Google Server Down ಇ ಮೇಲ್, ಯೂಟ್ಯೂಬ್, ಡ್ರೈವ್ ಸ್ಥಗಿತದಿಂದ ಬಳಕೆದಾರರ ಪರದಾಟ!
ಇಮೇಲ್ ಕಳುಹಿಸಲು ಸಾಧ್ಯವಾಗುತ್ತಿಲ್ಲ, ಗೂಗಲ್ ಡಾಕ್ಯುಮೆಟ್ ಅಪ್ ಅಗುತ್ತಿಲ್ಲ, ಯೂಟ್ಯೂಬ್ ಕಾರ್ಯನಿರ್ವಹಿಸುತ್ತಿಲ್ಲ. ಹೀಗೆ ಬಳಕೆದಾರರ ದೂರು ದುಮ್ಮಾನ ಒಂದೇ ಸಮನೆ ಕೇಳಿಬಂದಿದೆ. ಕಾರಣ ಇಂದು ಗೂಗಲ್ ಸರ್ವನ್ ಡೌನ್ ಆಗಿದೆ.
ನವದೆಹಲಿ(ಮಾ.23): ಡಿಜಿಟಲ್ ಯುಗದಲ್ಲಿ ಕೆಲಸ ಯಾವುದೇ ಇರಲಿ ಇಂಟರ್ನೆಟ್, ಗೂಗಲ್, ಜಿಮೇಲ್ ಸೇರಿದಂತೆ ಹಲವು ಸೇವೆಗಳ ಅಗತ್ಯತೆ ಅನಿವಾರ್ಯವಾಗಿದೆ. ಪ್ರತಿಯೊಬ್ಬರು ಪ್ರತಿ ದಿನ ಗೂಗಲ್ ಅವಲಂಬಿತರಾಗಿದ್ದಾರೆ. ಆದರೆ ಅದೇ ಗೂಗಲ್ ಒಂದು ಕ್ಷಣ ಕೈಕೊಟ್ಟರೆ. ಇದು ಆಗಿದೆ. ಇಂದು ಬೆಳಗ್ಗೆ ಗೂಗಲ್ ಸರ್ವರ್ ಡೌನ್ ಆಗಿದೆ. ಇದರ ಪರಿಣಾಮ ಇ ಮೇಲ್ ಕಳುಹಿಸಲು ಸಾಧ್ಯವಾಗದೆ ಜನರು ಪರದಾಡಿದ್ದಾರೆ. ಇತ್ತ ಗೂಗಲ್ ಡ್ರೈವ್, ಗೂಗಲ್ ಡ್ಯಾಕ್ಯುಮೆಂಟ್, ಯೂಟ್ಯೂಬ್ ಸೇರಿದಂತೆ ಗೂಗಲ್ ಮಾಲೀಕತ್ವದ ಎಲ್ಲಾ ಸೇವೆಗಳ ಸರ್ವರ್ ಡೌನ್ ಆಗಿದೆ. ಗೂಗಲ್ ಸರ್ಚ್ ಮಾಡಲು ಸಾಧ್ಯವಾಗದೇ ಜನರು ಪರದಾಡಿದ್ದಾರೆ. ಇದರಿಂದ ಬಳಕೆದಾರರು ತೀವ್ರ ಸಂಕಷ್ಟ ಎದುರಿಸಿರುವುದು ವರದಿಯಾಗಿದೆ.
ಡೌನ್‌ಡೆಟೆಕ್ಟರ್ ವೆಬ್‌ಸೈಟ್ ಗೂಗಲ್ ಸರ್ವರ್ ಡೌನ್ ಆಗಿರುವುದು ಪತ್ತೆ ಹಚ್ಚಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ 2,000ಕ್ಕೂ ಹೆಚ್ಚು ಬಳಕೆದಾರರು ಗೂಗಲ್ ಸರ್ವರ್ ಕಾರ್ಯನಿರ್ಹಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ. ಶೇಕಡಾ 82 ರಷ್ಟು ಮಂದಿ ಸರ್ವರ್ ಕನೆಕ್ಷನ್ ಸಮಸ್ಯೆ ಎಂದು ದೂರು ನೀಡಿದ್ದಾರೆ. ಶೇಕಡಾ 12 ರಷ್ಟು ಜನ ಲಾಗಿನ್ ಸಮಸ್ಯೆ ಎದುರಿಸಿದ್ದಾರೆ. ಶೇಕಡಾ 6 ರಷ್ಟು ಮಂದಿ ಇಮೇಲ್ ಸ್ವೀಕರಿಸುವಲ್ಲಿ ಸಮಸ್ಯೆ ಎದುರಿಸಿದ್ದಾರೆ.
ಮನುಷ್ಯರು ಮಾತ್ರವಲ್ಲ, ರೋಬೋಟ್‌ಗಳನ್ನೂ ಕೆಲಸದಿಂದ ಕಿತ್ತು ಹಾಕಿದ ಗೂಗಲ್..!
ಗೂಗಲ್ ವರ್ಕ್‌ಸ್ಪೇಸ್, ಇಮೇಲ್, ಗೂಗಲ್ ಡಾಕ್ಸ್ ಸೇರಿದಂತೆ ಗೂಗಲ್ ಸರ್ವರ್ ಡೌನ್‌ನಿಂದ ಕೆಲಸ ಅನಿವಾರ್ಯವಾಗಿ ಸ್ಥಗಿತಗೊಂಡಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗೂಗರ್ ಸರ್ವರ್ ಡೌನ್ ಕಾರಣ ಕೆಲಸದಿಂದ ಅನಿವಾರ್ಯವಾಗಿ ಬ್ರೇಕ್ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಗೂಗಲ್ ಸರ್ವರ್ ಡೌನ್ ಎಂದು ಟ್ರೆಂಡ್ ಆಗಿದೆ.
ಗೂಗಲ್ ಸರ್ವರ್ ಡೌನ್ ಆಗಿದೆ. ಇದು ಉದ್ಯೋಗ ಕಡಿತದ ಪರಿಣಾಮವೇ? ಎಂದು ಹಲವರು ಪ್ರಶ್ನಿಸಿದ್ದಾರೆ. ಗೂಗಲ್ ಸರ್ವರ್ ಡೌನ್ ಕೆಲಕಾಲ ತೀವ್ರವಾಗಿ ಬಳಕೆದಾರರನ್ನು ಕಾಡಿತ್ತು. ಹೀಗಾಗಿ ಹಲರು ಗೂಗಲ್ ಉದ್ಯೋಗ ಕಡಿತದಿಂದ ಇದೀಗ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ದೂರು ನೀಡಿದರೆ ಸರಿಪಡಿಸವು ಉದ್ಯೋಗಿಗಳು ವಜಾಗೊಂಡಿದ್ದಾರೆ. ಹೀಗಾಗಿ ಗೂಗಲ್ ತಕ್ಷಣಕ್ಕೆ ಸ್ಪಂದಿಸುವ ಸಾಧ್ಯತೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬಾರ್ಡ್ ತಪ್ಪು ಮಾಹಿತಿ ನೀಡಿದ್ದಕ್ಕೆ ಗೂಗಲ್‌ಗೆ 8 ಲಕ್ಷ ಕೋಟಿ ನಷ್ಟ!
ಗೂಗಲ್ ಇತ್ತೀಚೆಗೆ ಉದ್ಯೋಗ ಕಡಿತ ಮಾಡಿತ್ತು. ಭಾರತದಿಂದಲೂ ಹಲವರನ್ನು ವಜಾ ಮಾಡಿತ್ತು. ಸುಮಾರು 453 ಮಂದಿ ಭಾರತದಲ್ಲಿ ಕೆಲಸ ಮಾಡುತ್ತಿದ್ದ ಗೂಗಲ್ ಉದ್ಯೋಗಿಗಳನ್ನು ವಜಾ ಮಾಡಲಾಗಿತ್ತು ಎಂದು ವರದಿಯಾಗಿದೆ. ಗೂಗಲ್‌ನ ಪೋಷಕ ಕಂಪನಿಯಾದ ಅಲ್ಫಾಬೆಟ್ ಇಂಕ್ 12,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಕಳೆದ ತಿಂಗಳು ಘೋಷಿಸಿತ್ತು. ‘ಕಂಪನಿಯ ಬೆಳವಣಿಗೆ ನಿಧಾನವಾದರೆ ಅದನ್ನು ಕಾರ್ಯಗತಗೊಳಿಸಲು ಉದ್ಯೋಗಿಗಳ ವಜಾ ಮಾಡಬೇಕಾಗುತ್ತದೆ. ಸ್ಪಷ್ಟಮತ್ತು ವೇಗವಾಗಿ ಕಾರ್ಯನಿರ್ವಹಿಸದಿದ್ದರೆ ನಾವು ಕಠಿಣ ಸಮಸ್ಯೆ ಕೈಗೊಳ್ಳಬೇಕಾಗುತ್ತದೆ. ಇದು ನಾನು ಮಾಡಬೇಕಾದ ನಿರ್ಧಾರಗಳು’ ಎಂದು ಸಿಇಒ ಸುಂದರ್ ಪಿಚೈ ಈ ಹಿಂದೆ ಹೇಳಿದ್ದರು.