅಟ್ಯಾಕರ್ಸ್ ಬಹು ಟರ್ಮಿನಲ್ ಕಮಾಂಡ್‌ಗಳನ್ನು ಚಲಾಯಿಸಲು ಪ್ರಯತ್ನಿಸಿದ್ದಾರೆ. ಸ್ಟಮ್‌ನಲ್ಲಿ ದುರುದ್ದೇಶಪೂರಿತ ಪೇಲೋಡ್‌ಗಳನ್ನು ಡೌನ್‌ಲೋಡ್ ಮಾಡಲು ಪ್ರಯತ್ನಿಸಿದ್ದಾರೆ. ಆ ಮೂಲಕ ಅಗತ್ಯ ಮಾಹಿತಿಗಳನ್ನು ಪಡೆಯಲು ಮುಂದಾಗಿರುವುದು ಇದರಿಂದ ತಿಳಿದು ಬರುತ್ತದೆ.

ಸಿಸ್ಟಂನಲ್ಲಿ ಒಟ್ಟು 1,31,388 ವಿಶಿಷ್ಟ ಟರ್ಮಿನಲ್ ಕಮಾಂಡ್‌ಗಳನ್ನು ರನ್ ಮಾಡಲಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದರೆ ಒಟ್ಟು 1,262 ಅನನ್ಯ ಪೇಲೋಡ್‌ಗಳನ್ನು ಪರಿಸರಕ್ಕೆ ಚುಚ್ಚಲಾಗಿದೆ ಎಂದು ಗುರುತಿಸಲಾಗಿದೆ. ಪೇಲೋಡ್‌ಗಳು ಬಾಟ್ನೆಟ್ (botnet), ಟ್ರೋಜನ್ (Trojan) ಇತ್ಯಾದಿ ದುರುದ್ದೇಶಪೂರಿತ ಫೈಲ್‌ಗಳನ್ನು ಇವು ಒಳಗೊಂಡಿವೆ.

ಸಿಮ್ಯುಲೇಟೆಡ್ ನೆಟ್‌ವರ್ಕ್ ಅನ್ನು ನಿಯೋಜಿಸುವ ಮೂಲಕ ನಾವು ದಾಳಿಯ ಮಾದರಿಗಳು, ವಿಭಿನ್ನ ಪ್ರೋಟೋಕಾಲ್‌ಗಳಿಗಾಗಿ ವಿವಿಧ ರೀತಿಯ ದಾಳಿ ವೆಕ್ಟರ್ ಮತ್ತು ದುರುದ್ದೇಶಪೂರಿತ ಚಟುವಟಿಕೆಯ ಇತ್ತೀಚಿನ ಪ್ರವೃತ್ತಿಗಳ ಕುರಿತು ಡೇಟಾವನ್ನು ಸಂಗ್ರಹಿಸಬಹುದು ಎಂದು ಸೈಬರ್‌ಪೀಸ್ ಫೌಂಡೇಶನ್ ವಕ್ತಾರರು ಹೇಳಿದ್ದಾರೆ.

Realme GT 2 Pro ಏಪ್ರಿಲ್ 7ಕ್ಕೆ ಭಾರತದಲ್ಲಿ ಲಾಂಚ್: ಬೆಲೆ ಎಷ್ಟು?

2021ರಲ್ಲಿ 14 ಲಕ್ಷ ಸೈಬರ್ ಅಟ್ಯಾಕ್ಸ್
ಇಂಡಿಯನ್ ಕಂಪ್ಯೂಟರ್ ಎಮರ್ಜೇನ್ಸಿ ಟೀಂ (CERT-In) ಕೈಗೊಂಡಿರುವ ವಿಶ್ಲೇಷಣೆಯ ಪ್ರಕಾರ, 2021ರಲ್ಲಿ ಭಾರತದಲ್ಲಿ ಸುಮಾರು 14 ಲಕ್ಷ ಸೈಬರ್ ಸೆಕ್ಯುರಿಟಿ ಸಂಬಂಧಿ ಘಟನೆಗಳು ಜರುಗಿವೆ. ಈ ಈ ಮಾಹಿತಿಯನ್ನು ಕೇಂದ್ರ ಸರ್ಕಾರವು ರಾಜ್ಯಸಭೆಗೆ ನೀಡಿದೆ. ಸೈಬರ್ ಸೆಕ್ಯುರಿಟಿ ದಾಳಿಗಳು ಸಂಭವಿಸಿದಾಗ ಅವುಗಳನ್ನು ವಿಶ್ಲೇಷಿಸುವ ಕೆಲಸವನ್ನು ಸಿಇಆರ್-ಇನ್ ಮಾಡುತ್ತದೆ. ಇದೊಂದು ಸರ್ಕಾರಿ ನೋಡಲ್ ಏಜೆನ್ಸಿಯಾಗಿದ್ದು, ನಿರಂತರ ಕಣ್ಗಾವಲು ಹೊಂದಿರುತ್ತದೆ.  2021ರ ಅವಧಿಯಲ್ಲಿ ಒಟ್ಟು 14,02,809 ಸೈಬರ್ ದಾಳಿಗಳು ಆಗಿರುವುದನ್ನು ಸಿಇಆರ್‌ಟಿ-ಇನ್ ಗಮನಿಸಿದೆ ಎಂದು ರಾಜ್ಯಸಗೆ ಕೇಂದ್ರ ಸರ್ಕಾರವು ಮಾಹಿತಿ ನೀಡಿದೆ.  ಇ-ಕಾಮರ್ಸ್, ಎನರ್ಜಿ, ಫೈನಾನ್ಸ್, ಸರ್ಕಾರ, ಹೆಲ್ತ್ ಕೇರ್, ಐಟಿ, ಮ್ಯಾನುಫ್ಯಾಕ್ಚುರಿಂಗ್ ಮತ್ತಿತರ ಕ್ಷೇತ್ರಗಳು ಈ ಸೈಬರ್ ದಾಳಿಗೆ ಒಳಗಾಗಿರುವುದನ್ನು ಕಾಣಬಹುದಾಗಿದೆ.

Latest Videos
Follow Us:
Download App:
  • android
  • ios