Google Workspace Integrated View: ಜಿಮೇಲ್ ವಿನ್ಯಾಸ ಶೀಘ್ರದಲ್ಲೇ ಬದಲಾವಣೆ: ಹೇಗಿರಲಿದೆ ಹೊಸ ಲೇಯೌಟ್?
ಗೂಗಲ್ ಶೀಘ್ರದಲ್ಲೇ ಜಿಮೇಲ್‌ಗಾಗಿ ಹೊಸ ವಿನ್ಯಾಸವನ್ನು ಬಿಡುಗಡೆ ಮಾಡಲಿದೆ, ಇದನ್ನು ಇಂಟಿಗ್ರೇಟೆಡ್ ವ್ಯೂ ಎಂದು ಕರೆಯಲಾಗುತ್ತದೆ. ಗೂಗಲ್ ಹೊಸ ಲೇಔಟ್ ಬಳಕೆದಾರರು ಇನ್‌ಬಾಕ್ಸ್, ಗೂಗಲ್ ಮೀಟ್, ಸ್ಪೇಸ್‌ಗಳು ಸೇರಿದಂತೆ ಇತರ ಸೇವೆಗಳ ನಡುವೆ ಸುಲಭವಾಗಿ ಬದಲಾಯಿಸಲು ಅನುಮತಿಸುತ್ತದೆ.
Tech Desk: ಗೂಗಲ್ ಜಿಮೇಲ್‌ಗಾಗಿ ಹೊಸ ವಿನ್ಯಾಸವನ್ನು ಬಿಡುಗಡೆ ಮಾಡಲಿದೆ. ಹೊಸ ಲೇಔಟ್ Google Meet, Google Chat ಮತ್ತು Spaces ಅನ್ನು ಜಿಮೇಲ್‌ಗೆ ಹೇಗೆ ಸಂಯೋಜಿಸಲಾಗಿದ್ದು ಶೀಘ್ರದಲ್ಲೇ ಬಳಕೆಗೆ ಲಭ್ಯವಿರಲಿದೆ. 2022ರ ಎರಡನೇ ತ್ರೈಮಾಸಿಕದ ಅಂತ್ಯದ ವೇಳೆಗೆ Integrated View ಲೇಔಟ್ ಡೀಫಾಲ್ಟ್ ಆಯ್ಕೆಯಾಗುವ ನಿರೀಕ್ಷೆಯಿದೆ. ಗೂಗಲ್‌ನ ವರ್ಕ್‌ಸ್ಪೇಸ್ (Workspace) ಬ್ಲಾಗ್‌ನಲ್ಲಿನ ಮಾಹಿತಿ ಪ್ರಕಾರ, ಕಾರ್ಯಸ್ಥಳದ ಬಳಕೆದಾರರು ಫೆಬ್ರವರಿ 8 ರಿಂದ ಹೊಸ ವಿನ್ಯಾಸವನ್ನು ಪರೀಕ್ಷಿಸಲು ಪ್ರಾರಂಭಿಸಬಹುದು.
ಗೂಗಲ್‌ನ ಸಂಯೋಜಿತ ವಿನ್ಯಾಸ Google Workspace Business, Enterprise, Education, Frontline, Nonprofit, G Suite Basic ಮತ್ತು Business ಖಾತೆಗಳಿಗೆ ಲಭ್ಯವಿರುತ್ತದೆ. ಎಂಟರ್‌ಪ್ರೈಸ್ ಅಲ್ಲದ ವರ್ಕ್‌ಸ್ಪೇಸ್ ಬಳಕೆದಾರರಿಗೆ ಈ ವೈಶಿಷ್ಟ್ಯವು ಯಾವಾಗ ಲಭ್ಯವಿರುತ್ತದೆ ಎಂಬುದರ ಕುರಿತು ಪ್ರಸ್ತುತ ಯಾವುದೇ ಮಾಹಿತಿ ಇಲ್ಲ̤
ಇದನ್ನೂ ಓದಿ: Gmail Android Milestone: ಪ್ಲೇ ಸ್ಟೋರ್‌ನಿಂದ 10 ಬಿಲಿಯನ್ ಇನ್‌ಸ್ಟಾಲ್ಸ್ ತಲುಪಿದ 4ನೇ ಆ್ಯಪ್!
Gmail, Chat ಮತ್ತು Meet ಎಲ್ಲವನ್ನೂ ಪ್ರವೇಶಿಸಬಹುದಾದ ಒಂದೇ ಲೇಔಟ್ ಬದಲಿಗೆ, Google ಬಳಕೆದಾರರಿಗೆ ಮೇಲ್, ಚಾಟ್, ಸ್ಪೇಸ್‌ಗಳು ಮತ್ತು ಮೀಟ್ ಎಂಬ ನಾಲ್ಕು ಬಟನ್‌ಗಳ ನಡುವೆ ಬದಲಾಯಿಸುವ ಸಾಮರ್ಥ್ಯವನ್ನು ನೀಡುತ್ತದೆ. ಈ ಮೂಲಕ ಬಳಕೆದಾರರು ಆಯ್ಕೆ ಮಾಡಿದ ಯಾವುದೇ ಸೇವೆಯ ವಿಸ್ತೃತ ವೀಕ್ಷಣೆಯನ್ನು (Enlarged view) ಮಾತ್ರ ನೋಡುತ್ತಾರೆ. ಆದರೆ ನೋಟೀಫಿಕೇಶನ್ ಬಬಲ್ ಬಳಕೆದಾರರಿಗೆ ಎಲ್ಲದರ ಮಾಹಿತಿ ನೀಡುತ್ತದೆ ಎಂದು ಗೂಗಲ್ ತಿಳಿಸಿದೆ.
ವರ್ಕ್ ಫ್ರಾಮ್ ಹೋಮ್ ಇನ್ನಷ್ಟು ಸುಲಭ: ಕೊರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಹೈಬ್ರಿಡ್ ಕೆಲಸ ಮತ್ತು ರಿಮೋಟ್ ವರ್ಕಿಂಗನ್ನು ಹೆಚ್ಚಿನ ಕಂಪನಿಗಳು ಅಳವಡಿಸಿಕೊಂಡಿರುವುದರಿಂದ ಗ್ರಾಹಕರಿಗೆ ಸುಲಭ ಸೇವೆ ನೀಡಲು ಕಂಪನಿಯು ತನ್ನ ವರ್ಕ್‌ಸ್ಪೇಸ್ ಕೊಡುಗೆಗಳನ್ನು ಸಂಯೋಜಿಸಲು ಕೆಲಸ ಮಾಡುತ್ತಿದೆ. ಗೂಗಲ್ ಪ್ರಕಾರ, ಹೊಸ ಲೇಔಟ್‌ಗೆ ಅಪ್ಡೇಟಾಗುವ ಬಳಕೆದಾರರು ಇಂದು ಲಭ್ಯವಿರುವ ಮೇಲ್ ಮತ್ತು ಲೇಬಲ್ ಆಯ್ಕೆಗಳ ಅದೇ ಪಟ್ಟಿಯನ್ನು ನೋಡಲು ಸಾಧ್ಯವಾಗುತ್ತದೆ.
ಗೂಗಲ್ ಮೊದಲ ಬಾರಿಗೆ ಸೆಪ್ಟೆಂಬರ್ 2021 ರಲ್ಲಿ ವರ್ಕ್‌ಸ್ಪೇಸ್ ಪರಿಕರಗಳಿಗೆ ಬದಲಾವಣೆಗಳನ್ನು ಘೋಷಿಸಿತ್ತು. ಬಳಕೆದಾರರು Google Meet ಲಿಂಕನ್ನು ರಚಿಸದೆಯೇ ಜಿಮೇಲ್‌ನಲ್ಲಿ ಇತರ ಬಳಕೆದಾರರೊಂದಿಗೆ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಬಹಿರಂಗಪಡಿಸಿತ್ತು. Spaces ಟ್ಯಾಬ್ ಇತರ ಪರಿಕರಗಳೊಂದಿಗೆ ಸಂಯೋಜನೆಗೊಳ್ಳುತ್ತದೆ ಮತ್ತು conversation history ತೋರಿಸುವಾಗ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಅನುಮತಿಸುತ್ತದೆ.
ಇದನ್ನೂ ಓದಿ: WhatsApp Limited Backup: ಅನ್‌ಲಿಮಿಟೆಡ್ ಗೂಗಲ್ ಡ್ರೈವ್ ಬ್ಯಾಕಪ್‌ಗೆ ಕಡಿವಾಣ?
ಕಂಪನಿಯ ಪ್ರಕಾರ, ಹೊಸ ಜಿಮೇಲ್ ಲೇಔಟನ್ನು ಅಪ್ಡೇಟ್ ಮಾಡದ Google Workspace ಬಳಕೆದಾರರು ಸ್ವಯಂಚಾಲಿತವಾಗಿ ಏಪ್ರಿಲ್‌ನಲ್ಲಿ ಹೊಸ ಲೇಔಟ್‌ಗೆ ಬದಲಾಗುತ್ತಾರೆ. ಗೂಗಲ್ ಬಳಕೆದಾರರಿಗೆ ಬದಲಾವಣೆಯನ್ನು ಸ್ವಲ್ಪ ಸಮಯದವರೆಗೆ ಹಿಂತಿರುಗಿಸಲು ಅನುಮತಿಸುತ್ತದೆ, ಆದರೆ 2022ರ ಎರಡನೇ ತ್ರೈಮಾಸಿಕದ ಕೊನೆಯಲ್ಲಿ ಎಲ್ಲಾ ಬಳಕೆದಾರರಿಗೆ ಹೊಸ ವಿನ್ಯಾಸವನ್ನು ಶಾಶ್ವತವಾಗಿ ಸಕ್ರಿಯಗೊಳಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.