Asianet Suvarna News Asianet Suvarna News

2 ವರ್ಷದಿಂದ ಲಾಗಿನ್ ಆಗದ ಜಿಮೇಲ್, ಯೂಟ್ಯೂಟ್ ಖಾತೆ ಡಿಲೀಟ್, ಉಳಿಸಿಕೊಳ್ಳಲು ಇಲ್ಲಿದೆ ಟಿಪ್ಸ್!

ಗೂಗಲ್ ಮಹತ್ವದ ಘೋಷಣೆ ಮಾಡಿದೆ. ಹೊಸ ನೀತಿ ಪ್ರಕಾರ ಗೂಗಲ್ ಇದೀಗ ಬರೋಬ್ಬರಿ 7 ಮಿಲಿಯನ್ ಜಿಮೇಲ್, ಯೂಟ್ಯೂಬ್, ಡ್ರೈವ್ ಸೇರಿದಂತೆ ಹಲವು ಖಾತೆಗಳನ್ನು ಡಿಲೀಟ್ ಮಾಡಲು ಮುಂದಾಗಿದೆ. 2 ವರ್ಷದಿಂದ ಲಾಗಿನ್ ಆಗದ ಖಾತೆಗಳು ಡಿಲೀಟ್ ಆಗಲಿದೆ. ನಿಮ್ಮ ಖಾತೆ ಡಿಲೀಟ್ ಆಗುವುದನ್ನು ತಪ್ಪಿಸಲು ಇಲ್ಲಿದೆ ಟಿಪ್ಸ್

Google to delete inactive or not signed into for at least two years for security and risk threats ckm
Author
First Published May 19, 2023, 1:20 PM IST

ನವದೆಹಲಿ(ಮೇ.19): ಗೂಗಲ್ ತನ್ನ ನೀತಿಯನ್ನು ಪರಿಷ್ಕರಿಸಿದೆ. ವಿಶೇಷವಾಗಿ ನಿಷ್ಕ್ರೀಯಗೊಂಡಿರುವ ಜಿಮೇಲ್, ಯೂಟ್ಯೂಬ್ ಸೇರಿದಂತೆ ಇತರ ಗೂಗಲ್ ಸಂಬಂಧಿತ ಖಾತೆಗಳನ್ನು ಡಿಲೀಟ್ ಮಾಡಲು ಗೂಗಲ್ ನಿರ್ಧರಿಸಿದೆ. 2023ರ ಡಿಸೆಂಬರ್‌ನಲ್ಲಿ ನಿಷ್ಕ್ರೀಯಗೊಂಡಿರುವ ಬರೋಬ್ಬರಿ 7 ಮಿಲಿಯನ್ ಖಾತೆಗಳು ಡಿಲೀಟ್ ಆಗಲಿದೆ. ನಿಷ್ಕ್ರೀಯಗೊಂಡಿರುವ, 2 ವರ್ಷದಿಂದ ಲಾಗಿನ ಆಗದೇ ಇರುವ ಖಾತೆಗಳು ಡಿಲೀಟ್ ಆಗಲಿದೆ. ಬಳಕೆದಾರರ ಇ ಭದ್ರತೆ ಕಾರಣದಿಂದ ಗೂಗಲ್ ನಿಷ್ಕ್ರೀಯ ಖಾತೆಗಳನ್ನು ಡಿಲೀಟ್ ಮಾಡುವುದಾಗಿ ಘೋಷಿಸಿದೆ.

ನಿಷ್ಕ್ರೀಯ ಖಾತೆಗಳನ್ನು ಡಿಲೀಟ್ ಮಾಡುವ ಪ್ರಕ್ರಿಯೆ ಡಿಸೆಂಬರ್ 2023ರಿಂದ ಆರಂಭಗೊಳ್ಳಲಿದೆ. ಜಿಮೇಲ್, ಯ್ಯೂಟೂಬ್, ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್, ಗೂಗಲ್ ಫೋಟೋಸ್ ಖಾತೆಗಳು ಡಿಲೀಟ್ ಆಗಲಿವೆ. 2020ರಲ್ಲಿ ನಿಷ್ಕ್ರೀಯ ಖಾತೆಗಳ ಕುರಿತು ಗೂಗಲ್ ಹೊಸ ಪಾಲಿಸಿ ಜಾರಿಗೆ ತಂದಿತ್ತು. ಈ ನೀತಿ ಪ್ರಕಾರ ಖಾತೆಗಳಲ್ಲಿನ ಎಲ್ಲಾ ಸ್ಟೋರೇಜ್ ಡಿಲೀಟ್ ಮಾಡಲು ನಿರ್ಧರಿಸಿತ್ತು. ಆದರೆ ಇ ಸುರಕ್ಷತೆ ಕಾರಣದಿಂದ ಇದೀಗ ಇದೇ ನೀತಿಯನ್ನು ಪರಿಷ್ಕರಿಸಿದೆ. ಇದೀಗ ಸಂಪೂರ್ಣ ಖಾತೆಯನ್ನೇ ಡಿಲೀಟ್ ಮಾಡಲು ಗೂಗಲ್ ಮುಂದಾಗಿದೆ.

ಟ್ವಿಟರ್, ಫೇಸ್‌ಬುಕ್ ಬಳಿಕ ಗೂಗಲ್‌‌ಗೆ ಬಂತು ಬ್ಲೂಟಿಕ್ , ಜಿಮೇಲ್ ಬಳಕೆದಾರರಿಗೆ ಉಚಿತ!

ಗೂಗಲ್ ಖಾತೆಗಳು ನಿಷ್ಕ್ರೀಯ ಗೊಂಡಿದ್ದರೆ, ಅಥವಾ ಕನಿಷ್ಠ 2 ವರ್ಷದಿಂದ ಲಾಗಿನ್ ಆಗದೇ ಇದ್ದರೆ ಈ ಖಾತೆಗಳನ್ನು ಗೂಗಲ್ ನಿರ್ವಹಣೆ ಮಾಡುವುದಿಲ್ಲ. ಇದರಿಂದ ಈ ಖಾತೆಗಳಲ್ಲಿನ ಮಾಹಿತಿಗಳು ಸೋರಿಕೆಯಾಗುವ ಅಥವಾ ಕನ್ನ ಹಾಕುವ ಸಾಧ್ಯತೆ ಹೆಚ್ಚಿದೆ. ಗೂಗಲ್ ಸೆಕ್ಯೂರಿಟಿ ಕಾರಣದಿಂದ ನಿಷ್ಕ್ರೀಯ ಖಾತೆಗಳನ್ನು ಡಿಲೀಟ್ ಮಾಡಲು ಮುಂದಾಗಿದೆ. ನಿಷ್ಕ್ರೀಯ ಗೊಂಡಿರುವ ಖಾತೆಗಳು ಹಳೇ ಪಾಸ್‌ವರ್ಡ್ ಹೊಂದಿರಲಿದೆ. ಇದು ಕೂಡ ಅಪಾಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ನಿಷ್ಕ್ರೀಯ ಗೊಂಡಿರು ಖಾತೆಗಳಿಗೆ ಸೈಬರ್ ಆತಂಕ ಹೆಚ್ಚು. ಹ್ಯಾಕರ್ಸ್ ಸುಲಭವಾಗಿ ನಿಷ್ಕ್ರೀಯಗೊಂಡಿರುವ ಖಾತೆಯನ್ನು ಹ್ಯಾಕ್ ಮಾಡಲು ಸಾಧ್ಯವಿದೆ. ಇಲ್ಲಿ 2 ಹಂತದ ವೆರಿಫಿಕೇಶನ್ ಇರುವುದಿಲ್ಲ. ಕಾರಣ ಈ ಖಾತೆಗಳನ್ನು ಗೂಗಲ್ ಮಾನಿಟರ್ ಮಾಡುವುದಿಲ್ಲ. ಈ ಎಲ್ಲಾ ಕಾರಣದಿಂದ ಗೂಗಲ್ ನಿಷ್ಕ್ರೀಯ ಖಾತೆಯನ್ನು ಸಂಪೂರ್ಣವಾಗಿ ಡಿಲೀಟ್ ಮಾಡಲು ಮುಂದಾಗಿದೆ.

ನಿಷ್ಕ್ರೀಯ ಗೊಂಡಿರುವ ಅಥವಾ 2 ವರ್ಷದಿಂದ ಲಾಗಿನ್ ಆಗದೇ ಇರುವ ವೈಯುಕ್ತಿ ಖಾತೆಗಳನ್ನು ಮಾತ್ರ ಗೂಗಲ್ ಡಿಲೀಟ್ ಮಾಡಲಿದೆ. ಅಂದರೆ ಸಂಸ್ಥೆ, ಶಾಲೆ, ಉದ್ಯಮಿಗಳ ಬ್ಯೂಸಿನೆಸ್ ಖಾತೆಗಳು ಡಿಲೀಟ್ ಆಗುವುದಿಲ್ಲ. ಕಾರಣ ಈ ಖಾತೆಗಳು ಚಂದಾರಿಕೆ ಪಡೆದಿರುತ್ತದೆ. ಮೊದಲ ಹಂತದಲ್ಲಿ ಗೂಗಲ್ 7 ಮಿಲಿಯನ್ ಖಾತೆಗಳನ್ನು ಡಿಲೀಟ್ ಮಾಡಲಿದೆ. ಹಂತ ಹಂತವಾಗಿ ಡಿಲೀಟ್ ಪ್ರಕ್ರಿಯೆ ನಡೆಯಲಿದೆ. 

Offline Gmail: ಈಗ ಇಂಟರ್ನೆಟ್ ಇಲ್ಲದೇ ಇಮೇಲ್ ಕಳುಹಿಸಬುದು: ಹೇಗೆ ಗೊತ್ತಾ?

ಡಿಲೀಟ್ ಪಕ್ರಿಯೆಗೂ ಮೊದಲು ಗೂಗಲ್ ನೋಟಿಫಿಕೇಶನ್ ನೀಡಲಿದೆ. ಜಿಮೇಲ್ ಖಾತೆ ಹಾಗೂ ರಿಕವರಿ ಜಿಮೇಲ್ ಖಾತೆಗೆ ಇ ಮೇಲ್ ಮೂಲಕ ಡಿಲೀಟ್ ಸಂದೇಶ ಕಳುಹಿಸಲಿದೆ. ಬಳಿಕ ಯಾವುದೇ ಕ್ಷಣದಲ್ಲೂ ಖಾತೆ ಡಿಲೀಟ್ ಆಗಲಿದೆ. ಗೂಗಲ್ ಡಿಲೀಟ್ ಮಾಡುವ ಮೊದಲು ನಿಮ್ಮ ಗೂಗಲ್ ಖಾತೆಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ.

ನಿಷ್ಕ್ರೀಯಗೊಂಡಿರುವ ಖಾತೆಯನ್ನು ಆ್ಯಕ್ಚೀವ್ ಮಾಡಿ: ಜಿಮೇಲ್, ಯೂಟ್ಯೂಬ್, ಡಾಕ್ಸ್, ಗೂಗಲ್ ಫೋಟೋಸ್, ಮೀಟ್ ಸೇರಿದಂತೆ ಯಾವುದೇ ನಿಷ್ಕ್ರೀಯ ಖಾತೆಯನ್ನು ಆಕ್ಟೀವ್ ಮಾಡಿಕೊಳ್ಳಿ. ಉದಾಹರಣೆಗೆ ಜಿಮೇಲ್ ಒಪನ್ ಮಾಡಿ ಇ ಮೇಲ್ ಕಳುಹಿಸಿ. ಇದರಿಂದ ಜಿಮೇಲ್ ಆ್ಯಕ್ಟೀವ್ ಆಗಲಿದೆ. ಅಥವಾ ಬಂದಿರುವ ಮೇಲ್‌ಗೆ ರೀಡ್ ಮಾಡಿಕೊಳ್ಳಿ.

ಗೂಗಲ್ ಡ್ರೈವ್ ಬಳಕೆ ಮಾಡಿ
ಯೂಟ್ಯೂಟ್ ಖಾತೆ ತೆರೆದು ವಿಡಿಯೋ ಕಣ್ಣಾಡಿಸಿ
ಪ್ಲೇ ಸ್ಟೋರ್ ಮೂಲಕ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ
ಗೂಗಲ್ ಸರ್ಚ್ ಬಳಕೆ ಮಾಡಿ
ಗೂಗಲ್ ಸೈನ್ ಇನ್ ಆಗಿ
ಗೂಗಲ್ ಸಂಬಂಧಿತ ನಿಮ್ಮ ಖಾತೆಗಳನ್ನು ತೆರೆದು ಕಣ್ಣಾಡಿಸಿ
 

Follow Us:
Download App:
  • android
  • ios