Asianet Suvarna News Asianet Suvarna News

New Google Features: Hinglish, Speech to Text, ವ್ಯಾಕ್ಸಿನ್ ಬುಕ್ಕಿಂಗ್‌

ಭಾರತದಲ್ಲಿ ಗೂಗಲ್ ಪೇ(Google pay) ಸೇವೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಹಿಂದಿ-ಇಂಗ್ಲಿಷ್ ಮಿಶ್ರಣದ Hinglish ಆಯ್ಕೆ, ಬಿಲ್ ವಿಭಜನೆ, ಸ್ಪೀಚ್ ಟು ಟೆಕ್ಸ್ಟ್ ಹಾಗೂ ಕೋವಿಡ್ ವ್ಯಾಕ್ಸೀನ್‌ ಬುಕ್ಕಿಂಗ್ ನೆರವು ಸೇರಿದಂತೆ ಅನೇಕ ಫೀಚರ್‌ಗಳನ್ನು ಗೂಗಲ್ (Google) ಪರಿಚಯಿಸಿದೆ. ಈ ಹೊಸ ಫೀಚರ್‌ಗಳು ಸಾಕಷ್ಟು ನೆರವು ನೀಡಲಿವೆ.

Google to roll out new features speech-to-text and Hinglish for Gpay, Bill split etc
Author
Bengaluru, First Published Nov 19, 2021, 1:41 PM IST
  • Facebook
  • Twitter
  • Whatsapp

ಡಿಜಿಟಲ್ (Digital) ಪಾವತಿಗಳನ್ನು ಇನ್ನಷ್ಟು ಸರಳಗೊಳಿಸಲು ವಿಶೇಷವಾಗಿ ಭಾರತೀಯ ಗ್ರಾಹಕರಿಗಾಗಿ ರಚಿಸಲಾದ ಹಿಂದಿ ಮತ್ತು ಇಂಗ್ಲಿಷ್‌ನ ಮಿಶ್ರಣವಾದ ಗೂಗಲ್ ಪೇನಲ್ಲಿ 'ಹಿಂಗ್ಲಿಷ್' ಭಾಷಾ ಆಯ್ಕೆಯನ್ನು ಸೇರಿಸುವುದಾಗಿ ಗೂಗಲ್ ಘೋಷಿಸಿದೆ. ವರ್ಚುವಲ್ ಇವೆಂಟ್‌ನಲ್ಲಿ ಈ ಹೊಸ ಫೀಚರ್‌ಗಳನ್ನು ಅನಾವರಣಗೊಳಿಸಿದ ಗೂಗಲ್, ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಈ ಬ್ಗಗೆ ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಂಡಿದೆ. ಗೂಗಲ್  ಪ್ರಕಾರ,  ಗೂಗಲ್ ಪೇ (Google Pay) ಸೇವೆಯ್ಲಲಿ ಎರಡನೇ ಭಾಷೆಯ ಆಯ್ಕೆಯನ್ನು ಸೇರ್ಪಡೆ ಮಾಡುವ ಮೂಲಕ, Google Payಯನ್ನು ಹೆಚ್ಚು ಅರ್ಥಗರ್ಭಿತ ಮತ್ತು ನೈಸರ್ಗಿಕವಾಗಿ ಮಾಡಲು ಪ್ರಯತ್ನಿಸಲಾಗಿದೆ. ಬಳಕೆದಾರರು ಈಗ ಕನ್ನಡ (Kannada) ಸೇರಿದಂತೆ ಹಿಂದಿ (Hindi), ಬೆಂಗಾಲಿ (Bengali), ಗುಜರಾತಿ (Guajarati), ಮರಾಠಿ (Marathi), ತಮಿಳು (Tamil) ಮತ್ತು ತೆಲುಗು (Telagu) ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಗೂಗಲ್ ಹೇಳಿಕೊಂಡಿದೆ.

Speech to text
ಗೂಗಲ್ ಪೇ (Google Pay) ಕೂಡ ಜನಪ್ರಿಯತೆಯನ್ನು ಗಳಿಸುತ್ತಿರುವುದರಿಂದ, ಮಾತಿನಿಂದ  ಪಠ್ಯ( Speech to text) ಫೀಚರ್ ಬಳಕೆಯು, ಬಳಕೆದಾರರಿಗೆ ಧ್ವನಿ ಇನ್‌ಪುಟ್ ಮೂಲಕ ನೇರವಾಗಿ ಇನ್ನೊಬ್ಬ ಬಳಕೆದಾರರ ಬ್ಯಾಂಕ್ ಖಾತೆಗೆ ಪಾವತಿಸಲು ಅವಕಾಶ ಕಲ್ಪಿಸುತ್ತದೆ. ಅಂದರೆ, ಮಾತಿನ ಕಮಾಂಡ್ ಮೂಲಕವೇ ನೀವು ಹಣವನ್ನು ನಿಮಗೆ ಬೇಕಿದ್ದವರ ಖಾತೆಗೆ ವರ್ಗಾಯಿಸಬಹುದು. ಬಳಕೆದಾರರು ಖಾತೆ ಸಂಖ್ಯೆಯನ್ನು ನಮೂದಿಸಲು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಆಪ್‌ಗೆ ಖಾತೆ ಸಂಖ್ಯೆಗಳನ್ನು ಧ್ವನಿ ಮೂಲಕ ಸೇರಿಸಬಹುದು.  ನಂತರ ಪಾವತಿಯನ್ನು ಪ್ರಾರಂಭಿಸುವ ಮೊದಲು ಕಳುಹಿಸುವವರೊಂದಿಗೆ ಈ ಖಾತೆಗಳನ್ನು ಮೌಲ್ಯೀಕರಿಸಲಾಗುತ್ತದೆ. ಅಂದರೆ ಪರೀಕ್ಷಿಸಲಾಗುತ್ತದೆ.

Bill Split
ಮತ್ತೊಂದು ಗಮನಾರ್ಹ ಫೀಚರ್ ಎಂದರೆ,  ಬಿಲ್ ಸ್ಪ್ಲಿಟ್ (Bill Split). ಇದು ಗ್ರಾಹಕರಿಗೆ ಹಂಚಿಕೆಯ ಬಿಲ್‌ಗಳನ್ನು ವಿಭಜಿಸಲು ಮತ್ತು ಹೊಂದಿಸಲು ಅವಕಾಶ ಕಲ್ಪಿಸುತ್ತದೆ. ಇಂಥದೊಂದು ಫೀಚರ್ ಬಗ್ಗೆ ಬಳಕೆದಾರರಿಂದ  ಬೇಡಿಕೆ ಇತ್ತು ಎನ್ನಬಹುದು. 

MyShop
ಸಣ್ಣ ಉದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಗೂಗಲ್ ಪೇ (Google Pay)  ಆಪ್ ಮೈಶಾಪ್ (MyShop) ಎಂಬ  ಆಯ್ಕೆಯನ್ನು ಸಹ ಹೊಂದಿರುತ್ತದೆ. ವ್ಯಾಪಾರಕ್ಕಾಗಿ Google Pay ಅಪ್ಲಿಕೇಶನ್ ಅನ್ನು ಬಳಸುವ ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಕಾರ್ಯಾಚರಣೆಗಳನ್ನು "ಅವರ ಮುಂಬರುವ ಪ್ರಯಾಣದ" "ಡಿಜಿಟೈಸ್" ಮಾಡಲು ಸಹಾಯ ಮಾಡಲು ಸೇವೆಯನ್ನು ನೀಡಲಾಗುತ್ತದೆ. ಡಿಜಿಟಲ್ ಬೆಳವಣಿಗೆಯನ್ನು ಹೆಚ್ಚಿಸಲು ಭಾರತದಲ್ಲಿ ಗೂಗಲ್ ಅಸಿಸ್ಟೆಂಟ್‌ನಿಂದ ಸಕ್ರಿಯಗೊಳಿಸಲ್ಪಟ್ಟ ಎಂಡ್-ಟು-ಎಂಡ್ ವ್ಯಾಕ್ಸಿನೇಷನ್ ಬುಕಿಂಗ್ ಕಾರ್ಯವಿಧಾನವನ್ನು ಗೂಗಲ್ ಅನಾವರಣಗೊಳಿಸಿದೆ.

Whats App: ಲಾಸ್ಟ್ ಸೀನ್ ಸ್ಟೇಟಸ್ ಮೆರೆಮಾಚುವ ಫೀಚರ್ ಶೀಘ್ರ

Vaccination Booking
ವ್ಯಾಕ್ಸಿನೇಷನ್ ಬುಕಿಂಗ್ (Vaccination Booking) ಆಯ್ಕೆಯು ಇಂಗ್ಲಿಷ್ ಜೊತೆಗೆ ಎಂಟು ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತದೆ ಮತ್ತು ಈ ಸೇವೆಯು 2022 ರ ಆರಂಭದಲ್ಲಿ ಎಲ್ಲರಿಗೂ ದೊರೆಯಲಿದೆ. "ಸಕಾಲಿಕ ಮತ್ತು ನಿರ್ಣಾಯಕ ಮಾಹಿತಿಯನ್ನು ಮೇಲ್ಮೈಗೆ ಸಹಾಯ ಮಾಡಲು ಮತ್ತು ಜನರ ಸುರಕ್ಷತೆಯನ್ನು ರಕ್ಷಿಸಲು" ಹವಾಮಾನ-ಸಂಬಂಧಿತ ಅಂಶಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 

ಹವಾಮಾನ ಮುನ್ನೆಚ್ಚರಿಕೆ
ಗೂಗಲ್ ಹುಡುಕಾಟಕ್ಕೆ ಅತ್ಯಂತ ನವೀಕೃತ ವಾಯು ಗುಣಮಟ್ಟದ ಮಾಹಿತಿಯನ್ನು ನೀಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (Central Pollution Control Board)ಯ ಸಹಯೋಗವನ್ನು ಹೊಂದಿರುವುದಾಗಿ ಗೂಗಲ್ ಘೋಷಿಸಿದೆ.

Google to roll out new features speech-to-text and Hinglish for Gpay, Bill split etc

ಕೆಟ್ಟ ಪರಿಸ್ಥಿತಿಯಲ್ಲಿ ಹವಾಮಾನ ಎಚ್ಚರಿಕೆಗಳನ್ನು ಪ್ರಾರಂಭಿಸಲು ಇದು ಭಾರತೀಯ ಹವಾಮಾನ ಇಲಾಖೆ (Meteorological Department of India) ಯೊಂದಿಗೆ ಗೂಗಲ್ ಕೈಜೋಡಿಸಿದೆ ಎಂದು ಪ್ರಕಟಿಸಲಾಗಿದೆ. ತೀವ್ರ ಹವಾಮಾನ ಪರಿಸ್ಥಿತಿಗಳು ಉದ್ಭವಿಸಿದಾಗ, ಭಾರತೀಯ ಹವಾಮಾನ ಇಲಾಖೆ ಹೊರಡಿಸಿದ ತೀವ್ರ ಹವಾಮಾನ ಅಧಿಸೂಚನೆಗಳು ನಿಮ್ಮ ಫೋನ್ನ 'ಎಟ್-ಎ-ಗ್ಲಾನ್ಸ್ (AT a Glance) ವಿಭಾಗದಲ್ಲಿ ಕಾಣಿಸಿಕೊಳ್ಳಲಿವೆ. ಇದರಿಂದ ಅಪಾಯಕಾರಿ ಸನ್ನಿವೇಶದಿಂದ ಪಾರಾಗಲು ನೆರವು ದೊರೆಯಲಿದೆ. ಅಥವಾ ಇದಿರಂದ ಮುನ್ನೆಚ್ಚೆರಿಕೆ ಕೈಗೊಳ್ಳಲು ಸಾಧ್ಯವಾಗಲಿದೆ.

Whatsapp: ಯಾವ ಹೊಸ ಫೀಚರ್‌ ಅಭಿವೃದ್ಧಿಪಡಿಸತ್ತಿದೆ ವಾಟ್ಸಾಪ್?

Follow Us:
Download App:
  • android
  • ios