YouTubeನಲ್ಲಿ ಹೆಚ್ಚು ವಿಡಿಯೋ ನೋಡಲು ಡೇಟಾ ಉಳಿಸುವ ಟಿಪ್ಸ್ ಇಲ್ಲಿವೆ. ಈ ಸೆಟ್ಟಿಂಗ್ ಬಳಸಿ ಡೇಟಾ ರೀಚಾರ್ಜ್ ಮಾಡುವ ತೊಂದರೆಯಿಂದ ಮುಕ್ತಿ ಪಡೆಯಿರಿ.

Youtube Tips And Tricks: ಯುಟ್ಯೂಬ್‌ನಲ್ಲಿ ಸಿನಿಮಾ, ರಿಯಾಲಿಟಿ ಶೋ, ಆಟ, ಧಾರಾವಾಹಿ ಸೇರಿದಂತೆ ಅನೇಕ ವಿಡಿಯೋಗಳನ್ನು ಯಾವುದೇ ಅಡೆತಡೆಯಿಲ್ಲದೇ, ಹಣ ಪಾವತಿಸದೇ ನೋಡಬಹುದಾಗಿದೆ. ಆದ್ರೆ ಯುಟ್ಯೂಬ್‌ನಲ್ಲಿ ವಿಡಿಯೋಗಳನ್ನು ನೋಡಬೇಕಾದ್ರೆ ನಿಮ್ಮ ಡಿವೈಸ್‌ನಲ್ಲಿ ಇಂಟರ್‌ನೆಟ್ ಆಕ್ಟಿವ್ ಆಗಿರಬೇಕಾಗುತ್ತದೆ. ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಯಾವುದೇ ಡೇಟಾ ಪ್ಯಾಕ್ ಇಲ್ಲದಿದ್ದರೆ ಯುಟ್ಯೂಬ್‌ನಲ್ಲಿ ವಿಡಿಯೋ ನೋಡಲು ಸಾಧ್ಯವಾಗಲ್ಲ. ಆದ್ರೆ ಕೆಲವೊಂದು ಟ್ರಿಕ್ಸ್ ಬಳಕೆ ಮಾಡುವ ಮೂಲಕ ಡೇಟಾ ಉಳಿಸಿ ಯುಟ್ಯೂಬ್‌ನಲ್ಲಿ ವಿಡಿಯೋಗಳನ್ನು ವೀಕ್ಷಿಸಬಹುದು. 

ಯುಟ್ಯೂಬ್ ನಲ್ಲಿ ಯಾವುದೇ ವಿಡಿಯೋಗಳನ್ನು ಉಚಿತವಾಗಿ ನೋಡಬಹುದಾದ ವೇದಿಕೆಯಾಗಿದೆ. ಆದ್ರೆ ಯುಟ್ಯೂಬ್‌ನಲ್ಲಿ ಕೆಲವೇ ವಿಡಿಯೋ ನೋಡಿದ ಕೂಡಲೇ ಡೇಟಾ ಖಾಲಿಯಾಗುತ್ತೆ ಅನ್ನೋದು ಹಲವರ ಬೇಸರವಾಗಿದೆ. ಈ ಸಮಯದಲ್ಲಿ ಬಳಕೆದಾರರು ಡೇಟಾ ಪ್ಯಾಕ್ ಆಕ್ಟಿವೇಟ್ ಮಾಡಿಕೊಳ್ಳಲು ಹೆಚ್ಚುವರಿ ಹಣ ಖರ್ಚು ಮಾಡಬೇಕಾಗುತ್ತದೆ. ಈ ಲೇಖನದಲ್ಲಿ YouTubeನಲ್ಲಿ ಕಡಿಮೆ ಡೇಟಾ ಬಳಸಿ ಹೆಚ್ಚು ವಿಡಿಯೋ ನೋಡುವ ಸೆಟ್ಟಿಂಗ್ ಮಾಹಿತಿಯನ್ನು ಒಳಗೊಂಡಿದೆ. ಈ ಸೆಟ್ಟಿಂಗ್ ಬಳಸಿ ನೀವು ಡೇಟಾವನ್ನು ಮತ್ತೆ ಮತ್ತೆ ರೀಚಾರ್ಜ್ ಮಾಡುವ ತೊಂದರೆಯಿಂದ ಮುಕ್ತರಾಗಬಹುದು. 

ಸಾಮಾನ್ಯವಾಗಿ ಜನರು ರಜಾದಿನಗಳಲ್ಲಿ ಹೆಚ್ಚು ಯುಟ್ಯೂಬ್ ವಿಡಿಯೋ ನೋಡಲು ಇಷ್ಟಪಡುತ್ತಾರೆ. ನಿರಂತರವಾಗಿ ವಿಡಿಯೋ ನೋಡುತ್ತಿರುವಾಗ ಡೇಟಾ ಪ್ಯಾಕ್ ಮುಗಿಯುತ್ತಲೇ ಬೇಸರ ಉಂಟಾಗುತ್ತದೆ. ನಿಮ್ಮ ಮನರಂಜನೆಯ ಆನಂದ ಅರ್ಧಕ್ಕೆ ನಿಂತು ಹೋಗುತ್ತದೆ. ಈ ಸಮಯದಲ್ಲಿ ಹೊಸದಾಗಿ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವೇ ಮನೆಯಲ್ಲಿರುವ ಇತರೆ ಸದಸ್ಯರ ಮೊಬೈಲ್‌ನಿಂದ ಹಾಟ್‌ಸ್ಪಾಟ್‌ನಿಂದ ಡೇಟಾ ಪಡೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಈ ಎರಡು ಆಯ್ಕೆಗಳು ಇರದಿದ್ದರೆ ವಿಡಿಯೋ ವೀಕ್ಷಿಸುವುದನ್ನು ನಿಲ್ಲಿಸಬೇಕಾಗುತ್ತದೆ. ಆದರೆ ಈ ಸಮಸ್ಯೆಯಿಂದ ಹೇಗೆ ಪಾರಾಗಬೇಕು ಎಂಬುದನ್ನು ನೋಡೋಣ ಬನ್ನಿ .

ಇದನ್ನೂ ಓದಿ: ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಖಾಲಿ ಮಾಡುವ 10 ಆಪ್‌ಗಳು

ಕಡಿಮೆ ಡೇಟಾ ಬಳಸಿ YouTubeನಲ್ಲಿ ವಿಡಿಯೋ ವೀಕ್ಷಣೆ ಮಾಡೋದು ಹೇಗೆ?

  • ಮೊದಲು ಯೂಟ್ಯೂಬ್ ಅಪ್ಲಿಕೇಷನ್ ಓಪನ್ ಮಾಡಿ.
  • ಇದರ ನಂತರ ಯಾವುದಾದರೂ ಒಂದು ವಿಡಿಯೋ ಪ್ಲೇ ಮಾಡಿ.
  • ಮೇಲಿನ ಬಲ ಮೂಲೆಯಲ್ಲಿ ನೀವು ಸೆಟ್ಟಿಂಗ್‌ಗಳ ಆಯ್ಕೆಯನ್ನು ನೋಡುತ್ತೀರಿ. ನೀವು ಅದರ ಮೇಲೆ ಟ್ಯಾಪ್ ಮಾಡಿದ ತಕ್ಷಣ, ನಿಮಗೆ ಗುಣಮಟ್ಟದ ಆಯ್ಕೆ ಕಾಣಿಸುತ್ತದೆ.
  • ನೀವು ಅದರ ಮೇಲೆ ಟ್ಯಾಪ್ ಮಾಡಿದ ತಕ್ಷಣ, ನಿಮಗೆ ಡೇಟಾ ಸೇವರ್ ಆಯ್ಕೆ ಕಾಣಿಸುತ್ತದೆ.
  • ನೀವು ಈ ಆಯ್ಕೆಯನ್ನು ಆರಿಸಿದ ತಕ್ಷಣ, ವೀಡಿಯೊಗಳನ್ನು ವೀಕ್ಷಿಸುವಾಗ ಕಡಿಮೆ ಡೇಟಾ ಬಳಕೆಯಾಗುತ್ತದೆ.

ಇದನ್ನೂ ಓದಿ: ಇಂಟರ್‌ನೆಟ್‌ ಇಲ್ಲದೇ ಯುಟ್ಯೂಬ್‌ನಲ್ಲಿ ವಿಡಿಯೋ ನೋಡುವ ಸೂಪರ್‌ ಟ್ರಿಕ್ಸ್