ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಖಾಲಿ ಮಾಡುವ 10 ಆಪ್‌ಗಳು
ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬೇಗ ಖಾಲಿಯಾಗಲು ಕೆಲವು ಆಪ್‌ಗಳು ಕಾರಣವಾಗುತ್ತವೆ. ಪ್ರಮುಖ 10 ಆಪ್‌ಗಳ ಹೆಸರು ಇಲ್ಲಿದೆ ನೋಡಿ

ಇಂದು ಬಹುತೇಕ ಎಲ್ಲರ ಬಳಿಯಲ್ಲಿಯೂ ಸ್ಮಾರ್ಟ್‌ಫೋನ್ ಇರುತ್ತದೆ. ಆದರೆ ಮೊಬೈಲ್ ಖರೀದಿಸಿದ ವರ್ಷದೊಳಗೆ ಬ್ಯಾಟರಿ ಬಾಳಿಕೆ ಬರಲ್ಲ ಎಂದು ಎಲ್ಲರು ಹೇಳಲು ಆರಂಭಿಸುತ್ತಾರೆ. ಒಂದಿಷ್ಟು ಮಂದಿ ಅರ್ಧಗಂಟೆ ಹಿಂದೆಯಷ್ಟೇ 100 ಪರ್ಸೆಂಟ್ ಚಾರ್ಜ್ ಮಾಡಿಕೊಂಡಿದ್ದೆ, ಅರ್ಧದಷ್ಟು ಖಾಲಿಯಾಗಿದೆ ಎಂದು ಹೇಳುತ್ತಿರುತ್ತಾರೆ.

ನಿಮ್ಮ ಸ್ಮಾರ್ಟ್‌ಫೋನಿನ ಬ್ಯಾಟರಿ ಪದೇ ಪದೇ ಖಾಲಿ ಆಗುತ್ತಿದ್ರೆ ಎಂದ ಮಾತ್ರಕ್ಕೆ ಡಿವೈಸ್ ಹಾಳಾಗಿದೆ ಎಂದರ್ಥವಲ್ಲ. ಬೇರೆ ಕಾರಣಗಳಿಂದಲೂ ಸ್ಮಾರ್ಟ್‌ಫೋನಿನ ಬ್ಯಾಟರಿ ಖಾಲಿಯಾಗುತ್ತಿರುತ್ತದೆ.
ಫಿಟ್‌ನೆಸ್ ಟ್ರ್ಯಾಕಿಂಗ್, ಸೋಶಿಯಲ್ ಮೀಡಿಯಾ ಆಪ್, ಡೇಟಿಂಗ್ ಆಪ್ ಸೇರಿದಂತೆ ಕೆಲವು ಅಪ್ಲಿಕೇಶನ್‌ಗಳು ಬ್ಯಾಟರಿ ಖಾಲಿಯಾಗಲು ಕಾರಣವಾಗುತ್ತದೆ. ಈ ಆಪ್‌ಗಳ ಬಳಕೆಯಿಂದಾಗಿ ಬ್ಯಾಟರಿಯ ಚಾರ್ಜ್ ಕಡಿಮೆಯಾಗುತ್ತದೆ. ಈ ಅಪ್ಲಿಕೇಶನ್ ಬಳಕೆ ಮಾಡದಿದ್ರೂ ಚಾರ್ಜ್ ಖಾಲಿಯಾಗುತ್ತದೆ.
Nyheder24 ನ ವರದಿಯ ಪ್ರಕಾರ, Fitbit ಅಪ್ಲಿಕೇಶನ್ ಅತಿ ಹೆಚ್ಚು ಚಾರ್ಜ್ ಬಳಸಿಕೊಳ್ಳುತ್ತದೆ. ಇದೇ ಪಟ್ಟಿಯಲ್ಲಿ ಎಲ್ಲರೂ ಅತ್ಯಧಿಕವಾಗಿ ಬಳಸುವ ಅಪ್ಲಿಕೇಷನ್ ಸಹ ಸೇರ್ಪಡೆಯಾಗಿದೆ. ಹೆಚ್ಚು ಬ್ಯಾಟರಿ ಬಳಕೆ ಮಾಡುವ ಪ್ರಮುಖ 10 ಅಪ್ಲಿಕೇಶನ್ ಹೆಸರು ಇಲ್ಲಿದೆ ನೋಡಿ.
ಬ್ಯಾಟರಿ ಖಾಲಿ ಮಾಡುವ ಪ್ರಮುಖ 10 ಆಪ್‌ಗಳು
1. Fitbit, 2. Uber, 3. Skype, 4. Facebook, 5. Airbnb, 6. Instagram, 7. Tinder, 8. Bumble, 9. Snapchat ಮತ್ತು 10. WhatsApp
ಬ್ಯಾಟರಿ ಸೇವ್ ಮಾಡೋದು ಹೇಗೆ?
ಆಂಡ್ರಾಯ್ಡ್ ಡಿವೈಸ್‌ನಲ್ಲಿ ಸೆಟಿಂಗ್ ಮೇಲೆ ಕ್ಲಿಕ್ ಮಾಡಿ. ಮೆನುವಿನಲ್ಲಿ ಬ್ಯಾಟರಿ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆನಂತರ ಅಡ್ವಾನ್ಸಡ್ ಸೆಟಿಂಗ್‌ನಲ್ಲಿ ಹೋಗಿ ಬ್ಯಾಟರಿ ಯೂಸ್ ನಲ್ಲಿ ಆಪ್ಟಮೈಸ್ ಆಯ್ಕೆ ಮಾಡಿಕೊಳ್ಳಿ . ಆಪ್ಟಮೈಸ್ ಟ್ಯಾಪ್ ಮಾಡಿದ ಬಳಿಕ ಬ್ಯಾಕ್‌ಗ್ರೌಂಡ್ ಆಕ್ಟಿವಿಟಿ ಡಿಸೇಬಲ್ ಮಾಡುವ ಆಪ್‌ಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ.