ಗೂಗಲ್ ಇದೀಗ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಎಐ ಬಳಕೆ ಮಾಡುತ್ತಿರುವ ಬಳಕೆದಾರರ ಕೆಲಸ ಹಾಗೂ ಸಮಯ ಉಳಿತಾಯ ಮಾಡಲು ಗೂಗಲ್ ಜೆಮಿನಿ ಹೊಸ ಫೀಚರ್ ಬಿಡುಗಡೆ ಮಾಡಿದೆ.

ನವದೆಹಲಿ(ಫೆ.21) ಗೂಗಲ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್ಸ್ ನೀಡಿದೆ. ಈ ಪೈಕಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆದಾರರಿಗೆ ಗೂಗಲ್ ಇದೀಗ ಹೊಸ ಫೀಚರ್ ನೀಡಿದೆ. ಗೂಗಲ್ ಜೆಮಿನಿ ಎಐ ಮೂಲಕ ಇದೀಗ ಕೆಲಸ ಸುಲಭ ಹಾಗೂ ಸಮಯ ಕೂಡ ಉಳಿತಾಯವಾಗಲಿದೆ. ಗೂಗಲ್ ಜೆಮಿನಿ ಬಳಕೆದಾರರಿಗೆ ಮತ್ತಷ್ಟು ಅತ್ಯಾಧುನಿಕ ಫೀಚರ್ಸ್ ನೀಡಿದೆ. ಇದೀಗ ಜೆಮಿನಿ ಬಳಕೆದಾರರ ಕೆಲಸವೂ ಸುಲಭ ಜೊತೆಗೆ ಸಮಯವೂ ಉಳಿತಾಯವಾಗಲಿದೆ. ಏನಿದು ಜೆಮಿನಿ ಹೊರತಂದ ಹೊಸ ಫೀಚರ್?

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಮಾಡುತ್ತಿರುವ ಎಲ್ಲಾ ಬಳಕೆದಾರರು ಪ್ರಾಂಪ್ಟ್ ನೀಡಿ ಉತ್ತರ ಪಡೆಯುತ್ತಾರೆ. ಆದರೆ ನಿಮ್ಮ ಬಳಿ ಪಿಡಿಎಫ್, ವರ್ಡ್ ಸೇರಿದಂತೆ ಇತರ ಫೈಲ್ ಡಾಕ್ಯುಮೆಂಟ್ ಇದ್ದಲ್ಲಿ, ಅದರಿಂದ ಮಾಹಿತಿ ತೆಗೆಯುವುದು, ಹುಡುಕುವುದು ಹಾಗೂ ಈ ಮಾಹಿತಿಯ ಸಾರಾಂಶ ಪಡೆಯವುದು ಅಸಾಧ್ಯವಾಗಿತ್ತು. ಆದರೆ ಗೂಗಲ್ ಜೆಮಿನಿ ಇದೀಗ ಹೊಸ ಫೀಚರ್ ಮೂಲಕ ಈ ಸವಾಲಿಗೆ ಉತ್ತರ ನೀಡಿದೆ. ನಿಮ್ಮ ಯಾವುದೇ ಡಾಕ್ಯುಮೆಂಟ್ ಫೈಲ್‌ನ್ನು ಗೂಗಲ್ ಜೆಮಿನಿಗೆ ಅಪ್ಲೋಡ್ ಮಾಡಿದರೆ ಸಾಕು. ಎಲ್ಲಾ ಮಾಹಿತಿಯನ್ನ ಜೆಮಿನಿ ಓದಿ ಬೇಕಾದಲ್ಲಿ ಸಾರಾಂಶ ನೀಡುತ್ತದೆ. ಅಥವಾ ನೀವು ಕೆಲವೇ ಪದಗಳು ಅಥವಾ ವಾಕ್ಯಗಳನ್ನು ಹುಡುಕಲು ಹೇಳಿದರೂ ಅದನ್ನೂ ಜೆಮಿನಿ ಎಐ ಮಾಡಲಿದೆ. 

ಗೃಹ ಸಚಿವಾಲಯ ಚಾಟ್‌ಜಿಪಿಟಿ ಸೇರಿ ಎಐ ಟೂಲ್ ಬಳಸಬೇಡಿ ಎಂದಿದ್ದೇಕೆ?

ಗೂಗಲ್ ಡಾಕ್ಸ್, ಪಿಡಿಎಫ್, ವರ್ಡ್ ಸೇರಿದಂತೆ ಇತರ ಫೈಲ್‌ಗಳನ್ನು ಜೆಮಿನಿ ಎಐಗೆ ಅಪ್ಲೋಡ್ ಮಾಡಿ ಉತ್ತರ ಪಡೆದುಕೊಳ್ಳಬಹುದು. ಗೂಗಲ್ ಡ್ರೈವ್ ಅಥವಾ ಲೋಕಲ್ ಫೋಲ್ಡರ್‌ನಲ್ಲಿ ಸೇವ್ ಮಾಡಿರುವ ಯಾವುದೇ ಡಾಕ್ಯೂಮೆಂಟ್ ಸುಲಭವಾಗಿ ಅಪ್ಲೋಡ್ ಮಾಡಲು ಸಾಧ್ಯವಿದೆ. ಉದಾಹರಣೆಗೆ 100 ಪುಟಗಳ ಡಾಕ್ಯುಮೆಂಟ್ ಫೈಲ್‌ನಲ್ಲಿರುವ ಯಾವುದೇ ಮಾಹಿತಿ ಹುಡುಕಲು ಅಷ್ಟೂ ಓದಬೇಕು. ಅಥವಾ ಸಾಮಾನ್ಯವಾಗಿ ಫೈಂಡರ್ ಮೂಲಕ ಹುಡುಕ ಬೇಕು. ಆದರೆ ಇದು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಆದರೆ ಜೆಮನಿ ಎಐನಲ್ಲಿ ಈ ಡಾಕ್ಯುಮೆಂಟ್ ಅಪ್ಲೋಡ್ ಮಾಡಿದರೆ ನಿಮಗೆ ಬೇಕಾದ ಮಾಹಿಯನ್ನು ಹುಡುಕಿ ತೆಗೆದು ನೀಡಲಿದೆ. ಇದನ್ನು ಸಾರಾಂಶ ರೂಪದಲ್ಲೂ ಬೇಕಾದರೂ ನೀಡಲಿದೆ. 

Scroll to load tweet…

ಚಾಟ್‌ಜಿಪಿಟಿ ಸೇರಿದಂತೆ ಇತರ ಉಚಿತ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸೆವೆಯಲ್ಲಿ ಡಾಕ್ಯುಮೆಂಟ್ ಅಪ್ಲೋಡ್ ಆಯ್ಕೆ ನೀಡಿಲ್ಲ. ಆದರೆ ಗೂಗಲ್ ಜೆಮಿನಿ ಈ ಆಯ್ಕೆ ನೀಡುವ ಮೂಲಕ ಬಳಕೆದಾರರಿಗೆ ಉಚಿತವಾಗಿ ಹೊಸ ಅತ್ಯಾಧುನಿಕ ಸೇವೆ ನೀಡುತ್ತಿದೆ. ಇದರಿಂದ ಬಳಕೆದಾರರ ಕೆಲಸ ಹಾಗೂ ಸಮಯ ಉಳಿತಾಯವಾಗಲಿದೆ.

ಜೆಮಿನಿ ಲೈವ್ ಉಚಿತವಾಗಿ ಲಭ್ಯ 
ಜೆಮಿನಿ ಲೈವ್ ಚಾಟ್‌ಬಾಟ್ ಎಐ ಅಸಿಸ್ಟೆಂಟ್ ಅನ್ನು ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೂ ಗೂಗಲ್ ಉಚಿತವಾಗಿ ಕೊಡುತ್ತಿದೆ. ಈ ಮೊದಲು ಜೆಮಿನಿ ಅಡ್ವಾನ್ಸ್‌ಡ್ ಸಬ್‌ಸ್ಕ್ರೈಬರ್‌ಗಳಿಗೆ ಮಾತ್ರ ಈ ಚಾಟ್‌ಬಾಟ್ ಸಿಗುತ್ತಿತ್ತು. ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೂ ಜೆಮಿನಿ ಲೈವ್ ಚಾಟ್‌ಬಾಟ್ ಉಚಿತವಾಗಿ ಸಿಗುತ್ತೆ ಅಂತ ಗೂಗಲ್ ಜೆಮಿನಿ ಟೀಮ್ ಎಕ್ಸ್ ಮೂಲಕ ತಿಳಿಸಿದೆ. ಜೆಮಿನಿ ಆ್ಯಪ್‌ನಲ್ಲಿ ಇದು ಕಾಣಿಸಿಕೊಂಡ ತಕ್ಷಣ ಚಾಟ್‌ಬಾಟ್ ಅನ್ನು ಉಚಿತವಾಗಿ ಬಳಸಬಹುದು. ಈ ಚಾಟ್‌ಬಾಟ್ ಈವರೆಗೆ ಜೆಮಿನಿ ಅಡ್ವಾನ್ಸ್‌ಡ್ ಸಬ್‌ಸ್ಕ್ರೈಬರ್‌ಗಳಿಗೆ ಮಾತ್ರ ಸಿಗುತ್ತಿತ್ತು. ಆದರೆ, ಜೆಮಿನಿ ಲೈವ್ ಸದ್ಯಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಜೆಮಿನಿ ಲೈವ್ ಎಐ ಅಸಿಸ್ಟೆಂಟ್ ಜೊತೆ ಮಾಮೂಲಿಯಾಗಿ ಮಾತಾಡೋಕೆ ಈ ಹೊಸ ಸಿಸ್ಟಮ್ ಅನುವು ಮಾಡಿಕೊಡುತ್ತೆ. ಗೂಗಲ್ ಆ್ಯಪ್‌ನ ಐಒಎಸ್ ವರ್ಷನ್ ಬಳಸುವ ಐಫೋನ್ ಯೂಸರ್‌ಗಳಿಗೆ ಈಗ ಜೆಮಿನಿ ಲೈವ್‌ನ ಉಚಿತ ವರ್ಷನ್ ಬಳಸೋಕೆ ಆಗಲ್ಲ. ಆದಷ್ಟು ಬೇಗ ಜೆಮಿನಿ ಲೈವ್ ಬೇರೆ ಭಾಷೆಗಳಿಗೂ, ಐಒಎಸ್‌ಗೂ ಬರಬಹುದು. 

ಏನಿದು ಅಮೆರಿಕವನ್ನೇ ನಡುಗಿಸಿದ ಚೀನಾದ ಉಚಿತ AI ಡೀಪ್‌ಸೀಕ್? ಬಳಕೆ, ಡೌನ್ಲೋಡ್ ಹೇಗೆ?