ಫೋನ್ ಡೇಟಾ ಆನ್ ಇರುವಾಗ ಕೇವಲ ವ್ಯಾಟ್ಸ್ಆ್ಯಪ್ ನೆಟ್ ಆಫ್ ಮಾಡುವುದು ಹೇಗೆ? ಇಲ್ಲಿದೆ ವಿವರ!

ವ್ಯಾಟ್ಸ್ಆ್ಯಪ್ ಬಳದಿರುವಾಗ, ವ್ಯಾಟ್ಸ್ಆ್ಯಪ್ ಕಾಲ್ ಕಿರಿಕಿರಿ, ನೆಟ್ ಹೆಚ್ಚು ಬಳಕೆಯಾಗುವುದನ್ನು ತಪ್ಪಿಸಲು ಫೋನ್ ಇಂಟರ್ನೆಟ್ ಆನ್ ಇರುವಾಗಲೇ ಕೇವಲ ವ್ಯಾಟ್ಸ್ಆ್ಯಪ್ ನೆಟ್ ಆಫ್ ಮಾಡಲು ಸಾಧ್ಯವಿದೆ. ಆ್ಯಂಡ್ರಾಯ್ಡ್ ಹಾಗೂ ಐಫೋನ್ ಬಳಕೆದಾರಿಗೆ ಪ್ರತ್ಯೇಕ ವಿಧಾನ ಇಲ್ಲಿದೆ.
 

How to turn off Only WhatsApp data from smartphone step by step details ckm

ನವದೆಹಲಿ(ಜ.23) ಮೊಬೈಲ್ ಬಳಸಿದ್ದರೂ ಡೇಟಾ ಬಳಕೆಯಾಗುತ್ತಲೇ ಇರುತ್ತದೆ. ಬ್ಯಾಗ್ರೌಂಡ್‌ನಲ್ಲಿ ಸಕ್ರಿಯವಾಗಿರುವ ಆ್ಯಪ್‌ಗಳು ನಿಮ್ಮ ಫೋನ್ ಡೇಟಾ ಬಳಕೆ ಮಾಡುತ್ತದೆ. ಪ್ರಮುಖವಾಗಿ ವ್ಯಾಟ್ಸ್ಆ್ಯಪ್ ಮೊಬೈಲ್ ಡೇಟಾ ಬಳಕೆ ಮಾಡತ್ತಲೇ ಇರುತ್ತದೆ. ಕಾರಣ ಪದೇ ಪದೇ ಬರುವ ಮೆಸೇಜ್, ನೋಟಿಫಿಕೇಶನ್, ವ್ಯಾಟ್ಸ್ಆ್ಯಪ್ ಕಾಲ್‌ಗಳಿಗೆ ಡೇಟಾ ಬೇಕೇ ಬೇಕು. ಇನ್ನು ವ್ಯಾಟ್ಸ್ಆ್ಯಪ್ ಬಳಕೆ ಮಾಡದಿದ್ದರೂ ಬ್ಯಾಗ್ರೌಂಡ್‌ನಲ್ಲಿ ಆ್ಯಪ್ ಸಕ್ರಿಯವಾಗಿರುವ ಕಾರಣ ಡೇಟಾ ಬಳಕೆಯಾಗುತ್ತದೆ. ಈ ಎಲ್ಲಾ ಕಿರಿಕಿಯಿಂದ ಮುಕ್ತವಾಗಲು, ಫೋನ್ ಡೇಟಾ ಆನ್ ಇಟ್ಟುಕೊಂಡೆ ಕೇವಲ ವ್ಯಾಟ್ಸ್ಆ್ಯಪ್ ಡೇಟಾ ಮಾತ್ರ ಆಫ್ ಮಾಡಲು ಸಾಧ್ಯವಿದೆ.

ಮೊಬೈಲ್ ಫೋನ್ ಡೇಟಾ ಆನ್ ಇಟ್ಟುಕೊಂಡು ಕೇವಲ ವ್ಯಾಟ್ಸ್ಆ್ಯಪ್ ಡೇಟಾ ಆಫ್ ಮಾಡುವುದು ಹೇಗೆ? ಇಲ್ಲಿದೆ ವಿಧಾನ

ಆ್ಯಂಡ್ರಾಯ್ಡ್ ಬಳಕೆದಾರರಿಗೆ ವ್ಯಾಟ್ಸ್ಆ್ಯಪ್ ನೆಟ್ ಆಫ್ ಸ್ಟೆಪ್ಸ್
ನಿಮ್ಮ ಫೋನ್‌ನ ಸೆಟ್ಟಿಂಗ್ಸ್ ಒಪನ್ ಮಾಡಿಕೊಳ್ಳಿ
ಸೆಟ್ಟಿಂಗ್ಸ್‌ನಲ್ಲಿ ಕನೆಕ್ಷನ್ ಆಯ್ಕೆಯನ್ನು ಕ್ಲಿಕ್ ಮಾಡಿ
ಶಿಯೋಮಿ ಮೊಬೈಲ್‌ ಆಗಿದ್ದರೆ ಕನೆಕ್ಷನ್ ಆ್ಯಂಡ್ ಶೇರಿಂಗ್, ಒನ್‌ಪ್ಲಸ್ ಮೊಬೈಲ್ ಆಗಿದ್ದರೆ ಮೊಬೈಲ್ ನೆಟ್‌ವರ್ಕ್ ಆಯ್ಕೆ ಮಾಡಿಕೊಳ್ಳಿ
ಡೇಟಾ ಯೂಸೇಜ್ ಆಯ್ಕೆ ಕ್ಲಿಕ್ ಮಾಡಿದಾಗ, ಬ್ಯಾಗ್ರೌಂಡ್ ಡೇಟಾ ಬಳಕೆಯಾಗುತ್ತಿರುವ ಆ್ಯಪ್ ಲಿಸ್ಟ್ ಕಾಣಿಸಿಕೊಳ್ಳಲಿದೆ
ಈ ಲಿಸ್ಟ್‌ನಲ್ಲಿ ವ್ಯಾಟ್ಸ್ಆ್ಯಪ್ ಗುರುತಿಸಿಕೊಂಡು ಕ್ಲಿಕ್ ಮಾಡಿ
ಅಲೋ ಬ್ಯಾಗ್ರೌಂಡ್ ಡೇಟಾ ಯೂಸೇಜ್ ಆಯ್ಕೆಯನ್ನು ಆಫ್ ಮಾಡಿಕೊಳ್ಳಿ

ಮೊಬೈಲ್ ನಂಬರ್ ಬಹಿರಂಗಪಡಿಸದೆ WhatsApp ಬಳಸಲು ಸಾಧ್ಯ, ಇಲ್ಲಿದೆ ಟಿಪ್ಸ್!

ಇಷ್ಟು ಪ್ರಕ್ರಿಯೆ ಮಾಡಿದರೆ ಆ್ಯಂಡ್ರಾಯ್ಡ್ ಬಳಕೆದಾರ  ವ್ಯಾಟ್ಸ್ಆ್ಯಪ್ ನೆಟ್ ಆಫ್ ಆಗಲಿದೆ. ನೀವು ವ್ಯಾಟ್ಸ್ಆ್ಯಪ್ ಕ್ಲಿಕ್ ಮಾಡಿ, ಬ್ಯಾಗ್ರೌಂಡ್ ಡೇಟಾ ಯೂಸೇಜ್ ಆನ್ ಮಾಡುವವರೆಗೆ ವ್ಯಾಟ್ಸ್ಆ್ಯಪ್ ಡೇಟಾ ಮಾತ್ರ ಸಂಪೂರ್ಣ ಆಫ್ ಆಗಲಿದೆ. ಆದರೆ ಫೋನ್‌ನಲ್ಲಿರುವ ಇತರ ಆ್ಯಪ್, ಮೆಸೇಜ್, ಫೋನ್ ಗೂಗಲ್, ಯೂಟ್ಯೂಬ್ ಸೇರಿದಂತೆ ಇತರ ಎಲ್ಲಾ ಆ್ಯಪ್‌ಗಳು ಕಾರ್ಯನಿರ್ವಹಿಸಲಿದೆ.

ಐಫೋನ್ ಬಳಕೆದಾರರಿಗೆ
ಐಫೋನ್ ಸೆಟ್ಟಿಂಗ್ಸ್ ಒಪನ್ ಮಾಡಿಕೊಳ್ಳಿ
ಮೊಬೈಲ್ ಆಯ್ಕೆಯನ್ನು ಟ್ಯಾಪ್ ಮಾಡಿ
ಸೆಲ್ಯುಲರ್ ಡೇಟಾ ಆಯ್ಕೆ ಕ್ಲಿಕ್ ಮಾಡಲು ಸ್ಲೈಡ್ ಮಾಡಬೇಕು
ವ್ಯಾಟ್ಸ್ಆ್ಯಪ್ ಕ್ಲಿಕ್ ಮಾಡಿ ಡಿಸೇಬಲ್ ಮಾಡಿಕೊಳ್ಳಬೇಕು

ವಾಟ್ಸಾಪ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌: ಇನ್ಮುಂದೆ ಪರ್ಸನಲ್‌ ಚಾಟ್‌ಗೆ ಸೀಕ್ರೆಟ್ ಕೋಡ್ ಹಾಕೋಕೆ ಅವಕಾಶ
 

Latest Videos
Follow Us:
Download App:
  • android
  • ios